RbiSearchHeader

Press escape key to go back

Past Searches

rbi.page.title.1
rbi.page.title.2

Notification Marquee

RBI Announcements
RBI Announcements

RbiAnnouncementWeb

RBI Announcements
RBI Announcements

Asset Publisher

78490528

ಬ್ರಹ್ಮವರ್ಟ್ ಕಮ್ಮೆರ್ಷಿಯಲ್ ಕೋ-ಒಪೆರಟಿವ್ ಬ್ಯಾಂಕ್ ಲಿಮಿಟೆಡ್ , ಕಾನ್ಪೂರ್ , ಉತ್ತರ ಪ್ರದೇಶ ಗೆ ಆರ್ ಬಿ ಐ ನೀಡಿರುವ ಮಾರ್ಗದರ್ಶನಗಳನ್ನು ಜುಲೈ 06 , 2017 ರ ವರೆಗೆ ವಿಸ್ತರಿಸಲಾಗಿದೆ

ಜನವರಿ 16, 2017

ಬ್ರಹ್ಮವರ್ಟ್ ಕಮ್ಮೆರ್ಷಿಯಲ್ ಕೋ-ಒಪೆರಟಿವ್ ಬ್ಯಾಂಕ್ ಲಿಮಿಟೆಡ್ , ಕಾನ್ಪೂರ್ , ಉತ್ತರ ಪ್ರದೇಶ ಗೆ ಆರ್ ಬಿ ಐ ನೀಡಿರುವ ಮಾರ್ಗದರ್ಶನಗಳನ್ನು ಜುಲೈ 06 , 2017 ರ ವರೆಗೆ ವಿಸ್ತರಿಸಲಾಗಿದೆ .

ಬ್ರಹ್ಮವರ್ಟ್ ಕಮ್ಮೆರ್ಷಿಯಲ್ ಕೋ-ಒಪೆರಟಿವ್ ಬ್ಯಾಂಕ್ ಲಿಮಿಟೆಡ್ , ಕಾನ್ಪೂರ್ , ಉತ್ತರ ಪ್ರದೇಶ ಗೆ ಭಾರತೀಯ ರಿಸರ್ವ್ ಬ್ಯಾಂಕ್ ನೀಡಿರುವ ನಿರ್ದೇಶನಗಳನ್ನು ಹೆಚ್ಚುವರಿ ಆರು ತಿಂಗಳು ಅಂದರೆ ಜನವರಿ 07 , 2017 ದಿಂದ ಜುಲೈ 06 , 2017 ರ ವರೆಗೆ ವಿಸ್ತರಿಸಲಾಗಿದೆ (ಪರಿಶೀಲನೆಗೆ ಒಳಪಡುತ್ತದೆ). ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ 1949 ಕಲಂ 35A ರ ಉಪ ಕಲಂ (1) ರ ಅಡಿಯಲ್ಲಿ ನೀಡಿರುವ ಸೂಚನೆಯ ಪ್ರಕಾರ ಬ್ಯಾಂಕು ಜುಲೈ 07, 2015 ರಿಂದ ಮಾರ್ಗದರ್ಶನಗಳ ಅಡಿಯಲ್ಲಿತ್ತು. ಈ ಮೇಲಿನ ಮಾರ್ಗದರ್ಶನಗಳ ಬದಲಾಯಿಸಿ ಸಿಂಧುತ್ವವನ್ನು ದಿನಾಂಕ ಜನವರಿ 06, 2017 ರ ವರೆಗೆ ವಿಸ್ತರಿಸಲಾಗಿತ್ತು . ಈ ಅವಧಿಯನ್ನು ದಿನಾಂಕ ಡಿಸೆಂಬರ್ 30 , 2016 ರಲ್ಲಿ ನೀಡಿದ ಸೂಚನೆಯ ಮೇರೆಗೆ ಹೆಚ್ಚುವರಿ ಆಗಿ ಜುಲೈ 06, 2017 ರ ವರೆಗೆ ವಿಸ್ತರಿಸಲಾಗಿದೆ. ಉಲ್ಲೇಖದ ಅಡಿಯಲ್ಲಿರುವ ನಿರ್ದೇಶನದ ಇತರ ನಿಯಮಗಳು ಮತ್ತು ಷರತ್ತುಗಳು ಬದಲಾಗದೆ ಹಾಗೆ ಉಳಿಯುತ್ತವೆ. ದಿನಾಂಕ ಡಿಸೆಂಬರ್ 30 , 2016 ರ ನಿರ್ದೇಶನದ ಒಂದು ಪ್ರತಿಯನ್ನು ಬ್ಯಾಂಕ್ ಆವರಣದಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರದರ್ಶಿಸಲಾಗಿದೆ.

ಭಾರತೀಯ ರಿಸರ್ವ್ ಬ್ಯಾಂಕಿನ ಮೇಲಿನ ಬದಲಾವಣೆಯು ಮೇಲಿನ ಬ್ಯಾಂಕಿನ ಆರ್ಥಿಕ ಪರಿಸ್ಥಿತಿಯಲ್ಲಿ ಉತ್ತಮ /ಕೆಟ್ಟ ಬದಲಾವಣೆ ಎಂದು ಅರ್ಥೈಸಲಾಗುವುದಿಲ್ಲ. . ಸಂದರ್ಭಗಳನ್ನು ಅವಲಂಬಿಸಿ ರಿಸರ್ವ್ ಬ್ಯಾಂಕ್ ಈ ಮಾರ್ಗದರ್ಶನಗಳ ಬದಲಾವಣೆಗಳನ್ನು ಪರಿಗಣಿಸಬಹುದು.

ಅಜಿತ್ ಪ್ರಸಾದ್
ಸಹಾಯಕ ಸಲಹೆಗಾರರು

ಪತ್ರಿಕಾ ಪ್ರಕಟಣೆ : 2016-2017/1898

RbiTtsCommonUtility

प्ले हो रहा है
ಕೇಳಿ

Related Assets

RBI-Install-RBI-Content-Global

RbiSocialMediaUtility

ಭಾರತೀಯ ರಿಸರ್ವ್ ಬ್ಯಾಂಕ್ ಮೊಬೈಲ್ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿ ಮತ್ತು ಇತ್ತೀಚಿನ ಸುದ್ದಿಗಳಿಗೆ ತ್ವರಿತ ಅಕ್ಸೆಸ್ ಪಡೆಯಿರಿ!

Scan Your QR code to Install our app