<font face="Mangal" size="3">ದಿ ಇಂಡಿಯನ್ ಮರ್ಕಂಟೈಲ್ ಕೋ-ಅಪರೇಟಿವ್ ಬ್ಯಾಂಕ್ ಲಿ  - ಆರ್‌ಬಿಐ - Reserve Bank of India
ದಿ ಇಂಡಿಯನ್ ಮರ್ಕಂಟೈಲ್ ಕೋ-ಅಪರೇಟಿವ್ ಬ್ಯಾಂಕ್ ಲಿಮಿಟೆಡ್, ಲಕ್ನೊ, ಉತ್ತರ ಪ್ರದೇಶ– ಇದಕ್ಕೆ ವಿಧಿಸಿರುವ ನಿರ್ದೇಶನಗಳ ವಿಸ್ತರಣೆ
08 ಸಪ್ಟೆಂಬರ್ 2017 ದಿ ಇಂಡಿಯನ್ ಮರ್ಕಂಟೈಲ್ ಕೋ-ಅಪರೇಟಿವ್ ಬ್ಯಾಂಕ್ ಲಿಮಿಟೆಡ್, ಲಕ್ನೊ, ಉತ್ತರ ಪ್ರದೇಶ– ಇದಕ್ಕೆ ಭಾರತೀಯ ರಿಜರ್ವ್ ಬ್ಯಾಂಕ್, ದಿ ಇಂಡಿಯನ್ ಮರ್ಕಂಟೈಲ್ ಕೋ-ಅಪರೇಟಿವ್ ಬ್ಯಾಂಕ್ ಲಿಮಿಟೆಡ್, ಲಕ್ನೊ, ಉತ್ತರ ಪ್ರದೇಶ – ಇದಕ್ಕೆ ನೀಡಿದ್ದ ನಿರ್ದೇಶನವನ್ನು ಆರು ತಿಂಗಳುಗಳ ಕಾಲ ಅಂದರೆ 12 ಸಪ್ಟೆಂಬರ್ 2017 ರಿಂದ 11 ಮಾರ್ಚ್ 2018 ರ ವರೆಗೆ ವಿಸ್ತರಿಸಲಾಗಿದೆ (ಪರಿಶೀಲನೆಗೆ ಒಳಪಡುತ್ತದೆ). ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ 1949 ಕಲಂ 35A ರ ಉಪ ಕಲಂ (1) ರ ಅಡಿಯಲ್ಲಿ ಅಧಿಕಾರ ಚಲಾಯಿಸಿ ಭಾರತೀಯ ರಿಸರ್ವ್ ಬ್ಯಾಂಕ್ ಈ ಮಾರ್ಗದರ್ಶನಗಳನ್ನು ವಿಧಿಸಿದೆ. ಮೇಲೆ ತಿಳಿಸಿದ ಬ್ಯಾಂಕು 04 ಜನವರಿ 2014 ರಂದು ನೀಡಿದ ಆದೇಶದ ಪ್ರಕಾರ 12 ಜೂನ್ 2014 ರಿಂದ ಆರ್‌ಬಿಐ ನ ನಿರ್ದೇಶನದಡಿಯಲ್ಲಿತ್ತು. ಮೇಲೆ ತಿಳಿಸಿದ ನಿರ್ದೇಶನವನ್ನು ಮಾರ್ಪಡಿಸಲಾಗಿತ್ತು ಹಾಗೂ ಅದರ ಸಿಂಧುತ್ವವನ್ನು ಆರ್‌ಬಿಐ ನ ಆದೇಶದ ಪ್ರಕಾರ ಕೆಳಕಂಡ ದಿನಾಂಕಗಳಲ್ಲಿ ವಿಸ್ತರಿಸಲಾಗಿತ್ತು. 30 ಜುಲೈ 2014, 8 ಡಿಸೆಂಬರ್ 2014, 2 ಜೂನ್ 2015, 7 ಸೆಪ್ಟಂಬರ್ 2015, 19 ಅಕ್ಟೋಬರ್ 2015, 07 ಡಿಸೆಂಬರ್ 2015, 04 ಮಾರ್ಚ್ 2016, 02 ಸೆಪ್ಟಂಬರ್ 2016, 25 ನವೆಂಬರ್ 2016 ಮತ್ತು 09 ಮಾರ್ಚ್ 2017. ನಿರ್ದೇಶನದ ಒಂದು ಪ್ರತಿಯನ್ನು ಬ್ಯಾಂಕ್ ಆವರಣದಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರದರ್ಶಿಸಲಾಗಿದೆ. ಅಜಿತ್ ಪ್ರಸಾದ ಪತ್ರಿಕಾ ಪ್ರಕಟಣೆ : 2017-2018/683 |