<p class="knudtext1">ಶತಾಬ್ಧಿ ಮಹಳಾ ಸಹಕಾರಿ ಬ್ಯಾಂಕ್ ಲಿಮಿಟೆಡ್, ಥಾನೆ, ಥಾ  - ಆರ್ಬಿಐ - Reserve Bank of India
ಶತಾಬ್ಧಿ ಮಹಳಾ ಸಹಕಾರಿ ಬ್ಯಾಂಕ್ ಲಿಮಿಟೆಡ್, ಥಾನೆ, ಥಾನೆ ಜಿಲ್ಲೆ, ಮಹಾರಾಷ್ಟ್ರ-ಇದಕ್ಕೆ ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ 1949(ಎ ಎ ಪಿ ಎಸ್) ರ ಪ್ರಕರಣ 35 A ರ ಅಡಿಯಲ್ಲಿ ನಿರ್ದೇಶನ
ಆಗಸ್ಟ್ 13, 2015 ಶತಾಬ್ಧಿ ಮಹಳಾ ಸಹಕಾರಿ ಬ್ಯಾಂಕ್ ಲಿಮಿಟೆಡ್, ಥಾನೆ, ಥಾನೆ ಜಿಲ್ಲೆ, ಮಹಾರಾಷ್ಟ್ರ-ಇದಕ್ಕೆ ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ 1949(ಎ ಎ ಪಿ ಎಸ್) ರ ಪ್ರಕರಣ 35 A ರ ಅಡಿಯಲ್ಲಿ ನಿರ್ದೇಶನ ಆಗಸ್ಟ್ 20, 2014 ರ ವ್ಯವಹಾರ ಮುಕ್ತಾಯ ಸಮಯದಿಂದ ಜಾರಿಗೆ ಬರುವಂತೆ, ನಿರ್ದೇಶನ ಸಂಖ್ಯೆ ಯುಬಿಡಿ, ಸಿಓ.ಬಿಎಸ್ ಡಿ-1/ಡಿ-5/12.22.504/2014-15 ದಿನಾಂಕ ಆಗಸ್ಟ್ 14,2014 ರ ಮೂಲಕ “ಶತಾಬ್ಧಿ ಮಹಿಳಾ ಸಹಕಾರಿ ಬ್ಯಾಂಕ್ ಲಿಮಿಟೆಡ್, ಥಾನೆ, ಥಾನೆ ಜಿಲ್ಲೆ, ಮಹಾರಾಷ್ಟ್ರ” – ಇದನ್ನು ನಿಯಂತ್ರಣಗಳಿಗೆ ಳಪಡಿಸಲಾಗಿತ್ತು. ಈ ನಿರ್ದೇಶನದ ಊರ್ಜಿತಾವಧಿಯನ್ನು, ನಿರ್ದೇಶನ ಸಂಖ್ಯೆ ಡಿಸಿಬಿಆರ್.ಸಿಒ.ಬಿಎಸ್ ಡಿ -1/D-31/12.22.504/2014-15 ದಿನಾಂಕ ಫೆಬ್ರವರಿ 04,2015 ರ ಮೂಲಕ ಫೆಬ್ರವರಿ 19,2015 ರ ವ್ಯವಹಾರ ಮುಕ್ತಾಯ ಸಮಯದಿಂದ ಜಾರಿಗೆ ಬರುವಂತೆ ಮತ್ತೆ 6 ತಿಂಗಳವರೆಗೆ ವಿಸ್ತರಿಸಲಾಗಿತ್ತು. ಸಾರ್ವಜನಿಕರಿಗೆ ಈ ಮೂಲಕ ತಿಳಿಸುವುದೇನೆಂದರೆ, ಆಗಸ್ಟ್ 14,2014 ರ ನಿರ್ದೇಶನದ ಜೊತೆಗೆ ಓದಿಕೊಂಡಂತಹ ಫೆಬ್ರವರಿ 04, 2015 ರ ಊರ್ಜಿತಾವಧಿಯನ್ನು ಮತ್ತೆ ಮೂರು ತಿಂಗಳಿನವರೆಗೆ ಎಂದರೆ ಆಗಸ್ಟ್ 18,2015 ರ ಮುಕ್ತಾಯ ಸಮಯದಿಂದ ನವಂಬರ್ 17,2015 ರ ವರೆಗೆ, ನಮ್ಮ ತಿದ್ದುಪಡಿ ನಿರ್ದೇಶನ ಸಂಖ್ಯೆ ಡಿಸಿಬಿಆರ್.ಸಿಒ.ಎಐಡಿ ಸಂಖ್ಯೆ/ಡಿ-೦4/12.22.504/2015-16 ದಿನಾಂಕ ಜುಲೈ21,2015 ರ ಮೂಲಕ ಪುನರ್ವಿಮರ್ಶೆಗೆ ಒಳಪಟ್ಟು ವಿಸ್ತರಿಸಲಾಗಿದೆ. ಮೇಲಿನ ತಿದ್ದುಪಡಿ ಸೂಚಿಸಿರುವ ನಿರ್ದೇಶನದ ಪ್ರತಿಯನ್ನು ಸಾರ್ವಜನಿಕರ ಆವಗಾಹನೆಗಾಗಿ ಬ್ಯಾಂಕಿನ ಆವರಣದಲ್ಲಿ ಪ್ರದರ್ಶಿಸಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕಿನಿಂದ ನೀಡಲ್ಪಟ್ಟ ಈ ತಿದ್ದುಪಡಿ ನಿರ್ದೇಶನವು, ಈ ಬ್ಯಾಂಕಿನ ಹಣಕಾಸಿನ ಪರಿಸ್ಥಿತಿಯಲ್ಲಿ ಗಣನೀಯವಾಗಿ ಸುಧಾರಣೆಯಾಗಿ ಭಾರತೀಯ ರಿಸರ್ವ್ ಬ್ಯಾಂಕಿಗೆ ತೃಪ್ತಿದಾಯಕವಾಗಿ ತೋರಿದೆಯೆಂದು ಅರ್ಥೈಸಿಕೊಳ್ಳಬಾರದು. ಅನಿರುದ್ಧ ಡಿ. ಜಾಧವ್ ಪತ್ರಿಕಾ ಪ್ರಕಟಣೆ : 2015-2016/394 |