ರಂಗಾರೆಡ್ಡಿ ಕೋ-ಅಪರೇಟಿವ್ ಆರ್ಬನ್ ಬ್ಯಾಂಕ್ ಲಿಮಿಟೆಡ್ , ಹೈದರಾಬಾದ್, ತೆಲಂಗಾಣ - ಇದಕ್ಕೆ ದಂಡ
22 ಸೆಪ್ಟೆಂಬರ್ 2017 ರಂಗಾರೆಡ್ಡಿ ಕೋ-ಅಪರೇಟಿವ್ ಆರ್ಬನ್ ಬ್ಯಾಂಕ್ ಲಿಮಿಟೆಡ್ , ಹೈದರಾಬಾದ್, ತೆಲಂಗಾಣ - ಇದಕ್ಕೆ ದಂಡ ಭಾರತೀಯ ರಿಜರ್ವ್ ಬ್ಯಾಂಕು, ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949 (ಸಹಕಾರ ಸಂಘಗಳಿಗನ್ವಯಿಸುವಂತೆ) ರ ಕಲಂ 47A (1)(C) ಜೊತೆ ಪ್ರಕರಣ 46 (4) ರ ಅನ್ವಯ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ , ಆರ್‌ಬಿಐ ವಿಧಿಸಿದ ನಿರ್ದೇಶನಗಳ ಉಲ್ಲಂಘನೆ ಹಾಗೂ ಶಾಸಣಬದ್ಧತೆ / ಇತರೆ ನಿರ್ಬಂಧನೆಗಳ ಉಲ್ಲಂಘನೆ ಮತ್ತು ಸಾಲ ನೀಡುವ ಗರಿಷ್ಠ ಮೊತ್ತದ ಮಿತಿ ಉಲಂಘನೆ ಕಾರಣ ರಂಗಾರೆಡ್ಡಿ ಕೋ-ಅಪರೇಟಿವ್ ಆರ್ಬನ್ ಬ್ಯಾಂಕ್ ಲಿಮಿಟೆಡ್ , ಹೈದರಾಬಾದ್, ತೆಲಂಗಾಣ ಇದಕ್ಕೆ ರೂ.1.00 ಲಕ್ಷ ದಂಡವನ್ನು ವಿಧಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಈ ಬ್ಯಾಂಕಿಗೆ ಕಾರಣ ಕೇಳಿ ನೋಟೀಸ್ ಜಾರಿ ಮಾಡಿದ್ದು, ಇದಕ್ಕೆ ಬ್ಯಾಂಕ್ ಲಿಖಿತ ಉತ್ತರ ನೀಡಿದೆ. ಪ್ರಕರಣದ ವಾಸ್ತವಾಂಶಗಳನ್ನು ಹಾಗೂ ಬ್ಯಾಂಕಿನ ಉತ್ತರವನ್ನು ಮತ್ತು ಖುದ್ದಾಗಿ ನೀಡಿದ ಹೇಳಿಕೆಯನ್ನು ಪರಿಶೀಲಿಸಿದ ತರುವಾಯ ಉಲ್ಲಂಘನೆಯು ಸಾಬೀತಾಗಿದೆಯೆಂದು ಪರಿಗಣಿಸಿ, ಬ್ಯಾಂಕು ದಂಡನಾರ್ಹವೆಂದು ಭಾರತೀಯ ರಿಸರ್ವ್ ಬ್ಯಾಂಕ್ ತೀರ್ಮಾನಿಸಿದೆ. ಅಜಿತ್ ಪ್ರಸಾದ್ ಪತ್ರಿಕಾ ಪ್ರಕಟಣೆ : 2017-2018/815 |
ಪೇಜ್ ಕೊನೆಯದಾಗಿ ಅಪ್ಡೇಟ್ ಆದ ದಿನಾಂಕ: