<font face="mangal" size="3px">ಗೋಕುಲ್ ಆರ್ಬನ್ ಬ್ಯಾಂಕ್ ಲಿಮಿಟೆಡ್ , ಸಿಕಂದರಾಬಾದ & - ಆರ್ಬಿಐ - Reserve Bank of India
ಗೋಕುಲ್ ಆರ್ಬನ್ ಬ್ಯಾಂಕ್ ಲಿಮಿಟೆಡ್ , ಸಿಕಂದರಾಬಾದ ಗೆ ನೀಡಿರುವ ಮಾರ್ಗದರ್ಶನಗಳನ್ನು ಏಪ್ರಿಲ್ 04, 2017 ರ ವರೆಗೆ ಆರ್ ಬಿ ಐ ವಿಸ್ತರಿಸಿದೆ.
ಅಕ್ಟೋಬರ್ 05 , 2016 ಗೋಕುಲ್ ಆರ್ಬನ್ ಬ್ಯಾಂಕ್ ಲಿಮಿಟೆಡ್ , ಸಿಕಂದರಾಬಾದ ಗೆ ನೀಡಿರುವ ಮಾರ್ಗದರ್ಶನಗಳನ್ನು ಏಪ್ರಿಲ್ 04, 2017 ರ ವರೆಗೆ ಆರ್ ಬಿ ಐ ವಿಸ್ತರಿಸಿದೆ. ಗೋಕುಲ್ ಆರ್ಬನ್ ಬ್ಯಾಂಕ್ ಲಿಮಿಟೆಡ್ , ಸಿಕಂದರಾಬಾದಗೆ ನೀಡಿದ ಮಾರ್ಗದರ್ಶನಗಳ ಸಿಂಧುತ್ವದ ಅವಧಿಯನ್ನು ಹೆಚ್ಚುವರಿ ಆರು ತಿಂಗಳವರೆಗೆ ಭಾರತೀಯ ರಿಸರ್ವ್ ಬ್ಯಾಂಕ್ ಸಾರ್ವಜನಿಕರ ಹಿತಾಸಕ್ತಿಯ ದೃಷ್ಟಿಯಿಂದ ವಿಸ್ತರಿಸಿದೆ. ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ 1949 (ಕೋ-ಒಪರೇಟಿವ್ ಸಂಘಗಳಿಗೆ ಅನ್ವಯವಾಗುವಂತೆ ) ಕಲಂ 35A ರ ಉಪ ಕಲಂ (1) ರ ಅಡಿಯಲ್ಲಿ ಅಧಿಕಾರ ಚಲಾಯಿಸಿ ಭಾರತೀಯ ರಿಸರ್ವ್ ಬ್ಯಾಂಕ್ , ಗೋಕುಲ್ ಆರ್ಬನ್ ಬ್ಯಾಂಕ್ ಲಿಮಿಟೆಡ್ , ಸಿಕಂದರಾಬಾದಗೆ ನೀಡಿದ ಮಾರ್ಗದರ್ಶನಗಳು ಬ್ಯಾಂಕಿನ ವ್ಯವಹಾರದ ಕೊನೆಯ ದಿನ ಏಪ್ರಿಲ್ 04, 2016 ದಿಂದ ಹೆಚ್ಚುವರಿ ಆರು ತಿಂಗಳು ಅಂದರೆ ಏಪ್ರಿಲ್ 04, 2017 ರ ವರೆಗೆ ವಿಸ್ತರಿಸಲಾಗಿದೆ (ಪರಿಶೀಲನೆಗೆ ಒಳಪಡುತ್ತದೆ). ಉಲ್ಲೇಖದ ಅಡಿಯಲ್ಲಿರುವ ನಿರ್ದೇಶನದ ಇತರ ನಿಯಮಗಳು ಮತ್ತು ಷರತ್ತುಗಳು ಬದಲಾಗದೆ ಹಾಗೆ ಉಳಿಯುತ್ತವೆ. ಸೆಪ್ಟೆಂಬರ್ 30, 2016 ರ ನಿರ್ದೇಶನದ ಒಂದು ಪ್ರತಿಯನ್ನು ಬ್ಯಾಂಕ್ ಆವರಣದಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರದರ್ಶಿಸಲಾಗಿದೆ. ಅಜಿತ್ ಪ್ರಸಾದ ಪತ್ರಿಕಾ ಪ್ರಕಟಣೆ : 2016-2017/865 |