ಹ್ಯಾಬಿಟ್ಯಾಟ್ ಮೈಕ್ರೋ ಬಿಲ್ಡ್ ಇಂಡಿಯಾ ಹೌಸಿಂಗ್ ಫೈನಾನ್ಸ್ ಕಂಪನಿ ಪ್ರೈವೇಟ್ ಲಿಮಿಟೆಡ್ ,ಕರ್ನಾಟಕ- ಈ ಕಂಪನಿಗೆ ಆರ್ ಬಿ ಐ ವಿತ್ತೀಯ ದಂಡ ವಿಧಿಸಿದೆ. - ಆರ್ಬಿಐ - Reserve Bank of India
ಹ್ಯಾಬಿಟ್ಯಾಟ್ ಮೈಕ್ರೋ ಬಿಲ್ಡ್ ಇಂಡಿಯಾ ಹೌಸಿಂಗ್ ಫೈನಾನ್ಸ್ ಕಂಪನಿ ಪ್ರೈವೇಟ್ ಲಿಮಿಟೆಡ್ ,ಕರ್ನಾಟಕ- ಈ ಕಂಪನಿಗೆ ಆರ್ ಬಿ ಐ ವಿತ್ತೀಯ ದಂಡ ವಿಧಿಸಿದೆ.
‘ಬ್ಯಾಂಕೇತರ ಹಣಕಾಸು ಕಂಪನಿ - ಹೌಸಿಂಗ್ ಫೈನಾನ್ಸ್ ಕಂಪನಿ (ರಿಸರ್ವ್ ಬ್ಯಾಂಕ್) ನಿರ್ದೇಶನಗಳು 2021’ ರ ಅಡಿಯಲ್ಲಿ ಆರ್ ಬಿ ಐ ಯಿಂದ ನೀಡಲಾಗಿದ್ದ ಕೆಲವು ನಿರ್ದೇಶನಗಳ ಅನುಪಾಲನೆ ಮಾಡದೇ ಇದ್ದುದಕ್ಕಾಗಿ ಹ್ಯಾಬಿಟ್ಯಾಟ್ ಮೈಕ್ರೋ ಬಿಲ್ಡ್ ಇಂಡಿಯಾ ಹೌಸಿಂಗ್ ಫೈನಾನ್ಸ್ ಕಂಪನಿ ಪ್ರೈವೇಟ್ ಲಿಮಿಟೆಡ್ ,ಕರ್ನಾಟಕ- ಈ ಕಂಪನಿಗೆ (ದಿ ಕಂಪನಿ) ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿ ಐ) ತನ್ನ ಮಾರ್ಚ್ 26, 2025 ರ ಆದೇಶದ ಮೂಲಕ, ರೂ. 50,000/- ( ರೂ. ಐವತ್ತು ಸಾವಿರ ಮಾತ್ರ ) ವಿತ್ತೀಯ ದಂಡ ವಿಧಿಸಿದೆ. ನ್ಯಾಷನಲ್ ಹೌಸಿಂಗ್ ಬ್ಯಾಂಕ್ ಅಧಿನಿಯಮ 1987 ರ ಕಲಂ 52 ಎ ಅಡಿಯಲ್ಲಿ ತನಗೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಭಾರತೀಯ ರಿಸರ್ವ್ ಬ್ಯಾಂಕ್ ಈ ದಂಡವನ್ನು ವಿಧಿಸಿದೆ. ಮಾರ್ಚ್ 31, 2023 ರಂದು ಇದ್ದ ಕಂಪನಿಯ ಆರ್ಥಿಕ ಪರಿಸ್ಥಿತಿ ಯನ್ನು ಆಧರಿಸಿ ಕಂಪನಿಯ ಶಾಸನಬದ್ಧ ನಿರೀಕ್ಷಣೆಯನ್ನು ನ್ಯಾಷನಲ್ ಹೌಸಿಂಗ್ ಬ್ಯಾಂಕ್ ಮಾಡಿತ್ತು. ಶಾಸನಬದ್ಧ ನಿರ್ದೇಶನಗಳ ಅನುಪಾಲನೆ ಆಗದೆ ಇರುವ ಬಗ್ಗೆ ನಿರೀಕ್ಷಣಾ ನಿಷ್ಕರ್ಷೆಯನ್ನು ಮತ್ತು ಈ ಸಂಬಂಧ ನಡೆದ ಪತ್ರ ವ್ಯವಹಾರಗಳನ್ನು ಆಧರಿಸಿ ಕಂಪನಿಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿ ಐ) ನಿರ್ದೇಶನಗಳ ಅನುಪಾಲನೆ ಮಾಡುವಲ್ಲಿ ವಿಫಲವಾದುದಕ್ಕಾಗಿ ಏಕೆ ದಂಡ ವಿಧಿಸಬಾರದು ಎಂದು ಕಾರಣ ಕೇಳಿ ನೋಟೀಸನ್ನು ನೀಡಲಾಗಿತ್ತು. ಕಂಪನಿ ಈ ಕುರಿತು ಸಲ್ಲಿಸಿದ ಉತ್ತರ ಮತ್ತು ವೈಯಕ್ತಿಕ ವಿಚಾರಣೆಯಲ್ಲಿ ಮಾಡಲಾದ ಮೌಖಿಕ ನಿವೇದನೆಗಳನ್ನು ಪರಿಗಣಿಸಿದ ನಂತರ ಭಾರತೀಯ ರಿಸರ್ವ್ ಬ್ಯಾಂಕಿಗೆ, ಇತರ ವಿಷಯಗಳ ನಡುವೆ, ಕಂಪನಿಯ ವಿರುದ್ಧ ಮಾಡಲಾದ ಕೆಳಕಂಡ ಆರೋಪ ಸ್ಥಿರಪಟ್ಟಿದೆ ಮತ್ತು ವಿತ್ತೀಯ ದಂಡ ವಿಧಿಸುವುದಕ್ಕೆ ಅರ್ಹವಾಗಿದೆ ಎಂದು ಗೊತ್ತಾಯಿತು: ಸ್ವತಂತ್ರ ನಿರ್ದೇಶಕರನ್ನು ಹೊರತು ಪಡಿಸಿ ಕಂಪನಿಯ ನಿರ್ದೇಶಕರಲ್ಲಿ 30% ಬದಲಾವಣೆ ಆಗುವಂತೆ ಆಡಳಿತ ಮಂಡಳಿಯ ಬದಲಾವಣೆ ಮಾಡುವಾಗ ಭಾರತೀಯ ರಿಸರ್ವ್ ಬ್ಯಾಂಕಿನ ಲಿಖಿತ ಪೂರ್ವಾನುಮತಿ ಪಡೆಯಲು ಕಂಪನಿಯು ವಿಫಲವಾಗಿತ್ತು . (ಪುನೀತ್ ಪಾಂಚೋಲಿ) ಪತ್ರಿಕಾ ಪ್ರಕಟಣೆ: 2024-2025/2511 |