<font face="mangal" size="3">“R” ಒಳಾಕ್ಷರವಿರುವ ರೂ <span style="font-family:Arial;">₹</span> 100 ರ ಬ್ಯಾಂಕು ನೋಟುಗಳ & - ಆರ್ಬಿಐ - Reserve Bank of India
“R” ಒಳಾಕ್ಷರವಿರುವ ರೂ ₹ 100 ರ ಬ್ಯಾಂಕು ನೋಟುಗಳ ಬಿಡುಗಡೆ
ಫೆಬ್ರವರಿ 03, 2017 “R” ಒಳಾಕ್ಷರವಿರುವ ರೂ ₹ 100 ರ ಬ್ಯಾಂಕು ನೋಟುಗಳ ಬಿಡುಗಡೆ. ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ಡಾ. ಉರ್ಜಿತ್ ಆರ್ ಪಟೇಲ್ ಅವರ ಸಹಿಯುಳ್ಳ, ಬ್ಯಾಂಕು ನೋಟಿನ ಹಿಂದೆ ಮುದ್ರಣ ವರ್ಷ 2017 ಮುದ್ರಿಸಿರುವ, ಎರಡೂ ಸಂಖ್ಯಾಂಕಣಗಳಲ್ಲಿ “R” ಒಳಾಕ್ಷರವಿರುವ ಮಹಾತ್ಮಾ ಗಾಂಧಿ ಶ್ರೇಣಿ -2005 ರ, ₹ 100 ರ ಬ್ಯಾಂಕು ನೋಟುಗಳನ್ನು ಶ್ರೀಘ್ರದಲ್ಲಿಯೇ ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಲಿದೆ. ಈಗ ನೀಡಲಿರುವ ನೋಟುಗಳ ವಿನ್ಯಾಸವು ಈ ಹಿಂದೆ ನೀಡಲಾದ ಮಹಾತ್ಮಾ ಗಾಂಧಿ ಶ್ರೇಣಿ -2005 ರ ಎರಡು ಬದಿಯ ಸಂಖ್ಯಾಂಕಣಗಳಲ್ಲಿ ಸಂಖ್ಯೆಗಳ ಗಾತ್ರ ಆರೋಹಣ ಮಾದರಿಯಲ್ಲಿರುವ , ಬ್ಲಿಡ್ ರೇಖೆಗಳಿರುವ ಮತ್ತು ನೋಟಿನ ಹಿಂಬದಿಯಲ್ಲಿ ಉಬ್ಬು ಮುದ್ರಣ ಇರುವ ₹ 100 ಬ್ಯಾಂಕು ನೋಟುಗಳಂತಯೇ ಇರುತ್ತವೆ.(ಉಲ್ಲೇಖ : ಪತ್ರಿಕಾ ಪ್ರಕಟಣೆ ಸಂಖ್ಯೆ 2016 – 2017 /1427 ದಿನಾಂಕ ಡಿಸೆಂಬರ್ 6, 2016) ಈ ಹಿಂದೆ ಭಾರತೀಯ ರಿಸರ್ವ್ ಬ್ಯಾಂಕಿನಿಂದ ನೀಡಲಾದ ₹ 100 ರ ಮೌಲ್ಯವರ್ಗದ ಎಲ್ಲಾ ನೋಟುಗಳೂ ವಿಧಿಮಾನ್ಯ ಚಲಾವಣೆಯಲ್ಲಿ ಮುಂದುವರಿಯುತ್ತವೆ. ಅಜಿತ್ ಪ್ರಸಾದ್ ಪತ್ರಿಕಾ ಪ್ರಕಟಣೆ : 2016-2017/2086 |