<font face="mangal" size="3">ಮಹಾತ್ಮ ಗಾಂಧಿ (ನೂತನ) ಶ್ರೇಣಿಯ ಬ್ಯಾಂಕ್ ನೋಟುಗಳ ವಿ - ಆರ್ಬಿಐ - Reserve Bank of India
ಮಹಾತ್ಮ ಗಾಂಧಿ (ನೂತನ) ಶ್ರೇಣಿಯ ಬ್ಯಾಂಕ್ ನೋಟುಗಳ ವಿತರಣೆಯ ಅನುವು ಮಾಡಿಕೊಡುವ ಉದ್ದೇಶದಿಂದ ಕಾರ್ಯಪಡೆಯ ಸಂಯೋಜನೆ- ಎಟಿಎಂ ಗಳ ಮರುಹೊಂದಾಣಿಕೆ ಹಾಗೂ ಪುನಃಸಂಕ್ರಿಯಾಕರಣ
ನವೆಂಬರ್ 14, 2016 ಮಹಾತ್ಮ ಗಾಂಧಿ (ನೂತನ) ಶ್ರೇಣಿಯ ಬ್ಯಾಂಕ್ ನೋಟುಗಳ ವಿತರಣೆಯ ಅನುವು ಮಾಡಿಕೊಡುವ ಉದ್ದೇಶದಿಂದ ನೂತನ ವಿನ್ಯಾಸದ ಅಧಿಕ ಮೌಲ್ಯದ ರೂ.2000 ಬ್ಯಾಂಕ್ ನೋಟುಗಳನ್ನು ಸೇರಿಸಿ ಮಹಾತ್ಮ ಗಾಂಧಿ (ನೂತನ) ಶ್ರೇಣಿಯ ಬ್ಯಾಂಕ್ ನೋಟುಗಳನ್ನು ಪರಿಚಯಿಸಿರುವ ಕಾರಣದಿಂದಾಗಿ ಎಲ್ಲ ಎಟಿಎಂ/ ನಗದು ನಿರ್ವಹಣಾ ಯಂತ್ರಗಳನ್ನುನೂತನ ನೋಟುಗಳನ್ನು ವಿತರಣೆ ಮಾಡಲು ಮರುಜೋಡನೆ ಮಾಡುವ ಅಗತ್ಯವಿದೆ. 2. ಸಾರ್ವಜನಿಕರ ಹಣದ ಅವಶ್ಯಕತೆಯನ್ನು ಪೂರೈಸುವಲ್ಲಿ ಹಾಗೂ ನಗದು ವಿತರಿಸುವಲ್ಲಿ ಎ ಟಿ ಎಂ ಗಳ ಪಾತ್ರ ಮುಖ್ಯವಾಗಿದೆ. ಮರು ಸಕ್ರಿಯಗೊಳಿಸಿರುವ ಎ ಟಿ ಎಂ ಗಳು ನೋಟುಗಳ ದೊರೆಯುವಿಕೆಯನ್ನು ಹೆಚ್ಚಿಸುತ್ತದೆ. 3. ಎ ಟಿ ಎಂ ಗಳ ಮರು ಜೋಡನೆಯು ಬಹು ಸಂಸ್ಥೆಗಳನ್ನು ಹೊಂದಿವೆ – ಬ್ಯಾಂಕ್ , ಎ ಟಿ ಎಂ ಉತ್ಪಾದಕರು , ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯ , ಸ್ವೀಚ್ ಆಪರೇಟರ್ಸ್ , ಇತ್ಯಾದಿ ಹಾಗೂ ಇತರೆ ಅನೇಕ ಕಾರ್ಯಗಳನ್ನು ಹೊಂದಿರುವ ಕಾರಣ . ಈ ಎಲ್ಲ ಸಂಸ್ಥೆಗಳ ಸಮನ್ವಯತೆಯು ಈ ಮರುಜೊಡನೆ ಕಾರ್ಯಕ್ಕೆ ಅಗತ್ಯವಿದೆ. 4. ಈ ನಿಟ್ಟಿನಲ್ಲಿ ಮಾರ್ಗದರ್ಶನ ನೀಡುವ ದೃಷ್ಟಿಯಿಂದ ಶ್ರೀ ಎಸ್ ಎಸ್ ಮುಂದ್ರಾ , ಉಪ ಗವರ್ನರ್ , ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋರ್ಸ್ ರಚಿಸಲು ನಿರ್ಧರಿಸಲಾಯಿತು. ಈ ಟಾಸ್ಕ್ ಫೋರ್ಸ್ ನಲ್ಲಿ ಇರುವ ಸದಸ್ಯರು : I. ಭಾರತೀಯ ಸರ್ಕಾರ, ಹಣಕಾಸು ಸಚಿವಾಲಯ, ಆರ್ಥಿಕ ವ್ಯವಹಾರಗಳ ಇಲಾಖೆಯ ಪ್ರತಿನಿಧಿಗಳು. (ಸದಸ್ಯರು) II. ಭಾರತೀಯ ಸರ್ಕಾರ, ಹಣಕಾಸು ಸಚಿವಾಲಯ, ಹಣಕಾಸು ವ್ಯವಹಾರಗಳ ಇಲಾಖೆಯ ಪ್ರತಿನಿಧಿಗಳು (ಸದಸ್ಯರು) III. . ಭಾರತೀಯ ಸರ್ಕಾರ , ಗೃಹ ಇಲಾಖೆ (ಸದಸ್ಯರು) IV ಭಾರತದಲ್ಲಿ ಅತಿ ಹೆಚ್ಚು ಎ ಟಿ ಎಂ ಗಳನ್ನು ಹೊಂದಿರುವ ನಾಲ್ಕು ಬ್ಯಾಂಕುಗಳಾದ ಎಸ್ ಬಿ ಐ, ಆಕ್ಸಿಸ್ ಬ್ಯಾಂಕ್, ಐ ಸಿ ಐ ಸಿ ಐ ಬ್ಯಾಂಕ್ ಮತ್ತು ಎಚ್ ಡಿ ಎಫ್ ಸಿ ಬ್ಯಾಂಕು ಗಳ ಪ್ರತಿನಿಧಿಗಳು (ಸದಸ್ಯರು) V ಎನ್ ಪಿ ಸಿ ಐ ಪ್ರತಿನಿಧಿಗಳು (ಸದಸ್ಯರು) VI ಮುಖ್ಯ ಮಹಾ ವ್ಯವಸ್ಥಾಪಕರು, ಕರೆನ್ಸಿ ನಿರ್ವಹಣಾ ಇಲಾಖೆ (ಸದಸ್ಯರು) VII ಮುಖ್ಯ ಮಹಾ ವ್ಯವಸ್ಥಾಪಕರು, ಪಾವತಿ ಮತ್ತು ಇತ್ಯರ್ಥ ವ್ಯವಸ್ಥೆಯ ಇಲಾಖೆ, (ಸದಸ್ಯ ಕಾರ್ಯದರ್ಶಿಗಳು) 5. ಎ ಟಿ ಎಂ ಕಚೇರಿ ಪರಿಕರ ತಯಾರಕರು, ನಿರ್ವಹಣಾ ಸೇವೆ ಒದಗಿಸುವವರು , ಹಣ ಸಾಗಿಸುವ ಕಂಪನಿಗಳು , ವೈಟ್ ಲೇಬಲ್ ಎಟಿಎಂಗಳಿಂದ ತಲಾ ಒಂದು ಸದಸ್ಯರನ್ನು ಟಾಸ್ಕ್ ಫೋರ್ಸ್ ಚರ್ಚೆಗೆ ಆಹ್ವಾನಿಸಲಾಗಿದೆ. ಅಗತ್ಯವಿದ್ದಲ್ಲಿ ಟಾಸ್ಕ್ ಫೋರ್ಸ್ ಇತರರನ್ನು ಆಹ್ವಾನಿಸಬಹುದು. 6. ಟಾಸ್ಕ್ ಫೋರ್ಸಿನ ಉಲ್ಲೇಖದ ವಿಷಯಗಳು ಈ ಕೆಳಗಿನಂತಿವೆ : I) ಎಲ್ಲ ಎ ಟಿ ಎಂ ಗಳನ್ನು ತ್ವರಿತವಾಗಿ ಮರು ಜೋಡಣೆ ಮಾಡುವುದು. II) ಸಂಭಂದಿತ ಇನ್ನ್ಯಾವುದೇ ವಿಷಯಗಳು 7. ಡಿ ಪಿ ಎಸ್ ಎಸ್ , ಕೇಂದ್ರ ಕಚೇರಿ , ಕಾರ್ಯದರ್ಶಿ ಬೆಂಬಲ ನೀಡುತ್ತದೆ. ಅಲ್ಪನ ಕಿಲ್ಲಾವಾಲಾ ಪತ್ರಿಕಾ ಪ್ರಕಟಣೆ : 2016-2017/1197 |