RbiSearchHeader

Press escape key to go back

Past Searches

Theme
Theme
Text Size
Text Size
S1

Notification Marquee

RBI Announcements
RBI Announcements

RbiAnnouncementWeb

RBI Announcements
RBI Announcements

Asset Publisher

78526828

ಅನಧಿಕೃತ ವಿದೇಶಿ ವಿನಿಮಯ ವ್ಯವಹಾರ ವೇದಿಕೆಗಳ ವಿರುದ್ಧ ಭಾರತೀಯ ರಿಸರ್ವ್ ಬ್ಯಾಂಕ್ ಎಚ್ಚರಿಕೆ

ಫೆಬ್ರವರಿ 03, 2022

ಅನಧಿಕೃತ ವಿದೇಶಿ ವಿನಿಮಯ ವ್ಯವಹಾರ ವೇದಿಕೆಗಳ ವಿರುದ್ಧ ಭಾರತೀಯ ರಿಸರ್ವ್ ಬ್ಯಾಂಕ್ ಎಚ್ಚರಿಕೆ

ಸಾಮಾಜಿಕ ಜಾಲತಾಣ ಮಾಧ್ಯಮಗಳು, ಸರ್ಚ್ ಎಂಜಿನ್ ಗಳು, ಓ‌ಟಿ‌ಟಿ(OTT) ವೇದಿಕೆಗಳು, ಗೇಮಿಂಗ್ ಅಪ್ಪ್ಲಿಕೇಷನ್ ಗಳೂ ಸೇರಿದಂತೆ ಅನಧಿಕೃತ ವಿದ್ಯುನ್ಮಾನ ವ್ಯವಹಾರ ವೇದಿಕೆಗಳು (Electronic Trading Platforms-ETP), ಭಾರತೀಯ ನಿವಾಸಿಗಳಿಗೆ ವಿದೇಶಿ ವಿನಿಮಯ ವ್ಯವಹಾರ ಸೌಲಭ್ಯ ನೀಡುವುದಾಗಿ ತಿಳಿಸುವಂತಹ ದಾರಿ ತಪ್ಪಿಸುವ ಜಾಹೀರಾತುಗಳನ್ನು ನೀಡುತ್ತಿರುವುದು ಭಾರತೀಯ ರಿಸರ್ವ್ ಬ್ಯಾಂಕಿನ ಗಮನಕ್ಕೆ ಬಂದಿದೆ. ಇಂತಹ ETP ಗಳು ಏಜೆಂಟ್ ಗಳನ್ನು ನೇಮಿಸಿಕೊಂಡು ಸುಲಭವಾಗಿ ವಂಚಿಸಬಹುದಾದ ಜನಸಾಮಾನ್ಯರನ್ನುರನ್ನು ವೈಯಕ್ತಿಕವಾಗಿ ಸಂಪರ್ಕಿಸಿ ವಿದೇಶಿ ವಿನಿಮಯ ವ್ಯಾವಹಾರ/ಯೋಜನೆಗಳನ್ನು ಸೇರಲು ಪ್ರೇರೇಪಿಸುತ್ತಿರುವ ಹಾಗೂ ಇದರಿಂದ ಮಿತಿಮೀರಿದ/ಅತಿಯಾದ ಲಾಭ ಬರುವ ಆಮಿಷವನ್ನು ಒಡ್ಡುತ್ತಿರುವ ವರದಿಗಳು ಬಂದಿದೆ. ಮುಂದುವರಿದು, ಇಂತಹ ಅನಧಿಕೃತ ETP ಗಳು/ಪೋರ್ಟಲ್ ಗಳು ವಂಚನೆಗಳನ್ನು ಎಸಗಿರುವುದಾಗಿಯೂ ಮತ್ತು ಹಲವಾರು ನಿವಾಸಿಗಳು ಇಂತಹ ವ್ಯಾಪಾರ/ಯೋಜನೆಗಳಿಂದ ಹಣ ಕಳೆದುಕೊಂಡಿರುವದಾಗಿಯೂ ವರದಿಗಳು ಬಂದಿವೆ.

ಈ ಮೂಲಕ ಸ್ಪಷ್ಟ ಪಡಿಸುವುದೇನೆಂದರೆ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ, 1999 (FEMA) ರ ಅನ್ವಯ, ಭಾರತೀಯ ನಿವಾಸಿಗಳು ಅಧಿಕೃತ ವ್ಯಕ್ತಿಗಳ ಮೂಲಕ ಮಾತ್ರ ವಿದೇಶಿ ವಿನಿಮಯ ವ್ಯವಹಾರಗಳನ್ನು ನಡೆಸಬೇಕು ಮತ್ತು ಅನುಮತಿ ನೀಡಲಾದ ಉದ್ದೇಶಕ್ಕಾಗಿಯೇ ಬಳಸಬೇಕು. ಅನುಮತಿ ನೀಡಲಾದ ವಿದೇಶಿ ವಿನಿಮಯ ವ್ಯವಹಾರಗಳನ್ನು ವಿದ್ಯುನ್ಮಾನದ ಮೂಲಕ ನಡೆಸಬಹುದಾದರೂ, ಭಾರತೀಯ ರಿಸರ್ವ್ ಬ್ಯಾಂಕಿನಿಂದ ಅಧಿಕೃತಗೊಳಿಸಲ್ಪಟ್ಟ ETP ಗಳು ಅಥವಾ ಅಧಿಕೃತ ಷೇರು ವಿನಿಮಯ ಕೇಂದ್ರಗಳ (ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ ನಿಯಮಿತ, ಮುಂಬೈ ಷೇರು ವಿನಿಮಯ ಕೇಂದ್ರ ಮತ್ತು ಭಾರತೀಯ ಮಹಾನಗರ ಷೇರು ವಿನಿಮಯ ಕೇಂದ್ರ) ಮೂಲಕವೇ, ಭಾರತೀಯ ರಿಸರ್ವ್ ಬ್ಯಾಂಕ್ ಕಾಲ ಕಾಲಕ್ಕೆ ನಿರ್ಧಿಷ್ಟ ಪಡಿಸುವ ನಿಬಂಧನೆ ಮತ್ತು ಷರತ್ತುಗಳಿಗೆ ಅನುಗುಣವಾಗಿಯೇ ನಡೆಸಬೇಕು. ಸಾಗರೋತ್ತರ ವಿನಿಮಯ ಮಾರ್ಜಿನ್ ಗಾಗಿ/ಸಾಗರೋತ್ತರ ಕೌಂಟರ್ ಪಾರ್ಟಿ ಗಳಿಗೆ ರವಾನೆ ಮಾಡುವುದಕ್ಕೆ ಫೆಮಾ(FEMA) ಅಡಿಯಲ್ಲಿ ರಚಿಸಲಾದ ಉದಾರೀಕೃತ ರವಾನೆ ಯೋಜನೆ (Liberalised remittance Scheme) ಅಡಿಯಲ್ಲಿ ಅವಕಾಶವಿಲ್ಲ.

ಅಧಿಕೃತ ವ್ಯಕ್ತಿಗಳು ಮತ್ತು ಅಧಿಕೃತ ETP ಗಳ ಪಟ್ಟಿಯು ಭಾರತೀಯ ರಿಸರ್ವ್ ಬ್ಯಾಂಕಿನ ಜಾಲ ತಾಣದಲ್ಲಿ ದೊರಕುತ್ತದೆ. ವಿದೇಶಿ ವಿನಿಮಯ ವ್ಯವಹಾರಗಳ ಸಂಬಂಧ ಪದೇ ಪದೇ ಕೇಳಲಾಗುವ ಪ್ರಶ್ನೆಗಳನ್ನೂ (FAQs) ಸಹ ಸಾರ್ವಜನಿಕರ ಅವಗಾಹನೆಗಾಗಿ ಆರ್‌ಬಿ‌ಐ ಜಾಲತಾಣದಲ್ಲಿ ನೀಡಲಾಗಿದೆ.

ಸಾರ್ವಜನಿಕರು ಅನಧಿಕೃತ ETP ಗಳ ಮೂಲಕ ವಿದೇಶಿ ವಿನಿಮಯ ವ್ಯವಹಾರಗಳನ್ನು (FOREX) ಕೈಗೊಳ್ಳಬಾರದೆಂದು ಅಥವಾ ಅಂತಹ ಅನಧಿಕೃತ ವ್ಯವಹಾರಗಳಿಗೆ ಹಣವನ್ನು ರವಾನೆ/ಠೇವಣಿ ಮಾಡಬಾರದೆಂದು ಭಾರತೀಯ ರಿಸರ್ವ್ ಬ್ಯಾಂಕ್ ಎಚ್ಚರಿಕೆ ನೀಡುತ್ತದೆ. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಅಡಿಯಲ್ಲಿ ಅನುಮತಿ ನೀಡಲಾದ ವ್ಯವಹಾರಗಳನ್ನು ಹೊರತುಪಡಿಸಿ ಇತರೆ ಉದ್ದೇಶಗಳಿಗಾಗಿ ವಿದೇಶಿ ವಿನಿಮಯ ವ್ಯವಹಾರಗಳನ್ನು (FOREX) ಭಾರತೀಯ ನಿವಾಸಿಗಳು ಕೈಗೊಂಡಲ್ಲಿ ಅಥವಾ ಭಾರತೀಯ ರಿಸರ್ವ್ ಬ್ಯಾಂಕಿನಿಂದ ಅಧಿಕೃತ ಗೊಳ್ಳದ ETP ಗಳ ಮೂಲಕ ವ್ಯವವಹಾರಗಳನ್ನು ಕೈಗೊಂಡರೆ, ಅಂತಹ ವ್ಯಕ್ತಿಗಳು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಅಡಿಯಲ್ಲಿ ದಂಡಾರ್ಹ ಕ್ರಮಗಳಿಗೆ ಅರ್ಹರಾಗಿರುತ್ತಾರೆ.

(ಯೋಗೇಶ್ ದಯಾಳ್)   
ಮುಖ್ಯ ಮಹಾ ವ್ಯವಸ್ಥಾಪಕರು

ಪತ್ರಿಕಾ ಪ್ರಕಟಣೆ: 2021-2022/1660

RbiTtsCommonUtility

प्ले हो रहा है
ಕೇಳಿ

Related Assets

RBI-Install-RBI-Content-Global

RbiSocialMediaUtility

ಭಾರತೀಯ ರಿಸರ್ವ್ ಬ್ಯಾಂಕ್ ಮೊಬೈಲ್ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿ ಮತ್ತು ಇತ್ತೀಚಿನ ಸುದ್ದಿಗಳಿಗೆ ತ್ವರಿತ ಅಕ್ಸೆಸ್ ಪಡೆಯಿರಿ!

Scan Your QR code to Install our app

RbiWasItHelpfulUtility

ಈ ಪುಟವು ಸಹಾಯಕವಾಗಿತ್ತೇ?