ದಿ ಕಲಬುರಗಿ ಮತ್ತು ಯಾದ್ಗೀರ್ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ ನಿಯಮಿತ, ಕರ್ನಾಟಕ - ಈ ಬ್ಯಾಂಕಿಗೆ ಆರ್ ಬಿ ಐ ವಿತ್ತೀಯ ದಂಡ ವಿಧಿಸಿದೆ - ಆರ್ಬಿಐ - Reserve Bank of India
ದಿ ಕಲಬುರಗಿ ಮತ್ತು ಯಾದ್ಗೀರ್ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ ನಿಯಮಿತ, ಕರ್ನಾಟಕ - ಈ ಬ್ಯಾಂಕಿಗೆ ಆರ್ ಬಿ ಐ ವಿತ್ತೀಯ ದಂಡ ವಿಧಿಸಿದೆ
ಭಾರತೀಯ ರಿಸರ್ವ್ ಬ್ಯಾಂಕ್ 'ನಿಮ್ಮ ಗ್ರಾಹಕರನ್ನು ತಿಳಿಯಿರಿ’ ಕುರಿತಾಗಿ ನೀಡಿದ ಕೆಲವು ನಿರ್ದೇಶನಗಳನ್ನು ಅನುಪಾಲನೆ ಮಾಡದೇ ಇದ್ದುದಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿ ಐ) ತನ್ನ ಆಗಸ್ಟ್ 19, 2025 ರ ಆದೇಶದ ಮೂಲಕ ದಿ ಕಲಬುರಗಿ ಮತ್ತು ಯಾದ್ಗೀರ್ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ ನಿಯಮಿತ, ಕರ್ನಾಟಕ - ಈ ಬ್ಯಾಂಕಿಗೆ (ಬ್ಯಾಂಕು) ರೂ. 50,000/- ( ರೂ. ಐವತ್ತು ಸಾವಿರ ಮಾತ್ರ ) ವಿತ್ತೀಯ ದಂಡ ವಿಧಿಸಿದೆ. ಬ್ಯಾಂಕಿಂಗ್ ನಿಯಂತ್ರಣ ಅಧಿನಿಯಮ 1949 ರ ಕಲಂ 47 ಎ (1)(ಸಿ ) ಜೊತೆ ಓದಲಾದ ಕಲಂ 46(4) (i) ಮತ್ತು 56 ರ ಅಡಿಯಲ್ಲಿ ತನಗೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಭಾರತೀಯ ರಿಸರ್ವ್ ಬ್ಯಾಂಕ್ ಈ ದಂಡವನ್ನು ವಿಧಿಸಿದೆ. ಮಾರ್ಚ್ 31, 2024 ರಂದು ಇದ್ದ ಬ್ಯಾಂಕಿನ ಆರ್ಥಿಕ ಪರಿಸ್ಥಿತಿ ಯನ್ನು ಆಧರಿಸಿ ಬ್ಯಾಂಕಿನ ಶಾಸನಬದ್ಧ ನಿರೀಕ್ಷಣೆಯನ್ನು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ನಬಾರ್ಡ್- NABARD ) ಮಾಡಿತ್ತು. ಭಾರತೀಯ ರಿಸರ್ವ್ ಬ್ಯಾಂಕ್ ನೀಡಿದ ನಿರ್ದೇಶನಗಳ ಅನುಪಾಲನೆ ಆಗದೆ ಇರುವ ಬಗ್ಗೆ ನಿರೀಕ್ಷಣಾ ನಿಷ್ಕರ್ಷೆಯನ್ನು ಮತ್ತು ಈ ಸಂಬಂಧ ನಡೆದ ಪತ್ರ ವ್ಯವಹಾರಗಳನ್ನು ಆಧರಿಸಿ ಬ್ಯಾಂಕಿಗೆ ಮೇಲೆ ಹೇಳಿದ ನಿಬಂಧನೆಗಳ ಅನುಪಾಲನೆ ಮಾಡುವಲ್ಲಿ ವಿಫಲವಾದುದಕ್ಕಾಗಿ ಏಕೆ ದಂಡ ವಿಧಿಸಬಾರದು ಎಂದು ಕಾರಣ ಕೇಳಿ ನೋಟೀಸನ್ನು ನೀಡಲಾಗಿತ್ತು. ಬ್ಯಾಂಕು ಈ ಕುರಿತು ಸಲ್ಲಿಸಿದ ಉತ್ತರ ಮತ್ತು ವೈಯಕ್ತಿಕ ವಿಚಾರಣೆಯಲ್ಲಿ ಮಾಡಲಾದ ಮೌಖಿಕ ನಿವೇದನೆಗಳನ್ನು ಪರಿಗಣಿಸಿದ ನಂತರ ಭಾರತೀಯ ರಿಸರ್ವ್ ಬ್ಯಾಂಕಿಗೆ, ಇತರ ವಿಷಯಗಳ ನಡುವೆ, ಬ್ಯಾಂಕಿನ ವಿರುದ್ಧ ಮಾಡಲಾದ ಕೆಳಕಂಡ ಆರೋಪ ಸ್ಥಿರಪಟ್ಟಿದೆ ಮತ್ತು ವಿತ್ತೀಯ ದಂಡ ವಿಧಿಸುವುದಕ್ಕೆ ಅರ್ಹವಾಗಿದೆ ಎಂದು ಗೊತ್ತಾಯಿತು: ಗ್ರಾಹಕರ ಕೆ ವೈ ಸಿ ದಾಖಲೆ ಗಳನ್ನು ಗೊತ್ತು ಪಡಿಸಿದ ಕಾಲಮಿತಿಯೊಳಗೆ ಕೇಂದ್ರೀಯ ಕೆ ವೈ ಸಿ (KYC) ದಾಖಲೆಗಳ ರಿಜಿಸ್ಟ್ರಿಗೆ (CKYCR) ಅಪ್ ಲೋಡ್ ಮಾಡಲು ಬ್ಯಾಂಕು ವಿಫಲವಾಗಿತ್ತು ನಿಯಂತ್ರಣ ಅನುಪಾಲನೆಯಲ್ಲಿ ಕಂಡುಬಂದ ಕೊರತೆಗಾಗಿ ಮೇಲಿನ ಕ್ರಮವನ್ನು ತೆಗೆದುಕೊಳ್ಳಲಾಗಿದೆಯೇ ವಿನಃ ಇದು ಬ್ಯಾಂಕು ತನ್ನ ಗ್ರಾಹಕರೊಂದಿಗೆ ಮಾಡಿಕೊಂಡ ಯಾವುದೇ ವ್ಯವಹಾರ ಅಥವಾ ಒಪ್ಪಂದದ ಸಿಂಧುತ್ವದ ಬಗೆಗಿನ ಘೋಷಣೆಯಲ್ಲ. ಅಲ್ಲದೆ, ಈ ವಿತ್ತೀಯ ದಂಡ ವಿಧಿಸುವ ಕ್ರಿಯೆಯು ಭಾರತೀಯ ರಿಸರ್ವ್ ಬ್ಯಾಂಕು ಈ ಬ್ಯಾಂಕಿನ ಮೇಲೆ ತೆಗೆದುಕೊಳ್ಳಬಹುದಾದ ಯಾವುದೇ ಇತರ ಕ್ರಮದ ಪೂರ್ವಾಗ್ರಹದಿಂದ ಹೊರತಾಗಿದೆ. (ಪುನೀತ್ ಪಾಂಚೋಲಿ) ಪತ್ರಿಕಾ ಪ್ರಕಟಣೆ: 2025-2026/971 |