RbiSearchHeader

Press escape key to go back

Past Searches

Page
Official Website of Reserve Bank of India

Notification Marquee

RBI Announcements
RBI Announcements

RbiAnnouncementWeb

RBI Announcements
RBI Announcements

Asset Publisher

78497469

ನಕಲಿ ನೋಟುಗಳ ಪ್ರಸರಣ - ಸಾರ್ವಜನಿಕರ ಗಮನಕ್ಕೆ

ಅಕ್ಟೋಬರ್ 26, 2016

ನಕಲಿ ನೋಟುಗಳ ಪ್ರಸರಣ - ಸಾರ್ವಜನಿಕರ ಗಮನಕ್ಕೆ

ಸಮಾಜ ಘಾತುಕ ಶಕ್ತಿಗಳು ಹೆಚ್ಚಿನ ಮುಖಬೆಲೆಯ ನಕಲಿ ಭಾರತೀಯ ನೋಟುಗಳನ್ನು ಸಮಾಜದ ಮುಗ್ಧತೆಯ ಉಪಯೋಗ ಪಡೆದು ಅವರನ್ನು ವಂಚಿಸಿ ಪ್ರಸರಣ ಮಾಡುತ್ತಿರುವುದು ಗಮನಕ್ಕೆ ಬಂದಿರುತ್ತದೆ.

ನಾವು ಸಾರ್ವಜನಿಕರು ಹೆಚ್ಚಿನ ಮುಖಬೆಲೆಯ ನೋಟುಗಳನ್ನು ಪರಿಶೀಲಿಸಿ ಸ್ವೀಕಾರ ಮಾಡಬೇಕೆಂದು ಎಚ್ಚರಿಸುತ್ತೇವೆ. ನಿಜವಾದ ಹೆಚ್ಚಿನ ಮುಖಬೆಲೆಯ ಭಾರತೀಯ ನೋಟುಗಳು ಬಲವಾದ ನಕಲಿ ನಿರೋಧಕ ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿದೆ. ಸೂಕ್ಷ್ಮ ತಪಾಸನೆಯಿಂದ ನಕಲಿ ನೋಟುಗಳನ್ನು ಪತ್ತೆ ಹಚ್ಚಬಹುದು. ಭದ್ರತಾ ವೈಶಿಷ್ಟ್ಯಗಳ ವಿವರಣೆಯನ್ನು /en/web/rbi/rbi-kehta-hai/know-your-banknotes ವೆಬ್ ತಾಣದಲ್ಲಿ ಪಡೆಯಬಹುದು. ಸಾರ್ವಜನಿಕರು ಈ ವೈಶಿಷ್ಟ್ಯಗಳೊಂದಿಗೆ ತಮ್ಮನ್ನು ಪರಿಚಯಿಸಿಕೊಂಡು ಮತ್ತು ಇತರರಿಗೂ ತಿಳಿಸಬಹುದು. ಸಾರ್ವಜನಿಕರು ನೋಟುಗಳನ್ನು ಸ್ವೀಕರಿಸುವ ಮುಂಚೆ ಪರಿಶೀಲಿಸುವಂತೆ ನಾವು ಅವರಲ್ಲಿ ವಿನಂತಿಸಿಕೊಳ್ಳುತ್ತೇವೆ. ಇದು ನಕಲಿ ನೋಟುಗಳ ಬೆಳೆವಣಿಗೆಯನ್ನು ಬಂಧಿಸಲು ಸಹಾಯ ಮಾಡುತ್ತದೆ.

ನಕಲಿ ನೋಟುಗಳ ಒಡೆತನ , ವಿನಿಮಯ , ಸ್ವೀಕಾರ ಹಾಗೂ ಅದರ ಪ್ರಸರಣ ಅಥವಾ ಪ್ರಸರಣಕ್ಕೆ ಸಹಾಯ ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಅಪರಾಧವಾಗಿದ್ದು ಕಟ್ಟುನಿಟ್ಟಾದ ಶಿಕ್ಷೆಗೆ ಕಾರಣವಾಗಿರುತ್ತದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಎಲ್ಲರಿಗೂ ತಿಳಿಸುತ್ತದೆ.

ನೋಟಿನ ಹೆಚ್ಚಿನ ಬಳಕೆಗೆ ಸಹಾಯವಾಗಲು ಇನ್ನೂ ಅನೇಕ ಗುರುತರ ವೈಶಿಷ್ಟಗಳನ್ನು ಸೇರಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಯೋಚಿಸುತ್ತಿದೆ.

ನಕಲಿ ನೋಟುಗಳ ಪ್ರಸರಣದ ವಿಪತ್ತನ್ನು ತಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ಹಾಗೂ ಸಾರ್ವಜನಿಕ ಅಧಿಕಾರಿಗಳಿಗೆ ಸಹಾಯ ಮಾಡು ವಂತೆ ರಿಸರ್ವ್ ಬ್ಯಾಂಕ್ ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳುತ್ತದೆ.

ಸಾರ್ವಜನಿಕರ ಗಮನಕ್ಕೆ ಹಾಗೂ ಅವರ ಹಿತಾಸಕ್ತಿಯ ದೃಷ್ಟಿಯಿಂದ ಭಾರತೀಯ ರಿಸರ್ವ್ ಬ್ಯಾಂಕ್ ಈ ಸೂಚನೆಯನ್ನು ಹೊರಡಿಸಿದೆ.

ಅಜಿತ್ ಪ್ರಸಾದ್
ಸಹಾಯಕ ಸಲಹೆಗಾರರು

ಪತ್ರಿಕಾ ಪ್ರಕಟಣೆ : 2016-2017/1037

RbiTtsCommonUtility

प्ले हो रहा है
ಕೇಳಿ

Related Assets

RBI-Install-RBI-Content-Global

RbiSocialMediaUtility

ಭಾರತೀಯ ರಿಸರ್ವ್ ಬ್ಯಾಂಕ್ ಮೊಬೈಲ್ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿ ಮತ್ತು ಇತ್ತೀಚಿನ ಸುದ್ದಿಗಳಿಗೆ ತ್ವರಿತ ಅಕ್ಸೆಸ್ ಪಡೆಯಿರಿ!

ನಮ್ಮ ಅಪ್ಲಿಕೇಶನ್ ಅನ್ನು ಸ್ಥಾಪಿಸಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ

RbiWasItHelpfulUtility

ಪೇಜ್ ಕೊನೆಯದಾಗಿ ಅಪ್ಡೇಟ್ ಆದ ದಿನಾಂಕ:

ಈ ಪುಟವು ಸಹಾಯಕವಾಗಿತ್ತೇ?