ಹನಮಸಾಗರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿ., ಹನಮಸಾಗರ, ಕರ್ನಾಟಕ ದ ಮೇಲೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವಿತ್ತೀಯ ದಂಡ ವಿಧಿಸಿದೆ - ಆರ್ಬಿಐ - Reserve Bank of India
ಹನಮಸಾಗರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿ., ಹನಮಸಾಗರ, ಕರ್ನಾಟಕ ದ ಮೇಲೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವಿತ್ತೀಯ ದಂಡ ವಿಧಿಸಿದೆ
ಆರ್ ಬಿ ಐ ನ “ ಪಟ್ಟಣ ಸಹಕಾರಿ ಬ್ಯಾಂಕ್ ಗಳಲ್ಲಿ ವಂಚನೆಗಳು : ಉಸ್ತುವಾರಿ ಮತ್ತು ವರದಿ ಸಲ್ಲಿಕೆ ವಿಧಾನ” ಹಾಗೂ “ ವಂಚನೆಗಳು - ವರ್ಗೀಕರಣ ಮತ್ತು ವರದಿ ಸಲ್ಲಿಕೆ ಬಗ್ಗೆ ಪ್ರಧಾನ ಸುತ್ತೋಲೆ “ ಬಗ್ಗೆ ಮತ್ತು “ XBRL- FMR ಸಲ್ಲಿಕೆ ಬಗ್ಗೆ ವಂಚನೆಗಳ ವರದಿ ಸಲ್ಲಿಕೆ, FMR 2 ರ ಕೈ ಬಿಡುವಿಕೆ ಮತ್ತು FMR -3 ರ ಆರಂಭ “ ಇವುಗಳ ಕುರಿತಾದ ಆರ್ ಬಿ ಐ ನ ನಿರ್ದೇಶನಗಳ ಪ್ರಕಾರ ಫೆಬ್ರವರಿ 14, 2024 ರ ತನ್ನ ಆದೇಶದಂತೆ ಹನಮಸಾಗರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿ. ಹನಮಸಾಗರ, ಕರ್ನಾಟಕ ಇದರ ಮೇಲೆ ರೂ.50,000/ ( ರೂ. ಐವತ್ತು ಸಾವಿರ ) ವಿತ್ತೀಯ ದಂಡವನ್ನು ವಿಧಿಸಿದೆ. ಈ ದಂಡವನ್ನು ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949 ರ 46(4)(i), 56 ಹಾಗೂ 47A(1)(c) ಕಲಂ ಗಳಲ್ಲಿ ಆರ್ ಬಿ ಐ ಗೆ ದತ್ತವಾದ ಅಧಿಕಾರವನ್ನು ಬಳಸಿ ವಿಧಿಸಲಾಗಿದೆ. ಈ ಕ್ರಮವು ಬ್ಯಾಂಕ್ ನ ನಿಯಂತ್ರಣಾ ಅನುಸರಣೆಯಲ್ಲಿ ಆಗಿರುವ ಲೋಪಗಳ ಆಧಾರದ ಮೇಲೆ ಆಗಿದೆಯೆ ಹೊರತು ಬ್ಯಾಂಕ್ ತನ್ನ ಗ್ರಾಹಕರ ಜತೆ ಮಾಡಿಕೊಂಡಿರುವ ಯಾವುದೇ ವ್ಯವಹಾರ ಅಥವಾ ಒಪ್ಪಂದದ ಮಾನ್ಯತೆಯ ಬಗ್ಗೆ ಅಲ್ಲ. ಹಿನ್ನೆಲೆ ಮಾರ್ಚ್ 31, 2022 ರಂತೆ ಬ್ಯಾಂಕ್ ನ ಹಣಕಾಸು ಸ್ಥಿತಿ ಗತಿಯ ಬಗ್ಗೆ ಆರ್ ಬಿ ಐ ನಡೆಸಿದ ಶಾಸನ ಬದ್ಧ ಪರಿಶೀಲನೆ ಮತ್ತು ಪರಿಶೀಲನಾ ವರದಿ, ನಷ್ಟ ಸಂಭಾವ್ಯತೆ ನಿರ್ಧಾರಣೆ ವರದಿ ಮತ್ತು ಎಲ್ಲಾ ಅಂಶಗಳ ಆಧಾರದ ಮೇಲೆ ಬ್ಯಾಂಕ್ ನಿಗದಿತ ವೇಳೆಯಲ್ಲಿ ಆರ್ ಬಿ ಐ ಗೆ ವಂಚನೆಯ ಪ್ರಕರಣವನ್ನು ವರದಿ ಮಾಡಿಲ್ಲ ಎಂಬುದು ತಿಳಿದು ಬಂದಿದೆ. ಆದ್ದರಿಂದ ಆರ್ ಬಿ ಐ ನ ನಿರ್ದೇಶನಗಳನ್ನು ಪಾಲಿಸದೇ ಇರುವುದಕ್ಕಾಗಿ ದಂಡವನ್ನು ಏಕೆ ವಿಧಿಸಬಾರದು ಎಂಬುದಕ್ಕಾಗಿ ಕಾರಣ ನೀಡಲು ಬ್ಯಾಂಕ್ ಗೆ ಶೋ ಕಾಸ್ ಸೂಚನೆ ನೀಡಲಾಗಿತ್ತು. ನೋಟೀಸ್ ಗೆ ಬ್ಯಾಂಕ್ ನೀಡಿದ ಉತ್ತರ ಮತ್ತು ವೈಯಕ್ತಿಕ ವಿಚಾರಣೆಯಲ್ಲಿ ಮೌಖಿಕ ಹೇಳಿಕೆಗಳ ಪ್ರಕಾರ ಮೇಲ್ಕಂಡ ನಿರ್ದೇಶನಗಳನ್ನು ಅನುಸರಣೆ ಮಾಡದೇ ಇರುವ ಆರೋಪವು ಸಾಬೀತು ಆಗಿರುವುದರಿಂದ ವಿತ್ತೀಯ ದಂಡ ವಿಧಿಸುವುದು ಅನಿವಾರ್ಯ ಎಂದೂ ಆರ್ ಬಿ ಐ ತೀರ್ಮಾನಿಸಿದೆ. (ಶ್ವೇತಾ ಶರ್ಮಾ) ಪತ್ರಿಕಾ ಪ್ರಕಟಣೆ: 2023-2024/1920 |