RbiSearchHeader

Press escape key to go back

Past Searches

Theme
Theme
Text Size
Text Size
S1

Notification Marquee

RBI Announcements
RBI Announcements

RbiAnnouncementWeb

RBI Announcements
RBI Announcements

Asset Publisher

110001423

ಶ್ರೀ ಹರಿಹರೇಶ್ವರ ಪಟ್ಟಣ ಸಹಕಾರಿ ಬ್ಯಾಂಕು ನಿಯಮಿತ, ಹರಿಹರ, ಕರ್ನಾಟಕ - ಈ ಬ್ಯಾಂಕಿಗೆ ಆರ್ ಬಿ ಐ ವಿತ್ತೀಯ ದಂಡ ವಿಧಿಸಿದೆ

‘ಅನಾವರಣ ಮಾನದಂಡಗಳು, ಶಾಸನಬದ್ಧ ಮತ್ತು ಇತರ ನಿರ್ಬಂಧಗಳು - ಪೌರ ಸಹಕಾರಿ ಬ್ಯಾಂಕುಗಳು’ ಕುರಿತು ತನ್ನ ಕೆಲವು ನಿರ್ದೇಶನಗಳ ಅನುಪಾಲನೆ ಮಾಡದೇ ಇದ್ದುದಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ ಬಿ ‌ಐ) ತನ್ನ ಜುಲೈ 15, 2024ರ ಆದೇಶದ ಮೂಲಕ ಕರ್ನಾಟಕದ ಹರಿಹರದ ಶ್ರೀ ಹರಿಹರೇಶ್ವರ ಪಟ್ಟಣ ಸಹಕಾರಿ ಬ್ಯಾಂಕು ನಿಯಮಿತ (ಬ್ಯಾಂಕು) - ಈ ಬ್ಯಾಂಕಿಗೆ ರೂ. 50,000/- ಗಳ (ರೂ. ಐವತ್ತು ಸಾವಿರ ಮಾತ್ರ) ದಂಡ ವಿಧಿಸಿದೆ. ಬ್ಯಾಂಕಿಂಗ್ ನಿಯಂತ್ರಣ ಅಧಿನಿಯಮ 1949ರ ಕಲಂ 46(4)(i) ಮತ್ತು 56 ರ ಜೊತೆಗೆ ಓದಲಾದ ಕಲಂ 47 ಎ(1)(ಸಿ) ಪ್ರಕಾರ ತನಗೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ದಂಡವನ್ನು ಭಾರತೀಯ ರಿಸರ್ವ್ ಬ್ಯಾಂಕ್ ವಿಧಿಸಿದೆ.

ದಿನಾಂಕ ಮಾರ್ಚ್ 31, 2022 ರಂದು ಇದ್ದ ಬ್ಯಾಂಕಿನ ಆರ್ಥಿಕ ಪರಿಸ್ಥಿತಿಯ ಶಾಸನಬದ್ದ ನಿರೀಕ್ಷಣೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ನಡೆಸಿತು. ರಿಸರ್ವ್ ಬ್ಯಾಂಕಿನ ನಿರ್ದೇಶನಗಳ ಅನುಪಾಲನೆಯಾಗಿಲ್ಲ ಎಂಬ ಮೇಲ್ವಿಚಾರಣಾ ಶೋಧನೆಗಳನ್ನು ಆಧರಿಸಿ ಮತ್ತು ಈ ಸಂಬಂಧ ನಡೆದ ಪತ್ರ ವ್ಯವಹಾರವನ್ನು ಪರಿಗಣಿಸಿ ಈ ನಿರ್ದೇಶನಗಳ ಅನುಪಾಲನೆಯಲ್ಲಿ ಆದ ವಿಫಲತೆಗಾಗಿ ಬ್ಯಾಂಕಿಗೆ ಏಕೆ ದಂಡ ವಿಧಿಸಬಾರದು ಎಂಬುದಕ್ಕೆ ಕಾರಣ ಕೇಳಿ ನೋಟೀಸ್ ಒಂದನ್ನು ಜಾರಿ ಮಾಡಲಾಯಿತು. ಬ್ಯಾಂಕು ಈ ನೋಟೀಸಿಗೆ ಸಲ್ಲಿಸಿದ ಉತ್ತರ, ವೈಯಕ್ತಿಕ ವಿಚಾರಣೆಯ ಸಂದರ್ಭದಲ್ಲಿ ಸಲ್ಲಿಸಿದ ಮೌಖಿಕ ಸಮಜಾಯಿಷಿಗಳನ್ನು ಪರಿಗಣಿಸಿದ ನಂತರ, ಇತರ ವಿಷಯಗಳ ನಡುವೆ, ಬ್ಯಾಂಕಿನ ವಿರುದ್ಧ ಮಾಡಲಾದ ವಿವೇಕಯುತ ಅಂತರ ಬ್ಯಾಂಕು (ಒಟ್ಟು ) ಮತ್ತು ಪ್ರತಿಪಕ್ಷದ ಅನಾವರಣ ಮಿತಿ ಕುರಿತ ನಿರ್ದೇಶನಗಳ ಅನುಪಾಲನೆಯಾಗಿಲ್ಲ ಎಂಬ ಆಪಾದನೆ ಪುಷ್ಟೀಕರಣಗೊಂಡಿದೆಯೆಂದೂ ಮತ್ತು ದಂಡ ವಿಧಿಸುವುದು ಸಮುಚಿತವಾಗಿದೆಯೆಂದೂ ಗೊತ್ತಾಯಿತು.

ಈ ಮೇಲಿನ ಕ್ರಮವು ನಿಯಂತ್ರಣ ಅನುಪಾಲನೆಯಲ್ಲಿ ಆದ ಕೊರತೆಗಳ ವಿರುದ್ಧದ ಕ್ರಮ ಮಾತ್ರ ಆಗಿದೆಯೇ ವಿನಃ ಬ್ಯಾಂಕು ತನ್ನ ಗ್ರಾಹಕರೊಂದಿಗೆ ನಡೆಸುವ ಯಾವುದೇ ವ್ಯವಹಾರ/ಒಪ್ಪಂದಗಳ ಬಗೆಗಿನ ಸಿಂಧುತ್ವದ ಬಗ್ಗೆ ಅಭಿಪ್ರಾಯವಲ್ಲ. ಅಲ್ಲದೆ, ಈ ದಂಡ ವಿಧಿಸುವ ಕ್ರಮವು ಭಾರತೀಯ ರಿಸರ್ವ್ ಬ್ಯಾಂಕು ಈ ಬ್ಯಾಂಕಿನ ವಿರುದ್ಧ ಮುಂದೆ ಕೈಗೊಳ್ಳಬಹುದಾದ ಮತ್ಯಾವುದೇ ಕ್ರಮದ ಬಗೆಗಿನ ಪೂರ್ವಾಗ್ರಹದಿಂದ ಮುಕ್ತವಾಗಿದೆ.

 

(ಪುನೀತ್ ಪಾಂಚೋಲಿ)      
ಚೀಫ್ ಜನರಲ್ ಮ್ಯಾನೇಜರ್

ಪತ್ರಿಕಾ ಪ್ರಕಟಣೆ: 2024-2025/725

RbiTtsCommonUtility

प्ले हो रहा है
ಕೇಳಿ

Related Assets

RBI-Install-RBI-Content-Global

RbiSocialMediaUtility

ಭಾರತೀಯ ರಿಸರ್ವ್ ಬ್ಯಾಂಕ್ ಮೊಬೈಲ್ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿ ಮತ್ತು ಇತ್ತೀಚಿನ ಸುದ್ದಿಗಳಿಗೆ ತ್ವರಿತ ಅಕ್ಸೆಸ್ ಪಡೆಯಿರಿ!

Scan Your QR code to Install our app

RbiWasItHelpfulUtility

ಈ ಪುಟವು ಸಹಾಯಕವಾಗಿತ್ತೇ?