RbiSearchHeader

Press escape key to go back

Past Searches

Theme
Theme
Text Size
Text Size
S2

Notification Marquee

RBI Announcements
RBI Announcements

RbiAnnouncementWeb

RBI Announcements
RBI Announcements

Asset Publisher

78512210

ಆರ್ ಎಸ್ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್, ನಾಶಿಕ್, ಮಹಾರಾಷ್ಟ್ರ-ಇದಕ್ಕೆ ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ 1949(ಎ ಎ ಸಿ ಎಸ್) ರ ಪ್ರಕರಣ 35 A ರ ಅಡಿಯಲ್ಲಿ ನಿರ್ದೇಶನ

26 ಸೆಪ್ಟೆಂಬರ್, 2017

ಆರ್ ಎಸ್ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್, ನಾಶಿಕ್, ಮಹಾರಾಷ್ಟ್ರ-ಇದಕ್ಕೆ ಬ್ಯಾಂಕಿಂಗ್
ನಿಯಂತ್ರಣ ಕಾಯಿದೆ 1949(ಎ ಎ ಸಿ ಎಸ್) ರ ಪ್ರಕರಣ 35 A ರ ಅಡಿಯಲ್ಲಿ ನಿರ್ದೇಶನ

ಭಾರತೀಯ ರಿಜರ್ವ್ ಬ್ಯಾಂಕ್ ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ 1949(ಎ ಎ ಸಿ ಎಸ್) ರ ಪ್ರಕರಣ 35 A ರ ಅಡಿಯಲ್ಲಿ ಆರ್ ಎಸ್ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್, ನಾಶಿಕ್, ಮಹಾರಾಷ್ಟ್ರ –ಇದನ್ನು 24 ಜೂನ್ 2015 ರಂದು ನೀಡಿದ್ದ ಆದೇಶದ ಪ್ರಕಾರ 26 ಜೂನ್ 2016 ರ ವ್ಯವಹಾರ ಸಮಯದ ನಂತರದಿಂದ ನಿರ್ದೇಶನಗಳಡಿ ಇರಿಸಲಾಗಿತ್ತು. ಹಾಗೂ ಈ ನಿರ್ದೇಶನಗಳ ಸಿಂಧುತ್ವವನ್ನು ಕಾಲಕಾಲಕ್ಕೆ ಸೂಕ್ತ ಮಾರ್ಪಾಡುಗಳೊಂದಿಗೆ ವಿಸ್ತರಿಸಲಾಗಿತ್ತು. ಹೀಗೆ ಕಡೆಯ ಬಾರಿ ನಿರ್ದೇಶನಗಳನ್ನು 20 ಮಾರ್ಚ್ 2017 ರಂದು ನೀಡಿದ ಆದೇಶದ ಮೂಲಕ 25 ಸೆಪ್ಟೆಂಬರ್ 2017 ರ ವರೆಗೆ ವಿಸ್ತರಿಸಲಾಗಿತ್ತು (ಪರಿಶೀಲನೆಗೆ ಒಳಪಡುತ್ತದೆ).

ಈ ಮೂಲಕ ಸಾರ್ವಜನಿಕರಿಗೆ ತಿಳಿಸುವುದೇನೆಂದರೆ ಮೇಲೆ ತಿಳಿಸಿದ ನಿರ್ದೇಶನಗಳ ಸಿಂಧುತ್ವವನ್ನು ನಮ್ಮ 20 ಸೆಪ್ಟೆಂಬರ್ 2017 ರಂದು ನೀಡಿದ ಆದೇಶದ ಅನುಸಾರ ಮತ್ತೆ ನಾಲ್ಕು ತಿಂಗಳು ಅಂದರೆ 26 ಸೆಪ್ಟೆಂಬರ್ 2017 ರಿಂದ 25 ಜನವರಿ 2018 ರ ವರೆಗೆ ವಿಸ್ತರಿಸಲಾಗಿದೆ.

ನಿರ್ದೇಶನದ ಒಂದು ಪ್ರತಿಯನ್ನು ಬ್ಯಾಂಕ್ ಆವರಣದಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರದರ್ಶಿಸಲಾಗಿದೆ.

ಭಾರತೀಯ ರಿಸರ್ವ್ ಬ್ಯಾಂಕಿನಿಂದ ನೀಡಲ್ಪಟ್ಟ ಈ ತಿದ್ದುಪಡಿ ನಿರ್ದೇಶನವು, ಈ ಬ್ಯಾಂಕಿನ ಹಣಕಾಸಿನ ಪರಿಸ್ಥಿತಿಯಲ್ಲಿ ಗಣನೀಯವಾಗಿ ಸುಧಾರಣೆಯಾಗಿ ಭಾರತೀಯ ರಿಸರ್ವ್ ಬ್ಯಾಂಕಿಗೆ ತೃಪ್ತಿದಾಯಕವಾಗಿ ತೋರಿದೆಯೆಂದು ಅರ್ಥೈಸಿಕೊಳ್ಳಬಾರದು.

ಅಜಿತ್ ಪ್ರಸಾದ್
ಸಹಾಯಕ ಸಲಹೆಗಾರರು

ಪತ್ರಿಕಾ ಪ್ರಕಟಣೆ : 2017-2018/840

RbiTtsCommonUtility

प्ले हो रहा है
ಕೇಳಿ

Related Assets

RBI-Install-RBI-Content-Global

RbiSocialMediaUtility

ಭಾರತೀಯ ರಿಸರ್ವ್ ಬ್ಯಾಂಕ್ ಮೊಬೈಲ್ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿ ಮತ್ತು ಇತ್ತೀಚಿನ ಸುದ್ದಿಗಳಿಗೆ ತ್ವರಿತ ಅಕ್ಸೆಸ್ ಪಡೆಯಿರಿ!

Scan Your QR code to Install our app

RbiWasItHelpfulUtility

ಈ ಪುಟವು ಸಹಾಯಕವಾಗಿತ್ತೇ?