ಶ್ರೀ ಬಸವೇಶ್ವರ ಸಹಕಾರಿ ಬ್ಯಾಂಕ್ ನಿಯಮಿತ, ಬಾಗಲಕೋಟೆ, ಕರ್ನಾಟಕ - ಈ ಬ್ಯಾಂಕಿಗೆ ಆರ್ ಬಿ ಐ ವಿತ್ತೀಯ ದಂಡ ವಿಧಿಸಿದೆ.
|
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿ ಐ) ತನ್ನ ನವೆಂಬರ್ 12, 2025 ರ ಆದೇಶದ ಮೂಲಕ 'ಆದಾಯ ಗುರುತಿಸುವಿಕೆ, ಆಸ್ತಿ ವರ್ಗೀಕರಣ, ಅವಕಾಶ ಕಲ್ಪಿಸುವುದು ಮತ್ತು ಇತರ ಸಂಬಂಧಿತ ವಿಷಯಗಳು- ಪೌರ ಸಹಕಾರಿ ಬ್ಯಾಂಕುಗಳು’ ಮತ್ತು ‘ಭಾರತೀಯ ರಿಸರ್ವ್ ಬ್ಯಾಂಕ್- (ಸಹಕಾರ ಬ್ಯಾಂಕುಗಳು -ಠೇವಣಿಗಳ ಮೇಲೆ ಬಡ್ಡಿ ದರ) ನಿರ್ದೇಶನಗಳು, 2016’ ಕುರಿತಾಗಿ ನೀಡಿದ್ದ ಕೆಲವು ನಿರ್ದೇಶನಗಳ ಅನುಪಾಲನೆ ಮಾಡದೇ ಇದ್ದುದಕ್ಕಾಗಿ ಶ್ರೀ ಬಸವೇಶ್ವರ ಸಹಕಾರಿ ಬ್ಯಾಂಕ್ ನಿಯಮಿತ, ಬಾಗಲಕೋಟೆ, ಕರ್ನಾಟಕ - ಈ ಬ್ಯಾಂಕಿಗೆ (ಬ್ಯಾಂಕು) ರೂ. 1 ಲಕ್ಷ ( ರೂ. ಒಂದು ಲಕ್ಷ ಮಾತ್ರ ) ವಿತ್ತೀಯ ದಂಡ ವಿಧಿಸಿದೆ. ಬ್ಯಾಂಕಿಂಗ್ ನಿಯಂತ್ರಣ ಅಧಿನಿಯಮ 1949 ರ ಕಲಂ 47 ಎ(1)(ಸಿ ) ಜೊತೆ ಓದಲಾದ ಕಲಂ 46(4) (i) ಮತ್ತು 56 ರ ಅಡಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಗೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ದಂಡವನ್ನು ವಿಧಿಸಿದೆ. ಮಾರ್ಚ್ 31,2024 ರಂದು ಇದ್ದ ಬ್ಯಾಂಕಿನ ಆರ್ಥಿಕ ಪರಿಸ್ಥಿತಿಯನ್ನು ಆಧರಿಸಿ ಬ್ಯಾಂಕಿನ ಶಾಸನಬದ್ಧ ನಿರೀಕ್ಷಣೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಮಾಡಿತ್ತು. ಭಾರತೀಯ ರಿಸರ್ವ್ ಬ್ಯಾಂಕ್ ನೀಡಿದ ನಿರ್ದೇಶನಗಳ ಅನುಪಾಲನೆ ಆಗದೆ ಇರುವ ಬಗ್ಗೆ ನಿರೀಕ್ಷಣಾ ನಿಷ್ಕರ್ಷೆಯನ್ನು ಮತ್ತು ಈ ಸಂಬಂಧ ನಡೆದ ಪತ್ರ ವ್ಯವಹಾರಗಳನ್ನು ಆಧರಿಸಿ ಬ್ಯಾಂಕಿಗೆ ಮೇಲೆ ಹೇಳಿದ ನಿರ್ದೇಶನಗಳ ಅನುಪಾಲನೆ ಮಾಡುವಲ್ಲಿ ವಿಫಲವಾದುದಕ್ಕಾಗಿ ಏಕೆ ದಂಡ ವಿಧಿಸಬಾರದು ಎಂದು ಕಾರಣ ಕೇಳಿ ನೋಟೀಸನ್ನು ನೀಡಲಾಗಿತ್ತು. ಬ್ಯಾಂಕು ಈ ಕುರಿತು ಸಲ್ಲಿಸಿದ ಉತ್ತರ ಮತ್ತು ವೈಯಕ್ತಿಕ ವಿಚಾರಣೆಯಲ್ಲಿ ಮಾಡಲಾದ ಮೌಖಿಕ ನಿವೇದನೆಗಳನ್ನು ಪರಿಗಣಿಸಿದ ನಂತರ ಭಾರತೀಯ ರಿಸರ್ವ್ ಬ್ಯಾಂಕಿಗೆ, ಇತರ ವಿಷಯಗಳ ನಡುವೆ, ಬ್ಯಾಂಕಿನ ವಿರುದ್ಧ ಮಾಡಲಾದ ಈ ಕೆಳಗಿನ ಆರೋಪಗಳು ಸ್ಥಿರಪಟ್ಟಿವೆ ಮತ್ತು ವಿತ್ತೀಯ ದಂಡ ವಿಧಿಸುವುದಕ್ಕೆ ಅರ್ಹವಾಗಿವೆ ಎಂದು ಗೊತ್ತಾಯಿತು: ಬ್ಯಾಂಕು:
ನಿಯಂತ್ರಣ ಅನುಪಾಲನೆಯಲ್ಲಿ ಕಂಡುಬಂದ ಕೊರತೆಗಾಗಿ ಮೇಲಿನ ಕ್ರಮವನ್ನು ತೆಗೆದುಕೊಳ್ಳಲಾಗಿದೆಯೇ ವಿನಃ ಇದು ಬ್ಯಾಂಕು ತನ್ನ ಗ್ರಾಹಕರೊಂದಿಗೆ ಮಾಡಿಕೊಂಡ ಯಾವುದೇ ವ್ಯವಹಾರ ಅಥವಾ ಒಪ್ಪಂದದ ಸಿಂಧುತ್ವದ ಬಗೆಗಿನ ಘೋಷಣೆಯಲ್ಲ. ಅಲ್ಲದೆ, ಈ ವಿತ್ತೀಯ ದಂಡ ವಿಧಿಸುವ ಕ್ರಿಯೆಯು ಭಾರತೀಯ ರಿಸರ್ವ್ ಬ್ಯಾಂಕು ಈ ಬ್ಯಾಂಕಿನ ಮೇಲೆ ತೆಗೆದುಕೊಳ್ಳಬಹುದಾದ ಯಾವುದೇ ಇತರ ಕ್ರಮದ ಪೂರ್ವಾಗ್ರಹದಿಂದ ಹೊರತಾಗಿದೆ.
(ಬ್ರಿಜ್ ರಾಜ್) ಪತ್ರಿಕಾ ಪ್ರಕಟಣೆ: 2025-2026/1537 |
ಪೇಜ್ ಕೊನೆಯದಾಗಿ ಅಪ್ಡೇಟ್ ಆದ ದಿನಾಂಕ: