<p class="knudtext1">ಮೂರು ಹಾಗೂ ನಾಲ್ಕನೇ ದರ್ಜೆಯ ಕೇಂದ್ರಗಳ “ಪಿ ಓ ಎಸ್” ಗ  - ಆರ್ಬಿಐ - Reserve Bank of India
ಮೂರು ಹಾಗೂ ನಾಲ್ಕನೇ ದರ್ಜೆಯ ಕೇಂದ್ರಗಳ “ಪಿ ಓ ಎಸ್” ಗಳಲ್ಲಿ ಹಣ ಪಡೆಯುವ ಮಿತಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ದುಪ್ಪಟ್ಟುಗೊಳಿಸಿದೆ
ಆಗಸ್ಟ್ 27, 2015 ಮೂರು ಹಾಗೂ ನಾಲ್ಕನೇ ದರ್ಜೆಯ ಕೇಂದ್ರಗಳ “ಪಿ ಓ ಎಸ್” ಗಳಲ್ಲಿ ಹಣ ಪಡೆಯುವ ಮಿತಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ದುಪ್ಪಟ್ಟುಗೊಳಿಸಿದೆ ಮೂರು ಹಾಗೂ ನಾಲ್ಕನೇ ದರ್ಜೆಯ ಕೇಂದ್ರಗಳಲ್ಲಿ ಪಿ ಓ ಎಸ್ ಗಳಲ್ಲಿ ಹಣ ಪಡೆಯುವ ಮಿತಿಯನ್ನು ದುಪ್ಪಟ್ಟುಗೊಳಿಸಿ ರೂ.1೦೦೦/- ದಿಂದ ರೂ.2೦೦೦/-ಕ್ಕೆ ಏರಿಸಿದೆ.ಈ ಸೌಲಭ್ಯವು, ಡೆಬಿಟ್ ಕಾರ್ಡುಗಳು ಮತ್ತು ಕೇವಲ ಬ್ಯಾಂಕುಗಳು ನೀಡಿದ ಮುಕ್ತ ವ್ಯವಸ್ಥೆ ಪೂರ್ವ ಪಾವತಿ ಕಾರ್ಡುಗಳಿಗೆ ಮಾತ್ರ ಅನ್ವಯಿಸುತ್ತದೆ. ಈ ಹೆಚ್ಚುವರಿ ಮಿತಿಯು ಗ್ರಾಹಕರುಗಳಿಗೆ ಅನುಕೂಲವಾಗುತ್ತದೆ ಮತ್ತು ಮೂರು ಹಾಗೂ ನಾಲ್ಕನೇ ದರ್ಜೆಯ ಕೇಂದ್ರಗಳಲ್ಲಿ ನಗದಿನ ಮರುಬಳಕೆಯಾಗುವುದೆಂಬ ಚಿಂತನೆಯಿದೆ. ಇ-ಪಾವತಿ ಮತ್ತು ಸಂಬಂಧಿತ ಇತರೇ ಬೆಳವಣಿಗೆಗಳನ್ನು ಆಧಾರದ ಮೇಲೆ ಈ ವ್ಯವಸ್ಥೆಯ ಪುನರ್ವಿಮರ್ಶೆ ಮಾಡಲಾಗುವುದು. ಶುಲ್ಕ ನಿರ್ಧರಣೆಯಲ್ಲಿ ಪಾರದರ್ಶಕತೆ ತರಲು, ಎಲ್ಲಾ ಕೇಂದ್ರಗಳಲ್ಲೂ ವ್ಯವಹಾರ ಮೊತ್ತದ ಶೇ 1 ರಷ್ಟು ಮಾತ್ರ ಗ್ರಾಹಕ ಶುಲ್ಕವನ್ನು ವಿಧಿಸಬೇಕಾಗಿ ಬ್ಯಾಂಕುಗಳಿಗೆ ಸೂಚಿಸಲಾಗಿದೆ. ಈ ವ್ಯವಸ್ಥೆಯನ್ನು ಆರಂಭಿಸಿರುವ ಎಲ್ಲಾ ವ್ಯಾಪಾರ ಕೇಂದ್ರಗಳೂ ನಗದು ಪಡೆಯುವ ವ್ಯವಸ್ಥೆ ಮತ್ತು ಇದಕ್ಕೆ ಗ್ರಾಹಕರು ತೆರಬೇಕಾದ ಶುಲ್ಕ(ಇದ್ದಲ್ಲಿ) ದ ಬಗ್ಗೆ ಮಾಹಿತಿಯನ್ನು ಸ್ಪಷ್ಟವಾಗಿ ಪ್ರದರ್ಶಿಸಬೇಕು. ಕಾರ್ಡುದಾರರು ವಸ್ತುಗಳನ್ನು ಕೊಳ್ಳಲಿ ಅಥವಾ ಕೊಳ್ಳದಿರಲಿ, ಈ ಸೌಲಭ್ಯ ಪಡೆಯಬಹುದಾಗಿದೆ. ಎಟಿಎಮ್ ಗಳಲ್ಲಿ ಹಣ ಪಡೆಯುವ ರೀತಿಯಲ್ಲೇ, ಗ್ರಾಹಕರು ತಮ್ಮ ಕಾರ್ಡನ್ನು “ಪಿಓಎಸ್” ಗಳಲ್ಲಿ ಸ್ವೈಪ್ ಮಾಡಿ ತಮ್ಮ ಪಿನ್ ಸಂಖ್ಯೆ ಒತ್ತಿ ಹಣ ಪಡೆಯಬೇಕು. ಭಾರತೀಯ ರಿಸರ್ವ್ ಬ್ಯಾಂಕ್ “ಪಿಓಎಸ್” ಗಳಲ್ಲಿ ಡೆಬಿಟ್ ಕಾರ್ಡುಗಳ ಮೂಲಕ ಹಣ ಪಡೆಯುವ ಸೌಲಭ್ಯವನ್ನು ಜುಲೈ 2009 ರಿಂದ ಆರಂಭಿಸಿರುವುದನ್ನು ಸ್ಮರಿಸಬಹುದು. ತದನಂತರ, ಸೆಪ್ಟಂಬರ್ 2013 ರಿಂದ ಈ ಸೌಲಭ್ಯವನ್ನು ಬ್ಯಾಂಕುಗಳು ನೀಡಿದ ಪೂರ್ವ ಪಾವತಿ ಕಾರ್ಡುಗಳಿಗೂ ವಿಸ್ತರಿಸಲಾಗಿದೆ. ಅಲ್ಪನಾ ಕಿಲ್ಲಾವಾಲ ಪತ್ರಿಕಾ ಪ್ರಕಟಣೆ-2015-2016/511 |