<font face="mangal" size="3px">ಶ್ರೀ. ಎಂ.ರಾಜೇಶ್ವರ ರಾವ್ ಅವರನ್ನು ಆರ್ ಬಿ ಐ ನೂತನ ಕಾ - ಆರ್ಬಿಐ - Reserve Bank of India
ಶ್ರೀ. ಎಂ.ರಾಜೇಶ್ವರ ರಾವ್ ಅವರನ್ನು ಆರ್ ಬಿ ಐ ನೂತನ ಕಾರ್ಯನಿರ್ವಾಹಕ ನಿರ್ದೇಶಕರನ್ನಾಗಿ ನೇಮಿಸಿದೆ
ನವಂಬರ್ 07, 2016 ಶ್ರೀ. ಎಂ.ರಾಜೇಶ್ವರ ರಾವ್ ಅವರನ್ನು ಆರ್ ಬಿ ಐ ನೂತನ ಕಾರ್ಯನಿರ್ವಾಹಕ ನಿರ್ದೇಶಕರನ್ನಾಗಿ ನೇಮಿಸಿದೆ. ಶ್ರೀ. ಜಿ. ಮಹಾಲಿಂಗಮ್ ಅವರು ಸ್ವಯಂ ನಿವೃತ್ತಿ ತೆಗೆದುಕೊಳ್ಳುತ್ತಿರುವ ಕಾರಣ ಶ್ರೀ. ಎಂ.ರಾಜೇಶ್ವರ ರಾವ್ ಅವರನ್ನು ಭಾರತೀಯ ರಿಸರ್ವ್ ಬ್ಯಾಂಕ್ ನೂತನ ಕಾರ್ಯನಿರ್ವಾಹಕ ನಿರ್ದೇಶಕರನ್ನಾಗಿ ನೇಮಿಸಿದೆ.ಕಾರ್ಯಕಾರಿ ನಿರ್ದೇಶಕರಾಗಿ ರಾಜೇಶ್ವರ ರಾವ್ ಅವರು ಅಂಕಿಅಂಶ ಮತ್ತು ಮಾಹಿತಿ ಆಡಳಿತ ಇಲಾಖೆ , ಹಣಕಾಸು ಮಾರುಕಟ್ಟೆ ಕಾರ್ಯಾಚರಣೆ ಇಲಾಖೆ ಮತ್ತು ಅಂತಾರಾಷ್ಟ್ರೀಯ ಇಲಾಖೆಯ ಉಸ್ತುವಾರಿ ವಹಿಸಲಿದ್ದಾರೆ. ಕಾರ್ಯಕಾರಿ ನಿರ್ದೇಶಕರಾಗುವ ಮೊದಲು ಶ್ರೀ. ಎಂ.ರಾಜೇಶ್ವರ ರಾವ್ ಅವರು ಹಣಕಾಸು ಮಾರುಕಟ್ಟೆ ಕಾರ್ಯಾಚರಣೆ ಇಲಾಖೆಯ ಮುಖ್ಯ ಮಹಾ ಪ್ರಬಂಧಕರಾಗಿದ್ದರು. ಶ್ರೀ. ಎಂ.ರಾಜೇಶ್ವರ ರಾವ್ ಅವರು ಕೊಚ್ಚಿ ವಿಶ್ವವಿದ್ಯಾಲಯದಿಂದ ಏಕೋನೋಮಿಕ್ಸ್ನಲ್ಲಿ ಬಿ ಎ ಹಾಗೂ ಎಂ ಬಿ ಎ ಪದವಿಯನ್ನು ಪಡೆದಿದ್ದಾರೆ ಅವರು ಸರ್ಟಿಫೈಡ್ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕರ್ಸ್ ಕೂಡ ಆಗಿದ್ದಾರೆ. 1984 ರಲ್ಲಿ ಕೇಂದ್ರೀಯ ಬ್ಯಾಂಕರ್ ಆಗಿ ವೃತ್ತಿ ಆರಂಭಿಸಿದ ಶ್ರೀ. ಎಂ.ರಾಜೇಶ್ವರ ರಾವ್ ಅವರು ಸೆಂಟ್ರಲ್ ಬ್ಯಾಂಕಿಂಗಿನ ಹಲವಾರು ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಅವರು ಈ ಮೊದಲು ರಿಸ್ಕ್ ಮಾನಿಟರಿಂಗ್ ಇಲಾಖೆಯ ಉಸ್ತುವಾರಿ ನಡೆಸಿದ್ದರು. ಇವರು ಬ್ಯಾಂಕಿಂಗ್ ಲೋಕಪಾಲರಾಗಿ ಭಾರತೀಯ ರಿಸರ್ವ್ ಬ್ಯಾಂಕಿನ ನವ ದೆಹಲಿ , ಅಹಮದಾಬಾದ್ , ಹೈದರಾಬಾದ್ , ಚೆನ್ನೈ ಪ್ರಾದೇಶಿಕ ಕಛೇರಿಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಅಲ್ಪನ ಕಿಲ್ಲಾವಾಲಾ ಪತ್ರಿಕಾ ಪ್ರಕಟಣೆ : 2016-2017/1127 |