<font face="mangal" size="3">ಆರ್ ಬಿ ಐ ಅಥವಾ ಅಧಿಕೃತ ಬ್ಯಾಂಕ್ ಶಾಖೆಗಳಲ್ಲಿ ಆದಾಯ  - ಆರ್ಬಿಐ - Reserve Bank of India
ಆರ್ ಬಿ ಐ ಅಥವಾ ಅಧಿಕೃತ ಬ್ಯಾಂಕ್ ಶಾಖೆಗಳಲ್ಲಿ ಆದಾಯ ತೆರಿಗೆ ಬಾಕಿ ಹಣವನ್ನು ಮುಂಚಿತವಾಗಿ ಪಾವತಿಸಿ – ಡಿಸೆಂಬರ್ 2016
ನವೆಂಬರ್ 02 , 2016 ಆರ್ ಬಿ ಐ ಅಥವಾ ಅಧಿಕೃತ ಬ್ಯಾಂಕ್ ಶಾಖೆಗಳಲ್ಲಿ ಆದಾಯ ತೆರಿಗೆ ಬಾಕಿ ಹಣವನ್ನು ಮುಂಚಿತವಾಗಿ ಪಾವತಿಸಿ – ಡಿಸೆಂಬರ್ 2016 ತಮ್ಮ ಆದಾಯ ತೆರಿಗೆ ಬಾಕಿ ಹಣವನ್ನು ಮುಂಚಿತವಾಗಿ ಪಾವತಿಸಬೇಕೆಂದು ಭಾರತೀಯ ರಿಸರ್ವ ಬ್ಯಾಂಕ್ ಆದಾಯ ತೆರಿಗೆದಾರರಲ್ಲಿ ಮನವಿ ಮಾಡುತ್ತದೆ. ತೆರಿಗೆದಾರರು ಪರ್ಯಾಯ ವಾಹಿನಿಗಳಾದ ದಲ್ಲಾಳಿ ಬ್ಯಾಂಕುಗಳ ಆಯ್ದ ಶಾಖೆಗಳು ಹಾಗೂ ಈ ಬ್ಯಾಂಕುಗಳಿಂದ ನೀಡಲ್ಪಟ್ಟ ಆನ್ ಲೈನ್ ಪಾವತಿಯ ಸೌಲಭ್ಯ ಬಳಸಬಹುದೆಂದು ಕೂಡ ರಿಸರ್ವ ಬ್ಯಾಂಕ್ ತಿಳಿಸುತ್ತದೆ. ಇದು ರಿಸರ್ವ್ ಬ್ಯಾಂಕ್ ಕಚೇರಿಗಳಲ್ಲಿ ದೀರ್ಘ ಸಾಲುಗಳಿಂದಾಗುವ ಅನಾನುಕೂಲತೆಗಳನ್ನು ನಿವಾರಿಸುತ್ತದೆ. ರಿಸರ್ವ ಬ್ಯಾಂಕ್ ನಲ್ಲಿ ಆದಾಯ ತೆರಿಗೆ ಬಾಕಿ ಹಣ ಕಟ್ಟಲು ಪ್ರತಿ ವರ್ಷ ಡಿಸೆಂಬರ್ ಅಂತ್ಯದಲ್ಲಿ ತುಂಬ ಜನ ದಟ್ಟಣೆ ಇರುತ್ತದೆ. ಈ ಉದ್ದೇಶಕ್ಕಾಗಿ ಹೆಚ್ಚಿನ ಕೌಂಟರ್ ಗಳನ್ನು ತೆರೆದರೂ ಕೂಡ ರಸೀದಿಗಳನ್ನು ನೀಡುವ ಒತ್ತಡ ಕಡಿಮೆ ಮಾಡಲು ರಿಸರ್ವ ಬ್ಯಾಂಕಿಗೆ ಕಷ್ಟವಾಗುತ್ತಿದೆ. ಈ ಬ್ಯಾಂಕುಗಳು ತೆರಿಗೆಯ ಒನ್ ಲೈನ್ ಪಾವತಿಯ ಸೌಲಭ್ಯವನ್ನು ಕೂಡ ನೀಡಿದೆ. ಈ ಕೆಳಗಿನ ಇಪ್ಪತ್ತೊಂಬತ್ತು ಬ್ಯಾಂಕುಗಳು ಆದಾಯ ತೆರಿಗೆ ಪಾವತಿ ಸ್ವೀಕರಿಸಲು ಅಧಿಕೃತ ದಲ್ಲಾಳಿ ಸಂಸ್ಥೆಗಳಾಗಿದೆ.
ಅಜಿತ್ ಪ್ರಸಾದ್ ಪತ್ರಿಕಾ ಪ್ರಕಟಣೆ : 2016-2017/1087 |