ದಿ ಹಿರಾಸುಗರ್ ನೌಕರರ ಸಹಕಾರಿ ಬ್ಯಾಂಕ್ ನಿಯಮಿತ, ಬೆಳಗಾವಿ, ಕರ್ನಾಟಕ - ಈ ಬ್ಯಾಂಕಿಗೆ ಭಾರತೀಯ ರಿಸರ್ವ್ ಬ್ಯಾಂಕ್ ವಿತ್ತೀಯ ದಂಡ ವಿಧಿಸಿದೆ - ಆರ್ಬಿಐ - Reserve Bank of India
ದಿ ಹಿರಾಸುಗರ್ ನೌಕರರ ಸಹಕಾರಿ ಬ್ಯಾಂಕ್ ನಿಯಮಿತ, ಬೆಳಗಾವಿ, ಕರ್ನಾಟಕ - ಈ ಬ್ಯಾಂಕಿಗೆ ಭಾರತೀಯ ರಿಸರ್ವ್ ಬ್ಯಾಂಕ್ ವಿತ್ತೀಯ ದಂಡ ವಿಧಿಸಿದೆ
‘ಅನಾವರಣ ಮಾನದಂಡಗಳು, ಶಾಸನಬದ್ಧ ಮತ್ತು ಇತರ ನಿರ್ಬಂಧಗಳು - ಪೌರ ಸಹಕಾರಿ ಬ್ಯಾಂಕುಗಳು’ ಕುರಿತು ತನ್ನ ಕೆಲವು ನಿರ್ದೇಶನಗಳ ಅನುಪಾಲನೆ ಮಾಡದೇ ಇದ್ದುದಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿ ಐ) ತನ್ನ ಜೂನ್ 21, 2024ರ ಆದೇಶದ ಮೂಲಕ ಕರ್ನಾಟಕದ ಬೆಳಗಾವಿಯ ದಿ ಹಿರಾಸುಗರ್ ನೌಕರರ ಸಹಕಾರಿ ಬ್ಯಾಂಕ್ ನಿಯಮಿತ (ಬ್ಯಾಂಕು) - ಈ ಬ್ಯಾಂಕಿಗೆ ರೂ. 25,000/- ಗಳ (ರೂ. ಇಪ್ಪತ್ತೈದು ಸಾವಿರ ಮಾತ್ರ) ದಂಡ ವಿಧಿಸಿದೆ. ಬ್ಯಾಂಕಿಂಗ್ ನಿಯಂತ್ರಣ ಅಧಿನಿಯಮ 1949ರ ಕಲಂ 46(4)(i) ಮತ್ತು 56ರ ಜೊತೆಗೆ ಓದಲಾದ ಕಲಂ 47ಎ(1)(ಸಿ) ಪ್ರಕಾರ ತನಗೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ದಂಡವನ್ನು ಭಾರತೀಯ ರಿಸರ್ವ್ ಬ್ಯಾಂಕ್ ವಿಧಿಸಿದೆ.
ದಿನಾಂಕ ಮಾರ್ಚ್ 31, 2022 ರಂದು ಇದ್ದ ಬ್ಯಾಂಕಿನ ಆರ್ಥಿಕ ಪರಿಸ್ಥಿತಿಯ ಶಾಸನಬದ್ದ ನಿರೀಕ್ಷಣೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ನಡೆಸಿತು. ರಿಸರ್ವ್ ಬ್ಯಾಂಕಿನ ನಿರ್ದೇಶನಗಳ ಅನುಪಾಲನೆಯಾಗಿಲ್ಲ ಎಂಬ ಮೇಲ್ವಿಚಾರಣಾ ಶೋಧನೆಗಳನ್ನು ಆಧರಿಸಿ ಮತ್ತು ಈ ಸಂಬಂಧ ನಡೆದ ಪತ್ರ ವ್ಯವಹಾರವನ್ನು ಪರಿಗಣಿಸಿ ಈ ನಿರ್ದೇಶನಗಳ ಅನುಪಾಲನೆಯಲ್ಲಿ ಆದ ವಿಫಲತೆಗಾಗಿ ಬ್ಯಾಂಕಿಗೆ ಏಕೆ ದಂಡ ವಿಧಿಸಬಾರದು ಎಂಬುದಕ್ಕೆ ಕಾರಣ ಕೇಳಿ ನೋಟೀಸ್ ಒಂದನ್ನು ಜಾರಿ ಮಾಡಲಾಯಿತು. ಬ್ಯಾಂಕು ಈ ನೋಟೀಸಿಗೆ ಸಲ್ಲಿಸಿದ ಉತ್ತರ, ವೈಯಕ್ತಿಕ ವಿಚಾರಣೆಯ ಸಂದರ್ಭದಲ್ಲಿ ಸಲ್ಲಿಸಿದ ಮೌಖಿಕ ಸಮಜಾಯಿಷಿಗಳನ್ನು ಪರಿಗಣಿಸಿದ ನಂತರ, ಇತರ ವಿಷಯಗಳ ನಡುವೆ, ಬ್ಯಾಂಕಿನ ವಿರುದ್ಧ ಮಾಡಲಾದ ವಿವೇಕಯುತ ಅಂತರ ಬ್ಯಾಂಕು (ಒಟ್ಟು ) ಮತ್ತು ಪ್ರತಿಪಕ್ಷದ ಅನಾವರಣ ಮಿತಿ ಕುರಿತ ನಿರ್ದೇಶನಗಳ ಅನುಪಾಲನೆಯಾಗಿಲ್ಲ ಎಂಬ ಆಪಾದನೆ ಪುಷ್ಟೀಕರಣಗೊಂಡಿದೆಯೆಂದೂ ಮತ್ತು ದಂಡ ವಿಧಿಸುವುದು ಸಮುಚಿತವಾಗಿದೆಯೆಂದೂ ಗೊತ್ತಾಯಿತು.
ಈ ಮೇಲಿನ ಕ್ರಮವು ನಿಯಂತ್ರಣ ಅನುಪಾಲನೆಯಲ್ಲಿ ಆದ ಕೊರತೆಗಳ ವಿರುದ್ಧದ ಕ್ರಮ ಮಾತ್ರ ಆಗಿದೆಯೇ ವಿನಃ ಬ್ಯಾಂಕು ತನ್ನ ಗ್ರಾಹಕರೊಂದಿಗೆ ನಡೆಸುವ ಯಾವುದೇ ವ್ಯವಹಾರ/ಒಪ್ಪಂದಗಳ ಬಗೆಗಿನ ಸಿಂಧುತ್ವದ ಬಗ್ಗೆ ಅಭಿಪ್ರಾಯವಲ್ಲ. ಅಲ್ಲದೆ, ಈ ದಂಡ ವಿಧಿಸುವ ಕ್ರಮವು ಭಾರತೀಯ ರಿಸರ್ವ್ ಬ್ಯಾಂಕು ಈ ಬ್ಯಾಂಕಿನ ವಿರುದ್ಧ ಮುಂದೆ ಕೈಗೊಳ್ಳಬಹುದಾದ ಮತ್ಯಾವುದೇ ಕ್ರಮದ ಬಗೆಗಿನ ಪೂರ್ವಾಗ್ರಹದಿಂದ ಮುಕ್ತವಾಗಿದೆ.
(ಪುನೀತ್ ಪಾಂಚೋಲಿ) ಪತ್ರಿಕಾ ಪ್ರಕಟಣೆ: 2024-2025/553 |