RbiSearchHeader

Press escape key to go back

Past Searches

Page
Official Website of Reserve Bank of India

Notification Marquee

RBI Announcements
RBI Announcements

RbiAnnouncementWeb

RBI Announcements
RBI Announcements

Asset Publisher

131632056

ಪತ್ರಿಕಾ ಪ್ರಕಟಣೆ ಶ್ರೀ ಬಸವೇಶ್ವರ ಪಟ್ಟಣ ಸಹಕಾರ ಬ್ಯಾಂಕ್ ನಿಯಮಿತ, ಸಿಂದಗಿ , ಕರ್ನಾಟಕ - ಈ ಬ್ಯಾಂಕಿಗೆ ಆರ್ ಬಿ ಐ ವಿತ್ತೀಯ ದಂಡ ವಿಧಿಸಿದೆ

ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿ ಐ) ತನ್ನ ಡಿಸೆಂಬರ್ 18, 2024 ರ ಆದೇಶದ ಮೂಲಕ ಮೇಲ್ವಿಚಾರಣಾ ಕ್ರಿಯಾ ಚೌಕಟ್ಟು (SAF) ಅಡಿಯಲ್ಲಿ ನೀಡಿದ ನಿರ್ದಿಷ್ಟ ನಿರ್ದೇಶನಗಳ ಅನುಪಾಲನೆ ಮಾಡದೇ ಇದ್ದುದಕ್ಕಾಗಿ ಶ್ರೀ ಬಸವೇಶ್ವರ ಪಟ್ಟಣ ಸಹಕಾರ ಬ್ಯಾಂಕ್ ನಿಯಮಿತ, ಸಿಂದಗಿ, ಕರ್ನಾಟಕ- ಈ ಬ್ಯಾಂಕಿಗೆ (ಬ್ಯಾಂಕು) ರೂ. 1,00,000/- (ರೂ. ಒಂದು ಲಕ್ಷ ಮಾತ್ರ) ವಿತ್ತೀಯ ದಂಡ ವಿಧಿಸಿದೆ. ಬ್ಯಾಂಕಿಂಗ್ ನಿಯಂತ್ರಣ ಅಧಿನಿಯಮ 1949 ರ ಕಲಂ 47 ಏ(1)(ಸಿ) ಜೊತೆ ಓದಲಾದ ಕಲಂ 46(4) (i) ಮತ್ತು 56 ರ ಅಡಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಗೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ದಂಡವನ್ನು ವಿಧಿಸಿದೆ.

ಮಾರ್ಚ್ 31, 2023 ರಂದು ಇದ್ದ ಬ್ಯಾಂಕಿನ ಆರ್ಥಿಕ ಪರಿಸ್ಥಿತಿ ಯನ್ನು ಆಧರಿಸಿ ಬ್ಯಾಂಕಿನ ಶಾಸನ ಬದ್ಧ ನಿರೀಕ್ಷಣೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಮಾಡಲಾಯಿತು. ಆರ್ ಬಿ ಐ ನ ಶಾಸನಬದ್ಧ ನಿರ್ದೇಶನಗಳ ಅನುಪಾಲನೆ ಆಗದೆ ಇರುವ ಬಗ್ಗೆ ನಿರೀಕ್ಷಣಾ ನಿಷ್ಕರ್ಷೆಯನ್ನು ಮತ್ತು ಈ ಸಂಬಂಧ ನಡೆದ ಪತ್ರ ವ್ಯವಹಾರಗಳನ್ನು ಆಧರಿಸಿ ಬ್ಯಾಂಕಿಗೆ ಬ್ಯಾಂಕಿಂಗ್ ನಿಯಂತ್ರಣ ಅಧಿನಿಯಮದ ನಿರ್ದೇಶನಗಳ ಅನುಪಾಲನೆ ಮಾಡುವಲ್ಲಿ ವಿಫಲವಾದುದಕ್ಕಾಗಿ ಏಕೆ ದಂಡ ವಿಧಿಸಬಾರದು ಎಂದು ಕಾರಣ ಕೇಳಿ ನೋಟೀಸನ್ನು ನೀಡಲಾಗಿತ್ತು.. ಬ್ಯಾಂಕು ಈ ಕುರಿತು ಸಲ್ಲಿಸಿದ ಉತ್ತರ ಮತ್ತು ವೈಯಕ್ತಿಕ ವಿಚಾರಣೆಯಲ್ಲಿ ಮಾಡಲಾದ ಮೌಖಿಕ ನಿವೇದನೆಗಳನ್ನು ಪರಿಗಣಿಸಿದ ನಂತರ ಭಾರತೀಯ ರಿಸರ್ವ್ ಬ್ಯಾಂಕಿಗೆ, ಇತರ ವಿಷಯಗಳ ನಡುವೆ, ಬ್ಯಾಂಕಿನ ವಿರುದ್ಧ ಮಾಡಲಾದ ಈ ಕೆಳಗಿನ ಆರೋಪ ಸ್ಥಿರಪಟ್ಟಿದೆ ಮತ್ತು ವಿತ್ತೀಯ ದಂಡ ವಿಧಿಸುವುದಕ್ಕೆ ಅರ್ಹವಾಗಿವೆ ಎಂದು ಗೊತ್ತಾಯಿತು:

ನಿಷ್ಕ್ರಿಯ ಆಸ್ತಿಗಳ ಮಟ್ಟವು ಹೆಚ್ಚಾಗಿದ್ದ ಕ್ಷೇತ್ರಗಳಿಗೆ ತನ್ನ ಅನಾವರಣವನ್ನು ಹೆಚ್ಚು ಮಾಡುವಾಗ ಬ್ಯಾಂಕು ಮೇಲ್ವಿಚಾರಣಾ ಕ್ರಿಯಾ ಚೌಕಟ್ಟು (SAF) ನಿರ್ದೇಶನಗಳ ಅನುಪಾಲನೆ ಮಾಡಿರಲಿಲ್ಲ ಮತ್ತು ಭಾರತೀಯ ರಿಸರ್ವ್ ಬ್ಯಾಂಕಿನ ಪೂರ್ವಾನುಮತಿ ಪಡೆಯದೇ ಲಾಭಾಂಶ ಘೋಷಣೆ ಮಾಡಿತ್ತು.

ನಿಯಂತ್ರಣ ಅನುಪಾಲನೆಯಲ್ಲಿ ಕಂಡುಬಂದ ಕೊರತೆಗಾಗಿ ಮೇಲಿನ ಕ್ರಮವನ್ನು ತೆಗೆದುಕೊಳ್ಳಲಾಗಿದೆಯೇ ವಿನಃ ಇದು ಬ್ಯಾಂಕು ತನ್ನ ಗ್ರಾಹಕರೊಂದಿಗೆ ಮಾಡಿಕೊಂಡ ಯಾವುದೇ ವ್ಯವಹಾರ ಅಥವಾ ಒಪ್ಪಂದದ ಸಿಂಧುತ್ವದ ಬಗೆಗಿನ ಘೋಷಣೆಯಲ್ಲ. ಅಲ್ಲದೆ, ಈ ವಿತ್ತೀಯ ದಂಡ ವಿಧಿಸುವ ಕ್ರಿಯೆಯು ಭಾರತೀಯ ರಿಸರ್ವ್ ಬ್ಯಾಂಕು ಈ ಬ್ಯಾಂಕಿನ ಮೇಲೆ ತೆಗೆದುಕೊಳ್ಳಬಹುದಾದ ಯಾವುದೇ ಇತರ ಕ್ರಮದ ಪೂರ್ವಾಗ್ರಹದಿಂದ ಹೊರತಾಗಿದೆ.

(ಪುನೀತ್ ಪಂಚೋಲಿ)    
ಮುಖ್ಯ ಮಹಾ ವ್ಯವಸ್ಥಾಪಕರು

ಪತ್ರಿಕಾ ಪ್ರಕಟಣೆ: 2024-2025/1786

RbiTtsCommonUtility

प्ले हो रहा है
ಕೇಳಿ

Related Assets

RBI-Install-RBI-Content-Global

RbiSocialMediaUtility

ಭಾರತೀಯ ರಿಸರ್ವ್ ಬ್ಯಾಂಕ್ ಮೊಬೈಲ್ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿ ಮತ್ತು ಇತ್ತೀಚಿನ ಸುದ್ದಿಗಳಿಗೆ ತ್ವರಿತ ಅಕ್ಸೆಸ್ ಪಡೆಯಿರಿ!

ನಮ್ಮ ಅಪ್ಲಿಕೇಶನ್ ಅನ್ನು ಸ್ಥಾಪಿಸಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ

RbiWasItHelpfulUtility

ಪೇಜ್ ಕೊನೆಯದಾಗಿ ಅಪ್ಡೇಟ್ ಆದ ದಿನಾಂಕ:

ಈ ಪುಟವು ಸಹಾಯಕವಾಗಿತ್ತೇ?