<p class="knudtext1"><span class="td">2005 </span>ಕ್ಕೂ ಮುಂಚಿತವಾಗಿ ನೀಡಲಾದ ಬ್ಯಾಂಕು ನೋಟುಗಳನ್ - ಆರ್ಬಿಐ - Reserve Bank of India
2005 ಕ್ಕೂ ಮುಂಚಿತವಾಗಿ ನೀಡಲಾದ ಬ್ಯಾಂಕು ನೋಟುಗಳನ್ನು ಹಿಂತೆಗೆದುಕೊಳ್ಳಲಾಗುವುದು - ಭಾರತೀಯ ರಿಸರ್ವ್ ಬ್ಯಾಂಕಿನ ಸೂಚನೆ
ಜನವರಿ 22, 2014 2005 ಕ್ಕೂ ಮುಂಚಿತವಾಗಿ ನೀಡಲಾದ ಬ್ಯಾಂಕು ನೋಟುಗಳನ್ನು 2005 ಕ್ಕೂ ಮುಂಚಿತವಾಗಿ ನೀಡಲಾಗಿರುವ ಎಲ್ಲಾ ಬ್ಯಾಂಕು ನೋಟುಗಳನ್ನು ಮಾರ್ಚ್ 31, 2014 ರ ನಂತರ ಚಲಾವಣೆಯಿಂದ ಹಿಂತೆಗುದುಕೊಳ್ಳಲಾಗುವುದೆಂದು ಭಾರತೀಯ ರಿಸರ್ವ್ ಬ್ಯಾಂಕ್ ಇಂದು ಸೂಚನೆ ನೀಡಿದೆ. ಏಪ್ರಿಲ್ 1, 2014 ರಿಂದ ಈ ನೋಟುಗಳನ್ನು ಬದಲಾಯಿಸಿಕೊಳ್ಳಲು ಬ್ಯಾಂಕುಗಳನ್ನು ಸಂಪರ್ಕಿಸಬೇಕು. ಈ ನೋಟುಗಳ ಬದಲಾವಣೆ ಸೌಲಭ್ಯವನ್ನು ಮುಂದೆ ಸೂಚನೆ ನೀಡುವವರೆಗೂ ಬ್ಯಾಂಕುಗಳು ಮುಂದುವರಿಸಲಿವೆ. ಇಂತಹ ನೋಟುಗಳ ಹಿಂಭಾಗದಲ್ಲಿ ನೋಟು ಮುದ್ರಣ ವರ್ಷವನ್ನು ಮುದ್ರಿಸಿಲ್ಲವಾದ್ದರಿಂದ ಈ ನೋಟುಗಳನ್ನು ಗುರುತಿಸುವುದು ಸುಲಭವೆಂದು ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. (ಕೆಳಗಿನ ಚಿತ್ರವನ್ನು ನೋಡಿ) 2005ಕ್ಕೂ ಮುಂಚಿತವಾಗಿ ನೀಡಲಾದ ನೋಟುಗಳು ವಿಧಿಮಾನ್ಯ ಚಲಾವಣೆಯಲ್ಲಿ ಮುಂದುವರಿಯುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟಪಡಿಸಿದೆ. ಎಂದರೆ, ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಮತ್ತು ಗ್ರಾಹಕರಲ್ಲದವರಿಗೂ ಸಹಾ ಈ ನೋಟುಗಳನ್ನು ಬದಲಾಯಿಸಿಕೊಡಬೇಕು. ಆದಾಗ್ಯೂ ಜುಲೈ ೦1, 2014 ರಿಂದ ಗ್ರಾಹಕರಲ್ಲದವರು 5೦೦ರೂ ಮತ್ತು 1೦೦೦ರೂ ಮುಖ ಬೆಲೆಯ ನೋಟುಗಳನ್ನು ಬದಲಾಯಿಸಿಕೊಳ್ಳಬೇಕಾದರೆ, ತಮ್ಮ ಗುರುತು ಮತ್ತು ವಿಳಾಸದ ಸಾಕ್ಷ್ಯಾಧಾರವನ್ನು, ಈ ನೋಟುಗಳನ್ನು ಬದಲಾಯಿಸಿಕೊಳ್ಳಬಯಸುವ ಬ್ಯಾಂಕು ಶಾಖೆಯಲ್ಲಿ ನೀಡಬೇಕು. ಸಾರ್ವಜನಿಕರು ಆತಂಕ ಪಡಬಾರದೆಂದು ಭಾರತೀಯ ರಿಸರ್ವ್ ಬ್ಯಾಂಕ್ ಮನವಿ ಮಾಡಿದೆ. ಈ ಹಿಂತೆಗೆತ ಪ್ರಕ್ರಿಯೆಗೆ ಸಕ್ರಿಯ ಸಹಕಾರ ನೀಡಬೇಕಾಗಿಯೂ ಸಹ ಕೋರಿದೆ. ಅಜಿತ್ ಪ್ರಸಾದ್ ಪತ್ರಿಕಾ ಪ್ರಕಟಣೆ: 2013-2014/1472 |