<font face="mangal" size="3px">ಎಚ್ ಸಿ ಬಿ ಎಲ್ ಕೋ – ಒಪೆರಟಿವ್ ಬ್ಯಾಂಕ್ ಲಿಮಿಟೆಡ್ , Ņ - ಆರ್ಬಿಐ - Reserve Bank of India
ಎಚ್ ಸಿ ಬಿ ಎಲ್ ಕೋ – ಒಪೆರಟಿವ್ ಬ್ಯಾಂಕ್ ಲಿಮಿಟೆಡ್ , ಲಕ್ನೋ , ಉತ್ತರ ಪ್ರದೇಶ ಗೆ ಆರ್ ಬಿ ಐ ನೀಡಿರುವ ಮಾರ್ಗದರ್ಶನಗಳ ಸಿಂಧುತ್ವವನ್ನು ಏಪ್ರಿಲ್ 15, 2017 ರ ವರೆಗೆ ವಿಸ್ತರಿಸಲಾಗಿದೆ.
ಅಕ್ಟೋಬರ್ 14, 2016 ಎಚ್ ಸಿ ಬಿ ಎಲ್ ಕೋ – ಒಪೆರಟಿವ್ ಬ್ಯಾಂಕ್ ಲಿಮಿಟೆಡ್ , ಲಕ್ನೋ , ಉತ್ತರ ಪ್ರದೇಶ ಗೆ ಆರ್ ಬಿ ಐ ನೀಡಿರುವ ಮಾರ್ಗದರ್ಶನಗಳ ಸಿಂಧುತ್ವವನ್ನು ಏಪ್ರಿಲ್ 15, 2017 ರ ವರೆಗೆ ವಿಸ್ತರಿಸಲಾಗಿದೆ . ಎಚ್ ಸಿ ಬಿ ಎಲ್ ಕೋ – ಒಪೆರಟಿವ್ ಬ್ಯಾಂಕ್ ಲಿಮಿಟೆಡ್ , ಲಕ್ನೋ , ಉತ್ತರ ಪ್ರದೇಶ ಗೆ ಭಾರತೀಯ ರಿಸರ್ವ್ ಬ್ಯಾಂಕ್ ನೀಡಿರುವ ನಿರ್ದೇಶನಗಳನ್ನು ಹೆಚ್ಚುವರಿ ಆರು ತಿಂಗಳು ಅಂದರೆ ಅಕ್ಟೋಬರ್ 16 , 2016 ದಿಂದ ಏಪ್ರಿಲ್ 15, 2017 ರ ವರೆಗೆ ವಿಸ್ತರಿಸಲಾಗಿದೆ (ಪರಿಶೀಲನೆಗೆ ಒಳಪಡುತ್ತದೆ). ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ 1949 ಕಲಂ 35A ರ ಉಪ ಕಲಂ (1) ರ ಅಡಿಯಲ್ಲಿ ನೀಡಿರುವ ದಿನಾಂಕ ಏಪ್ರಿಲ್ 10 , 2015 ರ ಸೂಚನೆಯ ಪ್ರಕಾರ ಬ್ಯಾಂಕು ವ್ಯವಹಾರದ ಕೊನೆಯ ದಿನ ಏಪ್ರಿಲ್ 16 , 2015 ರಿಂದ ಮಾರ್ಗದರ್ಶನಗಳ ಅಡಿಯಲ್ಲಿತ್ತು. ಈ ಮೇಲಿನ ಮಾರ್ಗದರ್ಶನಗಳ ಬದಲಾಯಿಸಿ ಸಿಂಧುತ್ವವನ್ನು ದಿನಾಂಕ ಅಕ್ಟೋಬರ್ 15 , 2016 ರ ವರೆಗೆ ವಿಸ್ತರಿಸಲಾಗಿದೆ. ಈ ಅವಧಿಯನ್ನು ದಿನಾಂಕ ಅಕ್ಟೋಬರ್ 07, 2016 ರಲ್ಲಿ ನೀಡಿದ ಸೂಚನೆಯ ಮೇರೆಗೆ ಹೆಚ್ಚುವರಿ ಆಗಿ ಏಪ್ರಿಲ್ 15 , 2017 ರ ವರೆಗೆ ವಿಸ್ತರಿಸಲಾಗಿದೆ. ಉಲ್ಲೇಖದ ಅಡಿಯಲ್ಲಿರುವ ನಿರ್ದೇಶನದ ಇತರ ನಿಯಮಗಳು ಮತ್ತು ಷರತ್ತುಗಳು ಬದಲಾಗದೆ ಹಾಗೆ ಉಳಿಯುತ್ತವೆ. ದಿನಾಂಕ ಅಕ್ಟೋಬರ್ 07, 2016 ರ ನಿರ್ದೇಶನದ ಒಂದು ಪ್ರತಿಯನ್ನು ಬ್ಯಾಂಕ್ ಆವರಣದಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರದರ್ಶಿಸಲಾಗಿದೆ. ಸಂದರ್ಭಗಳನ್ನು ಅವಲಂಬಿಸಿ ರಿಸರ್ವ್ ಬ್ಯಾಂಕ್ ಈ ಮಾರ್ಗದರ್ಶನಗಳ ಬದಲಾವಣೆಗಳನ್ನು ಪರಿಗಣಿಸಬಹುದು. ಅಜಿತ್ ಪ್ರಸಾದ್ ಪತ್ರಿಕಾ ಪ್ರಕಟಣೆ : 2016-2017/928 |