<font face="mangal" size="3">ರುಪೀ ಕೋ-ಅಪರೇಟಿವ್ ಬ್ಯಾಂಕ್ ಲಿಮಿಟೆಡ್, ಪೂನೆ - ಇದಕ್&# - ಆರ್ಬಿಐ - Reserve Bank of India
ರುಪೀ ಕೋ-ಅಪರೇಟಿವ್ ಬ್ಯಾಂಕ್ ಲಿಮಿಟೆಡ್, ಪೂನೆ - ಇದಕ್ಕೆ ನೀಡಿದ್ದ ನಿರ್ದೇಶನ ವಿಸ್ತರಣೆ
22, ನವೆಂಬರ್ 2017 ರುಪೀ ಕೋ-ಅಪರೇಟಿವ್ ಬ್ಯಾಂಕ್ ಲಿಮಿಟೆಡ್, ಪೂನೆ - ಇದಕ್ಕೆ ನೀಡಿದ್ದ ನಿರ್ದೇಶನ ವಿಸ್ತರಣೆ ಭಾರತೀಯ ರಿಜರ್ವ್ ಬ್ಯಾಂಕು (ಆದೇಶ DCBS.CO.AID-I/D-21/12.22.218/2017-18 ದಿನಾಂಕ 17, ನವೆಂಬರ್ 2017 ರ ಅನ್ವಯ) ರುಪೀ ಕೋ-ಅಪರೇಟಿವ್ ಬ್ಯಾಂಕ್ ಲಿಮಿಟೆಡ್, ಪೂನೆ - ಇದಕ್ಕೆ ನೀಡಿದ್ದ ನಿರ್ದೇಶನಗಳನ್ನು 22 ನವೆಂಬರ್ 2017 ರಿಂದ 31 ಮೇ 2018 ರ ಅವಧಿಗೆ ವಿಸ್ತರಿಸಲಾಗಿದೆ (ಪರಿಶೀಲನೆಗೆ ಒಳಪಡುತ್ತದೆ). ಮೇಲೆ ತಿಳಿಸಿದ ಬ್ಯಾಂಕಿಗೆ ಈ ಹಿಂದೆ ಮೂಲತಃ 22 ಫೆಬ್ರವರಿ 2013 ರಿಂದ 21 ಆಗಸ್ಟ್ 2013 ರ ವರೆಗೆ ನಿರ್ದೇಶನ ನೀಡಲಾಗಿ, ನಂತರ 8 ಬಾರಿ 6 ತಿಂಗಳ ಅವಧಿಗೆ ಹಾಗೂ 3 ಬಾರಿ 3 ತಿಂಗಳ ಅವಧಿಗೆ ವಿಸ್ತರಿಸಲಾಗಿತ್ತು. ಅಂತಹ ನಿರ್ದೇಶನಗಳು ಕಡೆಯದಾಗಿ 3 ತಿಂಗಳು ಅಂದರೆ 22 ಆಗಸ್ಟ್ 2017 ರಿಂದ 21 ನವೆಂಬರ್ 2017 ರ ಅವಧಿಗೆ ವಿಸ್ತರಿಸಲಾಗಿರುತ್ತವೆ ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ 1949 ಕಲಂ 35A ರ ಉಪ ಕಲಂ (1) ಜೊತೆ ಕಲಂ 56 ರ ಅಡಿಯಲ್ಲಿ ಅಧಿಕಾರ ಚಲಾಯಿಸಿ ಭಾರತೀಯ ರಿಸರ್ವ್ ಬ್ಯಾಂಕ್ ಈ ಮಾರ್ಗದರ್ಶನಗಳನ್ನು ವಿಧಿಸಿದೆ. ನಿರ್ದೇಶನದ ಒಂದು ಪ್ರತಿಯನ್ನು ಬ್ಯಾಂಕ್ ಆವರಣದಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರದರ್ಶಿಸಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕಿನಿಂದ ಆದ ಮಾರ್ಗದರ್ಶನಗಳ ನೀಡಿಕೆ ಬ್ಯಾಂಕಿಂಗ್ ಪರವಾನಗಿ ರದ್ದು ಎಂದು ಅರ್ಥೈಸಿಕೊಳ್ಳಬಾರದು . ಬ್ಯಾಂಕ್ ತನ್ನ ಹಣಕಾಸಿನ ಸ್ಥಿತಿಯಲ್ಲಿ ಸುಧಾರಣೆ ಆಗುವ ತನಕ ನಿರ್ಬಂಧಗಳೊಂದಿಗೆ ಬ್ಯಾಂಕಿಂಗ್ ವ್ಯವಹಾರ ಮಾಡುತ್ತದೆ. ಸಂದರ್ಭಗಳನ್ನು ಅವಲಂಬಿಸಿ ರಿಸರ್ವ್ ಬ್ಯಾಂಕ್ ಈ ಮಾರ್ಗದರ್ಶನಗಳ ಬದಲಾವಣೆಗಳನ್ನು ಪರಿಗಣಿಸಬಹುದು. ಅಜಿತ್ ಪ್ರಸಾದ್ ಪತ್ರಿಕಾ ಪ್ರಕಟಣೆ : 2017-2018/1410 |