<font face="mangal" size="3px">ದುರ್ಗ ಕೋ-ಅಪರೇಟಿವ್ ಆರ್ಬನ್ ಬ್ಯಾಂಕ್ ಲಿಮಿಟೆಡ್ , ವ - ಆರ್ಬಿಐ - Reserve Bank of India
ದುರ್ಗ ಕೋ-ಅಪರೇಟಿವ್ ಆರ್ಬನ್ ಬ್ಯಾಂಕ್ ಲಿಮಿಟೆಡ್ , ವಿಜಯವಾಡ , ಅಂದ್ರ ಪ್ರದೇಶ – ಇದಕ್ಕೆ ದಂಡ
22 ಸೆಪ್ಟೆಂಬರ್ 2017 ದುರ್ಗ ಕೋ-ಅಪರೇಟಿವ್ ಆರ್ಬನ್ ಬ್ಯಾಂಕ್ ಲಿಮಿಟೆಡ್ , ವಿಜಯವಾಡ , ಅಂದ್ರ ಪ್ರದೇಶ – ಇದಕ್ಕೆ ದಂಡ ಭಾರತೀಯ ರಿಜರ್ವ್ ಬ್ಯಾಂಕು, ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949 (ಸಹಕಾರ ಸಂಘಗಳಿಗನ್ವಯಿಸುವಂತೆ) ರ ಕಲಂ 47A (1)(C) ಜೊತೆ ಪ್ರಕರಣ 46 (4) ರ ಅನ್ವಯ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ , ಭಾರತೀಯ ರಿಜರ್ವ್ ಬ್ಯಾಂಕು ನೀಡಿದ್ದ ನಿರ್ದೇಶನಗಳ ಉಲ್ಲಂಘನೆ ಮತ್ತು ಬ್ಯಾಂಕಿನ ನಿರ್ದೇಶಕರು ಹಾಗೂ ಅವರ ಸಂಬಂಧಿತರಿಗೆ ನೀಡುವ ಸಾಲದ ಬಗ್ಗೆ ನೀಡಿದ್ದ ಮಾರ್ಗದರ್ಶನಗಳ ಉಲ್ಲಂಘನೆ ಕಾರಣ ದುರ್ಗ ಕೋ-ಅಪರೇಟಿವ್ ಅರ್ಬನ್ ಬ್ಯಾಂಕ್ ಲಿಮಿಟೆಡ್ , ವಿಜಯವಾಡ , ಅಂದ್ರ ಪ್ರದೇಶ ಇದಕ್ಕೆ ರೂ.5.00 ಲಕ್ಷ ದಂಡವನ್ನು ವಿಧಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಈ ಬ್ಯಾಂಕಿಗೆ ಕಾರಣ ಕೇಳಿ ನೋಟೀಸ್ ಜಾರಿ ಮಾಡಿದ್ದು, ಇದಕ್ಕೆ ಬ್ಯಾಂಕ್ ಲಿಖಿತ ಉತ್ತರ ನೀಡಿದೆ.. ಪ್ರಕರಣದ ವಾಸ್ತವಾಂಶಗಳನ್ನು ಹಾಗೂ ಬ್ಯಾಂಕಿನ ಉತ್ತರವನ್ನು ಮತ್ತು ಖುದ್ದಾಗಿ ನೀಡಿದ ಹೇಳಿಕೆಯನ್ನು ಪರಿಶೀಲಿಸಿದ ತರುವಾಯ ಉಲ್ಲಂಘನೆಯು ಸಾಬೀತಾಗಿದೆಯೆಂದು ಪರಿಗಣಿಸಿ, ಬ್ಯಾಂಕು ದಂಡನಾರ್ಹವೆಂದು ಭಾರತೀಯ ರಿಸರ್ವ್ ಬ್ಯಾಂಕ್ ತೀರ್ಮಾನಿಸಿದೆ. ಅಜಿತ್ ಪ್ರಸಾದ್ ಪತ್ರಿಕಾ ಪ್ರಕಟಣೆ : 2017-2018/814 |