<font face="mangal" size="3">ಆದ್ಯತಾ ವಲಯದಲ್ಲಿ ಸಾಲ : ಪರಿಷ್ಕೃತ ವರದಿ ವ್ಯವಸ್ಥೆ</fo - ಆರ್ಬಿಐ - Reserve Bank of India
ಆದ್ಯತಾ ವಲಯದಲ್ಲಿ ಸಾಲ : ಪರಿಷ್ಕೃತ ವರದಿ ವ್ಯವಸ್ಥೆ
ಆರ್ ಬಿ ಐ/2016-2017/79 ಅಕ್ಟೋಬರ್ 06, 2016 ಅಧ್ಯಕ್ಷ / ವ್ಯವಸ್ಥಾಪಕ ನಿರ್ದೇಶಕ / ಮಾನ್ಯರೇ , ಆದ್ಯತಾ ವಲಯದಲ್ಲಿ ಸಾಲ : ಪರಿಷ್ಕೃತ ವರದಿ ವ್ಯವಸ್ಥೆ ದಿನಾಂಕ ಏಪ್ರಿಲ್ 23, 2015 ರ ಸುತ್ತೋಲೆ FIDD.CO.Plan.BC.54/04.09.01/2014 ಮೂಲಕ ಆದ್ಯತಾ ವಲಯದ ಕುರಿತು ಇರುವ ಮಾರ್ಗಸೂಚಿಗಳನ್ನು ಪರಿಷ್ಕೃತ ಗೊಳಿಸಲಾಗಿದೆ. ಅದರಂತೆ , ಆದ್ಯತಾ ವಲಯದ ಸಾಲಗಳ ತ್ರೈಮಾಸಿಕ ಮತ್ತು ವಾರ್ಷಿಕ ಮೇಲ್ವಿಚಾರಣೆಯ ನಮೂನೆಯನ್ನು ದಿನಾಂಕ 11, 2015 ರ ಸುತ್ತೋಲೆ FIDD.CO. Plan.BC No. 58 /04.08.001/2014-15 ಮೂಲಕ ನೀಡಲಾಗಿದೆ. 2. ಪರಿಶೀಲನೆಯ ನಂತರ , ಆದ್ಯತ ವಲಯದ ಸಾಲಗಳ ತ್ರೈಮಾಸಿಕ ಮತ್ತು ವಾರ್ಷಿಕ ವರದಿಯ ನಮೂನೆಯನ್ನು ಮಾರ್ಪಡಿಸಲು ನಿರ್ಧರಿಸಲಾಗಿದೆ. ಆದ್ದರಿಂದ , ಅಡಕವಾಗಿರುವ ಪರಿಷ್ಕೃತ ನಮೂನೆಯಲ್ಲಿ ಆದ್ಯತಾ ವಲಯದ ಸಾಲಗಳ ವರದಿಯನ್ನು ನೀಡುವಂತೆ ಎಲ್ಲ ಬ್ಯಾಂಕುಗಳಿಗೆ ಕೋರಲಾಗಿದೆ. ಈ ಪರಿಷ್ಕೃತ ತ್ರೈಮಾಸಿಕ ಮತ್ತು ವಾರ್ಷಿಕ ವರದಿಯನ್ನು ಎಲ್ಲ ಬ್ಯಾಂಕುಗಳು ಪ್ರತಿ ತ್ರೈಮಾಸಿಕ ಮತ್ತು ಹಣಕಾಸು ವರ್ಷದ ಅಂತ್ಯವಾಗುತ್ತದೆಯಂತೆ ಕ್ರಮವಾಗಿ ಹದಿನೈದು ಹಾಗೂ ಒಂದು ತಿಂಗಳೊಳಗೆ ಭಾರತೀಯ ರಿಸರ್ವ್ ಬ್ಯಾಂಕ್ ,ಹಣಕಾಸು ಸೇರ್ಪಡೆ ಮತ್ತು ಅಭಿವೃದ್ಧಿ ವಿಭಾಗ , ಸಂಖ್ಯಾಶಾಸ್ತ್ರ ವಿಭಾಗ , ಕೇಂದ್ರೀಯ ಇಲಾಖೆ , 3ನೇ ಮಹಡಿ , ಅಮರ್ ಬಿಲ್ಡಿಂಗ್ , ಫೋರ್ಟ್ , ಮುಂಬೈ – 400001 ಗೆ ಕಳುಹಿಸ ತಕ್ಕದ್ದು. 3. ಜೂನ್ 2016 , ಸೆಪ್ಟೆಂಬರ್ 2016 ಹಾಗೂ ಅಕ್ಟೋಬರ್ 21 ರಂದು ಅಂತ್ಯಗೊಳ್ಳುವ ತ್ರೈಮಾಸಿಕದ ವರದಿಯನ್ನು ಪರಿಷ್ಕೃತ ನಮೂನೆಯಲ್ಲಿ ನೀಡಲು ಬ್ಯಾಂಕುಗಳಿಗೆ ಸೂಚಿಸಲಾಗಿದೆ. ಇಂತಿ ವಿಶ್ವಾಸಿ ಎ. ಉದ್ಗತ ಅಡಕ : ಮೇಲಿರುವಂತೆ |