“L” ಒಳಾಕ್ಷರವಿರುವ ಮಹಾತ್ಮಾ ಗಾಂಧಿ (ನೂತನ) ಶ್ರೇಣಿ -2005 ರಲ್ಲಿ ₹ 500 ರ ಬ್ಯಾಂಕು ನೋಟುಗಳ ನೀಡಿಕೆ
ನವೆಂಬರ್ 13 , 2016 “L” ಒಳಾಕ್ಷರವಿರುವ ಮಹಾತ್ಮಾ ಗಾಂಧಿ (ನೂತನ) ಶ್ರೇಣಿ -2005 ರಲ್ಲಿ ₹ 500 ರ ಬ್ಯಾಂಕು ನೋಟುಗಳ ನೀಡಿಕೆ ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ಡಾ. ಉರ್ಜಿತ್ ಆರ್.ಪಟೇಲ್ ಅವರ ಸಹಿಯುಳ್ಳ, ಬ್ಯಾಂಕು ನೋಟಿನ ಹಿಂದೆ ಮುದ್ರಣ ವರ್ಷ 2016 ಹಾಗೂ ಸ್ವಚ್ಚ್ ಭಾರತ ಚಿನ್ಹೆಯನ್ನು ಮುದ್ರಿಸಿರುವ ಮತ್ತು ಎರಡೂ ಬದಿಯ ಸಂಖ್ಯಾಕಣಗಳಲ್ಲಿ “L” ಒಳಾಕ್ಷರವಿರುವ ಮಹಾತ್ಮಾ ಗಾಂಧಿ (ನೂತನ ) ಶ್ರೇಣಿ -2005 ರಲ್ಲಿ , ₹ 500 ರ ಬ್ಯಾಂಕು ನೋಟುಗಳನ್ನು ಶ್ರೀಘ್ರದಲ್ಲಿಯೇ ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಲಿದೆ. ಈ ಹೊಸ ₹ 500 ರ ನೋಟುಗಳು ಬಣ್ಣ, ಗಾತ್ರ, ವಿಷಯ , ಭದ್ರತಾ ವೈಶಿಷ್ಟ್ಯಗಳ ಸ್ಥಾನ ಮತ್ತು ವಿನ್ಯಾಸದ ಅಂಶಗಳಲ್ಲಿ ಈ ಹಿಂದೆ ನೀಡಲಾದ ನಿಗದಿಪಡಿಸಿದ ಬ್ಯಾಂಕ್ ನೋಟುಗಳಿಗಿಂತ ಭಿನ್ನವಾಗಿರುತ್ತದೆ. ಈ ನೋಟಿನ ಮುಖ್ಯ ವೈಶಿಷ್ಟಗಳೆಂದರೆ –
ಬ್ಯಾಂಕ್ ನೋಟಿನಲ್ಲಿ ಇತರೆ ವೈಶಿಷ್ಟಗಳಿವೆ ( ಮಹಾತ್ಮ ಗಾಂಧಿಯ ಉಬ್ಬು ಮುದ್ರಣದ ಚಿತ್ರ , ಅಶೋಕ ಸ್ಥಂಭ ಲಾಂಛನ , ಬ್ಲೀಡ್ ರೇಖೆಗಳು , ಬಲಬದಿಯಲ್ಲಿ ₹ 500 ರ ಜೊತೆಗೆ ವೃತ್ತಾಕಾರವಿದೆ ಮತ್ತು ಗುರುತು ಚಿನ್ಹೆ ಇದೆ). ಈ ವೈಶಿಷ್ಟ್ಯಗಳು ದೃಷ್ಟಿ ಹೀನರಿಗೆ ನೋಟಿನ ಮುಖಬೆಲೆಯನ್ನು ಪತ್ತೆ ಹಚ್ಚುವುದರಲ್ಲಿ ಸಹಾಯ ಮಾಡುತ್ತವೆ. ದಿನಾಂಕ 08 ನವೆಂಬರ್ 2016 ರ ಪತ್ರಿಕಾ ಪ್ರಕಟಣೆ ಸಂಖ್ಯೆ 2016-2017/1146 ಯಲ್ಲಿ ಈ ಹಿಂದೆ ಸೂಚಿಸಲಾಗಿರುವ ನೋಟುಗಳು ವಿಧಿಮಾನ್ಯ ಚಲಾವಣೆಯಲ್ಲಿರುತ್ತದೆ ಅಲ್ಪನ ಕಿಲಾವಾಲಾ ಪತ್ರಿಕಾ ಪ್ರಕಟಣೆ : 2016-2017/1196 |
ಪೇಜ್ ಕೊನೆಯದಾಗಿ ಅಪ್ಡೇಟ್ ಆದ ದಿನಾಂಕ: