<font face="mangal" size="3">ಬ್ರಹ್ಮಾವರ್ತ್ ಕಮರ್ಷಿಯಲ್ ಸಹಕಾರಿ ಬ್ಯಾಂಕ್ ಲಿಮಿ - ಆರ್ಬಿಐ - Reserve Bank of India
ಬ್ರಹ್ಮಾವರ್ತ್ ಕಮರ್ಷಿಯಲ್ ಸಹಕಾರಿ ಬ್ಯಾಂಕ್ ಲಿಮಿಟೆಡ್ , ಕಾನ್ಪುರ್, ಉತ್ತರ ಪ್ರದೇಶ – ಇದಕ್ಕೆ ನೀಡಿದ್ದ
ನಿರ್ದೇಶನಗಳನ್ನು 06 ಮಾರ್ಚ್ 2018 ರ ವರೆಗೆ ವಿಸ್ತರಣೆ
06 ನವೆಂಬರ್, 2017 ಬ್ರಹ್ಮಾವರ್ತ್ ಕಮರ್ಷಿಯಲ್ ಸಹಕಾರಿ ಬ್ಯಾಂಕ್ ಲಿಮಿಟೆಡ್ , ಕಾನ್ಪುರ್, ಉತ್ತರ ಪ್ರದೇಶ – ಇದಕ್ಕೆ ನೀಡಿದ್ದ ಭಾರತೀಯ ರಿಸರ್ವ್ ಬ್ಯಾಂಕ್ ಬ್ರಹ್ಮಾವರ್ತ್ ಕಮರ್ಷಿಯಲ್ ಸಹಕಾರಿ ಬ್ಯಾಂಕ್ ಲಿಮಿಟೆಡ್ , ಕಾನ್ಪುರ್, ಉತ್ತರ ಪ್ರದೇಶ - ಇದಕ್ಕೆ ನೀಡಿರುವ ಮಾರ್ಗದರ್ಶನಗಳನ್ನು ದಿನಾಂಕ ನವೆಂಬರ್ 01, 2017 ರ ಆದೇಶದ ಅನ್ವಯ ಹೆಚ್ಚುವರಿ ನಾಲ್ಕು ತಿಂಗಳು ಅಂದರೆ 07 ನವೆಂಬರ್ 2017 ರಿಂದ 06 ಮಾರ್ಚ್ 2018 ರ ವರೆಗೆ ವಿಸ್ತರಿಸಲಾಗಿದೆ (ಪರಿಶೀಲನೆಗೆ ಒಳಪಡುತ್ತದೆ). ಬ್ಯಾಂಕು ಜುಲೈ 07, 2015 ರಿಂದ ಮಾರ್ಗದರ್ಶನಗಳ ಅಡಿಯಲ್ಲಿತ್ತು. ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ 1949 ಕಲಂ 35A ರ ಅಡಿಯಲ್ಲಿ ಅಧಿಕಾರ ಚಲಾಯಿಸಿ ಭಾರತೀಯ ರಿಸರ್ವ್ ಬ್ಯಾಂಕ್ ಈ ಮಾರ್ಗದರ್ಶನಗಳನ್ನು ವಿಧಿಸಿದೆ. ನವೆಂಬರ್ 01, 2017 ರ ನಿರ್ದೇಶನದ ಒಂದು ಪ್ರತಿಯನ್ನು ಬ್ಯಾಂಕ್ ಆವರಣದಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರದರ್ಶಿಸಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕಿನಿಂದ ಆದ ಮಾರ್ಗದರ್ಶನಗಳ ನೀಡಿಕೆ ಬ್ಯಾಂಕಿಂಗ್ ಪರವಾನಗಿ ರದ್ದು ಎಂದು ಅರ್ಥೈಸಿಕೊಳ್ಳಬಾರದು . ಬ್ಯಾಂಕ್ ತನ್ನ ಹಣಕಾಸಿನ ಸ್ಥಿತಿಯಲ್ಲಿ ಸುಧಾರಣೆ ಆಗುವ ತನಕ ನಿರ್ಬಂಧಗಳೊಂದಿಗೆ ಸಾಮಾನ್ಯ ಬ್ಯಾಂಕಿಂಗ್ ವ್ಯವಹಾರ ಮಾಡುತ್ತದೆ. ಸಂದರ್ಭಗಳನ್ನು ಅವಲಂಬಿಸಿ ರಿಸರ್ವ್ ಬ್ಯಾಂಕ್ ಈ ಮಾರ್ಗದರ್ಶನಗಳ ಬದಲಾವಣೆಗಳನ್ನು ಪರಿಗಣಿಸಬಹುದು. ಅನಿರುಧ್ಧ ಡಿ ಜಾದವ್ ಪತ್ರಿಕಾ ಪ್ರಕಟಣೆ : 2017-2018/1251 |