RbiSearchHeader

Press escape key to go back

Past Searches

Theme
Theme
Text Size
Text Size
S1

Notification Marquee

RBI Announcements
RBI Announcements

RbiAnnouncementWeb

RBI Announcements
RBI Announcements

Asset Publisher

78495746

ಭಾರತೀಯ ರಿಸರ್ವ ಬ್ಯಾಂಕಿನ ನೂತನ ಗವರ್ನರ್ ಆಗಿ ಡಾ.ಉರ್ಜಿತ ಆರ್ ಪಟೇಲ್ ರಿಂದ ಅಧಿಕಾರ ಸ್ವೀಕಾರ

ಸೆಪ್ಟೆಂಬರ್ 05, 2016

ಭಾರತೀಯ ರಿಸರ್ವ ಬ್ಯಾಂಕಿನ ನೂತನ ಗವರ್ನರ್ ಆಗಿ ಡಾ.ಉರ್ಜಿತ ಆರ್ ಪಟೇಲ್ ರಿಂದ ಅಧಿಕಾರ ಸ್ವೀಕಾರ

ಡಾ ಉರ್ಜಿತ ಆರ್ ಪಟೇಲ್ ಜನವರಿ 2013 ರಿಂದ ಉಪ ಗವರ್ನರ್ ಆಗಿ ಸೇವೆ ಸಲ್ಲಿಸಿದ ನಂತರ ಭಾರತೀಯ ರಿಸರ್ವ ಬ್ಯಾಂಕಿನ ಇಪ್ಪತ್ತನಾಲ್ಕನೇಯ ಗವರ್ನರ್ ಆಗಿ ಸೆಪ್ಟೆಂಬರ್ 4, 2016 ರಂದು ಅಧಿಕಾರ ವಹಿಸಿಕೊಂಡರು. ತಮ್ಮ ಮೊದಲ ಮೂರು ವರ್ಷಗಳ ಅವಧಿ ಪೂರ್ಣಗೊಂಡ ನಂತರ ಜನವರಿ 11, 2016 ರಂದು ಉಪ ಗವರ್ನರ್ ಆಗಿ ಪುನಃ ಇವರು ನೇಮಕಗೊಂಡರು. ಉಪ ಗವರ್ನರ್ ಆಗಿದ್ದ ಅವಧಿಯಲ್ಲಿ , ಡಾ ಪಟೇಲ್ ಹಣಕಾಸು ನೀತಿಯ ಪರಿಷ್ಕರಣೆ ಮತ್ತು ಬಲವರ್ಧನೆ ಸಮಿತಿಯ ಅಧ್ಯಕ್ಷತೆಯನ್ನು ವಹಿಸಿದ್ದರು . , ಬ್ರಿಕ್ಸ್ ರಾಷ್ಟ್ರಗಳ ಅಂತರ ಸರ್ಕಾರ ಒಪ್ಪಂದ ಮತ್ತು ಅಂತರ ಕೇಂದ್ರ ಬ್ಯಾಂಕ್ ಒಪ್ಪಂದದ ( ICBA ) ಜಾರಿಯಲ್ಲಿ ಸಕ್ರಿಯವಾಗಿ ಭಾರತದ ಪ್ರತಿನಿಧಿಯಾಗಿ ಪಾಲ್ಗೊಂಡರು. ಇದು ಈ ದೇಶಗಳ ಕೇಂದ್ರ ಬ್ಯಾಂಕುಗಳ ನಡುವೆ ವಿನಿಮಯ ಸಾಲು ಚೌಕಟ್ಟಾಗಿರುವ ಅನಿಶ್ಚಿತ ಮೀಸಲು ವ್ಯವಸ್ಥೆಯ (CRA) ಸ್ಥಾಪನೆಗೆ ನಾಂದಿಯಾಯಿತು.

ಡಾ ಪಟೇಲ್ ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ನಲ್ಲಿ ಸೇವೆ ಸಲ್ಲಿಸಿದ್ದಾರೆ. 1996-1997 ರಲ್ಲಿ ಐಎಂಎಫ್ ನಿಂದ ರಿಸರ್ವ್ ಬ್ಯಾಂಕ್ ಗೆ ಪ್ರತಿನಿಯೋಜಿತಗೊಂಡ ಸಮಯದಲ್ಲಿ ಅವರು ಸಾಲ ಮಾರುಕಟ್ಟೆಯ ಅಭಿವೃದ್ಧಿ , ಬ್ಯಾಂಕಿಂಗ್ ವಲಯದ ಸುಧಾರಣೆ, ಪಿಂಚಣಿ ನಿಧಿ ಸುಧಾರಣೆ ಮತ್ತು ವಿದೇಶಿ ವಿನಿಮಯ ಮಾರುಕಟ್ಟೆಯ ವಿಕಾಸದ ವಿಷಯಗಳ ಬಗ್ಗೆ ಸಲಹೆಗಾರರಾಗಿದ್ದರು. ಅವರು 1998 ರಿಂದ 2001 ವರೆಗೆ ಭಾರತ ಸರ್ಕಾರದ ಹಣಕಾಸು ಸಚಿವಾಲಯ ( ಆರ್ಥಿಕ ಇಲಾಖೆ )ದಲ್ಲಿ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಇತರ ಸಾರ್ವಜನಿಕ ಮತ್ತು ಖಾಸಗಿ ವಲಯದಲ್ಲಿ ಕಾರ್ಯ ನಿರ್ವಹಿಸಿದ್ದಾರೆ .

ಡಾ ಪಟೇಲ್ ಅನೇಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಉನ್ನತ ಮಟ್ಟದ ಸಮಿತಿಗಳಾದ ನೇರ ತೆರಿಗೆಗಳ ಮೇಲೆ ಕಾರ್ಯ ಪಡೆ ( ಕೇಳ್ಕರ್ ಸಮಿತಿ), ನಾಗರಿಕ ಮತ್ತು ರಕ್ಷಣಾ ಸೇವೆಗಳ ಪಿಂಚಣಿ ವ್ಯವಸ್ಥೆ ಪರಾಮರ್ಶಿಸಲು ಉನ್ನತ ಮಟ್ಟದ ತಜ್ಞರ ವರ್ಗ , ಮೂಲ ಸೌಕರ್ಯಗಳ ಕುರಿತಾದ ಪ್ರಧಾನ ಮಂತ್ರಿಗಳ ಕಾರ್ಯಪಡೆ , ದೂರವಾಣಿ ವಿಷಯಗಳ ಕುರಿತಾದ ಮಂತ್ರಿಗಳ ವರ್ಗ , ನಾಗರಿಕ ವಿಮಾನಯಾನ ಸುಧಾರಣೆಗಳ ಸಮಿತಿ ಮತ್ತು ವಿದ್ಯುತ್ ಮಂಡಳಿಗಳ ಕುರಿತಾದ ರಾಜ್ಯ ವಿದ್ಯುತ್ ಸಚಿವಾಲಯದ ತಜ್ಞರ ವರ್ಗದ ಜೊತೆಗೆ ನಿಕಟವಾಗಿ ಕಾರ್ಯ ನಿರ್ವಹಿಸಿದ್ದಾರೆ .

ಡಾ ಪಟೇಲ್ ಭಾರತೀಯ ಬೃಹದರ್ಥಶಾಸ್ತ್ರ , ವಿತ್ತೀಯ ನೀತಿ, ಸಾರ್ವಜನಿಕ ಹಣಕಾಸು, ಭಾರತೀಯ ಆರ್ಥಿಕ ವಲಯ, ಅಂತರಾಷ್ಟ್ರೀಯ ವ್ಯಾಪಾರ ಮತ್ತು ನಿಯಂತ್ರಕ ಅರ್ಥಶಾಸ್ತ್ರ ಕ್ಷೇತ್ರಗಳಲ್ಲಿ ಅನೇಕ ಪ್ರಕಟಣೆಗಳನ್ನು ಹೊಂದಿದ್ದಾರೆ.

ಡಾ ಪಟೇಲ್ ಯೇಲ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಪಿಎಚ್ಡಿ ಮತ್ತು ಆಕ್ಸ್ಫರ್ಡ್ ವಿಶ್ವವಿದ್ಯಾಲಯದಿಂದ ಎಂ ಫಿಲ್ ಮತ್ತು ಲಂಡನ್ ವಿಶ್ವವಿದ್ಯಾಲಯದಿಂದ ಬಿ. ಎಸ್ ಸಿ ಪಡೆದಿದ್ದಾರೆ.

ಅಲ್ಪನಾ ಕಿಲಾವಾಲ
ಮುಖ್ಯ ಸಲಹೆಗಾರರು

ಪತ್ರಿಕಾ ಪ್ರಕಟಣೆ : 2016-2017/590

RbiTtsCommonUtility

प्ले हो रहा है
ಕೇಳಿ

Related Assets

RBI-Install-RBI-Content-Global

RbiSocialMediaUtility

ಭಾರತೀಯ ರಿಸರ್ವ್ ಬ್ಯಾಂಕ್ ಮೊಬೈಲ್ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿ ಮತ್ತು ಇತ್ತೀಚಿನ ಸುದ್ದಿಗಳಿಗೆ ತ್ವರಿತ ಅಕ್ಸೆಸ್ ಪಡೆಯಿರಿ!

Scan Your QR code to Install our app

RbiWasItHelpfulUtility

ಈ ಪುಟವು ಸಹಾಯಕವಾಗಿತ್ತೇ?