<font face="mangal" size="3">ಅಮಾನತ್ ಕೋ-ಆಪರೇಟೀವ್ ಬ್ಯಾಂಕ್ ಲಿ. ಬೆಂಗಳೂರು – ಬ್ಯ - ಆರ್ಬಿಐ - Reserve Bank of India
ಅಮಾನತ್ ಕೋ-ಆಪರೇಟೀವ್ ಬ್ಯಾಂಕ್ ಲಿ. ಬೆಂಗಳೂರು – ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ, 1944 (ಎ ಎ ಸಿ ಎಸ್) ಪ್ರಕರಣ ರ 35 ಎ ರ ಅಡಿಯಲ್ಲಿ ನೀಡಿದ ಸಮಗ್ರ ನಿರ್ದೇಶನಗಳ ಮುಂದುವರಿಕೆ
ಜುಲೈ 04, 2018 ಅಮಾನತ್ ಕೋ-ಆಪರೇಟೀವ್ ಬ್ಯಾಂಕ್ ಲಿ. ಬೆಂಗಳೂರು – ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ, ಸಾರ್ವಜನಿಕರಿಗೆ ಈ ಮೂಲಕ ತಿಳಿಸುವುದೇನೆಂದರೆ, ಅಮಾನತ್ ಕೋ-ಆಪರೇಟೀವ್ ಬ್ಯಾಂಕ್ ಲಿ. ಬೆಂಗಳೂರು ಇದಕ್ಕೆ ಏಪ್ರಿಲ್ 01, 2013ರಂದು ಮತ್ತು ತದನಂತರ ನೀಡಲಾಗಿರುವ (ಡಿಸಂಬರ್ 21, 2017 ರಂದು ನೀಡಿರುವ ಕೊನೆಯ ನಿರ್ದೇಶನ ಸೇರಿದಂತೆ) ಸಮಗ್ರ ನಿರ್ದೇಶನಗಳ ಪಾಲನಾವಧಿಯನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಮುಂದುವರಿಸಲು ಭಾರತೀಯ ರಿಸರ್ವ್ ಬ್ಯಾಂಕಿಗೆ ಅಗತ್ಯವೆಂದು ಕಂಡುಬಂದಿರುವುದರಿಂದ, ಮತ್ತೆ 6 ತಿಂಗಳ ವರೆಗೆ ವಿಸ್ತರಿಸಲಾಗಿದೆ. ಅದರಂತೆ, ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ, 1949 (ಎ ಎ ಸಿ ಎಸ್) ರ ಪ್ರಕರಣ 35 A (1) ಉಪ ಪ್ರಕರಣ (1) ರ ಅಡಿಯಲ್ಲಿ ಪ್ರದತ್ತವಾಗಿರುವ ಅಧಿಕಾರಾವನ್ನು ಚಲಾಯಿಸಿ ಅಮಾನತ್ ಕೋ-ಆಪರೇಟೀವ್ ಬ್ಯಾಂಕ್ ಲಿ. ಬೆಂಗಳೂರು ಇದಕ್ಕೆ ಏಪ್ರಿಲ್ 01, 2013ರಂದು ನೀಡಿರುವ ಹಾಗೂ ಕಾಲ ಕಾಲಕ್ಕೆ ಮಾರ್ಪಾಡು ಮಾಡಿರುವ ನಿರ್ದೇಶನಗಳ ಅನ್ವಯಿಸುವಿಕೆಯನ್ನು ಜುಲೈ 04, 2018 ರ ವರೆಗೆ ವಿಸ್ತರಿಸಲಾಗಿದ್ದು, ಪ್ರಸ್ತುತ ಇದನ್ನು ಮತ್ತೆ ಆಱು ತಿಂಗಳ ವರೆಗೆ ಎಂದರೆ ಜುಲೈ 5, 2018 ರಿಂದ ಜನವರಿ 4, 2019 ರವರೆಗೆ ಮತ್ತೆ ಪರಾಮರ್ಶಿಸುವ ಷರತ್ತಿನೊಂದಿಗೆ, ವಿಸ್ತರಿಸಲಾಗಿದೆ. ಮೇಲಿನ ನಿರ್ದೇಶನಗಳ ಸಂಬಂಧ ನೀಡಲಾಗಿರುವ ಇನ್ನಿತರ ಷರತ್ತು ಮತ್ತು ನಿಬಂಧನೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಭಾರತೀಯ ರಿಸರ್ವ್ ಬ್ಯಾಂಕಿನಿಂದ ನೀಡಲಾಗಿರುವ ಮೇಲಿನ ನಿರ್ದೇಶನಗಳ ಪರಿಣಾಮ, ಭಾ. ರಿ. ಬ್ಯಾಂಕ್ ಈ ಬ್ಯಾಂಕಿನ ಪರವಾನಿಗೆ ರದ್ದುಪಡಿದೆಯೆಂದು ತಿಳಿಯಬಾರದು. ತನ್ನ ಹಣಕಾಸು ಪರಿಸ್ಥಿತಿ ಸುಧಾರಿಸುವವರೆಗೂ, ಬ್ಯಾಂಕು ನಿರ್ಬಂಧದ ಷರತ್ತಿನ ಅನ್ವಯ ಬ್ಯಾಂಕಿಂಗ್ ವ್ಯವಹಾರವನ್ನು ಮುಂದುವರೆಸುತ್ತದೆ. ಪರಿಸ್ಥಿತಿಗೆ ಅನುಗುಣವಾಗಿ ರಿಸರ್ವ್ ಬ್ಯಾಂಕು ಈ ನಿರ್ದೇಶನಗಳಿಗೆ ಮಾರ್ಪಾಡು ಮಾಡುತ್ತದೆ. ಅಜಿತ್ ಪ್ರಸಾದ್ ಪತ್ರಿಕಾ ಪ್ರಕಟಣೆ : 2018-2019/23 |