RbiSearchHeader

Press escape key to go back

Past Searches

Theme
Theme
Text Size
Text Size
S3

Notification Marquee

RBI Announcements
RBI Announcements

RbiAnnouncementWeb

RBI Announcements
RBI Announcements

Asset Publisher

78500999

ಸಾಕಷ್ಟು ನಗದು ದೊರೆಯುತ್ತದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಮತ್ತೊಮ್ಮೆ ಆಶ್ವಾಸನೆ ನೀಡಿದೆ ಹಾಗೂ ಸಾರ್ವಜನಿಕರು ತಾಳ್ಮೆಯಿಂದ ಇರಲು ಮತ್ತು ನೋಟುಗಳನ್ನು ಅವರ ಅನೂಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳಲು ವಿನಂತಿಸಿದೆ.

ನವಂಬರ್ 11, 2016

ಸಾಕಷ್ಟು ನಗದು ದೊರೆಯುತ್ತದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಮತ್ತೊಮ್ಮೆ ಆಶ್ವಾಸನೆ ನೀಡಿದೆ ಹಾಗೂ ಸಾರ್ವಜನಿಕರು ತಾಳ್ಮೆಯಿಂದ ಇರಲು ಮತ್ತು ನೋಟುಗಳನ್ನು ಅವರ ಅನೂಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳಲು ವಿನಂತಿಸಿದೆ.

ರೂ. 500 ಹಾಗೂ ರೂ. 1000 ಬ್ಯಾಂಕ್ ನೋಟುಗಳ ವಿಧಿಮಾನ್ಯ ಚಲಾವಣೆಯ ರದ್ದತಿಯ ನಂತರ ಭಾರತೀಯ ರಿಸರ್ವ್ ಬ್ಯಾಂಕ್ ನೂತನ ರೂ. 2000 ಹಾಗೂ ಇತರೆ ನೂಟುಗಳ ವಿತರಣೆಗೆ ವ್ಯವಸ್ಥೆ ಮಾಡಿದೆ.

ಸಾಕಷ್ಟು ನಗದು ಲಭ್ಯವಿದೆ ಹಾಗೂ ದೇಶಾದ್ಯಂತ ನೋಟುಗಳ ವಿತರಣೆಗೆ ಅಗತ್ಯವಾದ ವ್ಯವಸ್ಥೆಯನ್ನು ಮಾಡಲಾಗಿದೆ. ಬ್ಯಾಂಕ್ ಶಾಖೆಗಳು ನೋಟುಗಳ ವಿನಿಮಯವನ್ನು ನವಂಬರ್ 10, 2016 ರಿಂದಲೇ ಆರಂಭಿಸಿವೆ.

ಈ ಮೊದಲೆ ರಿಸರ್ವ್ ಬ್ಯಾಂಕ್ ಮಾಧ್ಯಮದ ಮೂಲಕ ಉಲ್ಲೇಖಿಸಿದಂತೆ , ಎ ಟಿ ಎಂ ಗಳ ಮರುಹೊಂದಾಣಿಕೆಗೆ ಸ್ವಲ್ಪ ಸಮಯ ತಗಲಬಹುದು. ಎ ಟಿ ಎಂ ಗಳು ಪುನರ್ ಕಾರ್ಯಾರಂಭಿಸಿದ ನಂತರ , ಸಾರ್ವಜನಿಕರು ನವಂಬರ್ 16, 2016 ರ ತನಕ ಪ್ರತಿ ದಿನ ಪ್ರತಿ ಕಾರ್ಡಿನಿಂದ ಗರಿಷ್ಠ ರೂ.2000/- ಹಣ ತೆಗೆಯಬಹುದು ತದ ನಂತರ ಪ್ರತಿ ಕಾರ್ಡಿನಿಂದ ರೂ. 4000/- ಪ್ರತಿ ದಿನ ಹಣ ತೆಗೆಯಬಹುದು. ಅನೇಕ ಎ ಟಿ ಎಂಗಳು ಆರಂಭದ ಗರಿಷ್ಠ ರೂ.2000/- ಹಣ ತೆಗೆಯಲು ಅನುಕೂಲವಾಗುವ ನಿಟ್ಟಿನಲ್ಲಿ ಈ ಮುಂಜಾನೆಯಿಂದಲೆ ತಮ್ಮ ಕಾರ್ಯರಂಭಿಸಿವೆ.

ಮಾನ್ಯತೆ ರದ್ದಾಗಿರುವ ರೂ. 500 ಹಾಗೂ ರೂ. 1000 ನೋಟುಗಳ ವಿನಿಮಯದ ಸೌಲಭ್ಯವು 50 ದಿನಗಳ ವರೆಗೆ ಲಭ್ಯವಿದೆ. ಸಾರ್ವಜನಿಕರು ತಾಳ್ಮೆಯಿಂದ ಇರಲು ಮತ್ತು ನೋಟುಗಳನ್ನು ಅವರ ಅನೂಕೂಲಕ್ಕೆ ತಕ್ಕಂತೆ ಡಿಸೆಂಬರ್ 30, 2016 ರ ಮೊದಲು ಬದಲಾಯಿಸಿಕೊಳ್ಳಲು ಭಾರತೀಯ ರಿಸರ್ವ್ ಬ್ಯಾಂಕ್ ವಿನಂತಿಸಿದೆ.

ಅಲ್ಪನ ಕಿಲ್ಲಾವಾಲಾ
ಪ್ರಧಾನ ಸಲಹೆಗಾರರು


ಪತ್ರಿಕಾ ಪ್ರಕಟಣೆ : 2016-2017/1182

RbiTtsCommonUtility

प्ले हो रहा है
ಕೇಳಿ

Related Assets

RBI-Install-RBI-Content-Global

RbiSocialMediaUtility

ಭಾರತೀಯ ರಿಸರ್ವ್ ಬ್ಯಾಂಕ್ ಮೊಬೈಲ್ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿ ಮತ್ತು ಇತ್ತೀಚಿನ ಸುದ್ದಿಗಳಿಗೆ ತ್ವರಿತ ಅಕ್ಸೆಸ್ ಪಡೆಯಿರಿ!

Scan Your QR code to Install our app

RbiWasItHelpfulUtility

ಈ ಪುಟವು ಸಹಾಯಕವಾಗಿತ್ತೇ?