<font face="mangal" size="3">ಎನ್‌ಬಿ‌ಎಫ್‌ಸಿ- ಎಂ ಎಫ್ ಐ ದಿಂದ ವಿಧಿಸಲಾಗುವ ಶುಲ್ಕ - ಆರ್ಬಿಐ - Reserve Bank of India
ಎನ್ಬಿಎಫ್ಸಿ- ಎಂ ಎಫ್ ಐ ದಿಂದ ವಿಧಿಸಲಾಗುವ ಶುಲ್ಕಕ್ಕೆ ಜನವರಿ 01, 2017 ರಿಂದ ಆರಂಭವಾಗುವ ತ್ರೈಮಾಸಿಕದಿಂದ ಅನ್ವಯವಾಗುವ ಸರಾಸರಿ ಮೂಲ ದರ
ಡಿಸೆಂಬರ್ 30, 2016 ಎನ್ಬಿಎಫ್ಸಿ- ಎಂ ಎಫ್ ಐ ದಿಂದ ವಿಧಿಸಲಾಗುವ ಶುಲ್ಕಕ್ಕೆ ಜನವರಿ 01, 2017 ರಿಂದ ಆರಂಭವಾಗುವ ತ್ರೈಮಾಸಿಕದಿಂದ ಅನ್ವಯವಾಗುವ ಸರಾಸರಿ ಮೂಲ ದರ ಬ್ಯಾಂಕಿಗೆತರ ಹಣಕಾಸು ಸಂಸ್ಥೆ – ಕಿರು ಹಣಕಾಸು ಸಂಸ್ಥೆ ಗಳಿಂದ ವಿಧಿಸಲಾಗುವ ಶುಲ್ಕಕ್ಕೆ ಜನವರಿ 01, 2017 ರಿಂದ ಆರಂಭವಾಗುವ ತ್ರೈಮಾಸಿಕದಿಂದ ಅನ್ವಯವಾಗುವ ಸರಾಸರಿ ಮೂಲ ದರ 9.41 ಆಗಿರುತ್ತದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಇಂದು ತಿಳಿಸಿದೆ. ರಿಸರ್ವ ಬ್ಯಾಂಕ್ ಎನ್ಬಿಎಫ್ಸಿ –ಎಂ ಎಫ್ ಐ ಗಳಿಗೆ ಸಾಲದ ಬಡ್ಡಿಯ ಕುರಿತು ನೀಡಿದ ತನ್ನ ಫೆಬ್ರುವರಿ 07, 2014 ರ ಸುತ್ತೋಲೆಯಲ್ಲಿ ತಿಳಿಸಿದಂತೆ ಪ್ರತಿ ತ್ರೈಮಾಸಿಕದ ಕೊನೆಯ ದಿನದಂದು , ಮೊದಲ ಐದು ಅತಿ ದೊಡ್ಡ ವಾಣಿಜ್ಯ ಬ್ಯಾಂಕುಗಳ ಮೂಲ ದರದ ಸರಾಸರಿಯನ್ನು ಎನ್ಬಿಎಫ್ಸಿ- ಎಂ ಎಫ್ ಐ ದಿಂದ ವಿಧಿಸಲಾಗುವ ಶುಲ್ಕಕ್ಕೆ ಅನ್ವಯವಾಗುವ ಸರಾಸರಿ ಮೂಲ ದರವಾಗಿ ಉಪಯೋಗಿಸಲಾಗುತ್ತದೆ ಎಂದು ಭಾರತೀಯ ರಿಸರ್ವ ಬ್ಯಾಂಕ್ ತಿಳಿಸಿದೆ. ಈ ಮೂಲ ದರವನ್ನು ತದ ನಂತರದ ತ್ರೈಮಾಸಿಕ ದಲ್ಲಿ ಎನ್ಬಿಎಫ್ಸಿ –ಎಂ ಎಫ್ ಐ ಗಳಿಂದ ವಿಧಿಸಲಾಗುತ್ತದೆ. ಅಜಿತ್ ಪ್ರಸಾದ್ ಪತ್ರಿಕಾ ಪ್ರಕಟಣೆ : 2016-2017/1714 |