<font face="mangal" size="3">ಸಂಶಯಾಸ್ಪದ ಇ-ಅಂಚೆಗಳ ಬಗ್ಗೆ ಭಾರತೀಯ ರಿಸರ್ವ್ ಬ್ಯ  - ಆರ್‌ಬಿಐ - Reserve Bank of India
ಸಂಶಯಾಸ್ಪದ ಇ-ಅಂಚೆಗಳ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಎಚ್ಚರಿಕೆ ನೀಡಿದೆ
ಜುಲೈ 04, 2018 ಸಂಶಯಾಸ್ಪದ ಇ-ಅಂಚೆಗಳ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಎಚ್ಚರಿಕೆ ನೀಡಿದೆ ಭಾರತೀಯ ರಿಸರ್ವ್ ಬ್ಯಾಂಕಿನ ಹೆಸರು ಬಳಸಿಕೊಂಡು ಹಲವು ನೀತಿ ಬಾಹಿರ ವ್ಯಕ್ತಿಗಳು ಸಾರ್ವಜನಿಕರನ್ನು ಮೋಸಪಡಿಸುತ್ತಿರುವ ಚಟುವಟಿಕೆಗಳ ಬಗ್ಗೆ ಭಾ.ರಿ.ಬ್ಯಾಂಕ್ ಆಗಿಂದಾಗ್ಗೆ ಒತ್ತಿ ಹೇಳುತ್ತಲೇ ಇದೆ. ಈ ವಂಚಕರು ಭಾರತೀಯ ರಿಸರ್ವ್ ಬ್ಯಾಂಕಿನ ನಕಲಿ ಲೆಟರ್ ಹೆಡ್ ಅನ್ನು ಬಳಸಿಕೊಳ್ಳುತ್ತಿದ್ದಾರೆ ಮತ್ತು ಬ್ಯಾಂಕಿನ ಸಿಬ್ಬಂಧಿ ಎಂದು ಹೇಳಿಕೊಂಡು ಇ-ಅಂಚೆಗಳನ್ನು ಕಳುಹಿಸಿ ಸಂಶಯಾಸ್ಪದ ಕೊಡುಗೆ/ಲಾಟರಿ ಬಹುಮಾನ /ವಿದೇಶದಿಂದ ಕಡಿಮೆ ಬಡ್ಡಿ ದರದ ನಿಧಿಯಂತಹ ಆಮಿಷಗಳನ್ನು ಒಡ್ಡಿ ಜನರನ್ನು ಸೆಳೆಯುತ್ತಿದ್ದಾರೆ. ಹೀಗೆ ಸಂಪರ್ಕಿಸಲ್ಪಟ್ಟ ವ್ಯಕ್ತಿಗಳಿಗೆ ಕರೆನ್ಸಿ ಸಂಸ್ಕಾರಣಾ ಶುಲ್ಕ, ವಿದೇಶಿ ಹಣ ಪರಿವರ್ತನಾ ಶುಲ್ಕ, ಮುಂಗಡ ಪಾವತಿ ಮುಂತಾದ ನೆಪಗಳಿಂದ ಹಣ ಸುಲಿಗೆ ಮಾಡುತ್ತಾರೆ. ಇಂತಹ ಸಂಶಯಾಸ್ಪದ ಇ-ಅಂಚೆಗಳ ಬಗ್ಗೆ, ಭಾರತೀಯ ರಿಸರ್ವ್ ಬ್ಯಾಂಕ್, ಎಸ್ ಎಂ ಎಸ್, ಹೊರಾಂಗಣ ಜಾಹೀರಾತು ಮತ್ತು ದೂರದರ್ಶನದ ಮುಂತಾದ ಹಲವಾರು ವಿಧಾನಗಳ ಮೂಲಕ “ಸಾರ್ವಜನಿಕ ತಿಳುವಳಿಕೆ ಅಭಿಯಾನ” ಡ ಒಂದು ಭಾಗವಾಗಿ ಸಾರ್ವಜನಿಕರಿಗೆ ತಿಳುವಳಿಕೆ ನೀಡುತ್ತಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಕೆಳಕಂಡ ವಿಷಯಗಳನ್ನು ಒತ್ತಿ ಹೇಳುತ್ತಿದೆ.
ಇಂತಹ ವ್ಯಕ್ತಿಗಳು/ಸಂಸ್ಥೆಗಳಿಂದ ಬಂದ ಸಂದೇಶಗಳಿಗೆ ಉತ್ತರಿಸಬಾರದಂದು ಸಾರ್ವಜನಿಕರಿಗೆ ಸೂಚನೆ ನೀಡಲಾಗಿದೆ ಮತ್ತು ಆರ್‌ಬಿಐ ಹೆಸರಿನಲ್ಲಿ ಬರುವ ಈ-ಅಂಚೆಯ ಆಮಿಷಕ್ಕೆ ಬಲಿಯಾಗಬೇಡಿ ಎಂದೂ ಸೂಚಿಸಲಾಗಿದೆ. ಜೋಸ್ ಜೆ. ಕಟ್ಟೂರ್ ಪತ್ರಿಕಾ ಪ್ರಕಟಣೆ:2018-2019/34 |