RbiSearchHeader

Press escape key to go back

Past Searches

Theme
Theme
Text Size
Text Size
S2

Notification Marquee

आरबीआई की घोषणाएं
आरबीआई की घोषणाएं

RbiAnnouncementWeb

RBI Announcements
RBI Announcements

Asset Publisher

78508107

ಶ್ರೀ ಗಣೇಶ್ ಸಹಕಾರಿ ಬ್ಯಾಂಕ್ ಲಿಮಿಟೆಡ್ , ನಾಶಿಕ್, ಮಹಾರಾಷ್ಟ್ರ– ಇದಕ್ಕೆ ನೀಡಿದ್ದ ನಿರ್ದೇಶನಗಳ ಕಾಲಾವಧಿ ವಿಸ್ತರಣೆ

03 ಅಕ್ಟೋಬರ್ 2017

ಶ್ರೀ ಗಣೇಶ್ ಸಹಕಾರಿ ಬ್ಯಾಂಕ್ ಲಿಮಿಟೆಡ್ , ನಾಶಿಕ್, ಮಹಾರಾಷ್ಟ್ರ– ಇದಕ್ಕೆ ನೀಡಿದ್ದ ನಿರ್ದೇಶನಗಳ ಕಾಲಾವಧಿ ವಿಸ್ತರಣೆ

ಭಾರತೀಯ ರಿಜರ್ವ್ ಬ್ಯಾಂಕ್ ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ 1949(ಎ ಎ ಸಿ ಎಸ್) ರ ಪ್ರಕರಣ 35 A ಉಪ ವಿಭಾಗ (1) ಜೊತೆಗೆ ಪ್ರಕರಣ 56ರಲ್ಲಿ ದತ್ತವಾಗಿರುವ ಅಧಿಕಾರಗಳನ್ನು ಚಲಾಯಿಸಿ ಶ್ರೀ ಗಣೇಶ್ ಸಹಕಾರಿ ಬ್ಯಾಂಕ್ ಲಿಮಿಟೆಡ್ , ನಾಶಿಕ್, ಮಹಾರಾಷ್ಟ್ರ –ಇದನ್ನು 01 ಏಪ್ರಿಲ್ 2013 ರಂದು ನೀಡಿದ್ದ ಆದೇಶದ ಪ್ರಕಾರ 02 ಏಪ್ರಿಲ್ 2013 ರ ವ್ಯವಹಾರ ಸಮಯದ ನಂತರದಿಂದ ನಿರ್ದೇಶನಗಳಡಿ ಇರಿಸಲಾಗಿತ್ತು. ಹಾಗೂ ಈ ನಿರ್ದೇಶನಗಳ ಸಿಂಧುತ್ವವನ್ನು ಕಾಲಕಾಲಕ್ಕೆ ಸೂಕ್ತ ಮಾರ್ಪಾಡುಗಳೊಂದಿಗೆ ವಿಸ್ತರಿಸಲಾಗಿ ಕಡೆಯ ಬಾರಿ 24 ಮಾರ್ಚ್ 2017 ರ ಆದೇಶದ ಅನ್ವಯ 29 ಸೆಪ್ಟೆಂಬರ್ 2017 ರ ವರೆಗೆ ವಿಸ್ತರಿಸಲಾಗಿತ್ತು.

ಈ ಮೂಲಕ ಸಾರ್ವಜನಿಕರಿಗೆ ತಿಳಿಸುವುದೇನೆಂದರೆ ಮೇಲೆ ತಿಳಿಸಿದ ನಿರ್ದೇಶನಗಳ ಸಿಂಧುತ್ವವನ್ನು 25 ಸೆಪ್ಟೆಂಬರ್ 2017 ರಂದು ನೀಡಿದ ಆದೇಶದ ಅನುಸಾರ ಮತ್ತೆ ಆರು ತಿಂಗಳು ಅಂದರೆ 30 ಸೆಪ್ಟೆಂಬರ್ 2018 ರಿಂದ 29 ಮಾರ್ಚ್ 2018 ರ ವರೆಗೆ ವಿಸ್ತರಿಸಲಾಗಿದೆ (ಪರಿಶೀಲನೆಗೆ ಒಳಪಡುತ್ತದೆ).

ನಿರ್ದೇಶನದ ಒಂದು ಪ್ರತಿಯನ್ನು ಬ್ಯಾಂಕ್ ಆವರಣದಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರದರ್ಶಿಸಲಾಗಿದೆ.

ಭಾರತೀಯ ರಿಸರ್ವ್ ಬ್ಯಾಂಕಿನಿಂದ ನೀಡಲ್ಪಟ್ಟ ಈ ತಿದ್ದುಪಡಿ ನಿರ್ದೇಶನವು, ಈ ಬ್ಯಾಂಕಿನ ಹಣಕಾಸಿನ ಪರಿಸ್ಥಿತಿಯಲ್ಲಿ ಗಣನೀಯವಾಗಿ ಸುಧಾರಣೆಯಾಗಿ ಭಾರತೀಯ ರಿಸರ್ವ್ ಬ್ಯಾಂಕಿಗೆ ತೃಪ್ತಿದಾಯಕವಾಗಿ ತೋರಿದೆಯೆಂದು ಅರ್ಥೈಸಿಕೊಳ್ಳಬಾರದು.

ಅಜಿತ್ ಪ್ರಸಾದ್
ಸಹಾಯಕ ಸಲಹೆಗಾರರು

ಪತ್ರಿಕಾ ಪ್ರಕಟಣೆ : 2017-2018/910

RbiTtsCommonUtility

प्ले हो रहा है
ಕೇಳಿ

Related Assets

RBI-Install-RBI-Content-Global

RbiSocialMediaUtility

ಭಾರತೀಯ ರಿಸರ್ವ್ ಬ್ಯಾಂಕ್ ಮೊಬೈಲ್ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿ ಮತ್ತು ಇತ್ತೀಚಿನ ಸುದ್ದಿಗಳಿಗೆ ತ್ವರಿತ ಅಕ್ಸೆಸ್ ಪಡೆಯಿರಿ!

Scan Your QR code to Install our app

RbiWasItHelpfulUtility

ಈ ಪುಟವು ಸಹಾಯಕವಾಗಿತ್ತೇ?