RbiSearchHeader

Press escape key to go back

Past Searches

Page
Official Website of Reserve Bank of India

Notification Marquee

RBI Announcements
RBI Announcements

RbiAnnouncementWeb

RBI Announcements
RBI Announcements

Asset Publisher

134689965

ದಿ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ ಲಿಮಿಟೆಡ್, ಬೀದರ್ , ಕರ್ನಾಟಕ - ಈ ಬ್ಯಾಂಕಿಗೆ ಆರ್ ಬಿ ಐ ವಿತ್ತೀಯ ದಂಡ ವಿಧಿಸಿದೆ.

ಬ್ಯಾಂಕಿಂಗ್ ನಿಯಂತ್ರಣ ಅಧಿನಿಯಮ 1949 ರ ಕಲಂ 20 ಮತ್ತು 31 ರ ಜೊತೆ ಓದಲಾದ ಕಲಂ 56 ರ ನಿಬಂಧನೆಗಳ ಉಲ್ಲಂಘನೆಗಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿ ಐ) ತನ್ನ ಸೆಪ್ಟೆಂಬರ್ 3, 2025 ರ ಆದೇಶದ ಮೂಲಕ ದಿ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ ಲಿಮಿಟೆಡ್, ಬೀದರ್, ಕರ್ನಾಟಕ - ಈ ಬ್ಯಾಂಕಿಗೆ (ಬ್ಯಾಂಕು) ರೂ. 5.50 ಲಕ್ಷ ( ರೂ. ಐದು ಲಕ್ಷ ಐವತ್ತು ಸಾವಿರ ಮಾತ್ರ) ವಿತ್ತೀಯ ದಂಡ ವಿಧಿಸಿದೆ. ಬ್ಯಾಂಕಿಂಗ್ ನಿಯಂತ್ರಣ ಅಧಿನಿಯಮ 1949 ರ ಕಲಂ 47 ಎ (1)(ಸಿ ) ಜೊತೆ ಓದಲಾದ ಕಲಂ 46(4) (i) ಮತ್ತು 56 ರ ಅಡಿಯಲ್ಲಿ ತನಗೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಭಾರತೀಯ ರಿಸರ್ವ್ ಬ್ಯಾಂಕ್ ಈ ದಂಡವನ್ನು ವಿಧಿಸಿದೆ.

ಮಾರ್ಚ್ 31, 2024 ರಂದು ಇದ್ದ ಬ್ಯಾಂಕಿನ ಆರ್ಥಿಕ ಪರಿಸ್ಥಿತಿ ಯನ್ನು ಆಧರಿಸಿ ಬ್ಯಾಂಕಿನ ಶಾಸನಬದ್ಧ ನಿರೀಕ್ಷಣೆಯನ್ನು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ನಬಾರ್ಡ್- NABARD ) ಮಾಡಿತ್ತು. ಶಾಸನಬದ್ಧ ನಿಬಂಧನೆಗಳ ಉಲ್ಲಂಘನೆ ಬಗ್ಗೆ ನಿರೀಕ್ಷಣಾ ನಿಷ್ಕರ್ಷೆಯನ್ನು ಮತ್ತು ಈ ಸಂಬಂಧ ನಡೆದ ಪತ್ರ ವ್ಯವಹಾರಗಳನ್ನು ಆಧರಿಸಿ ಬ್ಯಾಂಕಿಗೆ ಶಾಸನಬದ್ಧ ನಿಬಂಧನೆಗಳ ಅನುಪಾಲನೆ ಮಾಡುವಲ್ಲಿ ವಿಫಲವಾದುದಕ್ಕಾಗಿ ಏಕೆ ದಂಡ ವಿಧಿಸಬಾರದು ಎಂದು ಕಾರಣ ಕೇಳಿ ನೋಟೀಸನ್ನು ನೀಡಲಾಗಿತ್ತು. ಬ್ಯಾಂಕು ಈ ಕುರಿತು ಸಲ್ಲಿಸಿದ ಉತ್ತರ ಮತ್ತು ವೈಯಕ್ತಿಕ ವಿಚಾರಣೆಯಲ್ಲಿ ಮಾಡಲಾದ ಮೌಖಿಕ ನಿವೇದನೆಗಳನ್ನು ಪರಿಗಣಿಸಿದ ನಂತರ ಭಾರತೀಯ ರಿಸರ್ವ್ ಬ್ಯಾಂಕಿಗೆ, ಇತರ ವಿಷಯಗಳ ನಡುವೆ, ಬ್ಯಾಂಕಿನ ವಿರುದ್ಧ ಮಾಡಲಾದ ಕೆಳಕಂಡ ಆರೋಪಗಳು ಸ್ಥಿರಪಟ್ಟಿವೆ ಮತ್ತು ವಿತ್ತೀಯ ದಂಡ ವಿಧಿಸುವುದಕ್ಕೆ ಅರ್ಹವಾಗಿದೆ ಎಂದು ಗೊತ್ತಾಯಿತು:

ಬ್ಯಾಂಕು :

  1. ನಿರ್ದೇಶಕ ಸಂಬಂಧಿತ ಸಾಲಗಳನ್ನು ಮಂಜೂರು ಮಾಡಿತ್ತು ; ಮತ್ತು
  2. ಆರ್ಥಿಕ ವರ್ಷ 2023-24ರ ತನ್ನ ಲೆಕ್ಕ ಪತ್ರಗಳನ್ನು ಮತ್ತು ಬ್ಯಾಲೆನ್ಸ್ ಶೀಟ್ ಅನ್ನು ಪ್ರಕಟಿಸಲು ಮತ್ತು ಅವುಗಳ ಪ್ರತಿಗಳನ್ನು ಆರ್ ಬಿ ಐ / ನಬಾರ್ಡ್ ಗೆ ಗೊತ್ತು ಪಡಿಸಿದ ಅವಧಿಯೊಳಗೆ ಸಲ್ಲಿಸಲು ಸಹ ವಿಫಲವಾಗಿತ್ತು.

ಶಾಸನಬದ್ಧ ಅನುಪಾಲನೆಯಲ್ಲಿ ಕಂಡುಬಂದ ಕೊರತೆಗಾಗಿ ಮೇಲಿನ ಕ್ರಮವನ್ನು ತೆಗೆದುಕೊಳ್ಳಲಾಗಿದೆಯೇ ವಿನಃ ಇದು ಬ್ಯಾಂಕು ತನ್ನ ಗ್ರಾಹಕರೊಂದಿಗೆ ಮಾಡಿಕೊಂಡ ಯಾವುದೇ ವ್ಯವಹಾರ ಅಥವಾ ಒಪ್ಪಂದದ ಸಿಂಧುತ್ವದ ಬಗೆಗಿನ ಘೋಷಣೆಯಲ್ಲ. ಅಲ್ಲದೆ, ಈ ವಿತ್ತೀಯ ದಂಡ ವಿಧಿಸುವ ಕ್ರಿಯೆಯು ಭಾರತೀಯ ರಿಸರ್ವ್ ಬ್ಯಾಂಕು ಈ ಬ್ಯಾಂಕಿನ ಮೇಲೆ ತೆಗೆದುಕೊಳ್ಳಬಹುದಾದ ಯಾವುದೇ ಇತರ ಕ್ರಮದ ಪೂರ್ವಾಗ್ರಹದಿಂದ ಹೊರತಾಗಿದೆ.

(ಪುನೀತ್ ಪಾಂಚೋಲಿ)   
ಚೀಫ್ ಜನರಲ್ ಮ್ಯಾನೇಜರ್

ಪತ್ರಿಕಾ ಪ್ರಕಟಣೆ: 2025-2026/1059

RbiTtsCommonUtility

प्ले हो रहा है
ಕೇಳಿ

Related Assets

RBI-Install-RBI-Content-Global

RbiSocialMediaUtility

ಭಾರತೀಯ ರಿಸರ್ವ್ ಬ್ಯಾಂಕ್ ಮೊಬೈಲ್ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿ ಮತ್ತು ಇತ್ತೀಚಿನ ಸುದ್ದಿಗಳಿಗೆ ತ್ವರಿತ ಅಕ್ಸೆಸ್ ಪಡೆಯಿರಿ!

ನಮ್ಮ ಅಪ್ಲಿಕೇಶನ್ ಅನ್ನು ಸ್ಥಾಪಿಸಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ

RbiWasItHelpfulUtility

ಪೇಜ್ ಕೊನೆಯದಾಗಿ ಅಪ್ಡೇಟ್ ಆದ ದಿನಾಂಕ:

ಈ ಪುಟವು ಸಹಾಯಕವಾಗಿತ್ತೇ?