<font face="mangal" size="3px">ಶ್ರೀ ಸಾಯೀ ಆರ್ಬನ್ ಕೋ-ಒಪರೇಟಿವ್ ಬ್ಯಾಂಕ್ ಲಿಮಿಟೆ - ಆರ್ಬಿಐ - Reserve Bank of India
ಶ್ರೀ ಸಾಯೀ ಆರ್ಬನ್ ಕೋ-ಒಪರೇಟಿವ್ ಬ್ಯಾಂಕ್ ಲಿಮಿಟೆಡ್ , ಮುಖೇಡ್ ಜಿಲ್ಲೆ , ನಾಂದೇಡ್ , ಮಹಾರಾಷ್ಟ್ರ - ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ 1949 ಕಲಂ 35 A ರ ಅಡಿಯಲ್ಲಿರುವ ನಿರ್ದೇಶನಗಳನ್ನು 31 ಡಿಸೆಂಬರ್ 2016 ರ ವರೆಗೆ ವಿಸ್ತರಣೆ.
ಅಕ್ಟೋಬರ್ 03, 2016 ಶ್ರೀ ಸಾಯೀ ಆರ್ಬನ್ ಕೋ-ಒಪರೇಟಿವ್ ಬ್ಯಾಂಕ್ ಲಿಮಿಟೆಡ್ , ಮುಖೇಡ್ ಜಿಲ್ಲೆ , ನಾಂದೇಡ್ , ಮಹಾರಾಷ್ಟ್ರ - ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ 1949 ಕಲಂ 35 A ರ ಅಡಿಯಲ್ಲಿರುವ ನಿರ್ದೇಶನಗಳನ್ನು 31 ಡಿಸೆಂಬರ್ 2016 ರ ವರೆಗೆ ವಿಸ್ತರಣೆ. ಭಾರತೀಯ ರಿಸರ್ವ್ ಬ್ಯಾಂಕ್ ಶ್ರೀ ಸಾಯೀ ಆರ್ಬನ್ ಕೋ-ಒಪರೇಟಿವ್ ಬ್ಯಾಂಕ್ ಲಿಮಿಟೆಡ್ , ಮುಖೇಡ್ ಜಿಲ್ಲೆ , ನಾಂದೇಡ್ , ಮಹಾರಾಷ್ಟ್ರಗೆ ನೀಡಿರುವ ನಿರ್ದೇಶನಗಳನ್ನು ಹೆಚ್ಚುವರಿ ಮೂರು ತಿಂಗಳು ಬ್ಯಾಂಕಿನ ವ್ಯವಹಾರದ ಮೊದಲ ದಿನ ಸೆಪ್ಟೆಂಬರ್ 30, 2016 ದಿಂದ ವ್ಯವಹಾರದ ಕೊನೆಯ ದಿನ ಡಿಸೆಂಬರ್ 31, 2016 ರ ವರೆಗೆ ವಿಸ್ತರಿಸಲಾಗಿದೆ , ಪರಿಶೀಲನೆಗೆ ಒಳಪಡುತ್ತದೆ. ಬ್ಯಾಂಕು ಜುಲೈ 01, 2015 ರಿಂದ ಮಾರ್ಗದರ್ಶನಗಳ ಅಡಿಯಲ್ಲಿತ್ತು. ಈ ಮಾರ್ಗದರ್ಶನಗಳನ್ನು ಈ ಹಿಂದೆ ಎರಡು ಸಂದರ್ಭಗಳಲ್ಲಿ ಒಂಬತ್ತು ತಿಂಗಳವರೆಗೆ ವಿಸ್ತರಿಸಲಾಗಿತ್ತು . ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ 1949 ಕಲಂ 35A ರ ಉಪ ಕಲಂ (1) ರ ಅಡಿಯಲ್ಲಿ ಅಧಿಕಾರ ಚಲಾಯಿಸಿ ಭಾರತೀಯ ರಿಸರ್ವ್ ಬ್ಯಾಂಕ್ ಈ ಮಾರ್ಗದರ್ಶನಗಳನ್ನು ವಿಧಿಸಿದೆ. ನಿರ್ದೇಶನದ ಒಂದು ಪ್ರತಿಯನ್ನು ಬ್ಯಾಂಕ್ ಆವರಣದಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರದರ್ಶಿಸಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕಿನಿಂದ ಆದ ಮಾರ್ಗದರ್ಶನಗಳ ನೀಡಿಕೆ ಬ್ಯಾಂಕಿಂಗ್ ಪರವಾನಗಿ ರದ್ದು ಎಂದು ಅರ್ಥೈಸಿಕೊಳ್ಳಬಾರದು . ಬ್ಯಾಂಕ್ ತನ್ನ ಹಣಕಾಸಿನ ಸ್ಥಿತಿಯಲ್ಲಿ ಸುಧಾರಣೆ ಆಗುವ ತನಕ ನಿರ್ಬಂಧಗಳೊಂದಿಗೆಬ್ಯಾಂಕಿಂಗ್ ವ್ಯವಹಾರ ಮಾಡುತ್ತದೆ. ಸಂದರ್ಭಗಳನ್ನು ಅವಲಂಬಿಸಿ ರಿಸರ್ವ್ ಬ್ಯಾಂಕ್ ಈ ಮಾರ್ಗದರ್ಶನಗಳ ಬದಲಾವಣೆಗಳನ್ನು ಪರಿಗಣಿಸಬಹುದು. ಅಜಿತ್ ಪ್ರಸಾದ ಪತ್ರಿಕಾ ಪ್ರಕಟಣೆ : 2016/2017/840 |