RbiSearchHeader

Press escape key to go back

Past Searches

Page
Official Website of Reserve Bank of India

Notification Marquee

RBI Announcements
RBI Announcements

RbiAnnouncementWeb

RBI Announcements
RBI Announcements

Asset Publisher

78519067

ಸೂಚ್ಯ ದರಗಳ ಸಂಕಲನ ಮತ್ತು ಪ್ರಚಾರ – ಫೈನಾನ್ಸಿಯಲ್ ಬೆಂಚ್ ಮಾರ್ಕ್ಸ್ಇಂಡಿಯಾ
ಲಿಮಿಟೆಡ್ (ಎಫ್ ಬಿ ಐ ಎಲ್) ಈ ಸಂಸ್ಥೆಯಿಂದ ಅಧಿಕಾರ ವಹಿಸಿಕೊಳ್ಳುವಿಕೆ

ಜುಲೈ 04, 2018

ಸೂಚ್ಯ ದರಗಳ ಸಂಕಲನ ಮತ್ತು ಪ್ರಚಾರ – ಫೈನಾನ್ಸಿಯಲ್ ಬೆಂಚ್ ಮಾರ್ಕ್ಸ್ಇಂಡಿಯಾ
ಲಿಮಿಟೆಡ್ (ಎಫ್ ಬಿ ಐ ಎಲ್) ಈ ಸಂಸ್ಥೆಯಿಂದ ಅಧಿಕಾರ ವಹಿಸಿಕೊಳ್ಳುವಿಕೆ

ಪ್ರಸ್ತುತ, ಅದೇ ಕ್ಷಣದ ಅಮೇರಿಕನ್ ಡಾಲರ್ / ಭಾರತೀಯ ರೂಪಾಯಿಯ ಸೂಚ್ಯ ದರವನ್ನು ಮತ್ತು ಇತರೇ ಪ್ರಮುಖ ಕರೆನ್ಸಿಗಳ ವಿನಿಮಯ ದರಗಳನ್ನು ದಿನ ನಿತ್ಯದ ಆಧಾರದ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿ ಐ) ಸಂಕಲಿಸಿ, ಪ್ರಕಟಿಸುತ್ತಿದೆ. 2017-18 ರ 6ನೇ ದ್ವೈಮಾಸಿಕ ನೀತಿ ವಿವರಣೆಯಲ್ಲಿ ಪ್ರಕಟಿಸಿರುವಂತೆ , ಫೈನಾನ್ಸಿಯಲ್ ಬೆಂಚ್ ಮಾರ್ಕ್ಸ್ಇಂಡಿಯಾ ಲಿಮಿಟೆಡ್ (ಎಫ್ ಬಿ ಐ ಎಲ್) ಈ ಸಂಸ್ಥೆ ಅದೇ ಕ್ಷಣದ ಅಮೇರಿಕನ್ ಡಾಲರ್ / ಭಾರತೀಯ ರೂಪಾಯಿಯ ಸೂಚ್ಯ ದರವನ್ನು ಮತ್ತು ಇತರೇ ಪ್ರಮುಖ ಕರೆನ್ಸಿಗಳ ವಿನಿಮಯ ದರಗಳ ಸಂಕಲನ ಮತ್ತು ಪ್ರಚಾರ ಕಾರ್ಯದ ಹೊಣೆಯನ್ನು ಆರ್ ಬಿ ಐ ನಿಂದ ತಾನು ವಹಿಸಿಕೊಂಡಿದೆ. ಎಫ್ ಬಿ ಐ ಎಲ್, ಅಮೇರಿಕನ್ ಡಾಲರ್ / ಭಾರತೀಯ ರೂಪಾಯಿಯ ಸೂಚ್ಯ ದರವನ್ನು ಮತ್ತು ಇತರೇ ಪ್ರಮುಖ ಕರೆನ್ಸಿಗಳ ವಿನಿಮಯ ದರಗಳ ಸಂಕಲನ ಮತ್ತು ಪ್ರಚಾರ ಕಾರ್ಯವನ್ನು ಜುಲೈ 10, 2018 (ಮಂಗಳವಾರ) ದಿಂದ ಪ್ರಾರಂಭಿಸಲಿದೆ.

ಈಗಿನಂತಯೇ, ಈ ದರಗಳನ್ನು ಪ್ರತಿ ದಿನ ( ಶನಿವಾರ, ಭಾನುವಾರ ಮತ್ತು ಬ್ಯಾಂಕ್ ರಜಾ ದಿನಗಳನ್ನು ಹೊರತುಪಡಿಸಿ) ಪ್ರಕಟಿಸಲಾಗುತ್ತದೆ ಮತ್ತು ಎಫ್ ಬಿ ಐ ಎಲ್ ನ ವೆಬ್ ತಾಣ (www.fbil.org.in) ದಲ್ಲಿ ಕಾಣಬಹುದು. ಅದರಂತೆ, ಆರ್ ಬಿ ಐ ನಿಂದ ನೀಡಲ್ಪಟ್ಟ ಸೂಚ್ಯ ದರಗಳ ಬಗ್ಗೆ ದಿನ ನಿತ್ಯದ ಪತ್ರಿಕಾ ಪ್ರಕಟಣೆ ಜುಲೈ 9, 2018 ( ಸೋಮವಾರ) ದಿಂದ ಸ್ಥಗಿತಗೊಳ್ಳುವುದು.

ಅಜಿತ್ ಪ್ರಸಾದ್
ಸಹಾಯಕ ಸಲಹೆಗಾರರು

ಪತ್ರಿಕಾ ಪ್ರಕಟಣೆ : 2018-2019/35

RbiTtsCommonUtility

प्ले हो रहा है
ಕೇಳಿ

Related Assets

RBI-Install-RBI-Content-Global

RbiSocialMediaUtility

ಭಾರತೀಯ ರಿಸರ್ವ್ ಬ್ಯಾಂಕ್ ಮೊಬೈಲ್ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿ ಮತ್ತು ಇತ್ತೀಚಿನ ಸುದ್ದಿಗಳಿಗೆ ತ್ವರಿತ ಅಕ್ಸೆಸ್ ಪಡೆಯಿರಿ!

ನಮ್ಮ ಅಪ್ಲಿಕೇಶನ್ ಅನ್ನು ಸ್ಥಾಪಿಸಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ

RbiWasItHelpfulUtility

ಪೇಜ್ ಕೊನೆಯದಾಗಿ ಅಪ್ಡೇಟ್ ಆದ ದಿನಾಂಕ:

ಈ ಪುಟವು ಸಹಾಯಕವಾಗಿತ್ತೇ?