RbiSearchHeader

Press escape key to go back

Past Searches

Theme
Theme
Text Size
Text Size
S2

Notification Marquee

RBI Announcements
RBI Announcements

RbiAnnouncementWeb

RBI Announcements
RBI Announcements

Asset Publisher

78492143

ಮೇರ್ಕಂಟೈಲ್ ಆರ್ಬನ್ ಕೋ-ಓಪರಟಿವ್ ಬ್ಯಾಂಕ್ ಲಿಮಿಟೆಡ್ , ಮೀರಟ್ , ಉತ್ತರ ಪ್ರದೇಶ ಆರ್ ಬಿ ಐ ನೀಡಿರುವ ಮಾರ್ಗದರ್ಶನಗಳ ಸಿಂಧುತ್ವದ ವಿಸ್ತರಣೆ.

ಅಕ್ಟೋಬರ್ 05, 2016

ಮೇರ್ಕಂಟೈಲ್ ಆರ್ಬನ್ ಕೋ-ಓಪರಟಿವ್ ಬ್ಯಾಂಕ್ ಲಿಮಿಟೆಡ್ , ಮೀರಟ್ , ಉತ್ತರ ಪ್ರದೇಶ ಆರ್ ಬಿ ಐ ನೀಡಿರುವ ಮಾರ್ಗದರ್ಶನಗಳ ಸಿಂಧುತ್ವದ ವಿಸ್ತರಣೆ.

ಮೇರ್ಕಂಟೈಲ್ ಆರ್ಬನ್ ಕೋ-ಓಪರಟಿವ್ ಬ್ಯಾಂಕ್ ಲಿಮಿಟೆಡ್ , ಮೀರಟ್ , ಉತ್ತರ ಪ್ರದೇಶ ಗೆ ಭಾರತೀಯ ರಿಸರ್ವ್ ಬ್ಯಾಂಕ್ ನೀಡಿರುವ ನಿರ್ದೇಶನಗಳನ್ನು ಹೆಚ್ಚುವರಿ ಆರು ತಿಂಗಳು ಅಂದರೆ ಬ್ಯಾಂಕಿನ ವ್ಯವಹಾರದ ಮೊದಲ ದಿನ ಅಕ್ಟೋಬರ್ 06 , 2016 ದಿಂದ ವ್ಯವಹಾರದ ಕೊನೆಯ ದಿನ ಏಪ್ರಿಲ್ 05, 2017 ರ ವರೆಗೆ ವಿಸ್ತರಿಸಲಾಗಿದೆ , ಪರಿಶೀಲನೆಗೆ ಒಳಪಡುತ್ತದೆ. ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ 1949 ಕಲಂ 35A ರ ಉಪ ಕಲಂ (1) ರ ಅಡಿಯಲ್ಲಿ ನೀಡಿರುವ ದಿನಾಂಕ ಸೆಪ್ಟೆಂಬರ್ 30 , 2015 ರ ಸೂಚನೆಯ ಪ್ರಕಾರ ಬ್ಯಾಂಕು ಅಕ್ಟೋಬರ್ 06 , 2015 ರಿಂದ ಮಾರ್ಗದರ್ಶನಗಳ ಅಡಿಯಲ್ಲಿತ್ತು.

ಈ ಮೇಲಿನ ಮಾರ್ಗದರ್ಶನಗಳ ಬದಲಾವಣೆ / ಸಿಂಧುತ್ವದ ವಿಸ್ತರಣೆಯನ್ನು ದಿನಾಂಕ ಮಾರ್ಚ್ 29, 2016 ಆರ್ ಬಿ ಐ ಸೂಚನೆಯ ಪ್ರಕಾರ ಮಾಡಲಾಗಿದೆ. ಅಕ್ಟೋಬರ್ 05, 2016 ರ ವರೆಗೆ ವಿಸ್ತರಿಸಲಾಗಿದ್ದ ಮಾರ್ಗದರ್ಶನಗಳ ಸಿಂಧುತ್ವವು ಹೆಚ್ಚುವರಿ ಆರು ತಿಂಗಳು ಅಂದರೆ ಅಕ್ಟೋಬರ್ 06 , 2016 ದಿಂದ ಏಪ್ರಿಲ್ 05, 2017 ರ ವರೆಗೆ ದಿನಾಂಕ ಸೆಪ್ಟೆಂಬರ್ 30 , 2016 ರಲ್ಲಿ ನೀಡಿದ ಸೂಚನೆಯ ಪ್ರಕಾರ ವಿಸ್ತರಿಸಲಾಗಿದೆ , ಪರಿಶೀಲನೆಗೆ ಒಳಪಡುತ್ತದೆ. ಉಲ್ಲೇಖದ ಅಡಿಯಲ್ಲಿರುವ ನಿರ್ದೇಶನದ ಇತರ ನಿಯಮಗಳು ಮತ್ತು ಷರತ್ತುಗಳು ಬದಲಾಗದೆ ಹಾಗೆ ಉಳಿಯುತ್ತವೆ. ಸೆಪ್ಟೆಂಬರ್ 30, 2016 ರ ನಿರ್ದೇಶನದ ಒಂದು ಪ್ರತಿಯನ್ನು ಬ್ಯಾಂಕ್ ಆವರಣದಲ್ಲಿ ಪ್ರದರ್ಶಿಸಲಾಗಿದೆ.

ಭಾರತೀಯ ರಿಸರ್ವ್ ಬ್ಯಾಂಕಿನ ಮೇಲಿನ ಬದಲಾವಣೆಯು ಮೇಲಿನ ಬ್ಯಾಂಕಿನ ಆರ್ಥಿಕ ಪರಿಸ್ಥಿತಿಯಲ್ಲಿ ಉತ್ತಮ /ಕೆಟ್ಟ ಬದಲಾವಣೆ ಎಂದು ಅರ್ಥೈಸಲಾಗುವುದಿಲ್ಲ. . ಸಂದರ್ಭಗಳನ್ನು ಅವಲಂಬಿಸಿ ರಿಸರ್ವ್ ಬ್ಯಾಂಕ್ ಈ ಮಾರ್ಗದರ್ಶನಗಳ ಬದಲಾವಣೆಗಳನ್ನು ಪರಿಗಣಿಸಬಹುದು.

ಅಜಿತ್ ಪ್ರಸಾದ್
ಸಹಾಯಕ ಸಲಹೆಗಾರರು

ಪತ್ರಿಕಾ ಪ್ರಕಟಣೆ : 2016-2017/863

RbiTtsCommonUtility

प्ले हो रहा है
ಕೇಳಿ

Related Assets

RBI-Install-RBI-Content-Global

RbiSocialMediaUtility

ಭಾರತೀಯ ರಿಸರ್ವ್ ಬ್ಯಾಂಕ್ ಮೊಬೈಲ್ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿ ಮತ್ತು ಇತ್ತೀಚಿನ ಸುದ್ದಿಗಳಿಗೆ ತ್ವರಿತ ಅಕ್ಸೆಸ್ ಪಡೆಯಿರಿ!

Scan Your QR code to Install our app

RbiWasItHelpfulUtility

ಈ ಪುಟವು ಸಹಾಯಕವಾಗಿತ್ತೇ?