<font face="mangal" size="3px">ನಾಶಿಕ್ ಜಿಲ್ಲಾ ಗಿರ್ಣ ಸಹಕಾರಿ ಬ್ಯಾಂಕ್ ಲಿಮಿಟೆಡ  - ಆರ್ಬಿಐ - Reserve Bank of India
ನಾಶಿಕ್ ಜಿಲ್ಲಾ ಗಿರ್ಣ ಸಹಕಾರಿ ಬ್ಯಾಂಕ್ ಲಿಮಿಟೆಡ್, ನಾಶಿಕ್, ಮಹಾರಾಷ್ಟ್ರ-ಇದಕ್ಕೆ ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ 1949 (ಎ ಎ ಸಿ ಎಸ್) ರ ಪ್ರಕರಣ 35 A ರ ಅಡಿಯಲ್ಲಿ ನಿರ್ದೇಶನ
21 ಸೆಪ್ಟೆಂಬರ್, 2017 ನಾಶಿಕ್ ಜಿಲ್ಲಾ ಗಿರ್ಣ ಸಹಕಾರಿ ಬ್ಯಾಂಕ್ ಲಿಮಿಟೆಡ್, ನಾಶಿಕ್, ಮಹಾರಾಷ್ಟ್ರ-ಇದಕ್ಕೆ ಬ್ಯಾಂಕಿಂಗ್ ಭಾರತೀಯ ರಿಜರ್ವ್ ಬ್ಯಾಂಕ್ ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ 1949(ಎ ಎ ಸಿ ಎಸ್) ರ ಪ್ರಕರಣ 35 A ರ ಅಡಿಯಲ್ಲಿ ನಾಶಿಕ್ ಜಿಲ್ಲಾ ಗಿರ್ಣ ಸಹಕಾರಿ ಬ್ಯಾಂಕ್ ಲಿಮಿಟೆಡ್, ನಾಶಿಕ್ , ಮಹಾರಾಷ್ಟ್ರ –ಇದನ್ನು 08 ಸೆಪ್ಟೆಂಬರ್ 2015 ರಂದು ನೀಡಿದ್ದ ಆದೇಶದ ಪ್ರಕಾರ 09 ಸೆಪ್ಟೆಂಬರ್ 2016 ರ ವ್ಯವಹಾರ ಸಮಯದ ನಂತರದಿಂದ ಆರು ತಿಂಗಳುಗಳ ಕಾಲ ನಿರ್ದೇಶನಗಳಡಿ ಇರಿಸಲಾಗಿತ್ತು. ಹಾಗೂ ಈ ನಿರ್ದೇಶನಗಳ ಸಿಂಧುತ್ವವನ್ನು 03 ಮಾರ್ಚ್ 2016, 25 ಆಗಸ್ಟ್ 2016 ಹಾಗೂ 07 ಮಾರ್ಚ್ 2017 ರಂದು ಪ್ರತಿ ಬಾರಿ ಆರು ತಿಂಗಳುಗಳ ಕಾಲ ಮಾರ್ಪಡಿಸಿದ ನಿರ್ದೇಶನಗಳ ಆದೇಶದ ಮೂಲಕ ವಿಸ್ತರಿಸಲಾಗಿತ್ತು. ಈ ಮೂಲಕ ಸಾರ್ವಜನಿಕರಿಗೆ ತಿಳಿಸುವುದೇನೆಂದರೆ ಮೇಲೆ ತಿಳಿಸಿದ ನಿರ್ದೇಶನಗಳ ಸಿಂಧುತ್ವವನ್ನು ನಮ್ಮ 01 ಸೆಪ್ಟೆಂಬರ್ 2017 ರಂದು ನೀಡಿದ ಆದೇಶದ ಅನುಸಾರ ಮತ್ತೆ ಆರು ತಿಂಗಳು ಅಂದರೆ 10 ಸೆಪ್ಟೆಂಬರ್ 2017 ರಿಂದ 09 ಮಾರ್ಚ್ 2018 ರ ವರೆಗೆ ವಿಸ್ತರಿಸಲಾಗಿದೆ (ಪರಿಶೀಲನೆಗೆ ಒಳಪಡುತ್ತದೆ). ಭಾರತೀಯ ರಿಸರ್ವ್ ಬ್ಯಾಂಕಿನಿಂದ ನೀಡಲ್ಪಟ್ಟ ಈ ತಿದ್ದುಪಡಿ ನಿರ್ದೇಶನವು, ಈ ಬ್ಯಾಂಕಿನ ಹಣಕಾಸಿನ ಪರಿಸ್ಥಿತಿಯಲ್ಲಿ ಗಣನೀಯವಾಗಿ ಸುಧಾರಣೆಯಾಗಿ ಭಾರತೀಯ ರಿಸರ್ವ್ ಬ್ಯಾಂಕಿಗೆ ತೃಪ್ತಿದಾಯಕವಾಗಿ ತೋರಿದೆಯೆಂದು ಅರ್ಥೈಸಿಕೊಳ್ಳಬಾರದು. ನಿರ್ದೇಶನದ ಒಂದು ಪ್ರತಿಯನ್ನು ಬ್ಯಾಂಕ್ ಆವರಣದಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರದರ್ಶಿಸಲಾಗಿದೆ. ಉಲ್ಲೇಖದ ಅಡಿಯಲ್ಲಿರುವ ನಿರ್ದೇಶನದ ಇತರ ನಿಯಮಗಳು ಮತ್ತು ಷರತ್ತುಗಳು ಬದಲಾಗದೆ ಹಾಗೆ ಉಳಿಯುತ್ತವೆ. ಅಜಿತ್ ಪ್ರಸಾದ್ ಪತ್ರಿಕಾ ಪ್ರಕಟಣೆ : 2017-2018/798 |