<font face="mangal" size="3px">ನಿಯಂತ್ರಕ ಸಂಸ್ಥೆಗಳಿನ ಸ್ವಾತಂತ್ರತೆಯ ಪ್ರಾಮುಖ್ - ಆರ್‌ಬಿಐ - Reserve Bank of India
ನಿಯಂತ್ರಕ ಸಂಸ್ಥೆಗಳಿನ ಸ್ವಾತಂತ್ರತೆಯ ಪ್ರಾಮುಖ್ಯತೆಯನ್ನು ಕುರಿತು – ಕೇಂದ್ರ ಬ್ಯಾಂಕ್ ನ ವಿಷಯದಲ್ಲಿ - ಭಾರತೀಯ ರಿಸರ್ವ್ ಬ್ಯಾಂಕ್ ನ ಉಪ ಗವರ್ನರ್ ಡಾ. ವಿರಾಲ್ ವಿ ಆಚಾರ್ಯ ರವರು ಶ್ರೀ. ಏ. ಡಿ. ಶ್ರಾಫ್ ರವರ ಜ್ಞಾಪಕಾರ್ಥ ಮುಂಬೈ ಯಲ್ಲಿ ನೀಡಿದ ಭಾಷಣ
ಯಾವ ಹೋಲಿಕೆಯೂ ಪರಿಪೂರ್ಣವಾಗಿರುವುದಿಲ್ಲ; ಆದಾಗ್ಯೂ ಹೋಲಿಕೆಗಳು ಉತ್ತಮ ರೀತಿಯಲ್ಲಿ ವಿಷಯಗಳನ್ನು ತಿಳಿಸಲು ನೆರವಾಗುತ್ತವೆ. ಕೆಲವೊಮ್ಮೆ ವಿಷಯಗಳನ್ನು ವ್ಯಾವಹಾರಿಕ ಅಥವಾ ಶೈಕ್ಷಣಿಕ ನಿಟ್ಟಿನಲ್ಲಿ ಸಂಕ್ಷಿಪ್ತವಾಗಿ ವಿವರಿಸಲು ಒಂದು ಸಾಧಾರಣ ರೇಖಾ ಚಿತ್ರವನ್ನು ರಚಿಸಬೇಕಾಗುತ್ತದೆ. ಸಾಂದರ್ಭಿಕವಾಗಿ, ನಿಜ ಜೀವನದ ಉದಾಹರಣೆಗಳು ಸಂವಾದಕರ ಕೆಲಸವನ್ನು ಸುಲಭಗೊಳಿಸುತ್ತವೆ. ಇಂದಿನ ಭಾಷಣವನ್ನು, ನನ್ನ ಭಾಷಣ ಶೈಲಿಗೆ ಅಭಿಮುಖವಾದ 2010 ರ ಪೂರ್ವಕತೆಯೊಂದಿಗೆ ಪ್ರಾರಂಭಿಸುತ್ತೇನೆ. “ಕೇಂದ್ರ ಬ್ಯಾಂಕ್ ನಲ್ಲಿ ನನ್ನ ಕಾಲ ಮುಗಿದಿದೆ, ಆದ್ದರಿಂದ ನನ್ನ ಕರ್ತವ್ಯವನ್ನು ಪರಿಪೂರ್ಣವಾಗಿ ನಿಭಾಯಿಸಿದ ತೃಪ್ತಿಯಿಂದ ನನ್ನ ಸ್ಥಾನದಿಂದ ನಿರ್ಗಮಿಸಲು ತೀರ್ಮಾನಿಸಿದ್ದೇನೆ” ಎಂದು ಅರ್ಜೆಂಟೀನ ದೇಶದ ಕೇಂದ್ರ ಬ್ಯಾಂಕ್ ನ ಮುಖ್ಯಸ್ಥರಾದ ಶ್ರೀ ಮಾರ್ಟಿನ್ ರೇಡ್ರಾಡೊ ರವರು 29 ಜನವರಿ 2010 ರ ಶುಕ್ರವಾರದಂದು ಸುದ್ದಿ ಸಮ್ಮೇಳನದೊಂದಿಗೆ ತಿಳಿಸಿದರು. “ರಾಷ್ಟ್ರೀಯ ಸರ್ಕಾರದಿಂದ ಆಗುತ್ತಿರುವ ಸಂಸ್ಥೆಗಳ ಶಾಶ್ವತ ತುಳಿತದಿಂದ ನಾವು ಈ ಸ್ಥಿತಿಯನ್ನು ತಲುಪಿದ್ದೇವೆ. ಮೂಲತಃ ನಾನು ಮುಖ್ಯವಾಗಿ ಎರಡು ಪರಿಕಲ್ಪನೆಗಳ ಪರ ವಹಿಸುತ್ತಿದ್ದೇನೆ: ನಮ್ಮ ನಿರ್ಧಾರ ಪ್ರಕ್ರಿಯೆಗಳಲ್ಲಿ ಕೇಂದ್ರ ಬ್ಯಾಂಕ್ ನ ಸ್ವಾತಂತ್ರತೆ ಮತ್ತು ಮೀಸಲು ಹಣವನ್ನು ವಿತ್ತೀಯ ಹಾಗೂ ಹಣಕಾಸು ಸ್ಥಿರತೆಗಾಗಿ ಉಪಯೋಗಿಸುವುದು” ದ್ವಿಶತಮಾನ ಸ್ಥಿರತೆ ಸ್ಥಾಪಿಸಲು ಮತ್ತು ಆ ವರ್ಷ ಸಾಲದ ಮೊತ್ತವನ್ನು ಪಾವತಿಸಲು 14 ಡಿಸೆಂಬರ್ 2009 ರಂದು ಕ್ರಿಸ್ಟೀನ ಫೆರ್ನಾಂಡೀಜ್ ನೇತ್ರತ್ವದ ಅರ್ಜೆಂಟೀನ ಸರ್ಕಾರವು ಅಂಗೀಕರಿಸಿದ ತುರ್ತು ತೀರ್ಮಾನವೇ ಈ ರೀತಿಯ ನಾಟಕೀಯ ನಿರ್ಗಮನಕ್ಕೆ ಮೂಲ ಕಾರಣ. ಈ ತೀರ್ಮಾನವು $6.6 ಶತಕೋಟಿ ಮೀಸಲು ಹಣವನ್ನು ಕೇಂದ್ರ ಬ್ಯಾಂಕ್ ನಿಂದ ರಾಷ್ಟ್ರೀಯ ಖಜಾನೆಗೆ ವರ್ಗಾವಣೆ ಮಾಡುವುದನ್ನು ಒಳಗೊಂಡಿತ್ತು. ಕೇಂದ್ರ ಬ್ಯಾಂಕ್, ತನ್ನ ಬಳಿ 18 ಶತಕೋಟಿ $ ಗಳನ್ಷ್ಟು “ಹೆಚ್ಚುವರಿ ಮೀಸಲು” ಹೊಂದಿದೆ ಎಂಬುದು ಅವರ ಪ್ರತಿಪಾದನೆಯಾಗಿತ್ತು. ವಾಸ್ತವವಾಗಿ ಶ್ರೀ ರೇಡ್ರಾದೋ ರವರು ಈ ವರ್ಗಾವಣೆಯನ್ನು ನಿರಾಕರಿಸಿದ್ದರು. ಆದ್ದರಿಂದ ತಪ್ಪು ವರ್ತನೆ ಮತ್ತು ಕರ್ತವ್ಯ ನಿರಾಕರಣೆ ಕಾರಣದಿಂದ ಅವರನ್ನು ವಜಾಗೊಳಿಸಲು ಸರ್ಕಾರವು 7 ನವೆಂಬರ್ 2010 ರಂದು ಮತ್ತೊಂದು ತಿರ್ತು ತೀರ್ಮಾನವನ್ನು ಅಂಗೀಕರಿಸುವ ಮೂಲಕ ಪ್ರಯತ್ನಿಸಿತ್ತು. ಆದರೆ ಈ ಪ್ರಯತ್ನ ಅಸಂವಿಧಾನಿಕವಾದ್ದರಿಂದ ವಿಫಲವಾಗಿತ್ತು. ಅರ್ಜೆಂಟೀನದಲ್ಲಿ 2001 ರಲ್ಲಿ ಉಂಟಾದ ಅತಿ ಕೆಟ್ಟಆರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿಯ ನಂತರ ಮತ್ತೊಂದು ತೀವ್ರ ಸಾಂವಿಧಾನಿಕ ಬಿಕ್ಕಟ್ಟಿನ ಕಿಡಿಯನ್ನು ಈ ಸರಣಿ ಘಟನೆಗಳು ಹಚ್ಚಿದ್ದರಿಂದ, ಸಾರ್ವಭೌಮತ್ವಕ್ಕೆ ಅಪಾಯವಾಗದಿರಲು ಮರುಮೌಲೀಕರಣ ಮಾಡಬೇಕಾಯಿತು. ರೇಡ್ರಾಡೋ ರವರ ರಾಜೀನಾಮೆಯ ಒಂದು ತಿಂಗಳೊಳಗೆ, ಅರ್ಜೆಂಟೀನಾದ ಸಾವರಿನ್ ಬಾಂಡುಗಳ ಇಳುವರಿ ಹಾಗೂ ಅರ್ಜೆಂಟೀನಾದ ಸರ್ಕಾರಿ ಬಾಂಡುಗಳ ಮರುಪಾವತಿ ಮಾಡದೆ ಇರುವುದರ ಕಾರಣ ಆಗುವ ನಷ್ಟಗಳನ್ನು ಭರಿಸುವುದಕ್ಕೆ ಕೊಳ್ಳಲಾದ ವಿಮೆಯ ವಾರ್ಷಿಕ ಕಂತಿನ ವೆಚ್ಚ ಶೇ.2.5% ಅಥವಾ 250 ಬೇಸಿಸ್ ಪಾಯಿಂಟ್ ಗಳಷ್ಟು ಹೆಚ್ಚುವರಿಯಾಯಿತು. ಗೋಲ್ಡ್ಮನ್ ಸ್ಯಾಕ್ಸ್ ನ ವಿಶ್ಲೇಷಕರಾದ, ಅರ್ಜೆಂಟೀನಾ ದವರಾದ ಅಲ್ಬರ್ಟೋ ರಾಮೋಸ್ ರವರು 7 ಫೆಬ್ರವರಿ 2010 ರಂದು ಈ ರೀತಿ ಅಭಿಪ್ರಾಯ ಪಟ್ಟಿದ್ದಾರೆ. “ಕೇಂದ್ರ ಬ್ಯಾಂಕ್ ನ ಮೀಸಲು ಹಣವನ್ನು ಸರ್ಕಾರದ ಬಾಧ್ಯತೆಗಳನ್ನು ಭರಿಸಲು ಉಪಯೋಗಿಸುವುದು ಧನಾತ್ಮಕ ಬೆಳವಣಿಗೆಯಲ್ಲ ಮತ್ತು “ಹೆಚ್ಚುವರಿ ಮೀಸಲು“ ಹಣದ ಪರಿಕಲ್ಪನೆ ಚರ್ಚೆಗೆ ಮುಕ್ತವಾಗಿದೆ. ಇದು ಕೇಂದ್ರ ಬ್ಯಾಂಕ್ ನ ತುಲನ ಪತ್ರವನ್ನು ದುರ್ಬಲಗೊಳಿಸುತ್ತದೆ ಮತ್ತು ಇದು ಹೆಚ್ಚುವರಿ ಖರ್ಚು ವೆಚ್ಚಗಳ ನಿಯಂತ್ರಣಾ ಕ್ರಮಗಳನ್ನು ದುರ್ಬಲಗೊಳಿಸುವುದರಿಂದ ಮತ್ತು 2010ರ ಹಣಕಾಸು ಖಾತೆಗಳ ಸಮಗ್ರೀಕರಣವನ್ನು ಉತ್ತೇಜನಕ್ಕೆ ಸರ್ಕಾರಕ್ಕೆ ತಪ್ಪು ಪ್ರೇರಣೆಯನ್ನು ನೀಡುತ್ತದೆ. ಗವರ್ನರ್ ರೇಡ್ರಡೋ ರವರು ಇನ್ನೂ ಹೆಚ್ಚಿನ ಹಾನಿಕರ ಅಪಾಯದ ಬಗ್ಗೆ ಮೊದಲೇ ನೀಡಿದ್ದ ಎಚ್ಚರಿಕೆಯು ನಿಜವಾಯಿತು. ಕೇಂದ್ರ ಬ್ಯಾಂಕು ಸ್ವಾಯತ್ತ ಸಂಸ್ಥೆಯಾಗಿಲ್ಲ ಹಾಗೂ ಅದು ದೇಶದ ಕಾರ್ಯನಿರ್ವಾಹಕ ಶಾಕೆಯಾಗಿದೆ ಎಂದು ಹೂಡಿಕೆದಾರರು ಸಾದಿಸಿದ್ದರಿಂದ ನಿವ್ ಯಾರ್ಕ್ ನ ನ್ಯಾಯಾದೀಶರಾದ ಥಾಮಸ್ ಗ್ರೀಯೆಸ ಅವರು ಫೆಡರಲ್ ರಿಸರ್ವ್ ಬ್ಯಾಂಕ್ ಆಫ್ ನ್ಯೂ ಯಾರ್ಕ್ ನಲ್ಲಿ ಹೊಂದಿದ್ದ ಅರ್ಜೆಂಟೈನ್ ಕೇಂದ್ರ ಬ್ಯಾಂಕ್ ನ ಖಾತೆಯನ್ನು ಸ್ಥಗಿತಗೊಳಿಸಿದ್ದರು. ಸಾರ್ವಬಹುಮತೆಯ ಅಧಿಕಾರ ಚಲಾವಣೆಯಲ್ಲಿರುವ ಕ್ಲಿಷ್ಟತೆ, ಕೇಂದ್ರ ಬ್ಯಾಂಕ್ ನ ನಿರ್ಗಮನ, ಮಾರುಕಟ್ಟೆಯಲ್ಲಿನ ದಂಗೆ ಇವುಗಳು ಇಂದು ನಾನು ನೀಡುವ ಅಭಿಪ್ರಾಯಗಳ ಕೇಂದ್ರಬಿಂದುವಾಗಿರುತ್ತವೆ ಮತ್ತು ಆರ್ಥಿಕತೆಯ ಸರಾಗ ನಿರ್ವಹಣೆಗೆ ಕೇವಲ ಸರ್ಕಾರದ ಕಾರ್ಯನಿರ್ವಹಣಾ ಶಾಖೆಯಾಗದೇ ಬೇರೆಯೇ ಆದ ಸ್ವಾಯತ್ತ ಕೇಂದ್ರ ಬ್ಯಾಂಕ್ ನ ಅವಶ್ಯಕತೆಯಿದೆಯೆಂದು ತಿಳಿಸುತ್ತದೆ. ಕೇಂದ್ರ ಬ್ಯಾಂಕ್ ನ ಸ್ವಾಧಿಪತ್ಯತೆಯನ್ನು ಕಡೆಗಣಿಸುವುದರಿಂದಾಗುವ ದುರಂತದ ಬಗ್ಗೆ, ಹಾಗೂ ಹೇಗೆ ಸರ್ಕಾರಗಳು ತಮ್ಮ ಹಣಕಾಸಿನ ಅವಶ್ಯಕತೆಗಳಿಗಾಗಿ ಬಂಡವಾಳ ಮಾರುಕಟ್ಟೆ ಯಲ್ಲಿನ ವಿಶ್ವಾಸವನ್ನು ಕ್ಷೀಣಿಸುವ ಪ್ರಚೋದನೆಗೆ ಕಾರಣವಾಗುತ್ತದೆ ಎಂಬುದನ್ನೂ ತಿಳಿಸುತ್ತದೆ. ದೇಶಗಳು ಯಾಕೆ ಯಶಸ್ವಿಯಾಗುತ್ತವೆ (ಅಥವಾ ವಿಫಲಗುಳ್ಳುತ್ತವೆ) ಈ ವಿಚಾರದ ಬಗ್ಗೆ ಆಳವಾಗಿ ಚರ್ಚಿಸುವ ಮೊದಲು, ಕೇಂದ್ರ ಬ್ಯಾಂಕ್ ನ ಸ್ವಾತಂತ್ರದ ಬಗ್ಗೆ ಮಾತನಾಡಲು ಬಯಸುತ್ತೇನೆ: ರಾಜಕೀಯ ಅರ್ಥಶಾಸ್ತ್ರಜ್ಞರು ನೀಡಿರುವ ಶೈಕ್ಷಣಿಕ ಉಪನ್ಯಾಸಗಳು ದೇಶದ ಏಳಿಗೆಗೆ ಕಾನೂನು ಮತ್ತು ಸರ್ಕಾರಗಳ ಹೊಣೆಗಾರಿಕೆಯ ಪಾತ್ರವನ್ನು ಗುರುತಿಸುತ್ತದೆ. ಫ್ರಾನ್ಸಿಸ್ ಫುಕುಯಾಮಾ (ಅರಿಜಿನ್ಸ್ ಆಫ್ ಪೊಲಿಟಿಕಲ್ ಆರ್ಡರ್, 2011) ರವರು ಎರಡು ಅಂಶಗಳನ್ನು ಪರಿಗಣಿಸುತ್ತಾರೆ: ರಾಷ್ಟ್ರ ಮತ್ತು ಸಂಸ್ಥೆ ಕಟ್ಟಲು ಸ್ಥಿರ, ಶಾಂತಿಯುತ, ಸಮೃದ್ಧ, ಸಮಗ್ರ ಮತ್ತು ಪ್ರಾಮಾಣಿಕ ವಾಗಿರುವಂತಹ ಹಲವು ನಾನಾ ಮಾರ್ಗಗಳಿವೆ (“getting to Denmark”). ಡ್ಯಾರನ್ ಆಕೆಮೊಗ್ಲೂ ಮತ್ತು ಜೇಮ್ಸ್ ರಾಬಿನ್ಶನ್ (“why nations fail, 2012) ಇದರಲ್ಲಿ ರಾಷ್ಟ್ರದ ರಾಜಕೀಯ ಮತ್ತು ಆರ್ಥಿಕ ಯಶಸ್ಸು ಅಥವಾ ವೈಫಲ್ಯತೆಯನ್ನು ವಿಶ್ಲೇಶಿಸಲು ಸಂಸ್ಥೆಗಳ ಗುಣಮಟ್ಟದ ಪ್ರಾಮುಖ್ಯತೆ ಎಷ್ಟಿದೆ ಎಂಬುದನ್ನು ತೋರಿಸಿದ್ದಾರೆ. ಅವಳಿ ರಾಜ್ಯ ಗಳ (ಉತ್ತರ ಮತ್ತು ದಕ್ಷಿಣ ಕೊರಿಯಾ) ಉದಾಹರಣೆಯನ್ನು ತೆಗೆದುಕೊಳ್ಳುತ್ತಾ ಪುಸ್ತಕವು ಕೆಳಕಂಡ ಮುಖ್ಯ ವ್ಯತ್ಯಾಸವನ್ನು ವಿಸ್ತರಿಸುತ್ತದೆ. ಸಮಗ್ರ ಆರ್ಥಿಕ ಮತ್ತು ರಾಜಕೀಯ ಸಂಸ್ಥೆಗಳ ನಿರ್ಣಯ ಪ್ರಕ್ರಿಯೆಯಲ್ಲಿ ಬಹುಸಂಖ್ಯೆ ಯಲ್ಲಿ ವ್ಯಕ್ತಿಗಳ ಭಾಗವಹಿಸುವಿಕೆ ಅವಶ್ಯಕ ಏಕೆಂದರೆ ಇದು ಕಾನೂನು ನಿಯಮಗಳು, ಕ್ರಿಯಾತ್ಮಕತೆ ಮತ್ತು ಪ್ರತಿಭಾ ಪುರಸ್ಕಾರ ಗಳನ್ನು ಖಾತ್ರಿಗೊಳಿಸಲು ಸಹಾಯ ಮಾಡುತ್ತದೆ. ಇಂತಹ ಸಂಸ್ಥೆಗಳ ಉಪಸ್ಥಿತಿಯಲ್ಲಿ, ಆರ್ಥಿಕತೆ ಮತ್ತು ರಾಜಕೀಯಗಳು ಅಧಿಕಾರದಲ್ಲಿರುವವರ ಒತ್ತೆಯಾಳಾಗಿರುವುದಿಲ್ಲ. ಇದಕ್ಕೆ ವಿರುದ್ಧವಾಗಿ, ಕೆಲವು ಸಂಸ್ಥೆಗಳು ರಾಷ್ಟ್ರದ ಆರ್ಥಿಕ ಮತ್ತು ಹಣಕಾಸು ಸಂಪನ್ಮೂಲಗಳನ್ನು, ಅಧಿಕಾರದಲ್ಲಿರುವ ಕೆಲವರಿಗೆ ಮಾತ್ರ ಸೀಮಿತಗೊಳಿಸುವುದರಿಂದ ದೇಶದ ಬದಲಾವಣೆ ಮತ್ತು ಆವಿಷ್ಕಾರಗಳಿಗೆ ಅಡಚಣೆಗೊಳನ್ನು ತಂದು ಕಾಲಾಂತರದಲ್ಲಿ ದೇಶದ ಸಾಮರ್ಥ್ಯವನ್ನು ಕ್ಷೀಣಿಸಿ, ನಿಶ್ಚಲಗೊಳಿಸುತ್ತವೆ. ನಿವ್ ಯಾರ್ಕ್ ವಿಶ್ವವಿಧ್ಯಾಲಯದ ಸ್ಟರ್ನ ಸ್ಕೂಲ್ ಆಫ್ ಬಿಸಿನಸ್ (NYU Stern) ನಲ್ಲಿನ ಮಾಜಿ ಸಹೋದ್ಯೋಗಿಗಳೊಂದಿಗಿನ ಸಂಭಾಷಣೆಯಲ್ಲಿ, ಆರ್ಥಿಕತೆಗಳನ್ನು ಎರಡು ವಿಧಗಳಾಗಿ ವಿಂಗಡಿಸುವುದು ವಾಡಿಕೆಯಾಗಿತ್ತು.
ಸಂಸ್ಥೆಗಳ ಪ್ರಾಮುಖ್ಯತೆಗಾಗಿ ಆದ್ಯತೆಯ ಸಿದ್ಧಾಂತ ಮತ್ತು ಪರಿಭಾಷೆಗಳ ಹೊರತಾಗಿ, ಆಸ್ತಿ ಹಕ್ಕುಗಳು ಮತ್ತು ಅವುಗಳ ಜಾರಿ, ನ್ಯಾಯಾಂಗ, ಮತ್ತು ಪ್ರಜಾಪ್ರಭುತ್ವದಲ್ಲಿ ಚುನಾವಣಾ ಕಚೇರಿ ಸ್ಥಾಪನೆ ಇತ್ಯಾದಿ ಅಂಶಗಳು ಕಾನೂನು ರೀತ್ಯಾ ಸ್ಥಾಪನೆಯ ಜೊತೆಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಕಾರ್ಯತಃ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತವೆ. ಸ್ವತಂತ್ರ ಕೇಂದ್ರ ಬ್ಯಾಂಕ್ ಸಂಸ್ಥೆಯು ಸ್ವಲ್ಪಮಟ್ಟಿಗೆ ಕಡಿಮೆ ಪ್ರಸಿದ್ಧಿಯಾಗಿರುತ್ತದೆ. ಬಹುಶಃ ಕೇಂದ್ರ ಬ್ಯಾಂಕು ತುಲನಾತ್ಮಕವಾಗಿ ನವಜಾತ ಶಿಶುವಾಗಿದ್ದು (ಹೆಚ್ಚಿನ ಕಡೆಗಳಲ್ಲಿ ಒಂದು ಶತಮಾನಕ್ಕೂ ಕಡಿಮೆ ಹಳೆಯದಾಗಿದೆ), ಸಾರ್ವಜನಿಕರೊಂದಿಗೆ ಅತಿ ವಿರಳವಾದ ನೇರ ಪರಸ್ಪರ ಸಂವಹನೆ ಯ ಕಾರಣ ಕೇಂದ್ರ ಬ್ಯಾಂಕ್ ನ ನಿಜವಾದ ಪ್ರಭಾವ ಬೇರುವಿಕೆ ಬಹಳ ದೂರದಲ್ಲಿದೆ. ಸರ್ಕಾರ ಮತ್ತು ಕೇಂದ್ರ ಬ್ಯಾಂಕ್ – ಎರಡು ದಿಗಂತಗಳ ಕಥೆ ಆರ್ಥಿಕತೆಗೆ ಕೇಂದ್ರ ಬ್ಯಾಂಕ್ ಹಲವಾರು ಪ್ರಮುಖ ಕಾರ್ಯಗಳನ್ನು ನಿರ್ವಹಿಸುತ್ತದೆ: ಹಣದ ಪೂರೈಕೆಯನ್ನು ನಿಯಂತ್ರಿಸುತ್ತದೆ; ಎರವಲು ಮತ್ತು ಸಾಲ ನೀಡುವ ಮೇಲಿನ ಬಡ್ಡಿ ದರವನ್ನು ನಿಗದಿಪಡಿಸುತ್ತದೆ; ವಿನಿಮಯ ದರ ಸೇರಿದಂತೆ ಬಾಹ್ಯ ವಲಯವನ್ನು ನಿರ್ವಹಿಸುತ್ತದೆ; ಆರ್ಥಿಕ ವಲಯವನ್ನು ಮುಖ್ಯವಾಗಿ ಬ್ಯಾಂಕುಗಳ ಮೇಲ್ವಿಚಾರಣೆ ಮತ್ತು ನಿಯಂತ್ರಣ; ಇದು ಸಾಮಾನ್ಯವಾಗಿ ಕ್ರೆಡಿಟ್ ಮತ್ತು ವಿದೇಶಿ ವಿನಿಮಯ ಮಾರುಕಟ್ಟೆಗಳನ್ನು ನಿಯಂತ್ರಿಸುತ್ತದೆ; ಮತ್ತು, ದೇಶೀಯ ಹಣಕಾಸಿನ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತದೆ. ವಿಶ್ವದಾದ್ಯಂತ, ಕೇಂದ್ರ ಬ್ಯಾಂಕ್ ಸರ್ಕಾರದಿಂದ ಪ್ರತ್ಯೇಕವಾದ ಒಂದು ಸಂಸ್ಥೆಯಾಗಿ ಸ್ಥಾಪಿಸಲ್ಪಟ್ಟಿದೆ; ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಅದು ಸರ್ಕಾರದ ಕಾರ್ಯನಿರ್ವಾಹಕ ವಿಭಾಗವಲ್ಲ; ಅದರ ಅಧಿಕಾರಗಳನ್ನು ಸಂಬಂಧಿತ ಶಾಸನಗಳ ಮೂಲಕ ಪ್ರತ್ಯೇಕವಾಗಿ ಗುರುತಿಸಲಾಗಿದೆ. ಇದರ ಕಾರ್ಯಗಳು ತುಸು ಕ್ಲಿಷ್ಟ ಮತ್ತು ತಾಂತ್ರಿಕವಾಗಿದ್ದು, ಕೇಂದ್ರ ಬ್ಯಾಂಕುಗಳು ತಂತ್ರಜ್ಞರು ಅಥವಾ ಕ್ಷೇತ್ರ ಪರಿಣಿತರಿಂದ ಆದರ್ಶವಾಗಿ ನೇತೃತ್ವ ವಹಿಸಲ್ಪಟ್ಟಿವೆ - ವಿಶಿಷ್ಟವಾಗಿ ಅರ್ಥಶಾಸ್ತ್ರಜ್ಞರು, ಶಿಕ್ಷಣಗಾರರು, ವಾಣಿಜ್ಯ ಬ್ಯಾಂಕಾರ್ ಗಳು ಮತ್ತು ಕೆಲವೊಮ್ಮೆ ಖಾಸಗಿ ವಲಯದ ಪ್ರತಿನಿಧಿಗಳು, ಕಚೇರಿಗೆ ಆಯ್ಕೆಯಾಗದ - ಸರ್ಕಾರದಿಂದ ನೇಮಿಸಲ್ಪಟ್ಟವರು. ಈ ಸಂರಚನೆಯು ಕೇಂದ್ರೀಯ ಬ್ಯಾಂಕುಗಳು ತಮ್ಮ ಅಧಿಕಾರಗಳನ್ನು ಸ್ವತಂತ್ರವಾಗಿ ಚಲಾಯಿಸಬೇಕೆಂದು ಒಪ್ಪುತ್ತದೆ. ಸರ್ಕಾರದ ಕೇಂದ್ರ ಬ್ಯಾಂಕ್ ಏಕೆ ಪ್ರತ್ಯೇಕವಾಗಿದೆ? ನನಗೆ ಎನಿಸಿದಂತಹ ಅರ್ಥಗರ್ಭಿತ ವಿವರಣೆಯನ್ನು ನೀಡುತ್ತೇನೆ. ವಿವರಣೆಯ ಮೊದಲ ಭಾಗವು ಕೇಂದ್ರ ಬ್ಯಾಂಕ್ ನ ಮತ್ತು ಸರ್ಕಾರದ ನಿರ್ಧಾರ ಕ್ರಮಗಳ ದಿಗಂತಗಳ ಸಂಬಂಧಿಸಿದೆ. ಸರ್ಕಾರದ ನಿರ್ಧಾರ ಪ್ರಕ್ರಿಯೆಯು ಟಿ -20 ಪಂದ್ಯದ ಅವಧಿಯಂತೆ (ಕ್ರಿಕೆಟಿಂಗ್ ಸಾದೃಶ್ಯವನ್ನು ಬಳಸುವುದಾದರೆ) ಹಲವಾರು ಪರಿಗಣನೆಗಳ ಮೂಲಕ ಅಲ್ಪಾವಧಿಯಾಗಿರುತ್ತದೆ. ರಾಜ್ಯ, ರಾಷ್ಟ್ರೀಯ, ಮಧ್ಯಾವದಿ ಇತ್ಯಾದಿ ಹೀಗೆ ಯಾವ ಸಮಯದಲ್ಲೂ ಯಾವುದಾದರೊಂದು ಚುನಾವಣೆಗಳು ಬರುತ್ತಿರುತ್ತವೆ. ಚುನಾವಣೆಗಳು ಸಮೀಪಿಸುತ್ತಿದ್ದಂತೆ ಹಿಂದೆ ಘೋಷಿಸಲಾದ ಪ್ರಣಾಳಿಕೆಯಲ್ಲಿನ ಭರವಸೆಗಳನ್ನುಅವಸರವಾಗಿ ಈಡೇರಿಸಬೇಕಾಗುತ್ತದೆ. ಒಂದು ವೇಳೆ ಪ್ರಣಾಳಿಕೆಗಳಲ್ಲಿನ ಘೋಷಣೆಗಳನ್ನು ಈಡೇರಿಸಲಾಗದಿದ್ದಲ್ಲಿ ಇದಕ್ಕೆ ಪರ್ಯಾಯವಾಗಿ ಜನಪ್ರಿಯ ಯೋಜನೆಗಳನ್ನು ತುರ್ತಾಗಿ ಆಯೋಜಿಸಬೇಕಾಗುತ್ತದೆ. ಪ್ರಸ್ತುತ ಸನ್ನಿವೇಶಗಳಿಗೆ ಕಡಿಮೆ ಪ್ರಾಮುಖ್ಯತೆ ನೀಡಲಾಗುತ್ತದೆ. ಸರ್ಕಾರದ ಅಲ್ಪಕಾಲೀನ ಅಥವಾ ಸಮೀಪದೃಷ್ಟಿಯನ್ನು ಲೂಯಿಸ್ XV ಅವರ "ಏಪ್ರೇಸ್ ಮೋಯಿ, ಲೆ ಡಿಲ್ಯುಜ್!" (ನನ್ನ ನಂತರ, ಪ್ರವಾಹ!) ಎಂಬ ಘೋಷಣೆಯನ್ನು ಇತಿಹಾಸದಲ್ಲಿ ಕಾಣಬಹುದಾಗಿದೆ. ಇದಕ್ಕೆ ವಿರುದ್ಧವಾಗಿ, ಕೇಂದ್ರ ಬ್ಯಾಂಕ್ ಒಂದು ಟೆಸ್ಟ್ ಪಂದ್ಯವನ್ನು ಆಡುತ್ತದೆ, ಪ್ರತಿ ಆಟದ ಅವಧಿಯನ್ನು ಗೆಲ್ಲಲು ಪ್ರಯತ್ನಿಸುತ್ತದೆ ಆದರೆ ಮುಖ್ಯವಾಗಿ ಮುಂದಿನ ಅವಧಿಯನ್ನೂ ಗೆಲ್ಲಲು ತನ್ನನ್ನು ಆಟದಲ್ಲಿ ಉಳಿಸಿಕೊಳ್ಳುವುದಕ್ಕಾಗಿ ಆಡುತ್ತದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಕೇಂದ್ರ ಬ್ಯಾಂಕ್ ರಾಜಕೀಯ ಸಮಯ ಒತ್ತಡಗಳಿಗೆ ಮತ್ತು ಭವಿಷ್ಯದ ಪ್ರೇರೇಪಣೆಗೆ ನೇರವಾಗಿ ಒಳಪಟ್ಟಿಲ್ಲ; ಚುನಾಯಿತರಿಗಿಂತ ಹೆಚ್ಚಾಗಿ ನಾಮನಿರ್ದೇಶನಗೊಳ್ಳುವ ಕಾರಣದಿಂದ, ಕೇಂದ್ರ ಬ್ಯಾಂಕರ್ ಳು ದೂರದೃಷ್ಟಿಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ, ಇದು ಚುನಾವಣಾ ಅಥವಾ ಯುದ್ಧ ಕಾಲಾ ಅವಧಿಗೆ ಸೀಮಿತವಾಗದೆ, ಸರ್ಕಾರಗಳ ಅವಧಿಗಿಂತಲೂ ಹೆಚ್ಚು ಕಾಲಕ್ಕೆ ಅನ್ವಯಿಸುತ್ತದೆ . ತಮ್ಮ ನೀತಿ ನಿರ್ಧಾರಗಳ ತತ್ಕ್ಷಣದ ಪರಿಣಾಮಗಳ ಮೇಲೆ ಅವರು ಸ್ಪಷ್ಟವಾಗಿ ಗಮನಹರಿಸಬೇಕಾಗಿದ್ದರೂ, ಕೇಂದ್ರೀಯ ಬ್ಯಾಂಕರ್ ಗಳು ಅವರ ಮತ್ತು ಸರ್ಕಾರದ ನೀತಿಗಳ ದೀರ್ಘಕಾಲೀನ ಪರಿಣಾಮಗಳ ಬಗ್ಗೆ ಯೋಚಿಸಿ ಪ್ರಶ್ನೆಯನ್ನು ಕೇಳಿಕೊಳ್ಳಬಹುದು. ವಾಸ್ತವವಾಗಿ, ಕೇಂದ್ರ ಬ್ಯಾಂಕುಗಳು ವ್ಯವಹಾರ ಮತ್ತು ಆರ್ಥಿಕ ಕಾಲಾವಧಿಗಳಲ್ಲಿ ಆರ್ಥಿಕತೆಯನ್ನು ಸ್ಥಿರಗೊಳಿಸಲು ಬದ್ಧವಾಗಿರುತ್ತವೆ. ಆಶ್ಚರ್ಯಕರವಲ್ಲದಂತೆ, ಕೇಂದ್ರ ಬ್ಯಾಂಕ್ ಗಳು ದೀರ್ಘಾವಧಿ ಪರಿಣಾಮಗಳಿಗಾಗಿ ಅಲ್ಪಾವಧಿ ಲಾಭಗಳನ್ನು ತ್ಯಾಗ ಮಾಡುವಂತಹ ಸರಣಿ ಕಠಿಣ ಕ್ರಮಗಳನ್ನು ಕೈಗೊಳ್ಳುವ ಮೂಲಕ ವಿಶ್ವಾಶಾರ್ಹತೆಯನ್ನು ಬೆಳೆಸಿಕೊಳ್ಳುತ್ತದೆ. (2) ಕೇಂದ್ರೀಯ ಬ್ಯಾಂಕ್ ಸರ್ಕಾರದಿಂದ ಪ್ರತ್ಯೇಕವಾಗಿರುವುದು ಏಕೆ ಎಂಬ ವಿವರಣೆಯ ಎರಡನೇ ಭಾಗವು ಕೇಂದ್ರೀಯ ಬ್ಯಾಂಕ್ ನಿರ್ವಹಿಸುವ ಅಥವಾ ಪ್ರಭಾವ ಬೀರುವ ಹೆಚ್ಚಿನವುಗಳ ಅವಲೋಕನೆಯಿಂದ ತಿಳಿಯುತ್ತದೆ. - ಹಣ ರಚನೆ, ಸಾಲದ ರಚನೆ, ಬಾಹ್ಯ ವಲಯ ನಿರ್ವಹಣೆ ಮತ್ತು ಹಣಕಾಸಿನ ಸ್ಥಿರತೆ - ಸಂಭಾವ್ಯ ಮುಂಗಡ ಆರ್ಥಿಕ ಪ್ರಯೋಜನಗಳನ್ನೊಳಗೊಂಡಂತೆ – ಆದರೆ ಬ್ಯಾಕ್-ಲೋಡ್ ವೆಚ್ಚಗಳ ರೂಪದಲ್ಲಿ ಅನುಸರಿಸಬಹುದಾದ "ಟೈಲ್ ರಿಸ್ಕ್" ಸಾಧ್ಯತೆಯೊಂದಿಗೆ ಆರ್ಥಿಕತೆಗೆ ಅನುಕೂಲಕರವಾದ ಪ್ರಯೋಜನಗಳನ್ನು ನೀಡುತ್ತದೆ. ಉದಾಹರಣೆಗೆ, (i) ದೊಡ್ಡ ಪ್ರಮಾಣದ ಹಣದ ಸರಬರಾಜು ಸರ್ಕಾರಿ ಕೊರತೆಗಳನ್ನು ಈಡೇರಿಸಲು ಸಹಾಯ ಮಾಡುವುದನ್ನು ಸೇರಿದಂತೆ ಹಣಕಾಸಿನ ವಹಿವಾಟುಗಳನ್ನು ಸುಲಭಗೊಳಿಸುತ್ತದೆ, ಆದರೆ ಇದು ಆರ್ಥಿಕತೆಯ ಉಷ್ಣತೆ (over-heat)ಗೆ ಕಾರಣವಾಗಬಹುದು ಮತ್ತು ಪ್ರಚೋದಕ (ಹೈಪರ್-) ಹಣದುಬ್ಬರದ ಒತ್ತಡಗಳು ಅಥವಾ ಮುಂದೆ ಹಣಕಾಸಿನ ಕಡಿತದ ಅವಶ್ಯಕತೆ ಯನ್ನು ಉಂಟುಮಾಡಬಲ್ಲ ಪೂರ್ಣ ಪ್ರಮಾಣದ ಬಿಕ್ಕಟ್ಟಿಗೂ ಸಹ ಕಾರಣವಾಗಬಹುದು. (ii) ಬಡ್ಡಿದರಗಳು ಮತ್ತು / ಅಥವಾ ದ್ರವ್ಯತೆ ಅಗತ್ಯತೆಗಳ ಹೆಚ್ಚಿನ ಪ್ರಮಾಣದ ಕಡಿತದಿಂದ ಅತ್ಯಧಿಕ ಕ್ರೆಡಿಟ್ ರಚನೆ, ಆಸ್ತಿ-ಬೆಲೆ ಹಣದುಬ್ಬರ ಮತ್ತು ಅಲ್ಪಾವಧಿಯಲ್ಲಿ ಪ್ರಬಲವಾದ ಆರ್ಥಿಕ ಬೆಳವಣಿಗೆಯಂತೆ ತೋರಿದರೂ, ವಿಪರೀತ ಸಾಲದ ಬೆಳವಣಿಗೆಯು ದುಬಾರಿ ಹೂಡಿಕೆ, ಆಸ್ತಿ-ಬೆಲೆ ಕುಸಿತಗಳು ಮತ್ತು ದೀರ್ಘಕಾಲದ ಆರ್ಥಿಕ ಬಿಕ್ಕಟ್ಟುಗಳಿಗೆ ಕಾರಣವಾಗಬಹುದು. (iii) ದೇಶದ ಆರ್ಥಿಕತೆಯೊಳಗೆ ವಿದೇಶಿ ಬಂಡವಾಳದ ಪ್ರವಾಹದ ಹರಿವುಗಳನ್ನು ಅನುಮತಿಸುವುದರಿಂದ ಸರ್ಕಾರಿ ತುಲನ ಶೀಟ್ ಮತ್ತು ಖಾಸಗೀ ವಲಯದ ಹಣಕಾಸು ಒತ್ತಡಗಳನ್ನು ತಾತ್ಕಾಲಿಕವಾಗಿ ಸರಾಗಗೊಳಿಸಬಹುದಾದರೂ ಭವಿಷ್ಯದಲ್ಲಿ ಈ ಬಂಡವಾಳದ ಹಠಾತ್ ನಿಲುಗಡೆಯು ವಿದೇಶಿ ವಿನಿಮಯ ದರಗಳ ಕುಸಿತವನ್ನು ಪ್ರಚೋದಿಸಬಹುದು ಹಾಗೂ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ಬೀರಬಹುದು. (iv) ಬ್ಯಾಂಕ್ ಸಾಲಗಳನ್ನು ಸ್ವೀಪ್ ಮಾಡುವುದರಿಂ ಮೇಲ್ವಿಚಾರಣಾ ಮತ್ತು ನಿಯಂತ್ರಕ ಮಾನದಂಡಗಳ ರಾಜಿಯ ಮೂಲಕ ಹೊರನೋಟಕ್ಕೆ ಆರ್ಥಿಕ ಸ್ಥಿರತೆ ರಚನೆಯಾದಂತೆ ಕಂಡರೂ, ಭವಿಷ್ಯದಲ್ಲಿ ಇದು ದುರ್ಬಲವಾಗಿ ಜೋಡಿಸಿಟ್ಟ ಕಾರ್ಡ್ ಗಳು ರಾಶಿಯಾಗಿ ಬೀಳುವಂತೆ ಹೆಚ್ಚಿನ ತೆರಿಗೆಗಳು ಮತ್ತು ಸಂಭವನೀಯ ಉತ್ಪಾದನೆಯ ನಷ್ಟಕ್ಕೆ ಕಾರಣವಾಗಬಹುದು. ಪ್ರತಿಬಾರಿಯಲ್ಲದಿದ್ದರೂ, ಕೆಲವೊಮ್ಮೆ ಸ್ಥಿರ ಬೆಳವಣಿಗೆಗಾಗಿ ಸರ್ಕಾರವು ಮುಂಗಡ ಹಣಕಾಸು ವೆಚ್ಚಗಳ ಅಂದಾಜು ನೀಡುವ ಮೂಲಕ ಹಸ್ತಕ್ಷೇಪದ ಅವಶ್ಯಕತೆ ಇದೆ. ಆದರೆ ಇದರಿಂದ ಜನಪ್ರಿಯ ಖರ್ಚುವೆಚ್ಚಗಳನ್ನು ಕೈಬಿಡಬೇಕಾಗುತ್ತದೆ ಅಥವಾ ಅಧಿಕಾರದಲ್ಲಿರುವವರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಪರಿಣಾಮವಾಗಿ, ಇದು ಕೇಂದ್ರ ಬ್ಯಾಂಕ್ ಗಳು ಸರ್ಕಾರದ ನಿರ್ದೇಶನಗಳೊಂದಿಗೆ ಕಾರ್ಯತಂತ್ರ ರೂಪಿಸುವುದು ಅಲ್ಪಾವಧಿಯ ಲಾಭಗಳನ್ನು ಉತ್ಪಾದಿಸುವ ಹಾಗೆ ತೋರಿದರೂ, ಇದು ಆನಂತರ ಆರ್ಥಿಕತೆಗೆ ಮಾರಕವಾಗಬಹುದು. ಆರ್ಥಿಕತೆಯನ್ನು ಈ ರೀತಿಯ ಪರಿಣಾಮಗಳಿಂದ ರಕ್ಷಿಸಲು ಕೇಂದ್ರ ಬ್ಯಾಂಕನ್ನು ಸರ್ಕಾರದ ಕಾರ್ಯನಿರ್ವಾಹಕತೆಯಿಂದ ಸುರಕ್ಷಿತವಾಗಿ ದೂರದಲ್ಲಿರುವಂತೆ ವಿನ್ಯಾಸಗೊಳಿಸಲಾಗಿದೆ. ಕೇಂದ್ರ ಬ್ಯಾಂಕ್ ನ ಅಪರಾಧೀನತೆಯ ಕಡೆಗಣಿಸುವಿಕೆ ಕೇಂದ್ರ ಬ್ಯಾಂಕ್ ಈಗ ಸರ್ಕಾರದಿಂದ ಪ್ರತ್ಯೇಕವಾಗಿ ಸಂಘಟಿತವಾಗಿದ್ದರೂ, ಸರ್ಕಾರವು ಇಚ್ಛಿಸಿದರೆ, ತನ್ನ ಅಲ್ಪಾವಧಿ ಲಾಭಕ್ಕಾಗಿ ಹಲವು ಕಾರ್ಯವಿಧಾನಗಳ ಮೂಲಕ ಇದರ ನಿರ್ಣಯದ ಪರಿಣಾಮಕಾರಿ ದಿಗಂತಗಳನ್ನು ಕುಗ್ಗಿಸಬಹುದು. ಮುಖ್ಯ ಕೇಂದ್ರ ಬ್ಯಾಂಕ್ ಸ್ಥಾನಗಳಾದ ಗವರ್ನರ್, ಮತ್ತು ಹೆಚ್ಚು ಸಾಮಾನ್ಯವಾಗಿ, ಉನ್ನತ ಆಡಳಿತ ಸ್ಥಾನಗಳಿಗೆ ತಂತ್ರಜ್ಞರನ್ನು ಹೊರತುಪಡಿಸಿ ಸರ್ಕಾರದ (ಅಥವಾ ಸರ್ಕಾರಿ-ಸಂಯೋಜಿತ) ಅಧಿಕಾರಿಗಳನ್ನು ನೇಮಕ ಮಾಡುವುದು
ಅಂತಹ ಪ್ರಯತ್ನಗಳು ಯಶಸ್ವಿಯಾಗಿದ್ದರೆ, ಬೃಹದಾರ್ಥಿಕ ಸ್ಥಿರತೆ ಯ ಬದಲಿಗೆ ಆರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿ ಸಮೀಪಿಸುವ ಹಾಗೆ ಪ್ರೇರೇಪಿಸುವುದು. ಆದ್ದರಿಂದ, ಕೇಂದ್ರೀಯ ಬ್ಯಾಂಕ್ ತನ್ನ ಸ್ವಾತಂತ್ರತೆಯನ್ನು ಕಾಪಾಡಿಕೊಳ್ಳುವುದು ಆರ್ಥಿಕತೆಯ ಅಂತರ್ಗತ ಸುಧಾರಣೆಗೆ ಯಾವ ರೀತಿ ದಾರಿಯಾಗುತ್ತದೆ ಎಂಬುದಕ್ಕೆ ಹಲವಾರು ಕಾರಣಗಳಿವೆ; ಮತ್ತು ಇದಕ್ಕೆ ಬದಲಾಗಿ, ಅಂತಹ ಸ್ವಾತಂತ್ರ್ಯವನ್ನು ಕಡೆಗಣಿಸುವುದು ತಿರೋಗಾಮೆಯಾಗಿದೆ:
ಹಾಗಾಗಿ, ಸರ್ಕಾರ ಮತ್ತು ಕೇಂದ್ರ ಬ್ಯಾಂಕ್ ನ ನಿರ್ಣಯ ಕೈಗೊಳ್ಳುವ ವಿಷಯದಲ್ಲಿ ನಾನು ಸೂಚಿಸಿದಂತಹ ವಿಭಿನ್ನತೆಯ ಮೂಲಕ ಕೇಂದ್ರ ಬ್ಯಾಂಕ್ ತನ್ನ ಕಾರ್ಯ ಚಟುವಟಿಕೆಗಳು ಸರ್ಕಾರದಿಂದ ಬೇರ್ಪಟ್ಟದ್ದು ಎಂಬುದು ಎರಡೂ ಪಕ್ಷಗಳಿಂದ ಚೆನ್ನಾಗಿ ಅರ್ಥಮಾಡಿಕೊಂಡು ಮತ್ತು ಚೆನ್ನಾಗಿ ಅಂಗೀಕರಿಸಲ್ಪಟ್ಟದ್ದರಿಂದ ಇದು ಯಾವುದೇ ಕಾರ್ಯಕಾರಿ ಅಸಮಂಜಸತೆಗೆ ಕಾರಣವಾಗುವುದಿಲ್ಲ. ಕೇಂದ್ರ ಬ್ಯಾಂಕ್ ಸಹಜವಾಗಿ ತಪ್ಪು ಮಾಡಬಲ್ಲದು ಹಾಗೂ ಸಂಸದೀಯ ಪರಿಶೀಲನೆ ಮತ್ತು ಪಾರದರ್ಶಕತೆ ನಿಯಮಗಳ ಅನುಗುಣವಾಗಿ ಸಾಮಾನ್ಯವಾಗಿ ಸರ್ಕಾರವು ಸಾರ್ವಜನಿಕವಾಗಿ ಜವಾಬ್ದಾರರಾಗಿರುತ್ತದೆ.ಈ ರೀತಿಯಾಗಿ ಸ್ವಾತಂತ್ರ್ಯತೆ, ಪಾರದರ್ಶಕತೆ ಮತ್ತು ಸಾರ್ವಜನಿಕ ಹೊಣೆಗಾರಿಕೆ ಸಾಂಸ್ಥಿಕ ವ್ಯವಸ್ಥೆ ಸಮತೋಲನವಾಗುತ್ತದೆ ಮತ್ತು ಇದು ಕೇಂದ್ರ ಬ್ಯಾಂಕ್ ನ ಸ್ವಾಯತ್ತತೆಯನ್ನು ಬಲಿಷ್ಟಗೊಳಿಸುತ್ತದೆ. ಆದರೆ ಕೇಂದ್ರೀಯ ಬ್ಯಾಂಕ್ ಕಾರ್ಯಾಚರಣೆಯಲ್ಲಿ ಸರ್ಕಾರದ ನೇರ ಹಸ್ತಕ್ಷೇಪ ಅದರ ಕಾರ್ಯಕಾರಿ ಸ್ವಾಯತ್ತತೆಯನ್ನು ಇಲ್ಲದಂತೆ ಮಾಡುತ್ತದೆ "Kiss of Death" - ಮಾರ್ಕೆಟ್ ಕ್ರೋಧವನ್ನು ಉಂಟುಮಾಡುವುದು ದೂರದೃಷ್ಟಿಯುಳ್ಳ ಸರ್ಕಾರದ ಮುಖಂಡರು ಬೃಹದಾರ್ಥಿಕ ಸ್ಥಿರತೆ ಸಲುವಾದ ಬಂಡವಾಳದಿಂದಾಗುವ ಪ್ರಯೋಜನದ ಪ್ರಾಮುಖ್ಯತೆಯ ಬಗ್ಗೆ ಮತದಾರರಿಗೆ ಮನವೊಲಿಸಲು ಸಾಧ್ಯವಾಗಬಹುದು. ಉದಾಹರಣೆಗೆ, ಕೇಂದ್ರ ಬ್ಯಾಂಕ್ ನ ನಿರ್ಣಯ ಪ್ರಕ್ರಿಯೆ ಮತ್ತು ಮೂಲ ಕಾರ್ಯಾಚಟುವಟಿಕೆಗಳಲ್ಲಿ ಸ್ವಾಯತ್ತತೆ ಅಂಗೀಕರಿಸುವ ಪರಿಣಾಮದಿಂದಾಗುವ ದೀರ್ಘಕಾಲೀನ ಆರ್ಥಿಕ ವಲಯದ ಫಲಿತಾಂಶಗಳಿಗೆ ತಾನು ಖ್ಯಾತಿ ಪಡೆಯಬಹುದು. ಆರ್ಥಿಕ ಸಂಪನ್ನತೆಗೆ ಸ್ವತಂತ್ರ ಕೇಂದ್ರ ಬ್ಯಾಂಕ್ ನ ದೃಷ್ಟಿಕೋನದ ಅನುಪಸ್ಥಿತಿಯಲ್ಲಿ ದುರದೃಷ್ಟಕರ ಅಪಘಾತಗಳು ಉಂಟಾಗಬಹುದು. ಈ ಸಂದರ್ಭದಲ್ಲಿ ಕೇಂದ್ರ ಬ್ಯಾಂಕ್ ತನ್ನ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಲು ಬಲವಂತವಾಗಿ ಪ್ರಯತಿಣಬೇಕಾಗುತದೆ. ಈ ಬೆಳವಣಿಗೆಯನ್ನು ಮಾರುಕಟ್ಟೆಗಳು ಸೂಕ್ಷ್ಮವಾಗಿ ಗಮನಿಸುತ್ತಿರುತ್ತವೆ ಮತ್ತು ಅನಿಶ್ಚಿತತೆ ಬೆಳೆದು, ಕೇಂದ್ರ ಬ್ಯಾಂಕ್ ನ ವಿಶ್ವಾಸ ಕುಗ್ಗುತ್ತಿಂದ್ದಂತೆಯೇ ಮಾರುಕಟ್ಟೆ ಬಾಂಡ್ ನ ಇಳುವರಿ ಕುಸಿಯುತ್ತದೆ ಮತ್ತು ವಿದೇಶಿ ವಿನಿಮಯ ಬೆಲೆಗಳ ಮೇಲೆ ಪರಿಣಾಮ ಬೀರುತ್ತದೆ. ಇದರ ಬಗ್ಗೆ ವಿವರಿಸುವುದಾದರೆ, ಆಧುನಿಕ ಅರ್ಥವ್ಯವಸ್ಥೆಗಳು ಹೆಚ್ಚಾಗಿ ಸ್ವಾಯತ್ತವಾಗಿಲ್ಲ ಏಕೆಂದರೆ ಅವುಗಳು ತನ್ನ ಹೂಡಿಕೆಗಳಿಗೆ ಬಂಡವಾಳ ಮಾರುಕಟ್ಟೆಗಳ ಮೇಲೆ ಅವಲಂಬಿತವಾಗಿವೆ. ದೊಡ್ಡ ಪ್ರಮಾಣದ ಸಾರ್ವಭೌಮತ್ವ (ಮತ್ತು ಅರೆ-ಸಾರ್ವಭೌಮತ್ವ) ಗಳಿಗೆ ಇದು ಅನ್ವಯಿಸುತ್ತದೆ. . ಹಣದುಬ್ಬರ ಅಥವಾ ಹಣಕಾಸಿನ ಅಸ್ಥಿರತೆ ಹೆಚ್ಚಳದಂತ ದೀರ್ಘಾವಧಿಯ ಅಪಾಯಗಳು ಹೆಚ್ಚಾದಂತೆ, ಮಾರುಕಟ್ಟೆಗಳಿಂದ ಸರ್ಕಾರದ ಸಾಲದ ಮರುದಾರಣೆ ಸಂಭವಿಸುತ್ತದೆ ಮತ್ತು ಸಂಭಾವ್ಯವಾಗಿ ಸರ್ಕಾರದ ಹಣಕಾಸಿನ ನೆರವನ್ನು ತಪ್ಪುವಂತೆ ಮಾಡುತ್ತದೆ. ಇದು ವಿದೇಶಿ ವಿನಿಮಯ ಮತ್ತು ವಿದೇಶಿ ಹೂಡಿಕೆಗಳಿಗೆ ಸಂಬಂಧಿಸಿದಂತೆ ಇತರ ಮಾರುಕಟ್ಟೆಗಳಿಗೆ ತಕ್ಷಣದ ಪರಿಣಾಮ ಬೀರುತ್ತದೆ ಮತ್ತು ಬಾಹ್ಯ ಆರ್ಥಿಕ ಸ್ಥಿರತೆಗೆ ಸಂಭಾವ್ಯ ನಷ್ಟವನ್ನುಂಟುಮಾಡುತ್ತದೆ. ಆದ್ದರಿಂದ, ಈ ಮೂರನೇ ಆಟಗಾರನಾದ ಮಾರುಕಟ್ಟೆಯ ಉಪಸ್ಥಿತಿ ಸರ್ಕಾರ ಮತ್ತು ಕೇಂದ್ರ ಬ್ಯಾಂಕ್ (ಹೆಚ್ಚು ಸಾಮಾನ್ಯವಾಗಿ, ನಿಯಂತ್ರಕ ಸಂಸ್ಥೆಗಳು) ನಡುವಿನ ಪ್ರಮುಖ ಪತ್ಯಾದಾನ ಪ್ರತಿಕ್ರಿಯೆ ವ್ಯವಸ್ಥೆಯಾಗಿದೆ. ಮಾರುಕಟ್ಟೆಯ ವ್ಯವಹಾರವು ಸರ್ಕಾರವು ಕೇಂದ್ರ ಬ್ಯಾಂಕಿನ ಸ್ವಾತಂತ್ರ್ಯವನ್ನು ದುರ್ಬಲಗೊಳಿಸದಿರುವ ಹಾಗೆ ನೋಡಿಕೊಂಡು ಶಿಸ್ತುಬದ್ಧವಾಗಿಟ್ಟಿರಬಹುದು ಮತ್ತು ಸರ್ಕಾರವು ಅದರ ಉಲ್ಲಂಘನೆಗಳಿಗೆ ಬೆಲೆತೆತ್ತುವ ಹಾಗೆ ಮಾಡಬಹುದು. ಕುತೂಹಲಕಾರಿಯಾದ ವಿಷಯವೆಂದರೆ ಕೇಂದ್ರ ಬ್ಯಾಂಕ್ ಗಳು ಸರ್ಕಾರದ ಒತ್ತಡದಲ್ಲಿದ್ದಾಗ ಜವಾಬ್ದಾರಿ ಮತ್ತು ಸ್ವತಂತ್ರವಾಗಿರಲು ಸಹ ಸಹಾಯಕಾರಿಯಾಗಿರುತ್ತದೆ. ನನ್ನ ಆರಂಭಿಕ ಹೇಳಿಕೆಯಲ್ಲಿನ 2010 ರ ಅರ್ಜೆಂಟೀನಾದ ಮಾರುಕಟ್ಟೆ ದಂಗೆ ಮತ್ತು ಕಟ್ಟುಪಾಡಿನ ವಿಚಾರದ ಹೊರತಾಗಿಯೂ ಆ ವರ್ಷದ ಕರೆನ್ಸಿ ಕುಸಿತ ಮತ್ತು ಏರುಮುಖದ ಮಾರುಕಟ್ಟೆ ಸರ್ಕಾರಿ ಬಾಂಡುಗಳು ವೇಗವರ್ಧಿತವಾಗಿರುವುದನ್ನು ಕೇಂದ್ರ ಬ್ಯಾಂಕಿನ ವಿತ್ತೀಯ ನೀತಿಯ ಮೇಲಿನ ಸರ್ಕಾರದ ಪ್ರಭಾವದ ಗ್ರಹಿಕೆ ಎಂಬುದನ್ನು ಗಮನಿಸಬಹುದು. ಇದರೊಂದಿಗೆ ಕೇಂದ್ರೀಯ ಬ್ಯಾಂಕಿನ ನಿರ್ಧಾರ-ನಿರ್ಣಯವನ್ನು ನಿಯಂತ್ರಿಸುವ ಸರ್ಕಾರದ ತನ್ನ ಹಂಬಲವನ್ನು ಹೆಚ್ಚಾಗಿ ಸಾರ್ವಜನಿಕವಾಗಿ ತಿಳಿಸದಿರುವುದೂ ಕಾರಣವಾಗಿದೆ. ವಾಸ್ತವವಾಗಿ, ಮಾರುಕಟ್ಟೆ ಖಂಡನೆ ಏರುಮುಖದ ಮಾರುಕಟ್ಟೆಗಳಿಗೆ ಮಾತ್ರ ಸೀಮಿತವಾಗಿರಬಾರದು. ವಿಶ್ವದ ಅತಿ ದೊಡ್ಡ ಸುರಕ್ಷಿತ ಆರ್ಥಿಕ ವ್ಯವಸ್ಥೆಯಲ್ಲಿ ಸರ್ಕಾರದ ವಿತ್ತೀಯ ಬಿಗಿಹಿಡಿತದ ಬಗ್ಗೆ ಸಾರ್ವಜನಿಕರು ಅಸಮಾಧಾನ , ಹಾಗೂ ಆಶ್ಚರ್ಯ ಪಡಿಸಿದ್ದಾರೆ ಮತ್ತು ಹಣದುಬ್ಬರ ಏರುತ್ತಿರುವ ಮತ್ತು ಹಣಕಾಸಿನ ಕೊರತೆಯ ಸಮಯದಲ್ಲಿ ಮೀಸಲು ನಿಧಿಯನ್ನು ಸರಕಾರವು ತನ್ನದೇ ಎಂದು ಭಾವಿಸಲಾಗದು ಎಂಬುದು ಹೂಡಿಕೆದಾರರ ಮನಸ್ಸಿನಲ್ಲಿ ಮತ್ತೊಮ್ಮೆ ಬೆಳೆದಿದೆ. (A debate about central-bank independence is overdue, The Economist, Oct 20, 2018). ಬರ್ಕ್ಲಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಮತ್ತು ರಾಜಕೀಯ ವಿಜ್ಞಾನದ ಪ್ರಾಧ್ಯಾಪಕರಾದ ಬ್ಯಾರಿ ಐಚೆಂಗ್ರೀನ್, ಅವರ ಇತ್ತೀಚಿನ ಮಾರುಕಟ್ಟೆಯ ಬಗೆಗಿನ ತುಣುಕು (2018) ನಲ್ಲಿ, ಈ ವಿಮರ್ಶಾತ್ಮಕ ಪ್ರತಿಕ್ರಿಯೆ ಪಾತ್ರವನ್ನು ಅದ್ಭುತವಾಗಿ ಆವರಿಸುತ್ತದೆ: "ತಾವು ನೇಮಿಸಿಕೊಂಡಿರುವ ಆರ್ಥಿಕ ಪರಿಣಿತರಿಗೆ ವಿತ್ತೀಯ ನೀತಿ ನಿರ್ಧಾರಗಳನ್ನು ಕೈಗೊಳ್ಳಲು ಅಧಿಕಾರ ನೀಡಲು ದೇಶಗಳು ನಿರ್ಧರಿಸುವುದಕ್ಕೆ ಕಾರಣಗಳೆಂದರೆ. ಅವರು ದೂರದೃಷ್ಟಿಯುಳ್ಳವರಾಗಿರುತ್ತಾರೆ. ಅವರು ಅಲ್ಪಾವಧಿಯ ಲಾಭಕ್ಕಾಗಿ ವಿತ್ತೀಯ ಸ್ಥಿತಿಯನ್ನು ದುರುಪಯೋಗ ಪಡಿಸಿಕೊಳ್ಳುವುದಿಲ್ಲ. ದೀರ್ಘಾವಧಿಯ ಆರ್ಥಿಕ ಸ್ಥಿರತೆಯನ್ನು ಕಾಪಾಡಿಕೊಳ್ಳುವುದು ಆರ್ಥಿಕ ಕಾರ್ಯ ನಿರ್ವಹಣೆಯ ಮೇಲೆ ಗುಣಾತ್ಮಕವಾಗಿರುತ್ತದೆ ಎಂಬುದನ್ನು ಇತಿಹಾಸದಲ್ಲಿ ಕಾಣಬಹುದು. ಇದರ ಆಧಾರದ ಮೇಲೆಯೇ ಚುನಾಯಿತ ನಾಯಕರು ಸರಿಯೋ ತಪ್ಪೋ ಎಂಬುದನ್ನು ತೀರ್ಮಾನಿಸಲಾಗುತ್ತದೆ. ಚಿಂತನಶೀಲ ರಾಜಕಾರಣಿಗಳು ಇದನ್ನು ಅರ್ಥಮಾಡಿಕೊಳ್ಳುತ್ತಾರೆ. ಆದ್ದರಿಂದ ಅವರು ಕೇಂದ್ರ ಬ್ಯಾಂಕ್ ನ ಸ್ವಾತಂತ್ರ್ಯವನ್ನು ಬೆಂಬಲಿಸುತ್ತಾರೆ ಮತ್ತು ಅದರ ನಿರ್ಧಾರಗಳನ್ನು ಗೌರವಿಸುತ್ತಾರೆ. ದುರದೃಷ್ಟವಶಾತ್, ಎಲ್ಲಾ ರಾಜಕಾರಣಿಗಳು ಈ ರೀತಿ ಚಿಂತಿಸುವುದಿಲ್ಲ. ದೀರ್ಘಾವಧಿಯ ಲಾಭಕ್ಕಾಗಿ ಕಾಯಲು ಕೆಲವರಿಗೆ ತಾಳ್ಮೆ ಇರುವುದಿಲ್ಲ. ತಾವು ನೇಮಕ ಮಾಡಿದವರು ತಮ್ಮ ಇಚ್ಛೆಗೆ ಬಾಗಲು ನಿರಾಕರಿಸಿದಾಗ ಹಲವರಿಗೆ ಸಂತೋಷವಾಗುವುದಿಲ್ಲ. ಅವರು ಮಾರುಕಟ್ಟೆಯ ಬಗ್ಗೆ ಗಮನ ಹರಿಸುತ್ತಾರೆಯೇ ಎಂಬ ಪ್ರಶ್ನೆ ಮೂಡುತ್ತದೆ. ಬ್ಯಾರಿ ಐಚೆನ್ಗ್ರೀನ್ ರವರು ಸದಾ ಗಮನಿಸಿತ್ತುರುವ ವಿಷಯವೇನೆಂದರೆ, ಸರ್ಕಾರಗಳು ಮಾರುಕಟ್ಟೆಯ ಬಗ್ಗೆ ಗಮನ ಹರಿಸುವುದಾದರೆ, ಕೇಂದ್ರ ಬ್ಯಾಂಕ್ ನ ಸ್ವಾತಂತ್ರತೆಯು ತನ್ನ ಬಲವೆಂದು ತಿಳಿಯುತ್ತದೆ. ಮತ್ತು ಕೇಂದ್ರ ಬ್ಯಾಂಕು ಸರ್ಕಾರದ ನೀತಿಗಳಿಂದ ಆಗಬಹುದಾದ ದೀರ್ಘಕಾಲೀನ ಪ್ರತಿಕೂಲ ಪರಿಣಾಮಗಳನ್ನು ತಿಳಿಸುವ ನೈಜ ಸ್ನೇಹಿತನೆಂದು ತಿಳಿಯುತ್ತದೆ. ಇದು ಭಾರತೀಯ ರಿಸರ್ವ್ ಬ್ಯಾಂಕಿಗೆ ಇದು ಹೇಗೆ ಅನ್ವಯಿಸುತ್ತದೆ ಎಂಬುದನ್ನು ನೋಡೋಣ: ದಿವಂಗತ ದೀನಾ ಖಟ್ಖಟೆ ರವರು ತಮ್ಮ ಅಧ್ಯಯನದಲ್ಲಿ ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿ ಪಾಂಡಿತ್ಯಪೂರ್ಣವಾದ ಮೌಲ್ಯಮಾಪನವನ್ನು ಒದಗಿಸಿದ್ದಾರೆ: A Study in the Separation and Attrition of Powers (2005). ಕೆಳಗಿನ ಕೆಲವು ಚರ್ಚೆಗಳು ಅವರ ಮೌಲ್ಯಮಾಪನದಿಂದ ಹೆಚ್ಚು ಸೆಳೆಯುತ್ತವೆ ಮತ್ತು ನಂತರದ ಬೆಳವಣಿಗೆಗಳಿಗನುಗುಣವಾಗಿ ನವೀಕರಿಸಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ನ ಮಾಜಿ ಗವರ್ನರ್ಗಳಾದ ಡಾ. ಸಿ. ರಂಗರಾಜನ್ (1993) ಮತ್ತು ಡಾ. ವೈ. ವಿ. ರೆಡ್ಡಿ (2001, 2007) ಉಪನ್ಯಾಸಗಳು ಭಾರತೀಯ ಬ್ಯಾಂಕಿನ ಸ್ವಾಯತ್ತತೆ ಮತ್ತು ಸ್ವಾತಂತ್ರ್ಯ, ಇತ್ಯಾದಿಗಳ ಬಗ್ಗೆ ಅತ್ಯುತ್ತಮ ಚರ್ಚೆಗಳನ್ನು ಒಳಗೊಂಡಿವೆ. ಕೆಳಗೆ ಹೇಳಿರುವಂತೆ, ಇತರ ಗವರ್ನರ್ಗಳು ಮತ್ತು ಉಪ ಗವರ್ನರ್ಗಳು ತಮ್ಮ ಅವಧಿಗಳಲ್ಲಿ ಅಂತಹದ್ದೇ ಸಿದ್ಧಾಂತವನ್ನು ಅಳವಡಿಸಿಕೊಂಡು ಬಂದಿದ್ದಾರೆ. ಅವುಗಳಲ್ಲಿ ಕೆಲವರಿಗೆ, ರಿಸರ್ವ್ ಬ್ಯಾಂಕ್ ಸ್ವಾತಂತ್ರ್ಯವು ಸ್ಪಷ್ಟವಾಗಿಲ್ಲವಾದರೂ ಸಹ, ಸರ್ಕಾರಗಳು ಅಂತಿಮವಾಗಿ ಅದನ್ನು ಬೆಂಬಲಿಸುವ ಬುದ್ಧಿವಂತಿಕೆಯನ್ನು ತೋರಿವೆ; ಆದಾಗ್ಯೂ, ಇತರರ ದೃಷ್ಟಿಯಲ್ಲಿ, ರಿಸರ್ವ್ ಬ್ಯಾಂಕ್ ನ ಸ್ವಾತಂತ್ರ್ಯವು ಪ್ರಗತಿಯಲ್ಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ ನ ಸ್ವಾತಂತ್ರ್ಯವನ್ನು ಮರುಸ್ಥಾಪಿಸುವಲ್ಲಿ ಪ್ರಗತಿಶೀಲ ವಿಕಸನ ರಿಸರ್ವ್ ಬ್ಯಾಂಕ್ ತನ್ನ ಹಲವಾರು ಪ್ರಮುಖ ಅಧಿಕಾರಗಳನ್ನು 1935 ರ ರಿಸರ್ವ್ ಬ್ಯಾಂಕ್ ಕಾಯ್ದೆ, 1949 ಮತ್ತು ಬ್ಯಾಂಕಿಂಗ್ ನಿಯಂತ್ರಣಾ ಕಾಯ್ದೆಯ ಮೂಲಕ ಪಡೆದಿದೆಯಾದರೂ, ಈ ಅಧಿಕಾರವನ್ನು ಪರಿಣಾಮಕಾರಿಯಾಗಿ ಚಲಾಯಿಸಲು ಸಾಧ್ಯವೇ ಎಂದು ಅಧಿಕಾರದಲ್ಲಿರುವ ಸರ್ಕಾರಗಳು ಸತತವಾಗಿ ಪ್ರಶ್ನಿಸುತ್ತಾ ಬಂದಿವೆ. . (1) ಹಣಕಾಸು ನೀತಿ: ಇತರ ಸಮಕಾಲೀನ ಕೇಂದ್ರೀಯ ಬ್ಯಾಂಕು ಗಳಂತೆ ರಿಸರ್ವ್ ಬ್ಯಾಂಕ್ ಸಹ, ಸ್ವಾತಂತ್ರ್ಯಾನಂತರದ ನಂತರದ ಸಮಾಜವಾದಿ ಯೋಜನಾ ಕಾರ್ಯನೀತಿಗಳಿಗೆ ತ್ವರಿತವಾಗಿ ಕಟ್ಟುಬಿದ್ದಿತು, ಹಣದ ಮೇಲಿನ ಬಡ್ಡಿಯ ದರವನ್ನು ನಿಗಧಿಪಡಿಸುವುದು ಮಾತ್ರವಲ್ಲದೇ ವಿವಿಧ ವಲಯಗಳಿಗೆ ನೈಜ ಆರ್ಥಿಕತೆಗೆ ಸಾಲ ಹಂಚಿಕೆ ಮಾಡುವ ಕೆಲಸದಲ್ಲಿ ನಿರತವಾಯಿತು. ವಿತ್ತೀಯ ನೀತಿಯು 1990 ರ ಬಡ್ಡಿ ದರದ ಮೇಲಿನ ಅನಿಯಂತ್ರಣದ ನಂತರ ವಿತ್ತೀಯ ನೀತಿಯು ಹೆಚ್ಚಿನ ಆಧುನಿಕ ಆಯಾಮ ಪಡೆಯಿತು. ಮೊದಲನೆಯದಾಗಿ ಬಡ್ಡಿದರಗಳನ್ನು ನಿಗಧಿಪಡಿಸಲು "ಬಹು ಸೂಚಕಗಳ" ವಿಧಾನಗಳಿತ್ತು. ವಿತ್ತೀಯ ನೀತಿಗೆ ಬಹಳಷ್ಟು ಉದ್ದೇಶಗಳಿರುವುದು ಟಿಂಬರ್ಗನ್ ನ “ಒಂದು ಉದ್ದೇಶ, ಒಂದು ನೀತಿ” ತತ್ವವನ್ನು ಉಲಂಘಿಸುತ್ತದೆ. ಬಡ್ಡಿ ದರದ ನಿಗಧಿಪಡಿಸುವಿಕೆಯು ಯಾವುದೇ ಸಮಯದಲ್ಲಿ ಏನನ್ನು ಸಾಧಿಸಲು ಪ್ರಯತ್ನಿಸುತ್ತಿದೆ ಮತ್ತು ಅದರ ಹಿಂದಿನ ಉದ್ದೇಶವೇನು ಎಂಬುದನ್ನು ಅರ್ಥ ಮಾಡಿಕೊಳಲು ಅಥವಾ ತಿಳಿಸಲು ಕಷ್ಟವಾಗುತ್ತದೆ. ಮುಖ್ಯವಾಗಿ, ಈ ವಿಧಾನವು ಹೆಚ್ಚು ನಿಯಂತ್ರಣಾ ವಿವೇಚನೆಗೆ ಎಡುವು ಮಾಡಿಕೊಟ್ಟಿತು. ಎರಡಂಕಿ ಹಣದುಬ್ಬರದ ಹಲವು ಪ್ರಕರಣಗಳ ನಂತರ ಸಪ್ಟೆಂಬರ್ 2013 ರಲ್ಲಿ ಗವರ್ನರ್ ಆಗಿದ್ದ ಶ್ರೀ. ರಘುರಾಮ್ ಜಿ ರಾಜನ್ ರವರು ಹಣದುಬ್ಬರದ ಮೇಲೆ ಸಮರವನ್ನು ಸಾರಿದರು. ವಿತ್ತೀಯ ನೀತಿ ಚೌಕಟ್ಟನ್ನು ಪರಿಷ್ಕರಿಸಿ, ಪುಷ್ಟಿಗೊಳಿಸುವ ನಿಟ್ಟಿನಲ್ಲಿ 2014 ರಲ್ಲಿ ಉರ್ಜಿತ್ ಪಟೇಲ್ ಸಮಿತಿಯ ವರದಿಯನ್ನು ನೀಡಿಡ್ತು. ಹಾಗೂ ಅಂತಿಮವಾಗಿ 2016 ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಕಾಯ್ದೆಯನ್ನು ಪರಿಷ್ಕರಿಸಲಾಗಿ ವಿತ್ತೀಯ ನೀತಿ ಸಮಿತಿ ಯನ್ನು ರಚಿಸಲಾಯಿತು. ವಿ.ನೀ. ಸ ಯು ಮತ ಚಲಾಯಿಸುವ ಹಕ್ಕನ್ನು ಕಾಯ್ದಿರಿಸಿಕೊಂಡಿರುವ ಗವರ್ನರ್ ಸೇರಿ ಮೂರು ಆರ್‌ಬಿಐ ನ ಸದಸ್ಯರನ್ನು ಮತ್ತು ಮೂರು ಹೊರಗಿನ ಸದಸ್ಯರನ್ನು ಒಳಗೊಂಡಿರುತ್ತದೆ. ವಿ.ನೀ. ಸ ಗೆ ವಿಧಾಯಕವಾಗಿ ಪ್ರತ್ಯೇಕವಾಗಿ ಬೆಳವಣಿಗೆಗೆ ಗಮನ ಹರಿಸಿ ಶೇ. 4% ರ (ಗ್ರಾಹಕ ಬೆಲೆ ಸೂಚ್ಯಂಕ ಸಿಪಿಐ) ಮಾಧ್ಯಮ ಅವಧಿ ಹಣದುಬ್ಬರ ಕಾಯ್ದುಕೊಳ್ಳುವ ಗುರಿಯನ್ನು ನೀಡಲಾಗಿದೆ. ಈ ಸಮಿತಿಯ ಸಮಿತಿ ಸದಸ್ಯರ ವೈಯಕ್ತಿಕ ನಿರ್ಧಾರವನ್ನು ಸಂಕ್ಷಿಪ್ತ ದ್ವಿ ವಾರ್ಷಿಕ ವರದಿಯನ್ನು ನೀಡಬೇಕು. ಒಂದು ವೇಳೆ ಹಣದುಬ್ಬರ ಗುರಿಯಿಂದ ಶೇ +/-2% ಕಿಂತ ಮೂರು ತ್ರೈಮಾಸಿಕ ಕಾಲಾವಧಿಯಲ್ಲಿ ಉಲ್ಲಂಘನೆಯಾದಲ್ಲಿ ಸರ್ಕಾರಕ್ಕೆ ಲಿಖಿತ ವರದಿ ಸಲ್ಲಿಸಬೇಕು. (2) ಸಾಲ ನಿರ್ವಹಣೆ: ಸ್ವಾತಂತ್ರ್ಯಾ ನಂತರ ಹಲವು ದಶಕಗಳವರೆಗೆ ಭಾರತೀಯ ರಿಸರ್ವ್ ಬ್ಯಾಂಕ್, ಭಾರತ ಸರ್ಕಾರದ ಹಣಕಾಸಿನ ಕೊರತೆಯನ್ನು ಭರಿಸಲು ಅಲ್ಪಾವಧಿ ಟ್ರೆಷರಿ ಬಿಲ್ ಗಳ ನೀಡುವಿಕೆಯಲ್ಲಿ ಭಾಗವಹಿಸಿತು. ಹಾಗೂ ಸರ್ಕಾರಿ ಬಾಂಡುಗಳ ಇಳುವರಿಯನ್ನು ನಿರ್ವಹಿಸುವುದಕ್ಕಾಗಿ ತಾನು ಮುಕ್ತ ಮಾರುಕಟ್ಟೆ ಕಾರ್ಯಾಚರಣೆ (OMO) ಗೆ ಸಜ್ಜಾಗಿರುವುದಾಗಿ ಸಾರ್ವಜನಿಕವಾಗಿ ಅಂಗೀಕರಿಸಿತು. ಕೇಂದ್ರೀಯ ಬ್ಯಾಂಕ್ ನ ತುಲನ ಶೀಟ್ ತೆರಿಗೆ ರಶೀದಿಗಳಂತೆ ಯಾವಾಗಲೂ ಸಂಪನ್ಮೂಲದ ರೂಪದಲ್ಲಿ ಲಭ್ಯವಿರುವುದು ಅಧಿಕ ಸರ್ಕಾರಿ ಖರ್ಚುಗಳನ್ನು ಹಣಗಳಿಸಲು ಸಿದ್ಧವಾಗಿದೆ ಎಂದು ಇದು ಸೂಚಿಸುತ್ತದೆ. ಅಂತಿಮವಾಗಿ, ಸರ್ಕಾರದ ಕೊರತೆಯನ್ನು ನಿವಾರಿಸಲು ಭಾರತೀಯ ರಿಸರ್ವ್ ಬ್ಯಾಂಕ್ ನ ಪ್ರಯತ್ನದಿಂದ ಉಂಟಾದ ಸರ್ಕಾರದ ಹಣಕಾಸಿನ ನಿರ್ಲಕ್ಷ್ಯ ಮತ್ತು ಹಣದುಬ್ಬರದಂತಹ ಅಪಾಯಗಳ ಕಾರಣ ರಿಸರ್ವ್ ಬ್ಯಾಂಕು ಸರ್ಕಾರಕ್ಕೆ ಒದಗಿಸುವ ಹಣವನ್ನು 1994-1997 ರ ಸಮಯದಲ್ಲಿ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ನ ಶ್ರಮದಿಂದ ಮಿತಿಗೊಳಿಸಲಾಯಿತು. 2003 ರ ಹಣಕಾಸಿನ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣೆ (FRBM) ಕಾಯ್ದೆಯೂ ಭಾರತೀಯ ರಿಸರ್ವ್ ಬ್ಯಾಂಕು ಸರ್ಕಾರಿ ಬಾಂಡ್ ಗಳ ಪ್ರಾಥಮಿಕ ನೀಡುವಿಕೆಯನ್ನು ಸ್ಪಷ್ಟವಾಗಿ ನಿಷೇದಿಸಿತು. ಮುಕ್ತ ಮಾರುಕಟ್ಟೆ ಕಾರ್ಯಾಚರಣೆ (OMO)ಯನ್ನು ಹಣಕಾಸಿನ ಕೊರತೆಯನ್ನು ನಿವಾರಿಸಲು ಬಳಸುವುದರ ಬದಲು ವಿದೇಶಿ ವಿನಿಮಯ ಗಳ ಬದಲಾವಣೆಯಿಂದ ಆಂತರಿಕ ಹಣ ಪೂರೈಕೆಯ ಮೇಲೆ ಆಗುವ ಪರಿಣಾಮವನ್ನು ನಿವಾರಿಸುವುದಕ್ಕಾಗಿ ವಿನ್ಯಾಸಗೊಳಿಸಲಾಯಿತು. ಹಲವು ಬಾರಿ ಹಳೆಯ ಪದ್ಧತಿಯ ಮರುಬಳಕೆಯಾದರೂ, ಒಟ್ಟಾರೆ ಈ ಬದಲಾವಣೆಗಳು ಸರ್ಕಾರದ ಸಾಲ ನಿರ್ವಹಣೆ ಕೆಲಸವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಗೆ ಬಿಟ್ಟಿತು. (3) ವಿನಿಮಯ ದರ ನಿರ್ವಹಣೆ: ಸ್ವಾತಂತ್ರ್ಯಾನಂತರ, 5 ವಾರ್ಷಿಕ ಯೋಜನೆಗಳಲ್ಲಿ ವಿನಿಮಯ ದರಗಳು ಬದಲಾಗುವುದಿಲ್ಲ ಎಂದು ಊಹಿಸಲಾಗಿದ್ದರೂ, ರುಪಾಯಿಯ ನೈಜ ಬೆಲೆಯ ಮತ್ತು ಬೃಹದಾರ್ಥಿಕ ಏರಿಳಿತದ ಕಾರಣ ಸ್ಟರ್ಲಿಂಗ್ ಹಿಡುವಳಿಕೆಗಳು ಅನುಚಿತ ಹೊಡೆತ ಕಂಡವು. ರೂಪಾಯಿ ನೈಜ ಬೆಲೆಯ ಮೇಲೂ ಭಾರೀ ಪರಿಣಾಮ ಉಂಟಾದರೂ, ವಿತ್ತೀಯ ನೀತಿ ಮತ್ತು ಸಾಲ ನಿರ್ವಹಣಾ ಕಾರ್ಯಾಚರಣೆಯ ಫಲವಾಗಿ ಈ ಪರಿಣಾಮ ವಾಸ್ತವವಾಗಿ ಪ್ರತಿಬಿಂಬಿಸಲಿಲ್ಲ. "ಹಣಕಾಸಿನ ಪ್ರಾಬಲ್ಯ” ಸಮಯದ ಮಧ್ಯೆ ನಿಶ್ಚಿತ ವಿನಿಮಯ ದರದ ಆಡಳಿತದ ಪರಿಣಾಮವೆಂದರೆ, ಅನಿವಾರ್ಯವಾದ ವಿನಿಮಯ ದರದ ಅಸಮತೋಲನಕ್ಕೆ ರಿಸರ್ವ್ ಬ್ಯಾಂಕ್ ಮೂಕ ಪ್ರೇಕ್ಷಕರಾಗಿದ್ದರು (ಆದರೂ ಇದು ವಿಶ್ವದ ಹೆಚ್ಚಿನ ಭಾಗಗಳಲ್ಲಿ ನಿಜವಾಗಿದೆ ಸಮಯ). 1976ರ ಸಮಯದಿಂದ ಗಣನೀಯ ಸಂಖ್ಯೆಯ ಕರೆನ್ಸಿಗಳಿಗೆ ಹೊಲಿಸಿದರೆ ರೂಪಾಯಿಯ ಮಟ್ಟವು ನಿರ್ವಾಹಿತ ರೀತಿಯಲ್ಲಿ ಸಾಗಿತು ಹಾಗೂ 1993 ರ ಸಮಯದಿಂದ ವಿನಿಮಯ ದರವು ಸಂಪೂರ್ಣವಾಗಿ ಸ್ಥಿರ ದರ ನೀತಿಯಿಂದ ಪ್ರಾಯೋಗಿಕವಾಗಿ ಮಾರುಕಟ್ಟೆಯು ನಿರ್ಧರಿಸುವ ನೀತಿಗೆ ಕ್ರಮೇಣ ವಿಕಾಸಗೊಂಡಿತು. ಭಾರತೀಯ ರಿಸರ್ವ್ ಬ್ಯಾಂಕು ವಿದೇಶಿ ಬಂಡವಾಳದ ಹರಿವಿನಲ್ಲಿ ಮೀಸಲು ನಿರ್ವಹಣೆ ಮತ್ತು ವಿವೇಕಯುತ ನಿರ್ವಹಣಾ ನೀತಿಯನ್ನು ಅಳವಡಿಸುತ್ತದೆ. ವಿನಿಮಯ ದರದ ನಿರ್ವಹಣೆ ಭಾರತೀಯ ರಿಸರ್ವ್ ಬ್ಯಾಂಕ್ ಗೆ ಸೀಮಿತವಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ನ ಸ್ವಾತಂತ್ರತೆಯನ್ನು ಕಾಪಾಡಿಕೊಳ್ಳುವಲ್ಲಿ ಚಾಲ್ತಿಯಲ್ಲಿರುವ ಸವಾಲುಗಳು ಭಾರತೀಯ ರಿಸರ್ವ್ ಬ್ಯಾಂಕ್ ನ ಸ್ವಾತಂತ್ರತೆಯನ್ನು ಕಾಪಾಡಿಕೊಳ್ಳುವಲ್ಲಿ ಕೆಲವೊಂದು ಮುಖ್ಯ ದೌರ್ಬಲ್ಯಗಳು ನಿರಂತರವಾಗಿ ಉಳಿದಿವೆ. ಅಂತರ್ರಾಷ್ಟ್ರೀಯ ಹಣಕಾಸು ಸಂಸ್ಥೆ (IMF) ಮತ್ತು ವಿಶ್ವ ಬ್ಯಾಂಕ್ ನ 2017 ರ ಭಾರತದ ಹಣಕಾಸು ವಲಯ ಮೌಲ್ಯಮಾಪನ ಕಾರ್ಯಕ್ರಮ (FSAP) ದಲ್ಲಿ ರಿಸರ್ವ್ ಬ್ಯಾಂಕ್ ನ ಸ್ವಾತಂತ್ರತೆಯ ಬಾಲವೃದ್ಧಿಗಾಗಿ ಕೆಲವು ಅಂಶಗಳನ್ನು ಗುರುತಿಸಲಾಗಿದೆ. (1) ಸಾರ್ವಜನಿಕ ವಲಯ ಬ್ಯಾಂಕುಗಳ ನಿಯಂತ್ರಣ : ಒಂದು ಮುಖ್ಯ ನಿರ್ಬಂಧವೆಂದರೆ ರಿಸರ್ವ್ ಬ್ಯಾಂಕು ಸಾರ್ವಜನಿಕ ಬ್ಯಾಂಕುಗಳ ವಿರುದ್ಧ ಕೈಗೊಳ್ಳಬಹುದಾದ ಕ್ರಮಗಳಾದ ಶಾಸನಭಾದ್ದ ನಿರ್ಬಂಧವಿದೆ. ಈ ನಿರ್ಬಂಧಗಳ ಗಮನಾರ್ಹ ಪರಿಣಾಮಗಳನ್ನು ಸವಿಸ್ತಾರವಾಗಿ ಗವರ್ನರ್ ಶ್ರೀ. ಪಟೇಲ್ ರವರು ಮಾರ್ಚಿ 2018 ರಲ್ಲಿ ನೀಡಿದ ಭಾಷಣದಲ್ಲಿ “ಬ್ಯಾಂಕಿಂಗ್ ನಿಯಂತ್ರಣ ಅಧಿಕಾರಗಳು ಮಾಲೀಕತ್ವದ ತಟಸ್ಥವಾಗಿರಬೇಕು “ ಎಂದು ವಿವರಿಸಿದ್ದಾರೆ. ಖಾಸಗಿ ಬ್ಯಾಂಕ್ ಗಳಿಂದ ಹಿಡಿದು ಸಾರ್ವಜನಿಕ ಬ್ಯಾಂಕ್ ಗಳ ಮಂಡಳಿ ಸದಸ್ಯರ ವಜಾ ಮಾಡುವುದು, ಬ್ಯಾಂಕುಗಳ ವಿಲೀನಗಳು ಮತ್ತು ಪರವಾನಗಿ ರದ್ದುಪಡಿಸುವಿಕೆ ಇತ್ಯಾದಿ ವಿಷಯಗಳಲ್ಲಿ ಭಾರತೀಯ ರಿಸರ್ವ್ ಬ್ಯಾಂಕಿಗೆ ಅಧಿಕಾರ ನೀಡುವ ಹಾಗೆ ಶಾಸನವನ್ನು ತಿದ್ದುಪಡಿ ಮಾಡಬೇಕು. ಮತ್ತು ರಿಸರ್ವ್ ಬ್ಯಾಂಕು ಪರವಾನಗಿ ರದ್ದುಪಡಿಸಿದ ಸಂದರ್ಭದಲ್ಲಿ ಸರ್ಕಾರಕ್ಕೆ ಮೇಲ್ಮನವಿ ಸಲ್ಲಿಸಬಹುದಾದ ಆಯ್ಕೆಯನ್ನು ರದ್ದುಪಡಿಸಬೇಕು. ಒಂದು ವೇಳೆ ಶಾಸನಭದ್ದವಾಗಿ ಬದಲಾವಣೆ ತರುವುದು ಕಷ್ಟವಾದಲ್ಲಿ, ಇತ್ತೀಚಿನ ದಿನಗಳಲ್ಲಿವಿತ್ತೀಯ ನೀತಿಯ ವಿಷಯದಲ್ಲಿ ಮಾಡಿದ ಹಾಗೆ ಸರ್ಕಾರವು ಆರ್‌ಬಿಐ ನ ಕಾರ್ಯಕಾರಿ ಪ್ರಾಧಿಕಾರವನ್ನು ಒಪ್ಪುವ ಹಾಗೆ ಒಪ್ಪಂದ ಮಾಡಿಕೊಳ್ಳಬೇಕು. (2) ರಿಸರ್ವ್ ಬ್ಯಾಂಕ್ ನ ತುಲನ ಶೀಟ್ ಬಲ: ಕೇಂದ್ರ ಬ್ಯಾಂಕ್ ನ ಯಾವುದೇ ಕಾರ್ಯಾಚರಣೆಯಿಂದಾಗುವ ನಷ್ಟವನ್ನು ಭರಿಸಲಾಗುವಷ್ಟು ಮೀಸಲು ನಿಧಿ ಯನ್ನು ಹೊಂದಿರುವುದು ಮತ್ತು ತನ್ನ ಲಾಭವನ್ನು ಸೂಕ್ತ ಮಾರ್ಗಗಳಿಗೆ ನಿಯೋಜಿಸುವುದು ರಿಸರ್ವ್ ಬ್ಯಾಂಕು ಸರ್ಕಾರದಿಂದ ಸ್ವತಂತ್ರವಾಗಿರುವುದರ ಮುಖ್ಯ ಉದ್ದೇಶ(ಉದಾಹರಣೆಗೆ, Moser-Boehm, 2006 ನ್ನು ನೋಡಿ). ಈ ವಿಚಾರದಲ್ಲಿ ಚಾಲ್ತಿಯಲ್ಲಿರುವ ಮುಳ್ಳಿನಂತಹ ವಿಷಯವೆಂದರೆ ರಿಸರ್ವ್ ಬ್ಯಾಂಕ್ ನ ಹೆಚ್ಚುವರಿ ನಿಧಿಯನ್ನು ಸರ್ಕಾರಕ್ಕೆ ವರ್ಗಾಯಿಸುವುದು. ಈ ವಿಷಯವನ್ನು ರಾಕೇಶ್ ಮೆನನ್ ರವರು ತಮ್ಮ ಇತ್ತೀಚಿನ 3-ಭಾಗದ ಲೇಖನಗಳಲ್ಲಿ ಕೊನೆಯದರಲ್ಲಿ Protect the RBI’s balance-sheet ರಲ್ಲಿ ಕೇಂದ್ರ ಬ್ಯಾಂಕ್ ನ ಬಲವಾದ ತುಲನ ಶೀಟ್ ನ ಅಗತ್ಯದ ಬಗ್ಗೆ ವಿಸ್ತಾರವಾಗಿ ವಿಶ್ಲೇಶಿಸಿದ್ದಾರೆ. "ಮೊದಲನೆಯದು ... ಸರ್ಕಾರವು ತನ್ನ ಖರ್ಚುಗಳಿಗಾಗಿ ಹೊಸ ಸೆಕ್ಯೂರಿಟಿಗಳನ್ನು ನೀಡಿದರೆ ಅದು ದೀರ್ಘಕಾಲದ ಹಣಕಾಸಿನ ಪರಿಣಾಮಗಳನ್ನು ಕಡಿಮೆ ಮಾಡುವುದಿಲ್ಲ. ಆರ್‌ಬಿಐ ನ ಬಂಡವಾಳದ ಮೇಲೆ “ದಾಳಿ“ ಮಾಡುವುದರಿಂದ ಕಾಲಾಂತರದಲ್ಲಿ ಯಾವುದೇ ಸರ್ಕಾರಿ ಆದಾಯ ಸೃಷ್ಟಿಸುವುದಿಲ್ಲ, ಮಾತ್ರವಲ್ಲದೆ ಇದು ಅಲ್ಪಾವಧಿ ಉಚಿತ ಹಣದ ಭ್ರಮೆಯನ್ನು ಸೃಷ್ಟಿಸುತ್ತದೆ." “”ಎರಡನೆಯದಾಗಿ.... ಈ ರೀತಿ ವರ್ಗಾವಣೆಯು, ಸರ್ಕಾರವು ಹಣಕಾಸಿನ ವಿವೇಕದೊಂದಿಗೆ ಕಾರ್ಯ ನಿರ್ವಹಿಸುತ್ತದೆ ಎಂಬ ಯಾವುದೇ ನಂಬಿಕೆಯನ್ನು ಕಡಿತಗೊಳಿಸುತ್ತದೆ.” "ಮೂರನೆಯದಾಗಿ, ... ಸೈದ್ಧಾಂತಿಕವಾಗಿ, ಒಂದು ಕೇಂದ್ರ ಬ್ಯಾಂಕ್ ಶೂನ್ಯಕ್ಕಿಂತಲೂ ಕೆಳಗಿರುವ ಬಂಡವಾಳ ಮಟ್ಟಗಳನ್ನು ಒಳಗೊಂಡಂತೆ ವಿಶಾಲ ವ್ಯಾಪ್ತಿಯ ಸೂಕ್ತ ಹಣಕಾಸು ನೀತಿಗಳನ್ನು ಜಾರಿಗೆ ತರಬಹುದು. ಪ್ರಾಯೋಗಿಕವಾಗಿ, ಇದು ಮಾರುಕಟ್ಟೆಗಳಲ್ಲಿ ಮತ್ತು ಸಾರ್ವಜನಿಕರಲ್ಲಿ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳಬಹುದಾದ ಅಪಾಯವಿದೆ. ಹಾಗೂ ಇದು ಗಣನೀಯ ನಷ್ಟಗಳಿದ್ದಾರೆ ತನ್ನ ಗುರಿ/ ಉದ್ದೇಶಗಳನ್ನು ಸಾಧಿಸಲಾಗುವುದಿಲ್ಲ ಮತ್ತು ಇದು ಸಾಕಷ್ಟು ಬಂಡವಾಳವಿಲ್ಲದಿರುವ ಸಂಸ್ಥೆಯಾಗಿ ಕಾಣಬಹುದು ನಿಯಂತ್ರಣಾ ವ್ಯಾಪ್ತಿ: ಅಂತಿಮವಾಗಿ ತನ್ನ ನಿಯಂತ್ರಣಾ ವ್ಯಾಪ್ತಿಯಲ್ಲಿ ಪಾವತಿ ಮತ್ತು ವಸಾಹತು ವ್ಯವಸ್ಥೆಗಳ ಮೇಲೆ ಕೇಂದ್ರೀಯ ಬ್ಯಾಂಕಿನ ಅಧಿಕಾರವನ್ನು ಬೈಪಾಸ್ ಮಾಡಿ ಪ್ರತ್ಯೇಕ ಪಾವತಿ ವ್ಯವಸ್ಥೆ ನಿಯಂತ್ರಕರ ನೇಮಕಾತಿಗೆ ಶಿಫಾರಸುಮಾಡಿರುವ ಬಗ್ಗೆ. ಭಾರತೀಯ ರಿಸರ್ವ್ ಬ್ಯಾಂಕು ಈ ಶಿಫಾರಸ್ಸಿಗೆ ಅಸಮ್ಮತಿ ಸೂಚಿಸಿ 19 ಅಕ್ಟೋಬರ್ 2018 ರಂದು ಪ್ರಕಟಣೆ ನೀಡಿದೆ. ಕೊನೆಯ ಮಾತು: ಶ್ರೀ ಮಲೆಗಾಮ್ ಅವರು ದೀರ್ಘಕಾಲದ ಸಲಹೆಗಾರರು, ಸ್ನೇಹಿತರೂ, ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ ನ ಹಿತೈಷಿಗಳಾಗಿದಾರೆ. ಮತ್ತು ಅದರ ಮಂಡಳಿಯ ಮಾಜಿ ಸದಸ್ಯರಾಗಿದ್ದಾರೆ. ನಾನು ಅವರ ಬುದ್ಧಿಶಕ್ತಿ, ಚಿಂತನೆಯ ಸ್ಪಷ್ಟತೆ ಮತ್ತು ವಿವೇಕದ ಬಗ್ಗೆ ವೈಯಕ್ತಿಕವಾಗಿ ಮೆಚ್ಚುತ್ತೇನೆ. ಈ ವರ್ಷದ ಎ ಡಿ ಶ್ರಾಫ್ ಮೆಮೋರಿಯಲ್ ಉಪನ್ಯಾಸವನ್ನು ನೀಡಲು ನನ್ನನ್ನು ಆಹ್ವಾನಿಸಿದ್ದಕ್ಕಾಗಿ ನಾನು ಮಾಲೆಗಾಂ ರವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ದಿವಂಗತ ಅರ್ದಾಶಿರ್ ದರಾಬ್ಷಾ ಶ್ರಾಫ್ ರವರು ಯುದ್ಧಾನಂತರ 1944 ರಲ್ಲಿ ವಿಶ್ವಸಂಸ್ಥೆಯ "ಬ್ರೆಟನ್ನ ವುಡ್ಸ್ ಕಾನ್ಫರೆನ್ಸ್" ನಲ್ಲಿ ಭಾರತದ ಅಧಿಕೃತ ಹಣಕಾಸು ವ್ಯವಸ್ಥೆಯ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದರು. ಅವರ ಪ್ರಾಥಮಿಕ ಕಾಳಜಿಗಳಲ್ಲಿ ಒಂದೆಂದರೆ ಇಂಟರ್ನ್ಯಾಷನಲ್ ಮಾನಿಟರಿ ಫಂಡ್ ಮತ್ತು ವಿಶ್ವ ಬ್ಯಾಂಕ್ ನ ಕಾರ್ಯನಿರ್ವಾಹಕ ಮಂಡಳಿಯಲ್ಲಿ (ದುರದೃಷ್ಟವಶಾತ್ ಕಾರ್ಯರೂಪಕ್ಕೆ ಬರಲಿಲ್ಲ) ಶಾಶ್ವತ ಆಸನವನ್ನು ಹುಡುಕುವುದು. ನನ್ನ ಪ್ರಕಾರ, ಅವರ ಪ್ರಮುಖ ಕೊಡುಗೆಯೆಂದರೆ 1954 ರಲ್ಲಿ ಮುಕ್ತ ಮಾತುಕತೆ ಮೂಲಕ ಸ್ವಾತಂತ್ರ್ಯಾನಂತರದ ಯುಗದಲ್ಲಿ ದೇಶದಲ್ಲಿ ಮೂಲವನ್ನು ತೆಗೆದುಕೊಳ್ಳುವ ಸಮಾಜವಾದಿ ಪ್ರವೃತ್ತಿಯನ್ನು ಪ್ರತಿಪಾದಿಸುವ ಫ್ರೀ ಫೋರಂ ಎಂಟರ್ಪ್ರೈಸ್ ಥಿಂಕ್ ಟ್ಯಾಂಕ್ ಅನ್ನು ಅವರು ಸಹ-ಸಂಸ್ಥಾಪನ ಮಾಡಿದ್ದು. ಸುಖೇತಾ ದಲಾಲ್ರ ಜೀವನಚರಿತ್ರೆ, ಎ. ಡಿ. ಶ್ರಾಫ್ - ಟೈಟಾನ್ ಆಫ್ ಫೈನಾನ್ಸ್ ಮತ್ತು ಫ್ರೀ ಎಂಟರ್ಪ್ರೈಸ್ (2000), ವಿಶ್ವ ಬ್ಯಾಂಕ್ನ ಅತ್ಯಂತ ಜನಪ್ರಿಯ ಅಧ್ಯಕ್ಷರಾಗಿರುವ ಜಾರ್ಜ್ ವುಡ್ಸ್ ಅವರು ಹೀಗೆಂದು ಹೇಳಿದ್ದಾರೆ: ಶ್ರೀ ಎ. ಡಿ. ಶ್ರಾಫ್ ಅವರ ಅಭಿಪ್ರಾಯಗಳನ್ನು ಮರೆಮಾಚುವವರು ಎಂದು ಯಾರೊಬ್ಬರೂ ಆರೋಪಿಸಲು/ ದೂಷಿಸಲು ಸಾಧ್ಯವಿಲ್ಲ. ಭಾರತ ದೇಶಕ್ಕಾಗಿ ಅವರು ವಿಶ್ವದಾದ್ಯಂತ ಸ್ನೇಹವನ್ನು ಬೆಳೆಸಿ ಭಾರತ ದೇಶದ ಮೇಲೆ ವಿಶ್ವಾಸವನ್ನು ನಿರ್ಮಿಸಿ ಸಬಲ ಬಂಡವಾಳ ವನ್ನು ಒದಗಿಸುವ ನಿಟ್ಟಿನಲ್ಲಿಇವರನ್ನು ಹೊರೆತು ಕೆಲವು ಜನಗಳು ಮಾತ್ರ ಕೊಡುಗೆ ನೀಡಿದ್ದಾರೆ. ಇಂದಿನ ಸಂದರ್ಭದಲ್ಲಿ ಸ್ವತಂತ್ರ ನಿಯಂತ್ರಣ ಸಂಸ್ಥೆಗಳ, ಮುಖ್ಯವಾಗಿ ಕೇಂದ್ರ ಬ್ಯಾಂಕ್ ನ ಸರ್ಕಾರದಿಂದ ಸ್ವಾತಂತ್ರದ ಪ್ರಾಮುಖ್ಯತೆಯ ವಿಷಯವನ್ನು ನಾನು ಆಯ್ಕೆ ಮಾಡಿದ್ದೇನೆ. ಈ ವಿಷಯವು ಅತಿ ಸೂಕ್ಷ್ಮವಾದದ್ದಾಗಿದೆ ಆದರೆ ಇದು ನಮ್ಮ ಆರ್ಥಿಕ ದೃಷ್ಟಿಯಲ್ಲಿ ಹೆಚ್ಚಿನ ಪ್ರಾಮುಖ್ಯತೆ ಹೊಂದಿರುವ ಸಂಗತಿಯನ್ನು ನಾನು ಎತ್ತಿ ಹಿಡಿಯುತ್ತೇನೆ. ಏ ಡಿ ಶ್ರಾಫ್ ರವರ ಸ್ವತಂತ್ರ ಆರ್ಥಿಕ ಪ್ರವಚನ ಮತ್ತು ನೀತಿ-ತಯಾರಿಕೆಯ ಅಮರತ್ವದ ಪರಂಪರೆಗೆ ನ್ಯಾಯ ಒದಗಿಸುವ ಹಾಗೆ ಮಾಡಿದ್ದೇನೆ ಎಂದು ನಾನು ಶ್ರದ್ಧೆಯಿಂದ ಭಾವಿಸುತ್ತೇನೆ. ಕ್ರಮವಾಗಿ, ಭಾರತೀಯ ರಿಸರ್ವ್ ಬ್ಯಾಂಕ್ ನ ಸ್ವಾತಂತ್ರತೆಯನ್ನು ಸಂಪಾದಿಸುವ ನಿಟ್ಟಿನಲ್ಲಿ ಗಮನಾರ್ಹವಾಗಿ ವಿತ್ತೀಯ ನೀತಿ ವಿಷಯದಲ್ಲಿ ಉತ್ತಮ ಪ್ರಗತಿ ಯನ್ನು ಸಾಧಿಸಿದ್ದೇವೆ ಎಂದು ನಿಮಗೆ ಮನಗಾಣಿಸುವ ಪ್ರಯತ್ನವನ್ನು ಮಾಡಿದ್ದೇನೆ. ಹಣಕಾಸು ಮತ್ತು ಬೃಹದಾರ್ಥಿಕ ಸ್ಥಿರತೆಯನ್ನು ಸ್ಥಾಪಿಸಲು, ಸಾರ್ವಜನಿಕ ಬ್ಯಾಂಕ್ ಗಳ ಮೇಲಿನ ನಿಯಂತ್ರಣ ಮತ್ತು ಮೇಲ್ವಿಚಾರಣಾ ಅಧಿಕಾರಗಳಲ್ಲಿ ರಿಸರ್ವ್ ಬ್ಯಾಂಕ್ ಗೆ ಪರಿಣಾಮಕಾರಿ ಸ್ವಾತಂತ್ರ್ಯಕ್ಕಾಗಿ, ಅದರ ಸಮತೋಲನ-ಶಕ್ತಿಯ ಸಾಮರ್ಥ್ಯ ಮತ್ತು ಅದರ ನಿಯಂತ್ರಣ ವ್ಯಾಪ್ತಿ ಯ ವಿಸ್ತರಣೆಗೆ ಈ ಪ್ರಯತ್ನಗಳನ್ನು ವಿಸ್ತರಿಸಬೇಕಾಗಿದೆ. ಅಂತಹ ಪ್ರಯತ್ನವು ಭಾರತೀಯ ಆರ್ಥಿಕತೆಯ ಭವಿಷ್ಯಕ್ಕಾಗಿ ನಿಜವಾದ ಅಂತರ್ಗತ ಸುಧಾರಣೆಯಾಗಬಲ್ಲದು. ವಿಶ್ವದ ಅನೇಕ ಭಾಗಗಳಲ್ಲಿ ಇಂದು ಕೇಂದ್ರ ಬ್ಯಾಂಕ್ ಸ್ವಾತಂತ್ರ್ಯದಲ್ಲಿ ಹೆಚ್ಚಿನ ಸರ್ಕಾರದ ಗೌರವವನ್ನು ನಿರೀಕ್ಷಿಸಲಾಗುತ್ತಿದೆ, ಸ್ವತಂತ್ರ ಕೇಂದ್ರ ಬ್ಯಾಂಕರ್ ಗಳು ಅಡ್ಡಿಗೊಳಪಡುವುದಿಲ್ಲ. ಕೇಂದ್ರೀಯ ಬ್ಯಾಂಕ್ ಸ್ವಾತಂತ್ರ್ಯವನ್ನು ಗೌರವಿಸದ ಸರಕಾರಗಳು ಶೀಘ್ರದಲ್ಲೇ ಅಥವಾ ನಂತರದ ದಿನಗಳಲ್ಲಿ ಹಣಕಾಸಿನ ಮಾರುಕಟ್ಟೆಗಳ ಅಪಾಯವನ್ನು ಅನುಭವಿಸಬೇಕಾಗುತ್ತದೆ. |