RbiSearchHeader

Press escape key to go back

Past Searches

Theme
Theme
Text Size
Text Size
S3

Notification Marquee

RBI Announcements
RBI Announcements

RbiAnnouncementWeb

RBI Announcements
RBI Announcements

Asset Publisher

78515695

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರ ಉದ್ದಿಮೆಗಳಿಗಾಗಿ (ಎಂ ಎಸ್ ಎಂ ಇ ಗಳು) ಒಂದು ತಜ್ಞರ
ಸಮಿತಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ರಚಿಸಿದೆ

ಜನವರಿ 2, 2019

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರ ಉದ್ದಿಮೆಗಳಿಗಾಗಿ (ಎಂ ಎಸ್ ಎಂ ಇ ಗಳು) ಒಂದು ತಜ್ಞರ
ಸಮಿತಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ರಚಿಸಿದೆ

ಭಾರತೀಯ ಅರ್ಥ ವ್ಯವಸ್ಥೆಯಲ್ಲಿ ಎಂ ಎಸ್ ಎಂ ಗಳಿಗೆ ಇರುವ ಪ್ರಾಮುಖ್ಯತೆಯನ್ನು ಗಮನದಲ್ಲಿ ಇರಿಸಿಕೊಂಡು, ಎಂ ಎಸ್ ಎಂ ಇ ಗಳ ಸಾಧನೆಗಳಿಗೆ ಅಡ್ಡಿ ಬರುವ ಅಂಶಗಳು ಹಾಗೂ ತೊಡಕುಗಳನ್ನು ಅರಿತುಕೊಳ್ಳುವ ಅಗತ್ಯವಿದೆ. ಆದ್ಧರಿಂದ ಇದರ ಮೂಲ ಕಾರಣಗಳನ್ನು ಕಂಡು ಹಿಡಿಯುವ ಉದ್ದೇಶಕ್ಕಾಗಿ ಇದರ ಸಮಗ್ರ ಪರಿಶೀಲನೆ ಮಾಡುವೆ ಅಗತ್ಯ ಕಂಡು ಬಂದಿದೆ ಮತ್ತು ಎಂ ಎಸ್ ಎಂ ಇ ವಲಯದ ಆರ್ಥಿಕ ಶಕ್ತಿ ಮತ್ತು ಆರ್ಥಿಕ ಸ್ಥಿರತೆ ಸಂಬಂಧ ದೀರ್ಘ ಕಾಲಿಕ ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳಬೇಕಿದೆ.

ಇದಕ್ಕಾಗಿ, ದಿನಾಂಕ 2018-19 ರ ಐದನೇ ದ್ವೈಮಾಸಿಕ ವಿತ್ತೀಯ ನೀತಿ ವರದಿಯಲ್ಲಿ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿಗಾಗಿ ಒಂದು ತಜ್ಞರ ಸ್ಮಿತಿಯನ್ನು ಆರ್ ಬಿ ಐ ರಚಿಸುವುದಾಗಿ ತಿಳಿಸಿದೆ. ಅದರಂತೆ ಈ ಕೆಳಗೆ ಸೂಚಿಸಿರುವ ವ್ಯಕ್ತಿಗಳನ್ನೊಳಗೊಂಡ ಸಮಿತಿಯನ್ನು ಆರ್ ಬಿ ಐ ರಚಿಸಿದೆ.

1 ಶ್ರೀ ಯು.ಕೆ ಸಿನ್ಹಾ
ಮಾಜೀ ಅಧ್ಯಕ್ಷರು – SEBI
ಅಧ್ಯಕ್ಷರು
2 ಶ್ರೀ ರಾಮ್ ಮೋಹನ್ ಮಿಶ್ರಾ
ಹೆಚ್ಚುವರಿ ಕಾರ್ಯದರ್ಶಿ, ಅಭಿವೃದ್ಧಿ ಆಯುಕ್ತರು, ಎಂ ಎಸ್ ಎಂ ಇ
ಸದಸ್ಯರು
3 ಶ್ರೀ ಪಂಕಜ್ ಜೈನ್
ಜಂಟಿ ಕಾರ್ಯದರ್ಶಿ, ಹಣಕಾಸು ಸೇವಾ ಇಲಾಖೆ, ಆರ್ಥಿಕ ಸಚಿವಾಲಯ
ಸದಸ್ಯರು
4 ಶ್ರೀ ಪಿ. ಕೆ. ಗುಪ್ತಾ
ವ್ಯವಸ್ಥಾಪಕ ನಿರ್ದೇಶಕರೂ, ಭಾರತೀಯ ಸ್ಟೇಟ್ ಬ್ಯಾಂಕ್
ಸದಸ್ಯರು
5 ಶ್ರೀ ಅನೂಪ್ ಬಾಗ್ಚಿ
ಕಾರ್ಯ ನಿರ್ವಾಹಕ ನಿರ್ದೇಶಕರು ಐ ಸಿ ಐ ಸಿ ಐ ಬ್ಯಾಂಕ್
ಸದಸ್ಯರು
6 ಶ್ರೀ ಅಭಿಮಾನ್ ದಾಸ್
ಪ್ರಾಧ್ಯಾಪಕರು, ಐ ಐ ಎಂ- ಅಹ್ಮದಾಬಾದ್
ಸದಸ್ಯರು
7 ಶ್ರೀ ಶರದ್ ಶರ್ಮಾ
ಸಹ- ಸಂಸ್ತಾಪಕರು, iSPIRIT ಫೌಂಡೇಶನ್
ಸದಸ್ಯರು
8 ಕು. ಬಿಂದು ಅನಂತ್,
ಅಧ್ಯಕ್ಷರು, ದ್ವಾರ ಟ್ರಸ್ಟ್
ಸದಸ್ಯರು

ಸಮಿತಿಯು ಕೆಳಕಂಡ ಕರ್ತವ್ಯಗಳನ್ನು ನಿರ್ವಹಿಸಬೇಕಿದೆ.

  1. ಎಂ ಎಸ್ ಎಂ ಎ ವಲಯಕ್ಕೆ ಬೆಂಬಲವಾಗಿ ಈಗಿರುವ ಸಾಂಸ್ಥಿಕ ಚೌಕಟ್ಟುಗಳ ಅವಲೋಕನ

  2. ಇತ್ತೀಚಿಗಿನ ಸುಧಾರಣೆಗಳು ಈ ವಲಯದ ಮೇಲೆ ಬೀರಿರುವ ಪರಿಣಾಮಗಳ ಅಧ್ಯಯನ ಮತ್ತು ರಚನಾ ಸ್ವರೂಪದಲ್ಲಿ ಇರುವಂತಹ, ಈ ವಲಯದ ಬೆಳವಣಿಗೆಗೆ ತೊಡಕಾಗಿರುವ ಸಮಸ್ಯೆಗಳನ್ನು ಗುರುತುಸಿವಿಕೆ

  3. ಈ ವಲಯಕ್ಕೆ ಸಾಕಷ್ಟು ಮತ್ತು ಕಾಲ ಕಾಲಕ್ಕೆ ಹಣಕಾಸು ನೆರವು ಸಿಗದೇ ಇರುವುದಕ್ಕೆ ಇರುವ ಕಾರಣಗಳ ಪರಿಶೀಲನೆ

  4. ಎಂ ಎಸ್ ಎಂ ಇ ಗಳ ಸಂಬಂಧ ಪ್ರಪಂಚದಲ್ಲಿ ಇರುವ ಉತ್ತಮ ಆಚರಣೆಗಳ ಅಧ್ಯಯನ ಮತ್ತು ಭಾರತದಲ್ಲಿ ಅಳವಡಿಸಬಹುದಾದ ಕಡೆಯಲ್ಲಿ ಅವುಗಳನ್ನು ಅಳವಡಿಸುವುದಕ್ಕೆ ಶಿಫಾರಸ್ಸು ಮಾಡುವುದು

  5. ಈಗಿರುವ ಎಂ ಎಸ್ ಎಂ ಇ ಕೇಂದ್ರಿತ ನೀತಿಗಳನ್ನು ಮತ್ತುವಲಯದ ಮೇಲೆ ಅವುಗಳ ಪರಿಣಾಮಗಳನ್ನು ಗಳನ್ನು ಪರಾಮರ್ಶಿಸುವುದು

  6. ವಲಯದ ಶೀಘ್ರ ಬೆಳವಣಿಗೆಗೆ ಶಕ್ತಿ ನೀಡುವ ಕ್ರಮಗಳನ್ನು ಪ್ರಸ್ತಾಪಿಸುವುದು

  7. ಎಂ ಎಸ್ ಎಂ ಇ ವಲಯದ ಆರ್ಥಿಕ ಮತ್ತು ಹಣಕಾಸು ಸ್ಥಿರತೆಯನ್ನು ಕಾಪಾಡುದಕ್ಕೆ ದೀರ್ಘಾವದೀಯ ಪರಿಹಾರಗಳನ್ನು ಶಿಫಾರಸ್ಸು ಮಾಡುವುದು

ತಜ್ಞ ಸಮಿತಿಯು ತನ್ನ ವರದಿಯನ್ನು 2019 ರ ಜೂನ್ ಕೊನೆಯಲ್ಲಿ ಮಂಡಿಸುವುದು

ಜೋಸ್ ಜೆ. ಕಟ್ಟೂರ್
ಮುಖ್ಯ ಮಹಾ ವ್ಯವಸ್ಥಾಪಕರು

ಪತ್ರಿಕಾ ಪ್ರಕಟಣೆ: 2018-2019/1540

RbiTtsCommonUtility

प्ले हो रहा है
ಕೇಳಿ

Related Assets

RBI-Install-RBI-Content-Global

RbiSocialMediaUtility

ಭಾರತೀಯ ರಿಸರ್ವ್ ಬ್ಯಾಂಕ್ ಮೊಬೈಲ್ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿ ಮತ್ತು ಇತ್ತೀಚಿನ ಸುದ್ದಿಗಳಿಗೆ ತ್ವರಿತ ಅಕ್ಸೆಸ್ ಪಡೆಯಿರಿ!

Scan Your QR code to Install our app

RbiWasItHelpfulUtility

ಈ ಪುಟವು ಸಹಾಯಕವಾಗಿತ್ತೇ?