<font face="mangal" size="3">ಎಲ್ಲಾ ನಾಣ್ಯಗಳೂ ಅಧಿಕೃತವಾಗಿ ಚಲಾವಣೆಯಲ್ಲಿರುವು& - ಆರ್‌ಬಿಐ - Reserve Bank of India
ಎಲ್ಲಾ ನಾಣ್ಯಗಳೂ ಅಧಿಕೃತವಾಗಿ ಚಲಾವಣೆಯಲ್ಲಿರುವುದರಿಂದ ಸಾರ್ವಜನಿಕರು ಅವುಗಳನ್ನು
ಸ್ವೀಕರಿಸುವುದನ್ನು ಮುಂದುವರೆಸಬೇಕು – ಆರ್‌ಬಿಐ
26 ಜೂನ್, 2019 ಎಲ್ಲಾ ನಾಣ್ಯಗಳೂ ಅಧಿಕೃತವಾಗಿ ಚಲಾವಣೆಯಲ್ಲಿರುವುದರಿಂದ ಸಾರ್ವಜನಿಕರು ಅವುಗಳನ್ನು ಭಾರತ ಸರ್ಕಾರವು ಠಂಕಿಸಿದ ನಾಣ್ಯಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಚಲಾವಣೆಗೆ ತರುತ್ತದೆ. ಈ ನಾಣ್ಯಗಳು ವಿಶಿಷ್ಟ ಲಕ್ಷಣಗಳನ್ನು ಹೊಂದಿರುತ್ತವೆ. . ಸಾರ್ವಜನಿಕರ ವ್ಯವಹಾರಗಳ ಅಗತ್ಯತೆಯನ್ನು ಹೊಸ ಮೌಲ್ಯ ವರ್ಗದ ನಾಣ್ಯಗಳು ಪೂರೈಸುತ್ತವೆ ಮತ್ತು ನಾನಾ ವಿಧದ ವಿಷಯ ವಸ್ತುಗಳನ್ನು ಎಂದರೆ ಆರ್ಥಿಕ, ಸಮಾಜಿಕ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ನೂತನ ವಿನ್ಯಾಸವುಳ್ಳ ನಾಣ್ಯಗಳನ್ನು ಆಗಿಂದಾಗ್ಯೆ ಬಿಡುಗಡೆ ಮಾಡಲಾಗುವುದು. ನಾಣ್ಯಗಳು ದೀರ್ಘ ಕಾಲ ಚಲಾವಣೆಯಲ್ಲಿ ಇರುವುದರಿಂದ ವಿವಿಧ ವಿನ್ಯಾಸ ಮತ್ತು ಆಕೃತಿಗಳಲ್ಲಿ ಇರುವ ನಾಣ್ಯಗಳು ಏಕ ಕಾಲದಲ್ಲಿ ಚಲಾವಣೆಯಲ್ಲಿ ಇರುತ್ತವೆ. ಸಧ್ಯದಲ್ಲಿ, ವಿವಿಧ ವಿನ್ಯಾಸ ವಿವಿಧ ವಿಷಯ ವಸ್ತು ಮತ್ತು ವಿವಿಧ ಆಕೃತಿಗಲ್ಲಿರುವ 50 ಪೈಸೆ, 1 ರೂ. 2 ರೂ, 5 ರೂ. ಮತ್ತು 10 ರೂ.ಗಳ ನಾಣ್ಯಗಳು ಚಲಾವಣೆಯಲ್ಲಿ ಇವೆ. ಇಂತಹ ನಾಣ್ಯಗಳ ಸಾಚಾತನದ ಬಗ್ಗೆ ಹಲವು ಕಡೆ ಸಂಶಯಗಳು ಬಂದಿದ್ದು, ಇದರಿಂದ ಕೆಲವು ವರ್ತಕರು ಹಾಗೂ ಸಾರ್ವಜನಿಕರು ಈ ನಾಣ್ಯಗಳನ್ನು ಸ್ವೀಕರಿಸದೇ ಇರುವುದರ ಬಗ್ಗೆ ವರದಿ ಬಂದಿದೆ. ಇದರಿಂದ ದೇಶದ ಕೆಲವು ಭಾಗಳಲ್ಲಿ ನಾಣ್ಯಗಳು ಸಾರಾಗವಾಗಿ ಚಲಾವಣೆಯಾಗುತ್ತಿಲ್ಲ. ಭಾರತೀಯ ರಿಸರ್ವ್ ಬ್ಯಾಂಕ್, ಈ ಮೂಲಕ ಸಾರ್ವಜನಿಕರಲ್ಲಿ ವಿನಂತಿಸುವುದೇನೆಂದರೆ ಇಂತಹ ಯಾವುದೇ ಊಹಾ ಪೋಹಗಳಿಗೆ ಕಿವಿಗೊಡದೆ ತಮ್ಮ ದೈನಂದಿನ ಎಲ್ಲಾ ವ್ಯವಹಾರಗಳಲ್ಲಿ ಈ ನಾಣ್ಯಗಳನ್ನು ಯಾವುದೇ ಅಧಿಕೃತವಾಗಿ ಸ್ವೀಕರಿಸಬೇಕು. ಈ ಸಂಬಂಧ, ಬ್ಯಾಂಕುಗಳಿಗೆ ಪ್ರತ್ಯೇಕವಾಗಿ, ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಸುತ್ತೋಲೆ ಸಂ. ಡಿಸಿಎಂ(ಎನ್ ಇ) ಸಂ. ಜಿ-2/08.07.18/2018-19 ದಿನಾಂಕ ಜುಲೈ 2, 2018 ಮೂಲಕ, ನಾಣ್ಯಗಳನ್ನು ವ್ಯವಹಾರಗಳ ಸಂಬಂಧ ಸ್ವೀಕರಿಸಲು ಮತ್ತು ತಮ್ಮ ಎಲ್ಲಾ ಶಾಖೆಗಳಲ್ಲಿ ಬದಲಾವಣೆ ಮಾಡಿಕೊಡಲು ಸೂಚನೆ ನೀಡಿದೆ ಮತ್ತು ಈ ಸೂಚನೆಯನ್ನು ಜನವರಿ 14, 2019 ರಂದು ಪರಿಷ್ಕರಿಸಿದೆ. ಯೋಗೇಶ್ ದಯಾಳ್ ಪತ್ರಿಕಾ ಪ್ರಕಟಣೆ: 2018-2019/3056 |