<font face="mangal" size="3px">ಇಳ್ಕಲ್ ಕೋ-ಅಪರೇಟೀವ್ ಬ್ಯಾಂಕ್ ನಿಯಮಿತ., ಇಳ್ಕಲ್ ಕರ - ಆರ್ಬಿಐ - Reserve Bank of India
ಇಳ್ಕಲ್ ಕೋ-ಅಪರೇಟೀವ್ ಬ್ಯಾಂಕ್ ನಿಯಮಿತ., ಇಳ್ಕಲ್ ಕರ್ನಾಟಕ -ಇದಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ವಿತ್ತೀಯ ದಂಡ ವಿಧಿಸಿದೆ
30 ಜನವರಿ 2023 ಇಳ್ಕಲ್ ಕೋ-ಅಪರೇಟೀವ್ ಬ್ಯಾಂಕ್ ನಿಯಮಿತ., ಇಳ್ಕಲ್ ಕರ್ನಾಟಕ -ಇದಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ವಿತ್ತೀಯ ದಂಡ ವಿಧಿಸಿದೆ ಆದಾಯ ಗುರುತಿಸುವುಕೆ (income recognition), ಆಸ್ತಿ ವರ್ಗೀಕರಣ(assets classification), ಮುನ್ನೇರ್ಪಾಡು ವ್ಯವಸ್ಥೆ(provisioning) ಹಾಗೂ ಇತರೇ ಸಂಬಂಧಿತ ವಿಷಯಗಳು – ಪೌರ ಸಹಕಾರಿ ಬ್ಯಾಂಕುಗಳು- ಇದರ ಬಗ್ಗೆ ನೀಡಿದ್ದ ನಿರ್ದೇಶನಗಳನ್ನು ಪಾಲಿಸದದೇ ಇದ್ದ/ಉಲ್ಲಂಘನೆ ಮಾಡಿದ ಕಾರಣ ಜನವರಿ 23, 2023 ರಂದು ಹೊರಡಿಸಿದ ಆದೇಶದ ಮೂಲಕ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿ ಐ), ಇಳ್ಕಲ್ ಕೋ-ಆಪರೇಟೀವ್ ಬ್ಯಾಂಕ್ ನಿಯಮಿತ , ಇಳ್ಕಲ್, ಕರ್ನಾಟಕ (ಬ್ಯಾಂಕ್) -ಇದಕ್ಕೆ 1.00 ಲಕ್ಷ ರೂಗಳ (ಒಂದು ಲಕ್ಷ ರೂಪಾಯಿಗಳು ಮಾತ್ರ) ವಿತ್ತೀಯ ದಂಡ ವಿಧಿಸಿದೆ. ಮೇಲೆ ತಿಳಿಸಿರುವಂತೆ ಆರ್ ಬಿ ಐ ನೀಡಿದ್ದ ನಿರ್ದೇಶನಗಳನ್ನು ಪಾಲಿಸಲು ವಿಫಲವಾದ ಕಾರಣ, ಭಾರತೀಯ ರಿಸರ್ವ್ ಬ್ಯಾಂಕ್ ತನಗೆ ಬ್ಯಾಂಕಿಂಗ್ ನಿಯಂತ್ರಣ ಅಧಿನಿಯಮ, 1949 (ಸಹಕಾರ ಸಂಘಗಳಿಗೆ ಅನ್ವಯವಾಗುವ) ರ 47 A (1) (C) ಜೊತೆಗೆ ಪ್ರಕರಣ 46(4) (i) ಮತ್ತು ಪ್ರಕರಣ 56 ರ ಉಪಬಂಧದ ಅಡಿಯಲ್ಲಿ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಈ ವಿತ್ತೀಯ ದಂಡವನ್ನು ವಿಧಿಸಿದೆ. ನಿಯಂತ್ರಣಗಳ ಅನುಪಾಲನೆ ಮಾಡುವುದರಲ್ಲಿ ನ್ಯೂನತೆ ಉಂಟಾದ ಕಾರಣ ಈ ಕ್ರಮ ತೆಗೆದುಕೊಳ್ಳಲಾಗಿದಯೇ ಹೊರತು ಬ್ಯಾಂಕು ತನ್ನ ಗ್ರಾಹಕರ ಜೊತೆಗೆ ಕೈಗೊಂಡ ಯಾವುದೇ ವ್ಯವಹಾರ ಅಥವಾ ಯಾವುದೇ ಒಪ್ಪಂದದ ವಿರುದ್ದ ಆದೇಶವಾಗಿರುವುದಿಲ್ಲ. ಹಿನ್ನೆಲೆ ಮಾರ್ಚ್ 31, 2021 ರಂದು ಇದ್ದ ಬ್ಯಾಂಕಿನ ಹಣಕಾಸು ಸ್ಥಿತಿ ಗತಿ ಆಧಾರದ ಮೇಲೆ ನೀಡಿದ್ದ ಪರಿಶೀಲನಾ ವರದಿಯು, ಇತರ ವಿಷಯಗಳೊಂದಿಗೆ, ಕೆಲವು ನಿರ್ಧಿಷ್ಟ ಅನುತ್ಪಾದಕ ಆಸ್ತಿಗಳನ್ನು ಪ್ರಾಮಾಣಿಕ(standard assets) ಆಸ್ತಿಗಳೆಂದು ತಪ್ಪಾಗಿ ವರ್ಗೀಕರಿಸಿದೆ. ಇದರ ಆಧಾರದ ಮೇಲೆ, ನಿರ್ದೇಶನಗಳನ್ನು ಪಾಲಿಸದೆ ಇದ್ದ ಕಾರಣ, ದಂಡ ಏಕೆ ವಿಧಿಸಬಾರದು ಎಂಬುದಕ್ಕೆ ಕಾರಣ ಕೇಳಿ ಸೂಚನೆಯನ್ನು ಬ್ಯಾಂಕಿಗೆ ನೀಡಲಾಗಿತ್ತು. ಇದಕ್ಕೆ ಬ್ಯಾಂಕು ನೀಡಿದ್ದ ಉತ್ತರ ಮತ್ತು ವೈಯಕ್ತಿಕ ವಿಚಾರಣೆ ವೇಳೆ ನೀಡಿದ್ದ ಮೌಖಿಕ ಸಮಜಾಯಿಷಿಯನ್ನು ಪರಿಗಣಿಸಿದ ತರುವಾಯ, ಆರ್ ಬಿ ಐ ನೀಡಿದ್ದ ನಿರ್ದೇಶನಳನ್ನು ಉಲ್ಲಂಘಿಸಿದೆ ಎಂಬ ಆರೋಪವು ಸಾಬೀತಾಗಿದೆ ಮತ್ತು ವಿತ್ತೀಯ ದಂಡಕ್ಕೆ ಮೇಲಿನ ಬ್ಯಾಂಕ್ ಅರ್ಹವಾಗಿದೆ ಎಂದು ಆರ್ ಬಿ ಐ ತೀರ್ಮಾನಿಸಿದೆ (ಯೋಗೇಶ್ ದಯಾಳ್) ಪತ್ರಿಕಾ ಪ್ರಕಟಣೆ: 2022-2023/1634 |