<font face="mangal" size="3"><span style="font-family:Arial;">₹</span> 2000 ರ ನೀಡಿಕೆ</font> - ಆರ್ಬಿಐ - Reserve Bank of India
₹ 2000 ರ ನೀಡಿಕೆ
ನವಂಬರ್ 08, 2016 ₹ 2000 ರ ನೀಡಿಕೆ ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ಡಾ. ಊರ್ಜಿತ್ ಆರ್ ಅವರ ಸಹಿಯುಳ್ಳ, ಬ್ಯಾಂಕು ನೋಟಿನ ಹಿಂದೆ ಮುದ್ರಣ ವರ್ಷ 2016 ಮುದ್ರಿಸಿರುವ, ಯಾವುದೇ ಒಳಾಕ್ಷರ ಇಲ್ಲದಿರುವ , ಮಹಾತ್ಮಾ ಗಾಂಧಿ ಶ್ರೇಣಿ (ನೂತನ) -2005 ರ, ₹2೦00 ರ ಬ್ಯಾಂಕು ನೋಟುಗಳನ್ನು ಶ್ರೀಘ್ರದಲ್ಲಿಯೇ ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಲಿದೆ. ಹೊಸ ಮುಖಬೆಲೆಯ ನೋಟಿನ ಹಿಂಭಾಗದಲ್ಲಿ ದೇಶದ ಮೊದಲ ಅಂತರತಾರಾ ಬಾಹ್ಯಾಕಾಶದ ಪ್ರಯಾಣದ ಸಂಕೇತವಾದ ಮಂಗಳಯಾನದ ಚಿತ್ರವಿದೆ. ನೋಟಿನ ಬಣ್ಣ ಕೆನ್ನೇರಳೆ ಆಗಿದೆ. ಈ ನೋಟು ತನ್ನ ಹಿಂಭಾಗ ಮತ್ತು ಮುಂಭಾಗದಲ್ಲಿ ಇತರೆ ವಿನ್ಯಾಸ ಮತ್ತು ಜ್ಯಾಮಿತಿಯ ಮಾದರಿಗಳನ್ನು ಒಟ್ಟಾರೆ ಬಣ್ಣದೊಂದಿಗೆ ಹೊಂದಿದೆ. ![]() ![]() ನೋಟಿನ ಇತರೆ ವೈಶಿಷ್ಟಗಳು ಈ ಕೆಳಗಿನಂತಿವೆ : ಮುಂಭಾಗ
ದೃಷ್ಟಿ ಹೀನರಿಗಾಗಿ ಉಬ್ಬು ಮುದ್ರಣ , ಅಶೋಕ ಸ್ಥಂಭ ಲಾಂಛನ , ಬ್ಲಿಡ್ ರೇಖೆ ಮತ್ತು ಗುರುತು ಚಿನ್ಹೆ
ಹಿಂಭಾಗ
ಬ್ಯಾಂಕ್ ನೋಟಿನ ಆಯಾಮ 66 ಮಿಮೀ * 166 ಮಿಮೀ ಅಲ್ಪನ ಕಿಲಾವಲ ಪತ್ರಿಕಾ ಪ್ರಕಟಣೆ : 2016-2017/1144 |