<font face="mangal" size="3px">ಎಚ್ ಸಿ ಬಿ ಎಲ್ ಕೋ- ಅಪರೇಟಿವ್ ಬ್ಯಾಂಕ್ ಲಿಮಿಟೆಡ್ , ಲ  - ಆರ್ಬಿಐ - Reserve Bank of India
ಎಚ್ ಸಿ ಬಿ ಎಲ್ ಕೋ- ಅಪರೇಟಿವ್ ಬ್ಯಾಂಕ್ ಲಿಮಿಟೆಡ್ , ಲಕ್ನೊ, ಉತ್ತರ ಪ್ರದೇಶ - ಇದಕ್ಕೆ ನೀಡಿದ್ದ ನಿರ್ದೇಶನಗಳ ಕಾಲಾವಧಿ ವಿಸ್ತರಣೆ
13 ಅಕ್ಟೋಬರ್ 2017 ಎಚ್ ಸಿ ಬಿ ಎಲ್ ಕೋ- ಅಪರೇಟಿವ್ ಬ್ಯಾಂಕ್ ಲಿಮಿಟೆಡ್ , ಲಕ್ನೊ, ಉತ್ತರ ಪ್ರದೇಶ - ಇದಕ್ಕೆ ನೀಡಿದ್ದ ನಿರ್ದೇಶನಗಳ ಕಾಲಾವಧಿ ವಿಸ್ತರಣೆ ಭಾರತೀಯ ರಿಜರ್ವ್ ಬ್ಯಾಂಕ್ ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ 1949(ಎ ಎ ಸಿ ಎಸ್) ರ ಪ್ರಕರಣ 35 A ರಲ್ಲಿ ದತ್ತವಾಗಿರುವ ಅಧಿಕಾರಗಳನ್ನು ಚಲಾಯಿಸಿ ಎಚ್ ಸಿ ಬಿ ಎಲ್ ಕೋ- ಅಪರೇಟಿವ್ ಬ್ಯಾಂಕ್ ಲಿಮಿಟೆಡ್ , ಲಕ್ನೊ, ಉತ್ತರ ಪ್ರದೇಶ –ಇದನ್ನು 10 ಏಪ್ರಿಲ್ 2015 ರಂದು ನೀಡಿದ್ದ ಆದೇಶದ ಪ್ರಕಾರ 16 ಏಪ್ರಿಲ್ 2015 ರ ವ್ಯವಹಾರ ಸಮಯದ ನಂತರದಿಂದ ನಿರ್ದೇಶನಗಳಡಿ ಇರಿಸಲಾಗಿತ್ತು. ಹಾಗೂ ಈ ನಿರ್ದೇಶನಗಳ ಸಿಂಧುತ್ವವನ್ನು 09 ಅಕ್ಟೋಬರ್ 2017 ರ ಅನ್ವಯ ಮತ್ತೆ ಆರು ತಿಂಗಳು ಅಂದರೆ 16 ಅಕ್ಟೋಬರ್ 2017 ರಿಂದ 15 ಏಪ್ರಿಲ್ 2018 ರ ವರೆಗೆ ವಿಸ್ತರಿಸಲಾಗಿದೆ (ಪರಿಶೀಲನೆಗೆ ಒಳಪಡುತ್ತದೆ).. ನಿರ್ದೇಶನದ ಒಂದು ಪ್ರತಿಯನ್ನು ಬ್ಯಾಂಕ್ ಆವರಣದಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರದರ್ಶಿಸಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕಿನಿಂದ ನೀಡಲ್ಪಟ್ಟ ಈ ತಿದ್ದುಪಡಿ ನಿರ್ದೇಶನವು, ಈ ಬ್ಯಾಂಕಿನ ಹಣಕಾಸಿನ ಪರಿಸ್ಥಿತಿಯಲ್ಲಿ ಗಣನೀಯವಾಗಿ ಸುಧಾರಣೆಯಾಗಿ ಭಾರತೀಯ ರಿಸರ್ವ್ ಬ್ಯಾಂಕಿಗೆ ತೃಪ್ತಿದಾಯಕವಾಗಿ ತೋರಿದೆಯೆಂದು ಅರ್ಥೈಸಿಕೊಳ್ಳಬಾರದು. ಅಜಿತ್ ಪ್ರಸಾದ್ ಪತ್ರಿಕಾ ಪ್ರಕಟಣೆ : 2017-2018/1032 |