RbiSearchHeader

Press escape key to go back

Past Searches

Theme
Theme
Text Size
Text Size
S3

Notification Marquee

RBI Announcements
RBI Announcements

RbiAnnouncementWeb

RBI Announcements
RBI Announcements

Asset Publisher

78483152

ನಕಲೀ ನೋಟುಗಳ ಪತ್ತೆ ಪ್ರಕ್ರಿಯೆ

ಆರ್ ಬಿ ಐ/2015-16/162
ಡಿಸಿಎಮ್ (ಎಫ್ ಎನ್ ವಿ ಡಿ) ಸಂ. 776/16.01.05/2015-16

ಆಗಸ್ಟ್ 27, 2015

ಎಲ್ಲಾ ಬ್ಯಾಂಕುಗಳ ಅಧ್ಯಕ್ಷರು/ಕಾರ್ಯ ನಿರ್ವಾಹಕ ನಿರ್ದೇಶಕರು/ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು

ಮಾನ್ಯರೇ,

ನಕಲೀ ನೋಟುಗಳ ಪತ್ತೆ ಪ್ರಕ್ರಿಯೆ

“ನಕಲೀ ನೋಟುಗಳ ಪತ್ತೆ ಮತ್ತು ವರದಿ” ಬಗ್ಗೆ ದಿನಾಂಕ ಜೂನ್ 27, 2013 ರ ನಮ್ಮ ಸುತ್ತೋಲೆ ಡಿಸಿಎಮ್ (ಎಫ್ ಎನ್ ವಿ ಡಿ) ಸಂ. 5840/16.01.05/2012-13 ಅನ್ನು ಗಮನಿಸಿ. ಸರ್ಕಾರದ ಜೊತೆ ಸಮಾಲೋಚಿಸಿ ನಕಲೀ ನೋಟುಗಳ ಪತ್ತೆ ಹಚ್ಚುವಿಕೆ ಪ್ರಕ್ರಿಯೆಯನ್ನು ಪುನರ್ವಿಮರ್ಶಿಸಲಾಗಿದೆ ಮತ್ತು ಬ್ಯಾಂಕುಗಳಿಂದ ನಕಲೀ ನೋಟುಗಳ ವರದಿ ಮತ್ತು ದಾಖಲೆಗಳ ನಿರ್ವಹಣೆಯಲ್ಲಿ ಸುಧಾರಣೆಗಳನ್ನು ತರಲು ಕೆಲವು ನಿರ್ಧಿಷ್ಠ ಬದಲಾವಣೆಗಳನ್ನು ಅಳವಡಿಸಿಕೊಳ್ಲುವ ಅವಶ್ಯಕತೆ ಇರುವುದನ್ನು ಮನಗೊಂಡು, ಸೂಚನೆಗಳಲ್ಲಿ ಈ ಕೆಳಗಿನಂತೆ ಬದಲಾವಣೆ ಮಾಡಲಾಗಿದೆ.

2. ಪತ್ತೆ ಹಚ್ಚುವಿಕೆ

i. ಕೌಂಟರಿನಲ್ಲಿ ವ್ಯವಹಾರ

ಕೌಂಟರಿನಲ್ಲಿ ನೀಡಲಾದ ಬ್ಯಾಂಕು ನೋಟುಗಳನ್ನು ಯಂತ್ರದಲ್ಲಿ ಹಾಕಿ ಪರೀಕ್ಷಿಸಬೇಕು ಮತ್ತು ನಕಲಿ ಎಂದು ನಿರ್ಧರಿಸಲ್ಪಟ್ಟ ನೋಟುಗಳಿಗೆ “ COUNTERFEIT NOTE“ ಎಂದು ಮುದ್ರೆ ಹಾಕಿ ಸ್ವಾಧೀನಕ್ಕೆ ತೆಗೆದುಲೊಳ್ಳಬೇಕು ಹಾಗೂ ಅನುಬಂಧ 1 ರಲ್ಲಿ ತೋರಿಸಿರುವಂತೆ ನಮೂದಿಸಬೇಕು. ಸ್ವಾಧೀನಕ್ಕೆ ತೆಗೆದುಕೊಂಡ ಅಂತಹ ಪ್ರತಿ ನೋಟನ್ನು ಧೃಡೀಕರಿಸಿ ಪ್ರತ್ಯೇಕ ರಿಜಿಸ್ಟರಿನಲ್ಲಿ ದಾಖಲಿಸಬೇಕು.

ii. ಬ್ಯಾಕ್ ಆಫೀಸ್/ಕರೆನ್ಸಿ ಚೆಸ್ಟುಗಳಲ್ಲಿ ದೊಡ್ಡ ಪ್ರಮಾಣದ ಸ್ವೀಕೃತಿ

ಬ್ಯಾಕ್ ಆಫೀಸು/ಕರೆನ್ಸಿ ಚೆಸ್ಟುಗಳಲ್ಲಿ ನೇರವಾಗಿ ಸ್ವೀಕರಿಸಲ್ಪಡುವ ದೊಡ್ಡ ಪ್ರಮಾಣದ ಸ್ವೀಕೃತಿಗಳ ಬಗ್ಗೆ ಪ್ಯಾರಾ 2 (1) ರಲ್ಲಿ ತಿಳಿಸಿರುವ ಪ್ರಕ್ರಿಯೆಗಳನ್ನು ಪಾಲಿಸತಕ್ಕದ್ದು.

3. ಬ್ಯಾಂಕು ಶಾಖೆ ಅಥವಾ ಖಜಾನೆಯಲ್ಲಿ ನೀಡಿದ ಬ್ಯಾಂಕು ನೋಟುಗಳು ನಕಲಿ ಎಂದು ಕಂಡು ಬಂದಲ್ಲಿ, ಅಂತಹ ನೋಟಿಗೆ, ಪ್ಯಾರ 2 ರಲ್ಲಿ ತಿಳಿಸಿದ ಹಾಗೆ ಮುದ್ರೆ ಹಾಕಿದ ನಂತರ ಒಂದು ಸ್ವೀಕೃತಿಯನ್ನು ಅನುಬಂಧ II ರಲ್ಲಿ ತೋರಿಸಿರುವ ಮಾದರಿಯಲ್ಲಿ ಆ ನೋಟನ್ನು ನೀಡಿದ ವ್ಯಕ್ತಿಗೆ ನೀಡಬೇಕು. ಅನುಕ್ರಮ ಸಂಖ್ಯೆಯಲ್ಲಿರುವ ಸ್ವೀಕೃತಿಯನ್ನು ಗುಮಾಸ್ತ ಮತ್ತು ನೋಟು ನೀಡಿದ ವ್ಯಕ್ತಿ, ಇಬ್ಬರೂ ಧೃಢೀಕರಿಸಬೇಕು. ಸಾರ್ವಜನಿಕರ ಅವಗಾಹನೆಗಾಗಿ ಈ ಸೂಚನೆಯನ್ನು ಕಚೇರಿ/ಶಾಖೆಗಳಲ್ಲಿ ಎದ್ದು ಕಾಣಿಸುವಂತೆ ಪ್ರದರ್ಷಿಸಬೇಕು. ಒಂದುವೇಳೆ, ನೋಟು ನೀಡಿದ ವ್ಯಕ್ತಿ ಸಹಿ ಹಾಕಲು ಒಪ್ಪದಿದ್ದರೂ ಸಹಾ, ಸ್ವೀಕೃತಿಯನ್ನು ನೀಡಬೇಕು.

4. ಕೌಂಟರಿನಲ್ಲಿ ಅಥವಾ ಬ್ಯಾಕ್ ಆಫೀಸಿನಲ್ಲಿ/ಕರೆನ್ಸಿ ಚೆಸ್ಟುಗಳಲ್ಲಿ ನಕಲೀ ನೋಟುಗಳು ಇದ್ದರೆ, ಗ್ರಾಹಕರ ಖಾತೆಗೆ ನಕಲೀ ನೋಟಿನ ಮೌಲ್ಯದ ಬಗ್ಗೆ ಯಾವುದೇ ರೀತಿಯ ಜಮಾ ನೀಡುವಂತಿಲ್ಲ.

5. ಬ್ಯಾಂಕುಗಳಲ್ಲಿರುವ ನಕಲೀ ನೋಟುಗಳ ಪತ್ತೆ ಹಚ್ಚುವ ವ್ಯವಸ್ಥೆಯಲ್ಲಿ ಪರಿಷ್ಕರಣೆ ಮಾಡುವ ನಿಟ್ಟಿನಲ್ಲಿ ಮತ್ತು ನಕಲೀ ನೋಟು ಪತ್ತೆ ಹಚ್ಚ್ಚುವ ವ್ಯವಸ್ಥೆಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡುವ ದೃಷ್ಠಿಯಿಂದ, ನಕಲೀ ನೊಟುಗಳನ್ನು ಪತ್ತೆ ಹಚ್ಚದೇ ಇದ್ದ ಸಂದರ್ಭಗಳಲ್ಲಿ ಈಗಿರುವ ಪರಿಹಾರ ಮತ್ತು ದಂಡದ ನಿಯಮಗಳಲ್ಲಿ ಈ ಕೆಳಗಿನ ಬದಲಾವಣೆಗಳನ್ನು ಗಮನಿಸತಕ್ಕದ್ದು.

5.I ಪರಿಹಾರ

ಬ್ಯಾಂಕುಗಳಿಗೆ, ಪತ್ತೆ ಹಚ್ಚಲಾದ/ವರದಿ ಮಾಡಿದಂತಹ ನಕಲೀ ನೋಟುಗಳ ಮುಖ ಬೆಲೆಯ ಶೇ 25 ರಷ್ಟು ಪರಿಹಾರ ನೀಡಿಕೆ ಮತ್ತು ಬ್ಯಾಂಕುಗಳ “ಫೋರ್ಜಡ್ ನೋಟ್ ವಿಜಿಲೆನ್ಸ್ ಸೆಲ್” ಸಲ್ಲಿಸುವ ಕ್ಲೇಮು ವ್ಯವಸ್ಥೆಯ ಸಂಬಂಧ ಇರುವ ಸೂಚನೆಗಳನ್ನು ಹಿಂಪಡೆಯಲಾಗಿದೆ.

5.II ದಂಡ

ಈ ಕೆಳಗಿನ ಸಂದರ್ಭಗಳಲ್ಲಿ ನಕಲೀ ನೋಟುಗಳ ಮುಖ ಬೆಲೆಯ ಶೇ1೦೦ರಷ್ಟು ದಂಡ ವಿಧಿಸುವ ಜೊತೆಗೆ ಅಂತಹ ನೋಟುಗಳ ಮುಖ ಬೆಲೆ ಮೌಲ್ಯವನ್ನೂ ಸಹಾ ವಸೂಲಿ ಮಾಡಲಾಗುವುದು.

ಅ) ಬ್ಯಾಂಕು ರವಾನಿಸಿದ ಕೊಳೆ ನೋಟುಗಳಲ್ಲಿ ನಕಲೀ ನೋಟು ಸಿಕ್ಕಿದಾಗ

ಆ) ಭಾರತೀಯ ರಿಸರ್ವ್ ಬ್ಯಾಂಕ್ ಕರೆನ್ಸಿ ಚೆಸ್ಟುಗಳ ಶಿಲ್ಕನ್ನು ತಪಾಸಣೆ/ಲೆಕ್ಕ ಪರಿಶೋಧನೆ ಮಾಡಿದಾಗ ನಕಲೀ ನೊಟುಗಳು ಸಿಕ್ಕಿದಾಗ

6. ಕೌಂಟರುಗಳಿಗೆ ನೋಟುಗಳನ್ನು ನೀಡುವ ಮುನ್ನ ಮಾಡಬೇಕಾದ ಪರಿಶೀಲನೆ, ಎಟಿಎಮ್ ಗಳಿಗೆ ನಗದು ತುಂಬುವಿಕೆ, ಪೊಲೀಸ್ ಮತ್ತು ಇತರೇ ಪ್ರಾಧಿಕಾರಗಳಿಗೆ ವರದಿ ಮಾಡುವಿಕೆ, ಮೂಲಭೂತ ವ್ಯವಸ್ಥೆ ಮುಂತಾದವುಗಳು ಹಾಗೂ ನಕಲೀ ನೋಟುಗಳನ್ನು ಪತ್ತೆ ಹಚ್ಚುವಿಕೆ ಸೇರಿದಂತೆ ಪ್ರಾಧಿಕಾರದ ಜೊತೆ ಸಂಪರ್ಕ ಸಂಬಂಧ ನೀಡಲಾಗಿರುವ ಸೂಚನೆಗಳಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ.

7. ಈ ಸೂಚನೆಗಳು ಈ ತಕ್ಷಣದಿಂದಲೇ ಜಾರಿಗೆ ಬರುತ್ತವೆ.

ತಮ್ಮ ವಿಶ್ವಾಸಿ,

(ಉಮಾ ಶಂಕರ್)
ಪ್ರಧಾನ ಮುಖ್ಯ ಮಹಾ ವ್ಯವಸ್ಥಾಪಕರು

ಲಗತ್ತು: ಮೇಲಿನಂತೆ


ಅನುಬಂಧ-I

ನಕಲೀ ನೋಟುಗಳ ಸ್ವಾಧೀನಕ್ಕೆ ಬಳಸುವ ಮುದ್ರೆಯ ನಮೂನೆ

ಈ ಕೆಳಗಿನ ಬರಹ ಒಳಗೊಂಡಿರುವ 5cm x 5cm ಒಂದೇ ಅಳತೆಯುಳ್ಳ ಮುದ್ರೆ ಬಳಸಬೇಕು

COUNTERFEIT BANKNOTE IMPOUNDED
COUNTERFEIT BANKNOTE IMPOUNDED
BANK/TREASURY/SUB-TREASURY
BRANCH
SIGNATURE
DATE


ಅನುಬಂಧ-II

ನಕಲೀ ನೋಟು ನೀಡಿದವರಿಗೆ ನೀಡಬೇಕಾದ ಸ್ವೀಕೃತಿ ನಮೂನೆ

ಬ್ಯಾಂಕು/ಖಜಾನೆ/ಉಪಖಜಾನೆ ಹೆಸರು

ವಿಳಾಸ:

ಸ್ವೀಕೃತಿ ಕ್ರಮ ಸಂಖ್ಯೆ:
ದಿನಾಂಕ;

--------------------------- ಇವರಿಂದ (ನೋಟು ನೀಡಿದವರ ಹೆಸರು ಮತ್ತು ವಿಳಾಸ) ಸ್ವೀಕರಿಸಲಾದ ನೋಟುಗಳಲ್ಲಿ ಕೆಳಕಂಡ ನೋಟು/ಗಳು ನಕಲೀ ಎಂದು ಕಂಡು ಬಂದಿದೆ. ಆದ್ಧರಿಂದ ಅದನ್ನು/ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ ಹಾಗೂ ಅವುಗಳಿಗೆ ಮುದ್ರೆ ಹಾಕಲಾಗಿದೆ.

ನಕಲಿ ಎಂದು ಕಂಡುಬಂದ
ನೋಟುಗಳ ಕ್ರಮ ಸಂಖ್ಯೆ
ಮೌಲ್ಯ ವರ್ಗ ನಕಲಿ ಎಂದು ನಿರ್ಧರಿಸಿರುವುದಕ್ಕೆ ಬಳಸಲಾದ ಮಾನದಂಡ
     

ನಕಲೀ ನೋಟುಗಳ ಒಟ್ಟು ಸಂಖ್ಯೆ

ನೋಟು ನೀಡಿದವರ ಸಹಿ                                                          ಕೌಂಟರು ಸಿಬ್ಬಂದಿ ಸಹಿ

RbiTtsCommonUtility

प्ले हो रहा है
ಕೇಳಿ

Related Assets

RBI-Install-RBI-Content-Global

RbiSocialMediaUtility

ಭಾರತೀಯ ರಿಸರ್ವ್ ಬ್ಯಾಂಕ್ ಮೊಬೈಲ್ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿ ಮತ್ತು ಇತ್ತೀಚಿನ ಸುದ್ದಿಗಳಿಗೆ ತ್ವರಿತ ಅಕ್ಸೆಸ್ ಪಡೆಯಿರಿ!

Scan Your QR code to Install our app

RbiWasItHelpfulUtility

ಈ ಪುಟವು ಸಹಾಯಕವಾಗಿತ್ತೇ?