ಚಿಕ್ಕಮಗಳೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ., ಚಿಕ್ಕಮಗಳೂರು , ಕರ್ನಾಟಕ – ಈ ಬ್ಯಾಂಕಿಗೆ ಭಾರತೀಯ ರಿಸರ್ವ್ ಬ್ಯಾಂಕ್ ವಿತ್ತೀಯ ದಂಡವನ್ನು ವಿಧಿಸಿದೆ - ಆರ್ಬಿಐ - Reserve Bank of India
ಚಿಕ್ಕಮಗಳೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ., ಚಿಕ್ಕಮಗಳೂರು , ಕರ್ನಾಟಕ – ಈ ಬ್ಯಾಂಕಿಗೆ ಭಾರತೀಯ ರಿಸರ್ವ್ ಬ್ಯಾಂಕ್ ವಿತ್ತೀಯ ದಂಡವನ್ನು ವಿಧಿಸಿದೆ
‘”ವಂಚನೆಗಳು -ವರ್ಗೀಕರಣ, ವರದಿ ಸಲ್ಲಿಸುವಿಕೆ ಮತ್ತು ನಿಗಾ ವಹಿಸುವಿಕೆ ಬಗ್ಗೆ ಮಾರ್ಗದರ್ಶಿ ಸೂತ್ರಗಳು” ಇದರ ಬಗ್ಗೆ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ (ನಬಾರ್ಡ್) ನೀಡಿದ ನಿರ್ದೇಶನಗಳನ್ನು ಚಿಕ್ಕಮಗಳೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ., ಚಿಕ್ಕಮಗಳೂರು , ಕರ್ನಾಟಕ (ಬ್ಯಾಂಕ್) ಪಾಲಿಸದೇ ಇದ್ದ ಕಾರಣಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿ ಐ), ದಿನಾಂಕ 28 ಫೆಬ್ರವರಿ, 2024 ರಂದು ನೀಡಿದ ತನ್ನ ಆದೇಶದ ಮೂಲಕ ಮೇಲಿನ ಬ್ಯಾಂಕಿಗೆ ರೂ. 50,000/- (ಐವತ್ತು ಸಾವಿರ ರೂಪಾಯಿಗಳು ಮಾತ್ರ) ವಿತ್ತೀಯ ದಂಡವನ್ನು ವಿಧಿಸಿದೆ. ಆರ್ ಬಿ ಐ ಗೆ ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ 1949 ರ ಪ್ರಕರಣ 47 A(1) (c) ರ ಜೊತೆ ಓದಿಕೊಂಡ ಪ್ರಕರಣ 46(4) (i) ಮತ್ತು 56 ರ ಷರತ್ತುಗಳ ಅನ್ವಯ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಈ ವಿತ್ತೀಯ ದಂಡವನ್ನು ವಿಧಿಸಲಾಗಿದೆ. ಮಾರ್ಚ್ 31, 2023 ಕ್ಕೆ ಇದ್ದಂತೆ ಹಣ ಕಾಸು ಸ್ಥಿತಿ ಗತಿಯ ಸಂಬಂಧ ಈ ಬ್ಯಾಂಕಿನ ಶಾಸನಬದ್ಧ ತಪಾಸಣೆ ಮಾಡಲಾಗಿತ್ತು. ಇದರಲ್ಲಿ ನಬಾರ್ಡ್ ನಿರ್ದೇಶನಗಳನ್ನು ಪಾಲಿಸದೇ ಇದ್ದ ಬಗ್ಗೆ ಮೇಲ್ವಿಚಾರಾಣಾ ಶೋಧನೆಯ ಮೂಲಕ ಮತ್ತು ತತ್ಸಂಬಂಧ ನಡೆಸಿದ ಪತ್ರ ವ್ಯವಹಾರಗಳ ಮೂಲಕ ಕಂಡು ಬಂದ ಸಂಗತಿಗಳ ಆಧಾರದ ಮೇಲೆ ಈ ಬ್ಯಾಂಕು ನಬಾರ್ಡ್ ನಿರ್ದೇಶನಗಳನ್ನು ಅನುಪಾಲನೆ ಮಾಡದೇ ಇರುವುದು ಕಂಡು ಬಂದಿದ್ದು, ಇದಕ್ಕೆ ಬ್ಯಾಂಕಿನ ಮೇಲೆ ವಿತ್ತೀಯ ದಂಡವನ್ನು ಏಕೆ ವಿಧಿಸಬಾರದು ಎಂದು ಕಾರಣ ಕೇಳಿ ಸೂಚನೆ (show cause notice) ಯನ್ನು ಬ್ಯಾಂಕಿಗೆ ನೀಡಲಾಗಿತ್ತು. ಇದಕ್ಕೆ ಬ್ಯಾಂಕ್ ನೀಡಿದ ಉತ್ತರ ಮತ್ತು ವೈಯಕ್ತಿಕ ವಿಚಾರಣೆ ವೇಳೆ ನೀಡಿದ ಮೌಖಿಕ ಹೇಳಿಕೆಗಳನ್ನು ಗಮನಿಸಿದ ಬಳಿಕ, ಇದರ ಜೊತೆಗೆ ನಬಾರ್ಡ್ ಗೆ ವಂಚನೆ ಬಗ್ಗೆ ವರದಿಯನ್ನು ವಿಳಂಬವಾಗಿ ಸಲ್ಲಿಸಿರುವ ಆರೋಪವನ್ನೂ ಸಹ ಆರ್ ಬಿ ಐ ಎತ್ತಿ ಹಿಡಿದಿದ್ದು, ಈ ವಿಫಲತೆಯು ವಿತ್ತೀಯ ದಂಡವನ್ನು ವಿಧಿಸುವುದೇ ಸೂಕ್ತ ಎಂಬ ನಿರ್ಣಯಕ್ಕೆ ಆರ್ ಬಿ ಐ ಬಂದಿದೆ. ನಿಯಂತ್ರಣಗಳ ಸಂಬಂಧ ಇರುವ ನಿಯಮಗಳ ಪಾಲನೆಯಲ್ಲಿ ಉಂಟಾದ ಲೋಪಗಳ ಆಧಾರದ ಮೇಲೆ ಈ ಕ್ರಮವನ್ನು ತೆಗೆದುಕೊಳ್ಳಲಾಗಿದಯೇ ಹೊರತು ತನ್ನ ಗ್ರಾಹಕರ ಜೊತೆಗೆ ಬ್ಯಾಂಕು ಹೊಂದಿರುವ ಯಾವುದೇ ಒಪ್ಪಂದ ಅಥವಾ ವ್ಯವಹಾರದ ಸಿಂಧುತ್ವದ ಬಗ್ಗೆ ಈ ತೀರ್ಪು ಇರುವುದಿಲ್ಲ. ಹಾಗೆಯೇ, ಈ ವಿತ್ತೀಯ ದಂಡವು ಬ್ಯಾಂಕಿನ ವಿರುದ್ಧ ತೆಗೆದು ಕೊಳ್ಳಬಹುದಾದ ಕ್ರಮಗಳ ಬಗ್ಗೆ ಪೂರ್ವ ಕಲ್ಪಿತ ಅಭಿಪ್ರಾಯವನ್ನು ಹೊಂದಿರುವುದಿಲ್ಲ.
(ಯೋಗೇಶ್ ದಯಾಳ್) ಪತ್ರಿಕಾ ಪ್ರಕಟಣೆ: 2023-2024/2122 |