<font face="mangal" size="3px">ಆದಾಯ ತೆರಿಗೆ ಬಾಕಿಯಯನ್ನು ಭಾರತೀಯ ರಿಸರ್ವ್ ಬ್ಯಾ  - ಆರ್ಬಿಐ - Reserve Bank of India
ಆದಾಯ ತೆರಿಗೆ ಬಾಕಿಯಯನ್ನು ಭಾರತೀಯ ರಿಸರ್ವ್ ಬ್ಯಾಂಕಿನ ಕಚೇರಿಗಳಲ್ಲಿ ಅಥವಾ ಅಧಿಕೃತ ಬ್ಯಾಂಕು ಶಾಖೆಗಳಲ್ಲಿ ಮುಂಚಿತವಾಗಿ ಪಾವತಿಸಿ
ನವಂಬರ್ 13, 2015 ಆದಾಯ ತೆರಿಗೆ ಬಾಕಿಯಯನ್ನು ಭಾರತೀಯ ರಿಸರ್ವ್ ಬ್ಯಾಂಕಿನ ಕಚೇರಿಗಳಲ್ಲಿ ಅಥವಾ ಅಧಿಕೃತ ಬ್ಯಾಂಕು ಶಾಖೆಗಳಲ್ಲಿ ಮುಂಚಿತವಾಗಿ ಪಾವತಿಸಿ ಕೊನೆಯ ದಿನಾಂಕಕ್ಕೆ ಸಾಕಷ್ಟು ಮುಂಚಿತವಾಗಿ ಆದಾಯ ತೆರಿಗೆ ಬಾಕಿಯನ್ನು ಭಾರತೀಯ ರಿಸರ್ವ್ ಬ್ಯಾಂಕಿನ ಕಚೇರಿಗಳಲ್ಲಿ ಮುಂಚಿತವಾಗಿ ಪಾವತಿಸುವಂತೆ ಅದಾಯ ತೆರಿಗೆ ಪಾವತಿಸುವವರಲ್ಲಿ ಈ ಮೂಲಕ ವಿನಂತಿಸಲಾಗಿದೆ. ತೆರಗೆದಾರರು ಬದಲೀ ವ್ಯವಸ್ಥೆಯಾಗಿ ಏಜೆನ್ಸಿ ಬ್ಯಾಂಕುಗಳ ಆಯ್ದ ಶಾಖೆಗಳನ್ನು ಅಥವಾ ಈ ಬ್ಯಾಂಕುಗಳು ಒದಗಿಸಿರುವ ಆನ್ ಲೈನ್ ಸೌಲಭ್ಯವನ್ನಾಗಲೀ ಬಳಸಿಕೊಳ್ಳಬಹುದಾಗಿದೆ. ಇದು, ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿ ಉದ್ದದ ಸರತಿಯ ಸಾಲಿನಲ್ಲಿ ನಿಂತುಕೊಳ್ಳುವ ಬವಣೆಯನ್ನು ದೂರ ಮಾಡುತ್ತದೆ. ಪ್ರತಿ ವರ್ಷ, ಡಿಸಂಬರ್ ತಿಂಗಳ ಕೊನೆಯಲ್ಲಿ ಆದಾಯ ತೆರಿಗೆ ಪಾವತಿಸಲು ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿ ಅಪಾರ ಜನದಟ್ಟಣೆ ಇರುವುದನ್ನು ಗಮನಿಸಲಾಗಿದೆ ಮತ್ತು ಈ ಸಂಬಂಧ ಹೆಚ್ಚುವರಿ ಕೌಂಟರುಗಳನ್ನು ತೆರೆದಿದ್ದರೂ, ಭಾರತೀಯ ರಿಸರ್ವ್ ಬ್ಯಾಂಕಿಗೆ ಸ್ವೀಕೃತಿಗಳನ್ನು ನೀಡಲು ಕಷ್ಟವಾಗುತ್ತಿದೆ. ಈ ಕೆಳಗಿನ 29 ಏಜೆನ್ಸಿ ಬ್ಯಾಂಕುಗಳು ಆದಾಯ ತೆರಿಗೆ ಬಾಕಿಯ ಪಾವತಿ ಸ್ವೀಕರಿಸಲು ಅಧಿಕೃತಗೊಂಡಿವೆ 1. ಅಲಹಾಬಾದ್ ಬ್ಯಾಂಕ್ 2. ಆಂಧ್ರ ಬ್ಯಾಂಕ್ 3. ಬ್ಯಾಂಕ್ ಆಫ್ ಬರೋಡ 4. ಬ್ಯಾಂಕ್ ಆಫ್ ಇಂಡಿಯಾ 5. ಬ್ಯಾಂಕ್ ಆಫ್ ಮಹಾರಾಷ್ಟ್ರ 6. ಕೆನರಾ ಬ್ಯಾಂಕ್ 7. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 8. ಕಾರ್ಪೊರೇಷನ್ ಬ್ಯಾಂಕ್ 9. ದೇನಾ ಬ್ಯಾಂಕ್ 1೦. ಐಡಿಬಿಐ ಬ್ಯಾಂಕ್ 11. ಇಂಡಿಯನ್ ಬ್ಯಾಂಕ್ ೧2. ಇಂಡಿಯನ್ ಓವರ್ಸೀಸ್ ಬ್ಯಾಂಕ್ 13. ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ 14. ಪಂಜಾಬ್ ಅಂಡ್ ಸಿಂಧ್ ಬ್ಯಾಂಕ್ 15. ಪಂಜಾಬ್ ನ್ಯಾಷನಲ್ ಬ್ಯಾಂಕ್ 16. ಸಿಂಡಿಕೇಟ್ ಬ್ಯಾಂಕ್ 17. ಯುಕೋ ಬ್ಯಾಂಕ್ 18. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ 19. ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ 2೦. ವಿಜಯಾ ಬ್ಯಾಂಕ್ 21. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 22. ಸ್ಟೇಟ್ ಬ್ಯಾಂಕ್ ಆಫ್ ಬಿಕನೇರ್ & ಜೈಪುರ್ 23. ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ 24. ಸ್ಟೇಟ್ ಬ್ಯಾಂಕ್ ಟ್ರವಾಂಕೋರ್ 25. ಸ್ಟೇಟ್ ಬ್ಯಾಂಕ್ ಆಫ್ ಮೈಸೂರು 26. ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲ 27. ಹೆಚ್ ಡಿ ಎಫ್ ಸಿ ಬ್ಯಾಂಕ್ ಲಿಮಿಟೆಡ್ 28. ಅಕ್ಸಿಸ್ ಬ್ಯಾಂಕ್ ಲಿಮಿಟೆಡ್ 29. ಐ ಸಿ ಐ ಸಿ ಐ ಬ್ಯಾಂಕ್ ಲಿಮಿಟೆಡ್ ಅಜಿತ್ ಪ್ರಸಾದ್ ಪತ್ರಿಕಾ ಪ್ರಕಟಣೆ; 2015-2016/1142 |