<font face="mangal" size="3px">ಬ್ಯಾಂಕಿಂಗ್ ನಿಯಂತ್ರಣಾ ಕಾಯಿದೆ 1949 (ಎ ಎ ಸಿ ಎಸ್) ರ ವಿಭ - ಆರ್ಬಿಐ - Reserve Bank of India
ಬ್ಯಾಂಕಿಂಗ್ ನಿಯಂತ್ರಣಾ ಕಾಯಿದೆ 1949 (ಎ ಎ ಸಿ ಎಸ್) ರ ವಿಭಾಗ 35ರಡಿ ನಿರ್ದೇಶನ – ಸಿಕೆಪಿ ಸಹಕಾರಿ ಬ್ಯಾಂಕ್ ನಿ. ಮುಂಬೈ, ಮಹಾರಾಷ್ಟ್ರ
31 ಜುಲೈ 2017 ಬ್ಯಾಂಕಿಂಗ್ ನಿಯಂತ್ರಣಾ ಕಾಯಿದೆ 1949 (ಎ ಎ ಸಿ ಎಸ್) ರ ವಿಭಾಗ 35ರಡಿ ನಿರ್ದೇಶನ – ಸಿಕೆಪಿ ಸಿಕೆಪಿ ಸಹಕಾರಿ ಬ್ಯಾಂಕ್ ನಿ. ಮುಂಬೈ, ಮಹಾರಾಷ್ಟ್ರ – ಇದನ್ನು 30 ಏಪ್ರಿಲ್, 2014 ರ ಆದೇಶ ಸಂ. UBD.CO.BSD-I. No.D-34/12.22.035/2013-14 ರ ಅನ್ವಯ 02, ಮೇ 2014 ರ ವ್ಯವಹಾರ ಸಮಯದ ಮುಕ್ತಾಯದ ವೇಳೆಯಿಂದ ನಿರ್ದೇಶನಗಳಡಿಯಲ್ಲಿ ನಿಯಂತ್ರಣಕ್ಕೆ ಒಳಪಡಿಸಲಾಗಿತ್ತು (ಪರಿಶೀಲನೆಗೆ ಒಳಪಡುತ್ತದೆ). ಅಂತಹ ನಿರ್ದೇಶನಗಳ ವಾಯ್ದೆಯನ್ನು ಕಾಲಕಾಲಕ್ಕೆ ಆದೇಶಗಳ ಮೂಲಕ ವಿಸ್ತರಿಸಲಾಗಿ ಈ ರೀತಿ ವಿಸ್ತರಿಸಲಾದ ಕೊನೆಯ ನಿರ್ದೇಶನ ಆದೇಶ ದಿನಾಂಕ 27 ಜನವರಿ 2017ರ ಸಂಖ್ಯೆ DCBR.CO.AID.No.D-27/12.22.035/2016-17 ಮತ್ತು ಇದರ ಸಿಂಧುತ್ವದ ಕಾಲಾವಧಿ 31 ಜುಲೈ 2017 (ಪರಿಶೀಲನೆಗೆ ಒಳಪಡುತ್ತದೆ). 2. ಈ ಮೂಲಕ ಸಾರ್ವಜನಿಕರಿಗೆ ತಿಳಿಸುವುದೇನೆಂದರೆ ಭಾರತೀಯ ರಿಜರ್ವ್ ಬ್ಯಾಂಕ್, ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ 1949 ಕಲಂ 35A ರ ಉಪ ಕಲಂ (1) ಜೊತೆ ಕಲಂ 56 ರ ಅಡಿಯಲ್ಲಿ ಅಧಿಕಾರ ಚಲಾಯಿಸಿ ಮೇಲೆ ತಿಳಿಸಿದ ಮಾರ್ಗದರ್ಶನಗಳನ್ನು ಮತ್ತೆ ನಾಲ್ಕು ತಿಂಗಳುಗಳ ಕಾಲ ಅಂದರೆ 01 ಆಗಸ್ಟ್ 2017 ರಿಂದ 30 ನವೆಂಬರ್ 2017 ರ ವರೆಗೆ ಆದೇಶ ಸಂ. DCBR.CO.AID.No,D-04/12.22.035/2017-18 ದಿನಾಂಕ 26 ಜುಲೈ 2017 ರ ಮುಖೇನ ವಿಸ್ತರಿಸಲಾಗಿದೆ (ಪರಿಶೀಲನೆಗೆ ಒಳಪಡುತ್ತದೆ).. ನಿರ್ದೇಶನದ ಒಂದು ಪ್ರತಿಯನ್ನು ಬ್ಯಾಂಕ್ ಆವರಣದಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರದರ್ಶಿಸಲಾಗಿದೆ. 3. ಭಾರತೀಯ ರಿಸರ್ವ್ ಬ್ಯಾಂಕಿನ ಮೇಲಿನ ಬದಲಾವಣೆಯು ಮೇಲಿನ ಬ್ಯಾಂಕಿನ ಆರ್ಥಿಕ ಪರಿಸ್ಥಿತಿಯಲ್ಲಿ ಉತ್ತಮ /ಕೆಟ್ಟ ಬದಲಾವಣೆ ಎಂದು ಅರ್ಥೈಸಲಾಗುವುದಿಲ್ಲ. . ಸಂದರ್ಭಗಳನ್ನು ಅವಲಂಬಿಸಿ ರಿಸರ್ವ್ ಬ್ಯಾಂಕ್ ಈ ಮಾರ್ಗದರ್ಶನಗಳ ಬದಲಾವಣೆಗಳನ್ನು ಪರಿಗಣಿಸಬಹುದು. ಅಜಿತ್ ಪ್ರಸಾದ್ ಪತ್ರಿಕಾ ಪ್ರಕಟಣೆ : 2017-2018/296 |