ದಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತ, ಕರ್ನಾಟಕ – ಈ ಬ್ಯಾಂಕಿಗೆ ಆರ್ ಬಿ ಐ ವಿತ್ತೀಯ ದಂಡ ವಿಧಿಸಿದೆ
|
ಬ್ಯಾಂಕಿಂಗ್ ನಿಯಂತ್ರಣ ಅಧಿನಿಯಮ, 1949 (BR Act) ರ ಕಲಂ 20ರ ಜೊತೆ ಓದಲಾದ ಕಲಂ 56 ರ ನಿಬಂಧನೆಗಳ ಉಲ್ಲಂಘನೆಗಾಗಿ ಮತ್ತು ‘ಚಿನ್ನದ ಸಾಲ -ಬುಲೆಟ್ ಮರುಪಾವತಿ’ ಮತ್ತು ‘ವಾಣಿಜ್ಯ ರಿಯಲ್ ಎಸ್ಟೇಟ್ ಗೆ ಅನಾವರಣ (exposure)’ ಕುರಿತಾಗಿ ಆರ್ ಬಿ ಐ ನೀಡಿದ್ದ ಕೆಲವು ನಿರ್ದೇಶನಗಳ ಅನುಪಾಲನೆ ಮಾಡದೇ ಇದ್ದುದಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿ ಐ) ತನ್ನ ಫೆಬ್ರವರಿ 23, 2026 ರ ಆದೇಶದ ಮೂಲಕ ದಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತ, ಕರ್ನಾಟಕ - ಈ ಬ್ಯಾಂಕಿಗೆ (ಬ್ಯಾಂಕು) ₹ 2 ಲಕ್ಷ (ರೂ. ಎರಡು ಲಕ್ಷ ಮಾತ್ರ ) ವಿತ್ತೀಯ ದಂಡ ವಿಧಿಸಿದೆ. ಬ್ಯಾಂಕಿಂಗ್ ನಿಯಂತ್ರಣ ಅಧಿನಿಯಮ 1949 ರ ಕಲಂ 47 ಎ (1)(ಸಿ ) ಜೊತೆ ಓದಲಾದ ಕಲಂ 46(4) (i) ಮತ್ತು 56 ರ ಅಡಿಯಲ್ಲಿ ತನಗೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಭಾರತೀಯ ರಿಸರ್ವ್ ಬ್ಯಾಂಕ್ ಈ ದಂಡವನ್ನು ವಿಧಿಸಿದೆ. ಮಾರ್ಚ್ 31, 2025 ರಂದು ಇದ್ದ ಬ್ಯಾಂಕಿನ ಆರ್ಥಿಕ ಪರಿಸ್ಥಿತಿ ಯನ್ನು ಆಧರಿಸಿ ಬ್ಯಾಂಕಿನ ಶಾಸನಬದ್ಧ ನಿರೀಕ್ಷಣೆಯನ್ನು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ನಬಾರ್ಡ್- NABARD) ಮಾಡಿತ್ತು. ಶಾಸನಬದ್ಧ ನಿಬಂಧನೆಗಳ ಉಲ್ಲಂಘನೆ/ ಆರ್ ಬಿ ಐ ನಿರ್ದೇಶನಗಳ ಅನುಪಾಲನೆ ಆಗದೆ ಇರುವ ಬಗ್ಗೆ ಮೇಲ್ವಿಚಾರಣಾ ನಿಷ್ಕರ್ಷೆಯನ್ನು ಮತ್ತು ಈ ಸಂಬಂಧ ನಡೆದ ಪತ್ರ ವ್ಯವಹಾರಗಳನ್ನು ಆಧರಿಸಿ ಬ್ಯಾಂಕಿಗೆ ಮೇಲೆ ಹೇಳಿದ ನಿಬಂಧನೆಗಳ ಮತ್ತು ನಿರ್ದೇಶನಗಳ ಅನುಪಾಲನೆ ಮಾಡುವಲ್ಲಿ ವಿಫಲವಾದುದಕ್ಕಾಗಿ ಏಕೆ ದಂಡ ವಿಧಿಸಬಾರದು ಎಂದು ಕಾರಣ ಕೇಳಿ ನೋಟೀಸನ್ನು ನೀಡಲಾಗಿತ್ತು. ಬ್ಯಾಂಕು ಈ ಕುರಿತು ಸಲ್ಲಿಸಿದ ಉತ್ತರ ಮತ್ತು ವೈಯಕ್ತಿಕ ವಿಚಾರಣೆಯಲ್ಲಿ ಮಾಡಲಾದ ಮೌಖಿಕ ನಿವೇದನೆಗಳನ್ನು ಪರಿಗಣಿಸಿದ ನಂತರ ಭಾರತೀಯ ರಿಸರ್ವ್ ಬ್ಯಾಂಕಿಗೆ, ಇತರ ವಿಷಯಗಳ ನಡುವೆ, ಬ್ಯಾಂಕಿನ ವಿರುದ್ಧ ಮಾಡಲಾದ ಕೆಳಕಂಡ ಆರೋಪಗಳು ಸ್ಥಿರಪಟ್ಟಿವೆ ಮತ್ತು ವಿತ್ತೀಯ ದಂಡ ವಿಧಿಸುವುದಕ್ಕೆ ಅರ್ಹವಾಗಿವೆ ಎಂದು ಗೊತ್ತಾಯಿತು: ಬ್ಯಾಂಕು:
ಶಾಸನಬದ್ಧ ಮತ್ತು ನಿಯಂತ್ರಣ ಅನುಪಾಲನೆಯಲ್ಲಿ ಕಂಡುಬಂದ ಕೊರತೆಗಾಗಿ ಮೇಲಿನ ಕ್ರಮವನ್ನು ತೆಗೆದುಕೊಳ್ಳಲಾಗಿದೆಯೇ ವಿನಃ ಇದು ಬ್ಯಾಂಕು ತನ್ನ ಗ್ರಾಹಕರೊಂದಿಗೆ ಮಾಡಿಕೊಂಡ ಯಾವುದೇ ವ್ಯವಹಾರ ಅಥವಾ ಒಪ್ಪಂದದ ಸಿಂಧುತ್ವದ ಬಗೆಗಿನ ಘೋಷಣೆಯಲ್ಲ. ಅಲ್ಲದೆ, ಈ ವಿತ್ತೀಯ ದಂಡ ವಿಧಿಸುವ ಕ್ರಿಯೆಯು ಭಾರತೀಯ ರಿಸರ್ವ್ ಬ್ಯಾಂಕು ಈ ಬ್ಯಾಂಕಿನ ಮೇಲೆ ತೆಗೆದುಕೊಳ್ಳಬಹುದಾದ ಯಾವುದೇ ಇತರ ಕ್ರಮದ ಪೂರ್ವಾಗ್ರಹದಿಂದ ಹೊರತಾಗಿದೆ. (ಬ್ರಿಜ್ ರಾಜ್) ಪತ್ರಿಕಾ ಪ್ರಕಟಣೆ: 2025-2026/2176 |
ಪೇಜ್ ಕೊನೆಯದಾಗಿ ಅಪ್ಡೇಟ್ ಆದ ದಿನಾಂಕ: