ದಿ ಭಾರತ್ ಕೋ-ಅಪರೇಟಿವ್ ಬ್ಯಾಂಕ್ ಲಿಮಿಟೆಡ್, ಬೆಂಗಳೂರು -ಇದಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ವಿತ್ತೀಯ ದಂಡ ವಿಧಿಸಿದೆ
ಡಿಸೆಂಬರ್ 05, 2022 ದಿ ಭಾರತ್ ಕೋ-ಅಪರೇಟಿವ್ ಬ್ಯಾಂಕ್ ಲಿಮಿಟೆಡ್, ಬೆಂಗಳೂರು -ಇದಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ವಿತ್ತೀಯ ದಂಡ ವಿಧಿಸಿದೆ ಒಡ್ಡಿಕೆ ಮಾನದಂಡ (Exposure Norms) ಮತ್ತು ಶಾಸನ ಬದ್ಧ /ಇತರೆ ನಿರ್ಬಂಧಗಳು- ಪೌರ ಬ್ಯಾಂಕುಗಳು, ಇದರಡಿ ನೀಡಿದ್ದ ಸುತ್ತೋಲೆಯಲ್ಲಿ ನೀಡಲಾಗಿದ್ದ ನಿರ್ದೇಶನಗಳನ್ನು ಪಾಲಿಸದೆ ಇದ್ದ ಕಾರಣ ಹಾಗೂ ಉಲ್ಲಂಘನೆ ಮಾಡಿದ್ದರ ಸಲುವಾಗಿ, ನವಂಬರ್ 28, 2022 ರಂದು ಹೊರಡಿಸಿದ ಆದೇಶದ ಮೂಲಕ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿ ಐ), ದಿ ಭಾರತ್ ಕೋ-ಅಪರೇಟಿವ್ ಬ್ಯಾಂಕ್ ಲಿಮಿಟೆಡ್, ಬೆಂಗಳೂರು (ಬ್ಯಾಂಕ್) -ಇದಕ್ಕೆ 5.00 ಲಕ್ಷ ರೂಗಳ (ಐದು ಲಕ್ಷ ರೂಪಾಯಿಗಳು ಮಾತ್ರ) ವಿತ್ತೀಯ ದಂಡ ವಿಧಿಸಿದೆ. ಮೇಲೆ ತಿಳಿಸಿರುವಂತೆ ಆರ್ ಬಿ ಐ ನೀಡಿದ್ದ ನಿರ್ದೇಶನಗಳನ್ನು ಪಾಲಿಸಲು ವಿಫಲವಾದ ಕಾರಣ, ಭಾರತೀಯ ರಿಸರ್ವ್ ಬ್ಯಾಂಕ್ ತನಗೆ ಬ್ಯಾಂಕಿಂಗ್ ನಿಯಂತ್ರಣ ಅಧಿನಿಯಮ, 1949 (ಸಹಕಾರ ಸಂಘಗಳಿಗೆ ಅನ್ವಯವಾಗುವ) ರ 47 A (1) ಜೊತೆಗೆ ಪ್ರಕರಣ 46(4) (i) ಮತ್ತು ಪ್ರಕರಣ 56 ರ ಉಪಬಂಧದ ಅಡಿಯಲ್ಲಿ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಈ ವಿತ್ತೀಯ ದಂಡವನ್ನು ವಿಧಿಸಿದೆ. ನಿಯಂತ್ರಣಗಳ ಅನುಪಾಲನೆ ಮಾಡುವುದರಲ್ಲಿ ನ್ಯೂನತೆ ಉಂಟಾದ ಕಾರಣ ಈ ಕ್ರಮ ತೆಗೆದುಕೊಳ್ಳಲಾಗಿದಯೇ ಹೊರತು ಬ್ಯಾಂಕು ತನ್ನ ಗ್ರಾಹಕರ ಜೊತೆಗೆ ಕೈಗೊಂಡ ಯಾವುದೇ ವ್ಯವಹಾರ ಅಥವಾ ಯಾವುದೇ ಒಪ್ಪಂದದ ವಿರುದ್ದ ಆದೇಶವಾಗಿರುವುದಿಲ್ಲ. ಹಿನ್ನೆಲೆ ಮಾರ್ಚ್ 31, 2020 ಮತ್ತು ಮಾರ್ಚ್ 31, 2021 ರಂದು ಇದ್ದ ಬ್ಯಾಂಕಿನ ಹಣಕಾಸು ಸ್ಥಿತಿ ಗತಿ ಆಧಾರದ ಮೇಲೆ ನೀಡಿದ್ದ ಪರಿಶೀಲನಾ ವರದಿಯು, ಇತರ ವಿಷಯಗಳೊಂದಿಗೆ, ವಾಣಿಜ್ಯ ಸಂಲೇಖಗಳಲ್ಲಿ ಬ್ಯಾಂಕಿನ ಹೂಡಿಕೆಯು, ವಿವೇಕಯುತ ವೈಯಕ್ತಿಕ ಒಡ್ಡಿಕೆ ಮಿತಿ (prudential individual exposure limit) ಬಂಡವಾಳ ನಿಧಿಯಾದ ಶೇ 15 ರನ್ನು ಮೀರಿದೆ ಎಂದು ಬಹಿರಂಗಪಡಿಸಿದೆ. ಇದರ ಆಧಾರದ ಮೇಲೆ, ನಿರ್ದೇಶನಗಳನ್ನು ಪಾಲಿಸದೆ ಇದ್ದ ಕಾರಣ, ದಂಡ ಏಕೆ ವಿಧಿಸಬಾರದು ಎಂಬುದಕ್ಕೆ ಕಾರಣ ಕೇಳಿ ಸೂಚನೆಯನ್ನು ಬ್ಯಾಂಕಿಗೆ ನೀಡಲಾಗಿತ್ತು. ಇದಕ್ಕೆ ಬ್ಯಾಂಕು ನೀಡಿದ್ದ ಉತ್ತರ ಮತ್ತು ವೈಯಕ್ತಿಕ ವಿಚಾರಣೆ ವೇಳೆ ನೀಡಿದ್ದ ಮೌಖಿಕ ಸಮಜಾಯಿಷಿಯನ್ನು ಪರಿಗಣಿಸಿದ ತರುವಾಯ, ಆರ್ ಬಿ ಐ ನೀಡಿದ್ದ ನಿರ್ದೇಶನಳನ್ನು ಉಲ್ಲಂಘಿಸಿದೆ ಎಂಬ ಆರೋಪವು ಸಾಬೀತಾಗಿದೆ ಮತ್ತು ವಿತ್ತೀಯ ದಂಡಕ್ಕೆ ಮೇಲಿನ ಬ್ಯಾಂಕ್ ಅರ್ಹವಾಗಿದೆ ಎಂದು ಆರ್ ಬಿ ಐ ತೀರ್ಮಾನಿಸಿದೆ. (ಯೋಗೇಶ್ ದಯಾಳ್) ಪತ್ರಿಕಾ ಪ್ರಕಟಣೆ: 2022-2023/1306 |